1. {#1ದಶಾಜ್ಞೆಗಳು } [PS]ದೇವರು ಈ ಎಲ್ಲಾ ವಾಕ್ಯಗಳನ್ನು ಹೇಳಿದರು: [PE][PBR]
2. [LS4] “ನಿನ್ನನ್ನು ಈಜಿಪ್ಟ್ ದೇಶದಿಂದಲೂ ದಾಸತ್ವದ ನಾಡಿನೊಳಗಿಂದಲೂ ಹೊರಗೆ ತಂದ ನಿನ್ನ ದೇವರಾದ ಯೆಹೋವ ದೇವರು ನಾನೇ. [LE][PBR]
3. [LS] “ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು. [LE]
4. [LS] ಮೇಲಿನ ಆಕಾಶದಲ್ಲಾಗಲಿ, ಕೆಳಗಿನ ಭೂಮಿಯಲ್ಲಾಗಲಿ, ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಇರುವ ಯಾವುದರ ವಿಗ್ರಹವನ್ನಾಗಲಿ, ರೂಪವನ್ನಾಗಲಿ ನೀನು ಮಾಡಿಕೊಳ್ಳಬಾರದು.
5. ನೀನು ಅವುಗಳಿಗೆ ಅಡ್ಡ ಬೀಳಬಾರದು ಮತ್ತು ಆರಾಧಿಸಲೂಬಾರದು. ಏಕೆಂದರೆ ನಿನ್ನ ದೇವರಾದ ನಾನು, ನನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತನಾದ ಯೆಹೋವ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆತಾಯಿಗಳ ಅಪರಾಧವನ್ನು ಮಕ್ಕಳ ಮೇಲೆಯೂ ಮೂರನೆಯ ನಾಲ್ಕನೆಯ ತಲೆಗಳವರೆಗೂ ಬರಮಾಡುವೆನು.
6. ನನ್ನನ್ನು ಪ್ರೀತಿಸಿ, ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗೆ, ಸಾವಿರ ತಲೆಗಳವರೆಗೆ ಪ್ರೀತಿ ತೋರಿಸುತ್ತೇನೆ. [LE]
7. [LS] ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು. ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ. [LE]
8. [LS] ಸಬ್ಬತ್ ದಿನವನ್ನು ಪರಿಶುದ್ಧ ದಿನವೆಂದು ಜ್ಞಾಪಕದಲ್ಲಿಟ್ಟುಕೊಂಡು ಆಚರಿಸಿರಿ.
9. ಆರು ದಿನಗಳಲ್ಲಿ ನೀನು ದುಡಿದು, ನಿನ್ನ ಕೆಲಸವನ್ನೆಲ್ಲಾ ಮಾಡಬೇಕು.
10. ಆದರೆ ಏಳನೆಯ ದಿನ ನಿನ್ನ ದೇವರಾದ ಯೆಹೋವ ದೇವರ ಸಬ್ಬತ್ ದಿನವಾಗಿದೆ. ಅದರಲ್ಲಿ ನೀನಾಗಲೀ, ನಿನ್ನ ಮಗನಾಗಲೀ, ನಿನ್ನ ಮಗಳಾಗಲೀ, ನಿನ್ನ ದಾಸನಾಗಲೀ, ನಿನ್ನ ದಾಸಿಯಾಗಲೀ, ನಿನ್ನ ಪಶುಗಳಾಗಲೀ ಮತ್ತು ನಿನ್ನ ಊರಲ್ಲಿರುವ ಅನ್ಯದೇಶದವರು ಸಹ ಯಾವ ಕೆಲಸವನ್ನೂ ಮಾಡಬಾರದು.
11. ಏಕೆಂದರೆ ಆರು ದಿನಗಳಲ್ಲಿ ಯೆಹೋವ ದೇವರು ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಉಂಟುಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದ್ದರಿಂದ ಯೆಹೋವ ದೇವರು ಸಬ್ಬತ್ ದಿನವನ್ನು ಆಶೀರ್ವದಿಸಿ, ಅದನ್ನು ಪರಿಶುದ್ಧ ಮಾಡಿದರು. [LE]
12. [LS] ನಿನ್ನ ದೇವರಾದ ಯೆಹೋವ ದೇವರು ನಿನಗೆ ಕೊಡುವ ದೇಶದಲ್ಲಿ ನೀನು ಬಹುಕಾಲ ಬಾಳುವಂತೆ ನಿನ್ನ ತಂದೆತಾಯಿಗಳನ್ನು ಗೌರವಿಸು. [LE]
13. [LS] ಕೊಲೆ ಮಾಡಬೇಡ. [LE]
14. [LS] ವ್ಯಭಿಚಾರ ಮಾಡಬೇಡ. [LE]
15. [LS] ಕದಿಯಬೇಡ. [LE]
16. [LS] ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಬೇಡ. [LE]
17. [LS] ನಿನ್ನ ನೆರೆಯವನ ಮನೆಯನ್ನು ಆಶಿಸಬೇಡ. ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ. ಅವನ ದಾಸನನ್ನಾಗಲಿ, ಅವನ ದಾಸಿಯನ್ನಾಗಲಿ, ಅವನ ಎತ್ತನ್ನಾಗಲಿ, ಅವನ ಕತ್ತೆಯನ್ನಾಗಲಿ, ನಿನ್ನ ನೆರೆಯವನಿಗೆ ಇರುವ ಯಾವುದನ್ನೂ ಆಶಿಸಬೇಡ.” [LE][PBR]
18. [PS]ಜನರೆಲ್ಲಾ ಗುಡುಗುಗಳನ್ನೂ ಮಿಂಚುಗಳನ್ನೂ ತುತೂರಿಯ ಶಬ್ದವನ್ನೂ ಬೆಟ್ಟದಲ್ಲಿ ಹೊಗೆ ಹಾಯುವುದನ್ನೂ ನೋಡಿದರು. ಜನರು ಅದನ್ನು ನೋಡಿ ನಡುಗುತ್ತಾ ದೂರಹೋಗಿ ನಿಂತುಕೊಂಡರು.
19. ಅವರು ಮೋಶೆಗೆ, “ನೀನೇ ನಮ್ಮ ಸಂಗಡ ಮಾತನಾಡು, ಆಗ ನಾವು ಕೇಳುವೆವು. ನಾವು ಸಾಯದ ಹಾಗೆ ದೇವರು ನಮ್ಮೊಂದಿಗೆ ನೇರವಾಗಿ ಮಾತನಾಡಲು ಬಿಡಬೇಡಿ,” ಎಂದು ವಿನಂತಿಸಿಕೊಂಡರು. [PE]
20.
21. [PS]ಆಗ ಮೋಶೆಯು ಜನರಿಗೆ, “ಭಯಪಡಬೇಡಿರಿ. ಏಕೆಂದರೆ ನಿಮ್ಮನ್ನು ಪರೀಕ್ಷಿಸುವುದಕ್ಕೋಸ್ಕರವೂ ನೀವು ಪಾಪಮಾಡದಂತೆ ಅವರ ಭಯವು ನಿಮಗಿರಲೆಂದೂ ದೇವರು ಬಂದಿದ್ದಾರೆ,” ಎಂದನು. [PE]
22. [PS]ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು. [PE]{#1ವಿಗ್ರಹಗಳು ಮತ್ತು ಬಲಿಪೀಠ } [PS]ಯೆಹೋವ ದೇವರು ಮೋಶೆಗೆ, “ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು, ‘ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.
23. ನನ್ನ ಹೊರತಾಗಿ ಬೆಳ್ಳಿ ಬಂಗಾರಗಳ ದೇವರುಗಳನ್ನು ಮಾಡಿಕೊಳ್ಳಬೇಡಿರಿ. [PE]
24. [PS]“ ‘ಬಲಿಪೀಠವನ್ನು ಮಣ್ಣಿನಿಂದ ಮಾಡಬೇಕು. ಅದರ ಮೇಲೆ ನಿಮ್ಮ ಸಮರ್ಪಣೆಗಳಾದ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಕುರಿಮೇಕೆಗಳನ್ನೂ ದನಗಳನ್ನೂ ಅರ್ಪಿಸಬೇಕು. ನಾನು ನನ್ನ ಹೆಸರನ್ನು ಗೌರವಿಸುವಂತೆ ಮಾಡುವ ಎಲ್ಲಾ ಸ್ಥಳಗಳಲ್ಲಿಯೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.
25. ಬಲಿಪೀಠವನ್ನು ಕಲ್ಲಿನಿಂದ ಮಾಡಿದರೆ, ಅದನ್ನು ಕೆತ್ತಿದ ಕಲ್ಲಿನಿಂದ ಕಟ್ಟಬಾರದು. ಏಕೆಂದರೆ ಉಳಿಯನ್ನು ಅದರ ಮೇಲೆ ಉಪಯೋಗಿಸಿದರೆ, ಅದನ್ನು ಅಪವಿತ್ರಮಾಡಿದ ಹಾಗಾಗುತ್ತದೆ.
26. ನನಗಾಗಿ ಬಲಿಪೀಠದ ಮೇಲೆ ಹೋಗಲು ಹತ್ತುವಾಗ ನಿನ್ನ ಬೆತ್ತಲೆತನ ಕಾಣಬಾರದು. ಅದರ ಮೆಟ್ಟಲುಗಳನ್ನು ಹತ್ತಬಾರದು,’ ಎಂದು ಹೇಳಿದರು. [PE]