1. [PS]ಪ್ರವಾದಿಯಾದ ಹಬಕ್ಕೂಕನು ಹೊಂದಿದ ಪ್ರವಾದನೆಯು: [PE][PBR]
2. {#1ಹಬಕ್ಕೂಕನ ದೂರು } [QS]ಯೆಹೋವ ದೇವರೇ, ನಾನು ಎಷ್ಟು ಕಾಲ ಸಹಾಯಕ್ಕಾಗಿ ಮೊರೆಯಿಡಬೇಕು. [QE][QS2]ನೀವು ನನ್ನ ಮೊರೆಗೆ ಎಷ್ಟು ಕಾಲ ಕಿವಿಗೊಡದಿರುವಿರಿ. [QE][QS]“ಹಿಂಸೆಯಾಗುತ್ತಿದೆ,” ಎಂದು ಕೂಗುತ್ತಿದ್ದೇನೆ, [QE][QS2]ಆದರೂ ನೀವು ರಕ್ಷಿಸುವುದಿಲ್ಲ. [QE]
3. [QS]ಅನ್ಯಾಯವನ್ನು ನಾನು ನೋಡುವಂತೆ ಏಕೆ ಮಾಡುತ್ತೀರಿ? [QE][QS2]ತಪ್ಪನ್ನು ಏಕೆ ಸಹಿಸುತ್ತೀರಿ? [QE][QS]ನಾಶವೂ ಹಿಂಸೆಯೂ ನನ್ನ ಮುಂದೆ ಇವೆ. [QE][QS2]ಹೋರಾಟವೂ ಒಡುಕೂ ಹೆಚ್ಚುತ್ತಲಿವೆ. [QE]
4. [QS]ಆದ್ದರಿಂದ ದೈವನಿಯಮವು ಪಕ್ಕಕ್ಕೆ ಇಡಲಾಗಿದೆ. [QE][QS2]ನ್ಯಾಯವು ಎಂದಿಗೂ ಸ್ಥಾಪಿತವಾಗುವುದಿಲ್ಲ. [QE][QS]ಏಕೆಂದರೆ ದುಷ್ಟರು ನೀತಿವಂತರನ್ನು ಸುತ್ತಿಕೊಂಡಿದ್ದಾರೆ. [QE][QS2]ಆದ್ದರಿಂದ ತಪ್ಪಾಗಿ ನ್ಯಾಯತೀರ್ಪು ಹೊರಡುತ್ತದೆ. [QE]
5. {#1ಯೆಹೋವ ದೇವರ ಉತ್ತರ } [QS]“ಜನಾಂಗಗಳ ಕಡೆಗೆ ನೋಡಿ ಲಕ್ಷ್ಯಗೊಟ್ಟು [QE][QS2]ಬಹಳವಾಗಿ ಆಶ್ಚರ್ಯಪಡಿರಿ. [QE][QS]ನಿಮ್ಮ ಜೀವಮಾನ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡಲಿದ್ದೇನೆ [QE][QS2]ಆ ಕಾರ್ಯವನ್ನು ವಿವರಿಸಿ ಹೇಳಿದರೂ [QE][QS2]ನೀವದನ್ನು ನಂಬುವುದಿಲ್ಲ. [QE]
6. [QS]ನಾನು ಬಾಬಿಲೋನಿಯರನ್ನು ಎಬ್ಬಿಸುತ್ತೇನೆ. [QE][QS2]ಅವರು ಉಗ್ರ ಮತ್ತು ಸಾಹಸಿ ಜನರು. [QE][QS]ತಮ್ಮದಲ್ಲದ ನಿವಾಸಗಳನ್ನು ವಶಮಾಡಿಕೊಳ್ಳುವುದಕ್ಕೆ [QE][QS2]ವಿಶಾಲವಾದ ದೇಶದಲ್ಲಿ ಹಾದುಹೋಗುವರು. [QE]
7. [QS]ಅವರು ಭಯಂಕರವಾದವರು ಮತ್ತು ಕ್ರೂರವಾದವರು. [QE][QS2]ಅವರು ತಮಗೆ ತಾವೇ ಕಾನೂನಾಗಿದ್ದಾರೆ. [QE][QS2]ತಮ್ಮನ್ನು ತಾವೇ ಗೌರವಿಸಿಕೊಳ್ಳುವವರೂ ಆಗಿದ್ದಾರೆ. [QE]
8. [QS]ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿಯೂ, [QE][QS2]ಸಂಜೆಯ ತೋಳಗಳಿಗಿಂತ ಚುರುಕಾಗಿಯೂ ಇವೆ. [QE][QS]ಅವರ ಅಶ್ವಸೈನ್ಯ ಎರಗುವುದು. [QE][QS2]ಅವರ ಕುದುರೆ ಸವಾರರು ದೂರದಿಂದ ಬರುವರು; [QE][QS]ನುಂಗುವುದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿ ಬರುವರು. [QE]
2. [QS2]ಅವರೆಲ್ಲರು ಹಿಂಸಿಸುವುದಕ್ಕೆ ಬರುವರು; [QE][QS]ಅವರ ಸಮೂಹ, ಮರುಭೂಮಿಯ ಗಾಳಿಯಂತೆಯೇ ಮುಂದೆ ಬರುವುದು; [QE][QS2]ಸೆರೆಯವರನ್ನು ಮರಳಿನ ಹಾಗೆ ಕೂಡಿಸುವರು. [QE]
10. [QS]ಅವರ ಅರಸನನ್ನು ಧಿಕ್ಕರಿಸುವರು; [QE][QS2]ಪ್ರಧಾನರು ಅವರನ್ನು ಪರಿಹಾಸ್ಯ ಮಾಡುವರು; [QE][QS]ಕೋಟೆಗಳಿಗೆಲ್ಲಾ ಕುಚೋದ್ಯ ಮಾಡುವರು; [QE][QS2]ಮಣ್ಣಿನ ದಿನ್ನೆಗಳನ್ನು ಮಾಡಿ, ಅವುಗಳನ್ನು ಹಿಡಿಯುವರು. [QE]
11. [QS]ಬಿರುಗಾಳಿಯಂತೆ ಕೊಚ್ಚಿಕೊಳ್ಳುತ್ತಾ ಮುಂದೆ ಸಾಗುವರು. [QE][QS2]ಅಪರಾಧಿ ಜನರವರು. ಅವರ ಸ್ವಂತ ಬಲ, ಅವರ ದೇವರು.” [QE]
12. {#1ಹಬಕ್ಕೂಕನ ಎರಡನೆಯ ದೂರು } [QS]ಯೆಹೋವ ದೇವರೇ, ನೀವು ಅನಾದಿಕಾಲದಿಂದ ಬಂದವರಲ್ಲವೇ? [QE][QS2]ನನ್ನ ದೇವರೇ, ನನ್ನ ಪರಿಶುದ್ಧರೇ, ನೀನು ಎಂದಿಗೂ ಸಾಯುವುದಿಲ್ಲ. [QE][QS]ಯೆಹೋವ ದೇವರೇ, ನ್ಯಾಯತೀರ್ಪನ್ನು ಜಾರಿಗೊಳಿಸಲು ಅವರನ್ನು ನೇಮಿಸಿದ್ದೀರಿ. [QE][QS2]ನನ್ನ ಬಂಡೆಯೇ, ನೀವು ಶಿಕ್ಷಿಸಲು ಅವರನ್ನು ನೇಮಕ ಮಾಡಿದ್ದೀರಿ. [QE]
13. [QS]ನೀನು ಕೆಟ್ಟದ್ದನ್ನು ನೋಡದ ಹಾಗೆ ಶುದ್ಧ ಕಣ್ಣುಗಳುಳ್ಳವರು. [QE][QS2]ನೀವು ಅನ್ಯಾಯವನ್ನು ದೃಷ್ಟಿಸಲಾರಿರಿ, [QE][QS]ವಂಚಿಸುವವರನ್ನು ಏಕೆ ಸಹಿಸಿಕೊಳ್ಳುತ್ತೀರಿ? [QE][QS2]ದುಷ್ಟನು ತನಗಿಂತ ನೀತಿವಂತನನ್ನು [QE][QS2]ನುಂಗಿ ಬಿಡುವ ವೇಳೆಯಲ್ಲಿ ಏಕೆ ಸುಮ್ಮನಿರುತ್ತೀರಿ? [QE]
14. [QS]ಮನುಷ್ಯರನ್ನು ಸಮುದ್ರದ ಮೀನುಗಳಂತೆಯೂ, [QE][QS2]ಆಳುವವನಿಲ್ಲದ ಕ್ರಿಮಿಗಳಂತೆಯೂ ಮಾಡಿರುತ್ತೀರಿ. [QE]
15. [QS]ದುಷ್ಟ ವೈರಿಯು ಅವುಗಳನ್ನು ಗಾಳದಿಂದ ಎತ್ತಿ, [QE][QS2]ತನ್ನ ಬಲೆಯಿಂದ ಅವುಗಳನ್ನು ಹಿಡಿದು, [QE][QS]ತನ್ನ ಜಾಲದಿಂದ ಅವುಗಳನ್ನು ಕೂಡಿಸಿಡುತ್ತಾನೆ. [QE][QS2]ಅವನು ಹಿಗ್ಗುತ್ತಾನೆ, ಸಂತೋಷಪಡುತ್ತಾನೆ. [QE]
16. [QS]ಆದ್ದರಿಂದ ತಮ್ಮ ಬಲೆಗೆ ಬಲಿ ಅರ್ಪಿಸಿ, [QE][QS2]ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ. [QE][QS]ಏಕೆಂದರೆ ಇವುಗಳಿಂದ ಅವರ ಭೋಜನ ಪುಷ್ಟಿಯಾಗಿಯೂ, [QE][QS2]ಅವರ ಆಹಾರ ರುಚಿಯುಳ್ಳದ್ದಾಗಿಯೂ ಇದೆ. [QE]
17. [QS]ಹೀಗಿರುವುದರಿಂದ ನಿರಂತರವಾಗಿ ಅವರು ತಮ್ಮ ಬಲೆಯನ್ನು ಬರಿದುಮಾಡಿ, [QE][QS2]ಕರುಣೆ ಇಲ್ಲದೆ ಜನಾಂಗಗಳನ್ನು ನಾಶ ಮಾಡುತ್ತಾ ಅವನು ಹೋಗಬೇಕೇ? [QE][PBR]