1. {#1ಯಾಕೋಬನು ತನ್ನ ಮಕ್ಕಳನ್ನು ಆಶೀರ್ವದಿಸಿದ್ದು }
2. [PS]ಆಗ ಯಾಕೋಬನು ತನ್ನ ಪುತ್ರರನ್ನು ಕರೆಯಿಸಿ ಅವರಿಗೆ, “ನೀವೆಲ್ಲರೂ ಕೂಡಿಬನ್ನಿರಿ. ಅಂತ್ಯ ದಿನಗಳಲ್ಲಿ ನಿಮಗೆ ಸಂಭವಿಸುವುದನ್ನು ನಿಮಗೆ ತಿಳಿಸುತ್ತೇನೆ. [PE][QS]“ಯಾಕೋಬನ ಪುತ್ರರೇ, ನೀವು ಒಟ್ಟಿಗೆ ಕೂಡಿಕೊಂಡು ಕೇಳಿರಿ, [QE][QS2]ನಿಮ್ಮ ತಂದೆ ಇಸ್ರಾಯೇಲನ ಮಾತಿಗೆ ಕಿವಿಗೊಡಿರಿ. [QE][PBR]
3. [QS]“ರೂಬೇನನೇ, ನೀನು ನನ್ನ ಜೇಷ್ಠಪುತ್ರನು. [QE][QS2]ನನ್ನ ಶಕ್ತಿ, ನನ್ನ ಬಲದ ಸಂಕೇತವೂ, [QE][QS2]ಗೌರವದಲ್ಲಿ ಶಕ್ತಿಯಲ್ಲಿ ಮಿತಿಮೀರಿದವನೂ ಆಗಿರುವೆ. [QE]
4. [QS]ನೀರಿನಂತೆ ಚಂಚಲನಾಗಿದ್ದು, ನೀನು ಶ್ರೇಷ್ಠನಾಗುವುದಿಲ್ಲ. [QE][QS2]ಏಕೆಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆಮಾಡಿದೆ, [QE][QS2]ನನ್ನ ಹಾಸಿಗೆಯನ್ನು ಏರಿದೆ. [QE][PBR]
5. [QS]“ಸಿಮೆಯೋನನೂ ಲೇವಿಯೂ ಸಹೋದರರು [QE][QS2]ಹಿಂಸಾಚಾರದ ಆಯುಧಗಳು. [QE]
6. [QS]ನನ್ನ ಮನವೇ, ಅವರ ಆಲೋಚನೆಗೆ ಒಳಪಡಬೇಡ. [QE][QS2]ನನ್ನ ಪ್ರಾಣವೇ, ಅವರ ಕೂಟಗಳಲ್ಲಿ ಸೇರಬೇಡ. [QE][QS]ಅವರು ತಮ್ಮ ಕೋಪದಲ್ಲಿ ಮನುಷ್ಯರನ್ನು ಕೊಂದರು, [QE][QS2]ಮದದಿಂದ ಎತ್ತುಗಳನ್ನು ಊನಪಡಿಸಿದರು. [QE]
7. [QS]ಅವರ ಕೋಪವು ಭಯಂಕರವಾಗಿಯೂ [QE][QS2]ಅವರ ರೌದ್ರವು ಕ್ರೂರವಾಗಿಯೂ ಇದ್ದು, [QE][QS2]ಅದಕ್ಕೆ ಶಾಪಗ್ರಸ್ತವಾಗಲಿ. [QE][QS]ಯಾಕೋಬನ ಕುಟುಂಬದಲ್ಲಿ ಅವರನ್ನು ವಿಭಾಗಿಸಿ [QE][QS2]ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು. [QE][PBR]
8. [QS]“ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳುವರು. [QE][QS2]ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವುದು. [QE][QS2]ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡಬೀಳುವರು. [QE]
9. [QS]ಯೆಹೂದನು ಸಿಂಹದ ಮರಿಯಾಗಿದ್ದಾನೆ. [QE][QS2]ನನ್ನ ಮಗನೇ, ಬೇಟೆಹಿಡಿದು ಮೇಲಕ್ಕೆ ಬಂದೆ. [QE][QS]ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. [QE][QS2]ಅವನನ್ನು ಕೆಣಕುವವರು ಯಾರು? [QE]
10. [QS]ರಾಜದಂಡವನ್ನು ಹಿಡಿಯತಕ್ಕವನು ಶೀಲೋವಿನಿಂದ ಬರುವ ತನಕ, [QE][QS2]ಯೆಹೂದನ ಕೈಯಿಂದ ರಾಜದಂಡವಾಗಲೀ, [QE][QS]ಆಡಳಿತಗಾರನ ಅಧಿಕಾರವಾಗಲೀ ಬಿಟ್ಟು ಹೋಗುವುದಿಲ್ಲ. [QE][QS2]ಎಲ್ಲಾ ಜನಾಂಗಗಳು ಅವನಿಗೆ ವಿಧೇಯವಾಗುವುವು. [QE]
11. [QS]ಅವನು ತನ್ನ ವಾಹನ ಪಶುವನ್ನು ದ್ರಾಕ್ಷಾಲತೆಗೆ ಕಟ್ಟುವನು. [QE][QS2]ರಾಜದ್ರಾಕ್ಷೆಗೆ ತನ್ನ ಕತ್ತೆಯನ್ನು ಬಿಗಿಯುವನು. [QE][QS]ದ್ರಾಕ್ಷಾರಸದಲ್ಲಿ ತನ್ನ ಬಟ್ಟೆ ಒಗೆಯುವನು, [QE][QS2]ದ್ರಾಕ್ಷಾರಸದಲ್ಲಿಯೇ ತನ್ನ ವಸ್ತ್ರಗಳನ್ನು ಅದ್ದಿ ತೊಳೆಯುವನು. [QE]
12. [QS]ದ್ರಾಕ್ಷಾರಸದಿಂದ ಅವನ ಕಣ್ಣುಗಳು ಕೆಂಪಾಗಿರುವವು, [QE][QS2]ಹಾಲಿನಿಂದ ಅವನ ಹಲ್ಲುಗಳು ಬಿಳುಪಾಗಿರುವವು. [QE][PBR]
13. [QS]“ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು, [QE][QS2]ಅವನಿಗೆ ಹಡಗುಗಳು ಸೇರುವ ರೇವೂ ಇರುವುದು. [QE][QS2]ಅವನ ಮೇರೆಯು ಸೀದೋನಿಗೆ ಮುಟ್ಟುವುದು. [QE][PBR]
14. [QS]“ಇಸ್ಸಾಕಾರನು ಕುರಿಯ ಹಟ್ಟಿಗಳ ನಡುವೆ [QE][QS2]ಮಲಗಿಕೊಳ್ಳುವ ಬಲವುಳ್ಳ ಕತ್ತೆಯಾಗಿದ್ದಾನೆ. [QE]
15. [QS]ವಿಶ್ರಾಂತಿಯು ಒಳ್ಳೆಯದೆಂದೂ [QE][QS2]ದೇಶವು ರಮ್ಯವೆಂದೂ ನೋಡಿ [QE][QS]ಹೊರೆ ಹೊರುವುದಕ್ಕೆ ತನ್ನ ಹೆಗಲನ್ನು ಬಗ್ಗಿಸಿ [QE][QS2]ಬಿಟ್ಟಿಯ ಕೆಲಸ ಮಾಡುವನು. [QE][PBR]
16. [QS]“ದಾನನು ಇಸ್ರಾಯೇಲನ ಗೋತ್ರಗಳಲ್ಲಿ ಒಂದು ಗೋತ್ರವಾಗಿ [QE][QS2]ತನ್ನ ಜನರಿಗೆ ನ್ಯಾಯತೀರಿಸುವನು. [QE]
17. [QS]ದಾನನು ಮಾರ್ಗದಲ್ಲಿರುವ ಸರ್ಪವೂ [QE][QS2]ದಾರಿಯಲ್ಲಿರುವ ಹಾವೂ ಆಗಿರುವನು. [QE][QS]ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ, [QE][QS2]ಹತ್ತಿದವನು ಬೋರಲು ಬೀಳುವನು. [QE][PBR]
18. [QS]“ಯೆಹೋವ ದೇವರೇ, ನಿಮ್ಮ ವಿಮೋಚನೆಗಾಗಿ ಕಾಯುತ್ತಿದ್ದೇನೆ. [QE][PBR]
19. [QS]“ಗಾದನ ಮೇಲೆ ಸೈನ್ಯವು ದಾಳಿಮಾಡುವುದು, [QE][QS2]ಕೊನೆಗೆ ಅವನೇ ಅವರನ್ನು ಓಡಿಸಿಬಿಡುವನು. [QE][PBR]
20. [QS]“ಆಶೇರನ ಆಹಾರವು ಕೊಬ್ಬಿದ ಆಹಾರವು. [QE][QS2]ಅವನು ಅರಸನಿಗೆ ಸವಿಯೂಟವನ್ನು ಕೊಡುವನು. [QE][PBR]
21. [QS]“ನಫ್ತಾಲಿ ಬಿಡುಗಡೆ ಹೊಂದಿದ ಜಿಂಕೆ, [QE][QS2]ಅವನು ಮಾತುಗಳು ಸುಂದರ ಮಕ್ಕಳ ಮಾತುಗಳಂತೆ. [QE][PBR]
22. [QS]“ಯೋಸೇಫನು ಫಲಭರಿತವಾದ ದ್ರಾಕ್ಷಿಬಳ್ಳಿ [QE][QS2]ಕಾಲುವೆಗಳ ಬಳಿಯಲ್ಲಿರುವ ಫಲಭರಿತ ದ್ರಾಕ್ಷಿಬಳ್ಳಿ, [QE][QS2]ಅದರ ಕೊಂಬೆಗಳು ಗೋಡೆಗಳನ್ನೇರುತ್ತವೆ. [QE]
23. [QS]ಸಿಟ್ಟಿನಿಂದ ಬಿಲ್ಲುಗಾರರು ಅವನ ಮೇಲೆ ಬೀಳುವರು. [QE][QS2]ವಿರೋಧದಿಂದ ಅವನ ಮೇಲೆ ಬಾಣಗಳನ್ನು ಎಸೆಯುವರು. [QE]
24. [QS]ಆದರೆ ಅವನ ಬಿಲ್ಲು ಸ್ಥಿರವಾಗಿ ನಿಲ್ಲುವುದು. [QE][QS2]ಅವನ ಬಲವಾದ ತೋಳುಗಳು ಚುರುಕಾಗಿ ನಿಂತವು. [QE][QS]ಇದಕ್ಕೆ ಕಾರಣ ಯಾಕೋಬನಿಗೆ ಸರ್ವಶಕ್ತರಾಗಿರುವ ದೇವರ ಹಸ್ತವೇ; [QE][QS2]ಇದಕ್ಕೆ ಕಾರಣ ಇಸ್ರಾಯೇಲನ ಬಂಡೆಯಾಗಿರುವ ಕುರುಬ. [QE]
25. [QS]ಇದಕ್ಕೆ ಕಾರಣ ನಿನಗೆ ಸಹಾಯ ಮಾಡುವ ನಿನ್ನ ಪಿತೃಗಳ ದೇವರು; [QE][QS2]ನಿನ್ನನ್ನು ಸರ್ವಶಕ್ತರಾದ ದೇವರು ಆಶೀರ್ವದಿಸಲಿ. [QE][QS]ಆ ಆಶೀರ್ವಾದಗಳು ಪರಲೋಕದವುಗಳು. [QE][QS2]ಆ ಆಶೀರ್ವಾದಗಳು ಕೆಳಗಿನಾಳದಲ್ಲಿರುವವುಗಳು. [QE][QS2]ಅವು ಎದೆಯ ಹಾಗೂ ಗರ್ಭದ ಆಶೀರ್ವಾದಗಳು. [QE]
26. [QS]ಪುರಾತನ ಪರ್ವತಗಳ ಆಶೀರ್ವಾದಗಳಿಗಿಂತ [QE][QS2]ನಿನ್ನ ತಂದೆಯ ಆಶೀರ್ವಾದಗಳು ಶ್ರೇಷ್ಠವಾದವುಗಳು. [QE][QS2]ಅವು ಪುರಾತನ ಶಿಖರಗಳ ಐಶ್ವರ್ಯಕ್ಕಿಂತ ಹೆಚ್ಚಿನವುಗಳು. [QE][QS]ಇವೆಲ್ಲವೂ ಯೋಸೇಫನ ತಲೆಯ ಮೇಲೆ ಅಂದರೆ, [QE][QS2]ತನ್ನ ಸಹೋದರರಲ್ಲಿ ರಾಜಕುಮಾರನಾದವನ ಹಣೆಯ ಮೇಲಿರಲಿ. [QE][PBR]
27. [QS]“ಬೆನ್ಯಾಮೀನನು ಕ್ರೂರವಾದ ತೋಳದಂತಿದ್ದಾನೆ. [QE][QS2]ಬೆಳಿಗ್ಗೆ ತಿನ್ನುತ್ತಾನೆ, [QE][QS2]ಸಂಜೆ ಕೊಳ್ಳೆಯನ್ನು ಹಂಚಿಕೊಳ್ಳುತ್ತಾನೆ.” [QE]
28.
29. [PS]ಇವರೆಲ್ಲಾ ಇಸ್ರಾಯೇಲಿನ ಹನ್ನೆರಡು ಗೋತ್ರಗಳು. ಅವರ ತಂದೆ ಅವರಿಗೆ ಹೇಳಿದ್ದೂ ಇದೇ. ಅವನು ಒಬ್ಬೊಬ್ಬನನ್ನೂ ಅವನಿಗೆ ತಕ್ಕ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು. [PE]{#1ಯಾಕೋಬನ ಮರಣ } [PS]ಅವನು ಅವರಿಗೆ ಆಜ್ಞಾಪಿಸಿ ಹೇಳಿದ್ದೇನೆಂದರೆ, “ನಾನು ನನ್ನ ಜನರೊಂದಿಗೆ ಸೇರಿಕೊಳ್ಳುತ್ತೇನೆ. ನನ್ನ ಪಿತೃಗಳ ಸಂಗಡ ಹಿತ್ತಿಯನಾದ ಎಫ್ರೋನನ ಹೊಲದಲ್ಲಿರುವ ಗವಿಯಲ್ಲಿ
30. ಕಾನಾನ್ ದೇಶದಲ್ಲಿ ಮಮ್ರೆಗೆ ಎದುರಾಗಿ ಮಕ್ಪೇಲ ಹೊಲದಲ್ಲಿರುವಂಥ ಅಬ್ರಹಾಮನು, ಹೊಲದ ಸಂಗಡ ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನನಿಂದ ಕೊಂಡುಕೊಂಡಂಥ ಗವಿಯಲ್ಲಿ ನನ್ನನ್ನು ಹೂಳಿರಿ.
31. ಅಲ್ಲಿ ಅಬ್ರಹಾಮನನ್ನೂ, ಅವನ ಹೆಂಡತಿ ಸಾರಳನ್ನೂ ಹೂಳಿದರು. ಅಲ್ಲಿ ಇಸಾಕನನ್ನೂ, ಅವನ ಹೆಂಡತಿ ರೆಬೆಕ್ಕಳನ್ನೂ ಹೂಳಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಳಿದೆನು.
32. ಆ ಹೊಲವೂ, ಅದರಲ್ಲಿರುವ ಗವಿಯೂ ಹಿತ್ತಿಯರಿಂದ ಕೊಂಡುಕೊಂಡದ್ದು,” ಎಂದನು. [PE]
33. [PS]ಯಾಕೋಬನು ತನ್ನ ಪುತ್ರರಿಗೆ ಆಜ್ಞಾಪಿಸಿದ ತರುವಾಯ, ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಪಿತೃಗಳೊಂದಿಗೆ ಸೇರಿದನು. [PE]