1. {#1ಅಂತ್ಯ ಬಂದಿದೆ } [PS]ಯೆಹೋವ ದೇವರ ವಾಕ್ಯವು ನನಗೆ ಬಂದಿತು:
2. “ಮನುಷ್ಯಪುತ್ರನೇ, ಸಾರ್ವಭೌಮ ಯೆಹೋವ ದೇವರು ಇಸ್ರಾಯೇಲ್ ದೇಶಕ್ಕೆ ಹೀಗೆ ಹೇಳುತ್ತಾರೆ: [PE][QS]“ ‘ಅಂತ್ಯವು ಬಂದಿದೆ! [QE][QS2]ಈ ದೇಶದ ನಾಲ್ಕು ಮೂಲೆಗಳಲ್ಲಿಯೂ ಅಂತ್ಯವು ಬಂದಿದೆ! [QE]
3. [QS]ಈಗಲೇ ನಿನಗೆ ಅಂತ್ಯವು ಬಂದಿದೆ. [QE][QS2]ನನ್ನ ಕೋಪವನ್ನು ನಿನ್ನ ಮೇಲೆ ಬರಮಾಡುತ್ತೇನೆ. [QE][QS]ನಿನ್ನ ನಡತೆಯ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. [QE][QS2]ನಿನ್ನ ಎಲ್ಲಾ ಅಸಹ್ಯ ಕಾರ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿತೀರಿಸುವೆನು. [QE]
4. [QS]ನನ್ನ ಕಣ್ಣುಗಳು ನಿನ್ನನ್ನು ಕನಿಕರಿಸುವುದೂ ಇಲ್ಲ. [QE][QS2]ನಾನು ನಿನ್ನನ್ನು ಬಿಡುವುದೂ ಇಲ್ಲ. [QE][QS]ಆದರೆ ನಿನ್ನ ದುರ್ಮಾರ್ಗಗಳ ಪ್ರಕಾರ, ನಿನ್ನ ಮೇಲೆ ಮುಯ್ಯಿ ತೀರಿಸುತ್ತೇನೆ. [QE][QS2]ನಿನ್ನ ಅಸಹ್ಯ ಕಾರ್ಯಗಳು ನಿನ್ನ ಮಧ್ಯೆ ಇರುವುವು. [QE][MS]ಆಗ ನಾನೇ ಯೆಹೋವ ದೇವರು ಎಂದು ನಿಮಗೆ ತಿಳಿಯುವುದು.’ [ME][PBR]
5. [PS]“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: [PE][QS]“ ‘ಕೇಡು! ಎಂದೂ ಕೇಳದ ಕೇಡು, [QE][QS2]ಇಗೋ ಬಂದಿತು. [QE]
6. [QS]ಅಂತ್ಯವು ಬಂದಿತು, [QE][QS2]ಅಂತ್ಯವು ಬಂದುಬಿಟ್ಟಿತು, [QE][QS]ನಿನ್ನನ್ನು ಚಚ್ಚುವುದಕ್ಕೆ ಎಚ್ಚರಗೊಂಡಿದೆ, [QE][QS2]ಇಗೋ ಬಂದೇ ಬಂತು. [QE]
7. [QS]ಓ ದೇಶ ನಿವಾಸಿಯೇ, [QE][QS2]ನಿನಗಾಗಿ ವಿನಾಶದ ದಿನ ಬಂದಿತು, [QE][QS]ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು. [QE][QS2]ಪರ್ವತಗಳ ಮೇಲೆ ಸಂತೋಷವಲ್ಲ ಭೀತಿಯಿದೆ. [QE]
8. [QS]ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ರೋಷವನ್ನು ನಿನ್ನ ಮೇಲೆ ಸುರಿಸುವೆನು. [QE][QS2]ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿ ಬಿಡುವೆನು. [QE][QS]ನಾನು ನಿನ್ನ ನಡತೆಯ ಪ್ರಕಾರ ಮುಯ್ಯಿತೀರಿಸುವೆನು. [QE][QS2]ನಿನ್ನ ಎಲ್ಲಾ ಅಸಹ್ಯಕಾರ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿತೀರಿಸುವೆನು. [QE]
9. [QS]ನಾನು ಕಟಾಕ್ಷಿಸುವುದೂ ಇಲ್ಲ, [QE][QS2]ನಿನ್ನನ್ನು ಕನಿಕರಿಸುವುದೂ ಇಲ್ಲ. [QE][QS]ನಿನ್ನ ನಡತೆಗಳಿಗೂ, ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ [QE][QS2]ತಕ್ಕ ಹಾಗೆ ನಿನಗೆ ಮುಯ್ಯಿ ತೀರಿಸುತ್ತೇನೆ. [QE][MS]ಆಗ ನಾನೇ ಹೊಡೆಯುತ್ತಿರುವ ಯೆಹೋವ ದೇವರೆಂದು ನಿಮಗೆ ತಿಳಿಯುವುದು. [ME]
10. [QS]“ ‘ಇಗೋ ಆ ದಿನವು ಬಂತು, [QE][QS]ನೋಡು ವಿನಾಶದ ದಿನ ಹೊರಟುಹೋಯಿತು, [QE][QS2]ಕೋಲು ಚಿಗುರಿತು, [QE][QS2]ಅಹಂಕಾರವು ಅರಳಿತು, [QE]
11. [QS]ಬಲಾತ್ಕಾರವು ದುಷ್ಟತನದ ಕೋಲಿನಲ್ಲಿ ಬೆಳೆದಿತ್ತು. [QE][QS2]ಅವರಲ್ಲಿಯೂ ಅವರ ಜನಸಮೂಹದಲ್ಲಿಯೂ, [QE][QS2]ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವುದಿಲ್ಲ, [QE][QS2]ಅವರಲ್ಲಿ ಯಾವ ಮೌಲ್ಯವು ಇರುವುದಿಲ್ಲ. [QE]
12. [QS]ಸಮಯವು ಬಂತು, [QE][QS2]ದಿನವು ಬಂದೇಬಿಟ್ಟಿತು. [QE][QS]ಕೊಂಡುಕೊಳ್ಳುವವನಿಗೆ ಸಂತೋಷವಿಲ್ಲದಿರಲಿ, [QE][QS2]ಮಾರುವವನು ದುಃಖಿಸದಿರಲಿ. [QE][QS2]ಏಕೆಂದರೆ ಆ ಎಲ್ಲಾ ಜನಸಮೂಹದ ಮೇಲೆ ನನ್ನ ರೌದ್ರವಿದೆ. [QE]
13. [QS]ಮಾರಿದವನು ಎಷ್ಟು ವರ್ಷ ಬದುಕಿದರೂ, [QE][QS2]ಮಾರಿದ ಸೊತ್ತು ಅವನ ವಶಕ್ಕೆ ತಿರುಗಿ ಬಾರದು. [QE][QS]ಉಂಟಾದ ದಿವ್ಯದರ್ಶನ ಸಮಾಜದವರಿಗೆಲ್ಲಾ ಸಂಬಂಧಿಸಿದೆ, [QE][QS2]ಎಂದಿಗೂ ತಿರುಗದು, [QE][QS]ಯಾರೂ ತಮ್ಮ ಪಾಪಗಳಿಂದ [QE][QS2]ತಮ್ಮ ಜೀವವನ್ನು ಉಳಿಸಿಕೊಳ್ಳರು. [QE][PBR]
14. [QS]“ ‘ಅವರು ಕಹಳೆಯನ್ನೂದಿ [QE][QS2]ಎಲ್ಲವನ್ನೂ ಸಿದ್ಧ ಮಾಡಿಕೊಂಡಿದ್ದಾರೆ. [QE][QS]ಆದರೆ ಯಾರೂ ಯುದ್ಧಕ್ಕೆ ಹೋಗುವುದಿಲ್ಲ. [QE][QS2]ಏಕೆಂದರೆ ಆ ಎಲ್ಲಾ ಜನಸಮೂಹದ ಮೇಲೆ ನನ್ನ ಕೋಪವಿದೆ. [QE]
15. [QS]ಹೊರಗೆ ಖಡ್ಗವೂ [QE][QS2]ಒಳಗೆ ವ್ಯಾಧಿಯೂ ಕ್ಷಾಮವೂ ಉಂಟು. [QE][QS]ಹೊರಗಿರುವವರನ್ನು ಖಡ್ಗವು ಸಾಯಿಸುವುದು, [QE][QS2]ಪಟ್ಟಣದಲ್ಲಿರುವವರನ್ನು ವ್ಯಾಧಿಯೂ ಕ್ಷಾಮವೂ ತಿಂದುಬಿಡುವುದು. [QE]
16. [QS]ಆದರೆ ಅವರಲ್ಲಿ ಪಲಾಯನ ಮಾಡಿದವರು ತಪ್ಪಿಸಿಕೊಳ್ಳುವರು. [QE][QS2]ಪ್ರತಿಯೊಬ್ಬರೂ ತಮ್ಮ ತಮ್ಮ ಅಕ್ರಮಗಳ ನಿಮಿತ್ತ [QE][QS2]ಕಣಿವೆಯಲ್ಲಿರುವ ಪಾರಿವಾಳದ ಹಾಗೆ ಗೋಳಾಡಿ, [QE][QS]ಪರ್ವತಗಳ ಮೇಲೆ ಇರುವರು. [QE]
17. [QS]ಕೈಗಳೆಲ್ಲಾ ಜೋತಾಡುವುವು, [QE][QS2]ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ಆಗುವುವು. [QE]
18. [QS]ಅವರು ತಮ್ಮಲ್ಲಿ ಗೋಣಿತಟ್ಟುಗಳನ್ನು ಕಟ್ಟಿಕೊಳ್ಳುವರು [QE][QS2]ಮತ್ತು ಭಯವು ಅವರನ್ನು ಮುಚ್ಚಿಬಿಡುವುದು. [QE][QS]ಎಲ್ಲಾ ಮುಖಗಳ ಮೇಲೆ ನಾಚಿಕೆಯೂ, [QE][QS2]ಅವರ ಎಲ್ಲಾ ತಲೆಗಳು ಬೋಳಾಗಿಯೂ ಇರುವುವು. [QE][PBR]
19. [QS]“ ‘ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, [QE][QS2]ಅವರ ಬಂಗಾರವು ಅಶುದ್ಧ ವಸ್ತುವಿನಂತಿರುವುದು. [QE][QS]ಅವರ ಬೆಳ್ಳಿ ಬಂಗಾರಗಳು [QE][QS2]ಯೆಹೋವ ದೇವರ ಕೋಪದ ದಿವಸದಲ್ಲಿ [QE][QS2]ಅವರನ್ನು ಪಾರು ಮಾಡಲಾರವು. [QE][QS]ಇದರಿಂದ ಅವರ ಹಸಿವು ನೀಗುವುದಿಲ್ಲ, [QE][QS2]ಅವರ ಹೊಟ್ಟೆಗಳನ್ನು ತುಂಬಿಸುವುದಿಲ್ಲ. [QE][QS2]ಏಕೆಂದರೆ ಅವರ ಆಸ್ತಿಯು ಪಾಪ ಕೃತ್ಯಗಳಿಗೆ ಕಾರಣವಾಗಿತ್ತು. [QE]
20. [QS]ಅವರ ಆಭರಣಗಳ ಚಂದವು ಅವರಿಗೆ ಗರ್ವಕ್ಕೆ ಆಸ್ಪದವಾಯಿತು. [QE][QS2]ಇದಲ್ಲದೆ ಹೇಯವೂ ಅಸಹ್ಯವೂ ಆದ [QE][QS]ತಮ್ಮ ದೇವತೆಗಳ ಪ್ರತಿಮೆಗಳನ್ನು ಬೆಳ್ಳಿಬಂಗಾರದಿಂದ ರೂಪಿಸುತ್ತಿದ್ದರು. [QE][QS2]ಆದಕಾರಣ ಅದನ್ನು ಅವರಿಗೆ ಅಶುದ್ಧಪದಾರ್ಥವನ್ನಾಗಿ ಮಾಡಿ [QE]
21. [QS]ನಾನು ಅದನ್ನು ವಿದೇಶಿಯರ ಕೈಗೆ ಕೊಳ್ಳೆಯಾಗಿಯೂ, [QE][QS2]ಭೂಮಿಯ ದುಷ್ಟರಿಗೆ ಸೂರೆಯಾಗಿಯೂ ಒಪ್ಪಿಸುವೆನು. [QE][QS2]ಅವರು ಅದನ್ನು ಅಪವಿತ್ರಪಡಿಸುವರು. [QE]
22. [QS]ನನ್ನ ಮುಖವನ್ನು ನಾನು ಅವರ ಕಡೆಯಿಂದ ತಿರುಗಿಸುವೆನು. [QE][QS2]ನನ್ನ ಅತ್ಯಂತ ಅಮೂಲ್ಯ ಸ್ಥಳವನ್ನು ಅಪವಿತ್ರಪಡಿಸುವರು. [QE][QS]ದರೋಡೆಕೋರರು ಅದರಲ್ಲಿ ಸೇರಿ [QE][QS2]ಅದನ್ನು ಅಪವಿತ್ರಪಡಿಸುವರು. [QE][PBR]
23. [QS]“ ‘ಸರಪಳಿಯನ್ನು ತಯಾರುಮಾಡು. [QE][QS2]ದೇಶವು ರಕ್ತಾಪರಾಧದಿಂದ ತುಂಬಿದೆ [QE][QS2]ಮತ್ತು ನಗರವು ಹಿಂಸೆಯಿಂದ ತುಂಬಿದೆ. [QE]
24. [QS]ಆದಕಾರಣ ನಾನು ಇತರ ಜನಾಂಗಗಳಲ್ಲಿ ಕೆಟ್ಟವರನ್ನು ತರುತ್ತೇನೆ [QE][QS2]ಮತ್ತು ಅವರು ಅವರ ಮನೆಗಳನ್ನು ವಶಪಡಿಸಿಕೊಳ್ಳುವರು. [QE][QS]ನಾನು ಬಲಿಷ್ಠರ ಅಹಂಕಾರವನ್ನು ನಿಲ್ಲಿಸುತ್ತೇನೆ. [QE][QS2]ಅವರ ಪರಿಶುದ್ಧ ಸ್ಥಳಗಳು ಅಪವಿತ್ರವಾಗುವುವು. [QE]
25. [QS]ನಾಶವು ಬರುತ್ತದೆ. [QE][QS2]ಅವರು ಸಮಾಧಾನವನ್ನು ಹುಡುಕುತ್ತಾರೆ, ಆದರೆ ಅದು ಇರುವುದಿಲ್ಲ. [QE]
26. [QS]ಕೇಡಿನ ಮೇಲೆ ಕೇಡು ಬರುವುದು, [QE][QS2]ಸುದ್ದಿಯ ಮೇಲೆ ಸುದ್ದಿ ಬರುವುದು, [QE][QS]ಅವರು ಪ್ರವಾದಿಯಿಂದ ದರ್ಶನವನ್ನು ಹುಡುಕುವರು. [QE][QS2]ಆದರೆ ಯಾಜಕರಿಂದ ನಿಯಮ ಬೋಧನೆಯು ಅಡಗಿಹೋಗುವುದು, [QE][QS2]ಹಿರಿಯರಿಂದ ಸಮಾಲೋಚನೆಯು ಇಲ್ಲವಾಗುವುದು. [QE]
27. [QS]ಅರಸನು ದುಃಖಿಸುವನು, [QE][QS2]ರಾಜಕುಮಾರನಿಗೆ ನಿರಾಶೆಯು ಅವನ ಉಡುಪಾಗಿರುತ್ತದೆ. [QE][QS2]ದೇಶದ ಜನರ ಕೈಗಳು ತತ್ತರಿಸುವುವು, [QE][QS]ಅವರ ದುರ್ನಡತೆಗೆ ತಕ್ಕ ಪ್ರತೀಕಾರ ಮಾಡುವೆನು. [QE][QS2]ಅವರ ದುಷ್ಕರ್ಮಗಳ ಪ್ರಕಾರ ಅವರಿಗೆ ನ್ಯಾಯತೀರಿಸುವೆನು. [QE][PBR] [MS]“ ‘ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ” [ME]