1. [QS]ಸತ್ತ ನೊಣಗಳು ಸುಗಂಧ ತೈಲವನ್ನು ದುರ್ವಾಸನೆಗೆ ಒಳಪಡಿಸುತ್ತದೆ. [QE][QS2]ಹಾಗೆಯೇ ಸ್ವಲ್ಪ ಮೂಢತನವು ಜ್ಞಾನ ಮಾನಗಳನ್ನು ಕೆಡಿಸಿಬಿಡುತ್ತದೆ. [QE]
2. [QS]ಜ್ಞಾನಿಯ ಹೃದಯವು ಬಲಗಡೆ ಸಾಗಿದರೆ, [QE][QS2]ಮೂರ್ಖನ ಹೃದಯವು ಎಡಗಡೆ ಸಾಗುವುದು. [QE]
3. [QS]ಮೂರ್ಖನು ಮಾರ್ಗದಲ್ಲಿ ನಡೆಯುವಾಗಲೂ, [QE][QS2]ತಾನು ಅರಿವಿಲ್ಲದ ಮೂರ್ಖನೆಂದು [QE][QS2]ಪ್ರತಿಯೊಬ್ಬರಿಗೂ ಪ್ರಕಟಿಸುತ್ತಾನೆ. [QE]
4. [QS]ಅಧಿಕಾರಿಯು ನಿನಗೆ ವಿರುದ್ಧವಾಗಿ ಸಿಟ್ಟುಗೊಂಡರೆ, [QE][QS2]ನಿನ್ನ ಉದ್ಯೋಗವನ್ನು ಬಿಟ್ಟುಬಿಡಬೇಡ. [QE][QS2]ಏಕೆಂದರೆ ತಾಳ್ಮೆಯು ದೊಡ್ಡ ಅಪರಾಧಗಳನ್ನು ಶಾಂತಪಡಿಸುತ್ತದೆ. [QE][PBR]
5. [QS]ಮತ್ತೊಂದು ವ್ಯಸನವನ್ನು ನಾನು ಸೂರ್ಯನ ಕೆಳಗೆ ನೋಡಿದ್ದೇನೆ. [QE][QS2]ಅದು ಆಳುವವರಿಂದ ಬರುವ ತಪ್ಪಿನಿಂದಾದದ್ದು. [QE]
6. [QS]ಅದು ಯಾವುದೆಂದರೆ, ಮೂರ್ಖರನ್ನು ಉನ್ನತ ಪದವಿಗೆ ನೇಮಿಸುವುದು. [QE][QS2]ಘನವಂತರನ್ನು ಕೆಳಗಿನ ಸ್ಥಳದಲ್ಲಿ ಕೂತುಕೊಳ್ಳುವಂತೆ ಮಾಡುವುದು. [QE]
7. [QS]ಕುದುರೆಗಳ ಮೇಲೆ ಸವಾರಿ ಮಾಡುವ ಸೇವಕರನ್ನೂ [QE][QS2]ಅಧಿಕಾರಿಗಳು ಸೇವಕರ ಹಾಗೆ ನಡೆದುಕೊಂಡು ಹೋಗುವುದನ್ನೂ ನಾನು ನೋಡಿದ್ದೇನೆ. [QE][PBR]
8. [QS]ಗುಂಡಿಯನ್ನು ಅಗೆಯುವವನೇ ಅದರಲ್ಲಿ ಬೀಳುವನು. [QE][QS2]ಗೋಡೆಯನ್ನು ಒಡೆಯುವವನನ್ನು ಹಾವು ಕಡಿಯುವುದು. [QE]
9. [QS]ಗಣಿಯಿಂದ ಬಂಡೆಗಳನ್ನು ಸೀಳುವವನು ಗಾಯಗೊಳ್ಳುವನು. [QE][QS2]ಮರಕಡಿಯುವವನು ಅದರಿಂದಲೇ ಅಪಾಯಕ್ಕೊಳಗಾಗುವನು. [QE][PBR]
10. [QS]ಮೊಂಡುಕೊಡಲಿಯ ಬಾಯನ್ನು ಮೊನೆಮಾಡದಿದ್ದರೆ, [QE][QS2]ಹೆಚ್ಚು ಬಲವನ್ನು ಪ್ರಯೋಗಿಸಬೇಕಾಗುವುದು, [QE][QS2]ಆದರೆ ಜ್ಞಾನವೇ ಯಶಸ್ಸನ್ನು ತರುತ್ತದೆ. [QE][PBR]
11. [QS]ಹಾವಾಡಿಸುವುದರೊಳಗೆ ಹಾವು ಕಚ್ಚಿದರೆ, [QE][QS2]ಹಾವಾಡಿಗನಿಗೆ ಏನು ಪ್ರಯೋಜನ? [QE][PBR]
12. [QS]ಜ್ಞಾನಿಯ ಮಾತುಗಳು ಹಿತಕರ. [QE][QS2]ಆದರೆ ಬುದ್ಧಿಹೀನನ ಮಾತುಗಳು ಅವನಿಗೆ ವಿನಾಶಕರ. [QE]
13. [QS]ಅವನ ಮಾತುಗಳು ಆರಂಭದಲ್ಲಿ ಮೂಢತನವಾಗಿರುವುದು. [QE][QS2]ಅವನ ಮಾತಿನ ಅಂತ್ಯವು ಹುಚ್ಚುತನವಾಗಿರುವುದು. [QE]
2. [QS2]ಮೂಢನು ಮಾತುಗಳನ್ನು ಹೆಚ್ಚಿಸುತ್ತಾನೆ. [QE][PBR] [QS]ಆದರೂ ಅವನು ಭವಿಷ್ಯ ಏನೆಂದು ತಿಳಿಯನು. [QE][QS2]ಅವನ ತರುವಾಯ ಆಗುವುದನ್ನೂ ಅವನಿಗೆ ತಿಳಿಸುವವರು ಇಲ್ಲ. [QE][PBR]
15. [QS]ಮೂಢರ ಕಷ್ಟವು ಅವರನ್ನು ದಣಿಸುತ್ತದೆ. [QE][QS2]ನಗರಕ್ಕೆ ಹೇಗೆ ಹೋಗಬೇಕೆಂದು ಸಹ ಅವನಿಗೆ ತಿಳಿಯದು. [QE][PBR]
16. [QS]ಬಾಲಕನಾಗಿದ್ದವನು ದೇಶಕ್ಕೆ ಅರಸನಾಗಿದ್ದರೆ, [QE][QS2]ನಾಯಕರೆಲ್ಲರು ಬೆಳಿಗ್ಗೆಯೇ ಔತಣಕ್ಕೆ ಕೂತುಕೊಂಡರೆ ಅಯ್ಯೋ ಕಷ್ಟ! [QE]
17. [QS]ಶ್ರೇಷ್ಠ ಹಿನ್ನೆಲೆಯವನು ದೇಶಕ್ಕೆ ಅರಸನಾದರೆ, [QE][QS2]ರಾಜಕುಮಾರರು ಕುಡುಕರಾಗುವುದಕ್ಕೆ ಬದಲು, [QE][QS2]ಸರಿಯಾದ ಸಮಯದಲ್ಲಿ ಶಕ್ತಿಗಾಗಿ ಊಟ ಮಾಡಿದರೆ ಅದು ದೇಶಕ್ಕೆ ಆಶೀರ್ವಾದ. [QE][PBR]
18. [QS]ಸೋಮಾರಿತನದಿಂದ ಮನೆ ಕುಸಿಯುತ್ತದೆ. [QE][QS2]ಜೋಲುಗೈಯಿಂದ ಮನೆ ಸೋರುತ್ತದೆ. [QE][PBR]
19. [QS]ವಿನೋದಕ್ಕಾಗಿ ಔತಣ ಮಾಡುತ್ತಾರೆ, [QE][QS2]ಆನಂದಕ್ಕಾಗಿ ದ್ರಾಕ್ಷಾರಸ ಕುಡಿಯುತ್ತಾರೆ; [QE][QS2]ಎಲ್ಲವನ್ನೂ ಒದಗಿಸಿಕೊಡುವುದಕ್ಕಾಗಿ ಹಣವು. [QE][PBR]
20. [QS]ನಿನ್ನ ಆಲೋಚನೆಯಲ್ಲಿಯೂ ಅರಸನನ್ನು ನಿಂದಿಸಬೇಡ. [QE][QS2]ನೀನು ಮಲಗುವ ಕೋಣೆಯಲ್ಲಿ ಐಶ್ವರ್ಯವಂತರನ್ನು ಶಪಿಸಬೇಡ. [QE][QS]ಏಕೆಂದರೆ ಆಕಾಶದ ಪಕ್ಷಿಗಳು ನಿನ್ನ ಮಾತನ್ನು ತೆಗೆದುಕೊಂಡು ಹೋಗಬಹುದು. [QE][QS2]ಹಾರುವ ಪಕ್ಷಿ ನಿನ್ನ ಸುದ್ದಿಯನ್ನು ತಿಳಿಸಬಹುದು. [QE]