ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
2 ಸಮುವೇಲನು
1. [PS]ಅಹೀತೋಫೆಲನು ಅಬ್ಷಾಲೋಮನಿಗೆ, “ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆಯ್ದುಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು.
2. ಅವನು ದಣಿದು ಅವನ ಕೈ ದುರ್ಬಲವಾಗಿರುವಾಗ, ಹೋಗಿ ಅವನ ಮೇಲೆ ಬಿದ್ದು ಅವನನ್ನು ಹೆದರಿಸುವೆನು. ಆಗ ಅವನ ಸಂಗಡ ಇರುವ ಜನರೆಲ್ಲರು ಓಡಿಹೋಗುವರು.
3. ಆಗ ನಾನು ಅರಸನನ್ನು ಮಾತ್ರ ಹೊಡೆದು, ಜನರೆಲ್ಲರನ್ನು ತಿರುಗಿ ನಿನ್ನ ಬಳಿಗೆ ತೆಗೆದುಕೊಂಡು ಬರುವೆನು. ನೀನು ಹುಡುಕುವವನು ಸಿಕ್ಕಿದರೆ, ಜನರೆಲ್ಲರು ಹಿಂದಿರುಗಿದ ಹಾಗೆ ಆಗುವುದು. ಜನರೆಲ್ಲರು ಸಮಾಧಾನವಾಗಿರುವರು,” ಎಂದನು.
4. ಈ ಮಾತು ಅಬ್ಷಾಲೋಮನ ದೃಷ್ಟಿಗೂ, ಇಸ್ರಾಯೇಲಿನ ಸಮಸ್ತ ಹಿರಿಯರ ದೃಷ್ಟಿಗೂ ಒಳ್ಳೆಯದಾಗಿ ತೋರಿತು. [PE]
5. [PS]ಆದರೆ ಅಬ್ಷಾಲೋಮನು, “ಅರ್ಕಿಯನಾದ ಹೂಷೈಯನ್ನು ನಾವು ಕೇಳುವ ಹಾಗೆ ಅವನನ್ನು ಕರೆಯಿರಿ,” ಎಂದನು.
6. ಹೂಷೈ ಅಬ್ಷಾಲೋಮನ ಬಳಿಗೆ ಬಂದಾಗ, ಅಬ್ಷಾಲೋಮನು ಅವನಿಗೆ, “ಅಹೀತೋಫೆಲನು ಈ ಪ್ರಕಾರ ಹೇಳಿದ್ದಾನೆ. ಅವನ ಮಾತಿನ ಪ್ರಕಾರ ಮಾಡೋಣವೋ? ಬೇಡವಾದರೆ ನೀನು ಮಾತನಾಡು,” ಎಂದನು. [PE]
7. [PS]ಆಗ ಹೂಷೈ ಅಬ್ಷಾಲೋಮನಿಗೆ, “ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೆಯದಲ್ಲ,” ಎಂದನು.
8. ಹೂಷೈ, “ನಿನ್ನ ತಂದೆಯೂ, ಅವನ ಮನುಷ್ಯರೂ ಪರಾಕ್ರಮಶಾಲಿಗಳು. ಅವರು ಅಡವಿಯಲ್ಲಿ ಮರಿಗಳನ್ನು ಕಳೆದುಕೊಂಡ ಕರಡಿಯ ಹಾಗೆಯೇ ಕೋಪವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು. ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವುದಿಲ್ಲ.
9. ಅವನು ಈಗ ಒಂದು ಗವಿಯಲ್ಲಾದರೂ, ಒಂದು ಸ್ಥಳದಲ್ಲಾದರೂ ಅಡಗಿಕೊಂಡಿದ್ದಾನೆ. ಮೊದಲೇ ಇವರಲ್ಲಿ ಕೆಲವರು ಸತ್ತರೆ, ಅದನ್ನು ಕೇಳುವವರು ಅಬ್ಷಾಲೋಮನನ್ನು ಹಿಂಬಾಲಿಸುವ ಜನರಲ್ಲಿ ಸಂಹಾರವಾಯಿತೆಂದು ಹೇಳುವರು.
10. ಆಗ ಸಿಂಹ ಹೃದಯರಾದ ಪರಾಕ್ರಮಶಾಲಿಯ ಹೃದಯವು ಸಹ ಸಂಪೂರ್ಣ ಕರಗುವುದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ, ಅವನ ಸಂಗಡ ಇರುವವರು ಪರಾಕ್ರಮಶಾಲಿಗಳೆಂದೂ ಇಸ್ರಾಯೇಲರೆಲ್ಲರು ಬಲ್ಲರು. [PE]
11. [PS]“ನಾನು ಹೇಳುವ ಆಲೋಚನೆ ಏನೆಂದರೆ, ದಾನಿನಿಂದ ಬೇರ್ಷೆಬದವರೆಗೂ ವಾಸವಾಗಿರುವ ಇಸ್ರಾಯೇಲರೊಳಗಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ನಿನ್ನ ಬಳಿಯಲ್ಲಿ ಕೂಡಿಸಿ, ನೀನೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕು.
12. ಆಗ ನಾವು ಅವನನ್ನು ಕಂಡುಕೊಳ್ಳುವ ಸ್ಥಳದಲ್ಲಿ ಅವನ ಮೇಲೆ ಬಂದು, ಭೂಮಿಯ ಮೇಲೆ ಮಂಜು ಬೀಳುವ ಹಾಗೆ ಅವನ ಮೇಲೆ ಬೀಳುವೆವು. ಅವನೂ, ಅವನ ಸಂಗಡ ಇರುವ ಸಮಸ್ತ ಜನರಲ್ಲಿ ಒಬ್ಬನಾದರೂ ಉಳಿಯುವುದಿಲ್ಲ.
13. ಅವನು ಒಂದು ಪಟ್ಟಣದಲ್ಲಿ ಹೊಕ್ಕಿರುವುದಾದರೆ, ಇಸ್ರಾಯೇಲರೆಲ್ಲರೂ ಆ ಪಟ್ಟಣಕ್ಕೆ ಹಗ್ಗಗಳನ್ನು ತಂದುಹಾಕಿದ ತರುವಾಯ, ನಾವು ಒಂದು ಹರಳಾದರೂ ಅಲ್ಲಿ ಉಳಿಯದಂತೆ ಆ ಊರನ್ನು ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿಬಿಡೋಣ,” ಎಂದನು. [PE]
14.
15. [PS]ಆಗ ಅಬ್ಷಾಲೋಮನೂ, ಇಸ್ರಾಯೇಲಿನ ಸಮಸ್ತ ಮನುಷ್ಯರೂ, “ಅಹೀತೋಫೆಲನ ಆಲೋಚನೆಗಿಂತ ಅರ್ಕಿಯನಾದ ಹೂಷೈಯ ಆಲೋಚನೆ ಒಳ್ಳೆಯದು,” ಎಂದರು. ಏಕೆಂದರೆ ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೆಯ ಆಲೋಚನೆಯನ್ನು ವ್ಯರ್ಥಮಾಡುವುದಕ್ಕೆ ಯೆಹೋವ ದೇವರು ಹಾಗೆ ನೇಮಿಸಿದ್ದರು. [PE][PS]ಹೂಷೈಯು ಯಾಜಕರಾದ ಚಾದೋಕನಿಗೂ, ಅಬಿಯಾತರನಿಗೂ, “ಅಹೀತೋಫೆಲನು ಅಬ್ಷಾಲೋಮನಿಗೂ, ಇಸ್ರಾಯೇಲಿನ ಹಿರಿಯರಿಗೂ ಇಂಥಿಂಥ ಆಲೋಚನೆ ಹೇಳಿದನು.
16. ಆದ್ದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ, ‘ನೀವು ಈ ರಾತ್ರಿ ಅಡವಿಯಲ್ಲಿ ನದಿ ದಾಟುವ ಸ್ಥಳದ ಹತ್ತಿರ ಇಳಿದುಕೊಳ್ಳಬೇಡಿ; ಶೀಘ್ರವಾಗಿ ನದಿದಾಟಿ ಮುಂದೆ ಹೋಗಬೇಡಿ; ಇಲ್ಲವಾದರೆ ನೀವೂ, ನಿಮ್ಮ ಜನರೂ ನಾಶವಾಗುವಿರಿ,’ ಎಂದು ಹೇಳಿ ಕಳುಹಿಸಿರಿ,” ಎಂದನು. [PE]
17. [PS]ಯೋನಾತಾನನೂ, ಅಹೀಮಾಚನೂ ಏನ್ ರೋಗೆಲ್ ಎಂಬಲ್ಲಿ ಇದ್ದರು. ಒಬ್ಬ ಸೇವಕಿ ಹೋಗಿ ಅವರಿಗೆ ತಿಳಿಸಬೇಕಾಗಿತ್ತು. ಅನಂತರ ಅವರು ಹೋಗಿ ಅರಸನಾದ ದಾವೀದನಿಗೆ ಹೇಳಬೇಕಾಗಿತ್ತು. ಏಕೆಂದರೆ ಪಟ್ಟಣದಲ್ಲಿ ಪ್ರವೇಶಿಸುವುದನ್ನು ಬೇರೆಯವರು ನೋಡುವ ಗಂಡಾಂತರಕ್ಕೆ ಒಳಗಾಗಲು ಅಪೇಕ್ಷಿಸಿರಲಿಲ್ಲ.
18. ಆದರೆ ಒಬ್ಬ ಹುಡುಗನು ಅವರನ್ನು ಕಂಡು ಅಬ್ಷಾಲೋಮನಿಗೆ ತಿಳಿಸಿದನು. ಆದ್ದರಿಂದ ಅವರಿಬ್ಬರು ಶೀಘ್ರವಾಗಿ ಹೋಗಿ, ಬಹುರೀಮಿನಲ್ಲಿರುವ ಒಬ್ಬ ಮನುಷ್ಯನ ಮನೆಯಲ್ಲಿ ಪ್ರವೇಶಿಸಿ, ಅವನ ಅಂಗಳದಲ್ಲಿರುವ ಬಾವಿಯಲ್ಲಿ ಇಳಿದರು.
19. ಆಗ ಆ ಮನೆಯವಳು ಬಾವಿಯ ಮೇಲೆ ಒಂದು ವಸ್ತ್ರವನ್ನು ಹಾಸಿ ನುಚ್ಚನ್ನು ಹರವಿದಳು. ಈ ಕಾರ್ಯ ಯಾರಿಗೂ ತಿಳಿಯದೆ ಹೋಯಿತು. [PE]
20.
21. [PS]ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು, “ಅಹೀಮಾಚನೂ, ಯೋನಾತಾನನೂ ಎಲ್ಲಿ,” ಎಂದು ಕೇಳಿದರು. [PE][PS]ಅವಳು ಅವರಿಗೆ, “ಹಳ್ಳವನ್ನು ದಾಟಿಹೋದರು,” ಎಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂದಿರುಗಿದರು. [PE][PS]ಇವರು ಹೋದ ತರುವಾಯ, ಅವರು ಬಾವಿಯೊಳಗಿಂದ ಏರಿಹೋಗಿ, ಅರಸನಾದ ದಾವೀದನಿಗೆ, “ನೀನು ಶೀಘ್ರವಾಗಿ ಎದ್ದು ನದಿಯನ್ನು ದಾಟಿ ಹೋಗು; ಏಕೆಂದರೆ ಈ ಪ್ರಕಾರ ಅಹೀತೋಫೆಲನು ನಿನಗೆ ವಿರೋಧವಾಗಿ ಆಲೋಚನೆ ಹೇಳಿದ್ದಾನೆ,” ಎಂದರು.
22. ಆಗ ದಾವೀದನೂ, ಅವನ ಸಂಗಡ ಇದ್ದ ಸಮಸ್ತ ಜನರೂ ಎದ್ದು ಯೊರ್ದನನ್ನು ದಾಟಿದರು. ಉದಯವಾದಾಗ ದಾಟಬೇಕಾದವರು ಒಬ್ಬರಾದರೂ ಉಳಿದಿರಲಿಲ್ಲ. [PE]
23.
24. [PS]ಆದರೆ ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ, ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ, ತನ್ನ ಪಟ್ಟಣದಲ್ಲಿರುವ ತನ್ನ ಮನೆಗೆ ಹೋದನು. ಅವನು ಮನೆಯನ್ನು ಕ್ರಮಪಡಿಸಿ, ಉರುಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. [PE]{#1ಅಬ್ಷಾಲೋಮನ ಮರಣ } [PS]ದಾವೀದನು ಮಹನಯಿಮಿಗೆ ಬಂದನು. ಇದಲ್ಲದೆ ಅಬ್ಷಾಲೋಮನೂ, ಅವನ ಸಂಗಡ ಇಸ್ರಾಯೇಲ್ ಮನುಷ್ಯರೂ ಯೊರ್ದನನ್ನು ದಾಟಿದರು.
25. ಅಬ್ಷಾಲೋಮನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೈನ್ಯದ ಅಧಿಪತಿಯಾಗಿ ಇಟ್ಟಿದ್ದನು. ಈ ಅಮಾಸನು ಇಸ್ರಾಯೇಲನಾದ ಇತ್ರನ ಮಗನು. ಈ ಇತ್ರನು ನಾಹಾಷನ ಮಗಳೂ, ಯೋವಾಬನ ತಾಯಿಯೂ, ಚೆರೂಯಳ ಸಹೋದರಿಯೂ ಆದ ಅಬೀಗೈಲಳನ್ನು ಮದುವೆಯಾಗಿದ್ದನು.
26. ಇಸ್ರಾಯೇಲರೂ, ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ದಂಡಿಳಿದರು. [PE]
27. [PS]ದಾವೀದನು ಮಹನಯಿಮಿಗೆ ಬಂದಾಗ, ಅಮ್ಮೋನಿಯರ ರಬ್ಬಾ ಪಟ್ಟಣದ ನಾಹಾಷನ ಮಗ ಶೋಬಿಯೂ, ಲೋದೆಬಾರು ಊರಿನವನಾಗಿರುವ ಅಮ್ಮಿಯೇಲನ ಮಗ ಮಾಕೀರನೂ, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈಯೂ
28. ಹಾಸಿಗೆಗಳನ್ನು, ಬಟ್ಟಲುಗಳನ್ನು, ಮಡಕೆ, ಗೋಧಿ, ಜವೆಗೋಧಿ, ಹಿಟ್ಟು, ಹುರಿದ ಕಾಳು ಅವರೆ, ಅಲಸಂದಿ,
29. ಹುರಿದ ಕಡಲೆ, ಜೇನುತುಪ್ಪ, ಬೆಣ್ಣೆ, ಕುರಿ, ಹಸುವಿನ ಗಿಣ್ಣು ಇವುಗಳನ್ನು ದಾವೀದನಿಗೂ, ಅವನ ಸಂಗಡ ಇದ್ದ ಜನರಿಗೂ ತಿನ್ನುವುದಕ್ಕೆ ತಂದರು. ಏಕೆಂದರೆ, “ಮರುಭೂಮಿಯಲ್ಲಿ ಜನರು ಹಸಿದು ದಣಿದು ದಾಹಗೊಂಡಿರುವರು,” ಎಂದುಕೊಂಡರು. [PE]
ಒಟ್ಟು 24 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 17 / 24
1 ಅಹೀತೋಫೆಲನು ಅಬ್ಷಾಲೋಮನಿಗೆ, “ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆಯ್ದುಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು. 2 ಅವನು ದಣಿದು ಅವನ ಕೈ ದುರ್ಬಲವಾಗಿರುವಾಗ, ಹೋಗಿ ಅವನ ಮೇಲೆ ಬಿದ್ದು ಅವನನ್ನು ಹೆದರಿಸುವೆನು. ಆಗ ಅವನ ಸಂಗಡ ಇರುವ ಜನರೆಲ್ಲರು ಓಡಿಹೋಗುವರು. 3 ಆಗ ನಾನು ಅರಸನನ್ನು ಮಾತ್ರ ಹೊಡೆದು, ಜನರೆಲ್ಲರನ್ನು ತಿರುಗಿ ನಿನ್ನ ಬಳಿಗೆ ತೆಗೆದುಕೊಂಡು ಬರುವೆನು. ನೀನು ಹುಡುಕುವವನು ಸಿಕ್ಕಿದರೆ, ಜನರೆಲ್ಲರು ಹಿಂದಿರುಗಿದ ಹಾಗೆ ಆಗುವುದು. ಜನರೆಲ್ಲರು ಸಮಾಧಾನವಾಗಿರುವರು,” ಎಂದನು. 4 ಈ ಮಾತು ಅಬ್ಷಾಲೋಮನ ದೃಷ್ಟಿಗೂ, ಇಸ್ರಾಯೇಲಿನ ಸಮಸ್ತ ಹಿರಿಯರ ದೃಷ್ಟಿಗೂ ಒಳ್ಳೆಯದಾಗಿ ತೋರಿತು. 5 ಆದರೆ ಅಬ್ಷಾಲೋಮನು, “ಅರ್ಕಿಯನಾದ ಹೂಷೈಯನ್ನು ನಾವು ಕೇಳುವ ಹಾಗೆ ಅವನನ್ನು ಕರೆಯಿರಿ,” ಎಂದನು. 6 ಹೂಷೈ ಅಬ್ಷಾಲೋಮನ ಬಳಿಗೆ ಬಂದಾಗ, ಅಬ್ಷಾಲೋಮನು ಅವನಿಗೆ, “ಅಹೀತೋಫೆಲನು ಈ ಪ್ರಕಾರ ಹೇಳಿದ್ದಾನೆ. ಅವನ ಮಾತಿನ ಪ್ರಕಾರ ಮಾಡೋಣವೋ? ಬೇಡವಾದರೆ ನೀನು ಮಾತನಾಡು,” ಎಂದನು. 7 ಆಗ ಹೂಷೈ ಅಬ್ಷಾಲೋಮನಿಗೆ, “ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೆಯದಲ್ಲ,” ಎಂದನು. 8 ಹೂಷೈ, “ನಿನ್ನ ತಂದೆಯೂ, ಅವನ ಮನುಷ್ಯರೂ ಪರಾಕ್ರಮಶಾಲಿಗಳು. ಅವರು ಅಡವಿಯಲ್ಲಿ ಮರಿಗಳನ್ನು ಕಳೆದುಕೊಂಡ ಕರಡಿಯ ಹಾಗೆಯೇ ಕೋಪವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು. ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವುದಿಲ್ಲ. 9 ಅವನು ಈಗ ಒಂದು ಗವಿಯಲ್ಲಾದರೂ, ಒಂದು ಸ್ಥಳದಲ್ಲಾದರೂ ಅಡಗಿಕೊಂಡಿದ್ದಾನೆ. ಮೊದಲೇ ಇವರಲ್ಲಿ ಕೆಲವರು ಸತ್ತರೆ, ಅದನ್ನು ಕೇಳುವವರು ಅಬ್ಷಾಲೋಮನನ್ನು ಹಿಂಬಾಲಿಸುವ ಜನರಲ್ಲಿ ಸಂಹಾರವಾಯಿತೆಂದು ಹೇಳುವರು. 10 ಆಗ ಸಿಂಹ ಹೃದಯರಾದ ಪರಾಕ್ರಮಶಾಲಿಯ ಹೃದಯವು ಸಹ ಸಂಪೂರ್ಣ ಕರಗುವುದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ, ಅವನ ಸಂಗಡ ಇರುವವರು ಪರಾಕ್ರಮಶಾಲಿಗಳೆಂದೂ ಇಸ್ರಾಯೇಲರೆಲ್ಲರು ಬಲ್ಲರು. 11 “ನಾನು ಹೇಳುವ ಆಲೋಚನೆ ಏನೆಂದರೆ, ದಾನಿನಿಂದ ಬೇರ್ಷೆಬದವರೆಗೂ ವಾಸವಾಗಿರುವ ಇಸ್ರಾಯೇಲರೊಳಗಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ನಿನ್ನ ಬಳಿಯಲ್ಲಿ ಕೂಡಿಸಿ, ನೀನೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕು. 12 ಆಗ ನಾವು ಅವನನ್ನು ಕಂಡುಕೊಳ್ಳುವ ಸ್ಥಳದಲ್ಲಿ ಅವನ ಮೇಲೆ ಬಂದು, ಭೂಮಿಯ ಮೇಲೆ ಮಂಜು ಬೀಳುವ ಹಾಗೆ ಅವನ ಮೇಲೆ ಬೀಳುವೆವು. ಅವನೂ, ಅವನ ಸಂಗಡ ಇರುವ ಸಮಸ್ತ ಜನರಲ್ಲಿ ಒಬ್ಬನಾದರೂ ಉಳಿಯುವುದಿಲ್ಲ. 13 ಅವನು ಒಂದು ಪಟ್ಟಣದಲ್ಲಿ ಹೊಕ್ಕಿರುವುದಾದರೆ, ಇಸ್ರಾಯೇಲರೆಲ್ಲರೂ ಆ ಪಟ್ಟಣಕ್ಕೆ ಹಗ್ಗಗಳನ್ನು ತಂದುಹಾಕಿದ ತರುವಾಯ, ನಾವು ಒಂದು ಹರಳಾದರೂ ಅಲ್ಲಿ ಉಳಿಯದಂತೆ ಆ ಊರನ್ನು ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿಬಿಡೋಣ,” ಎಂದನು. 14 15 ಆಗ ಅಬ್ಷಾಲೋಮನೂ, ಇಸ್ರಾಯೇಲಿನ ಸಮಸ್ತ ಮನುಷ್ಯರೂ, “ಅಹೀತೋಫೆಲನ ಆಲೋಚನೆಗಿಂತ ಅರ್ಕಿಯನಾದ ಹೂಷೈಯ ಆಲೋಚನೆ ಒಳ್ಳೆಯದು,” ಎಂದರು. ಏಕೆಂದರೆ ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೆಯ ಆಲೋಚನೆಯನ್ನು ವ್ಯರ್ಥಮಾಡುವುದಕ್ಕೆ ಯೆಹೋವ ದೇವರು ಹಾಗೆ ನೇಮಿಸಿದ್ದರು. ಹೂಷೈಯು ಯಾಜಕರಾದ ಚಾದೋಕನಿಗೂ, ಅಬಿಯಾತರನಿಗೂ, “ಅಹೀತೋಫೆಲನು ಅಬ್ಷಾಲೋಮನಿಗೂ, ಇಸ್ರಾಯೇಲಿನ ಹಿರಿಯರಿಗೂ ಇಂಥಿಂಥ ಆಲೋಚನೆ ಹೇಳಿದನು. 16 ಆದ್ದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ, ‘ನೀವು ಈ ರಾತ್ರಿ ಅಡವಿಯಲ್ಲಿ ನದಿ ದಾಟುವ ಸ್ಥಳದ ಹತ್ತಿರ ಇಳಿದುಕೊಳ್ಳಬೇಡಿ; ಶೀಘ್ರವಾಗಿ ನದಿದಾಟಿ ಮುಂದೆ ಹೋಗಬೇಡಿ; ಇಲ್ಲವಾದರೆ ನೀವೂ, ನಿಮ್ಮ ಜನರೂ ನಾಶವಾಗುವಿರಿ,’ ಎಂದು ಹೇಳಿ ಕಳುಹಿಸಿರಿ,” ಎಂದನು. 17 ಯೋನಾತಾನನೂ, ಅಹೀಮಾಚನೂ ಏನ್ ರೋಗೆಲ್ ಎಂಬಲ್ಲಿ ಇದ್ದರು. ಒಬ್ಬ ಸೇವಕಿ ಹೋಗಿ ಅವರಿಗೆ ತಿಳಿಸಬೇಕಾಗಿತ್ತು. ಅನಂತರ ಅವರು ಹೋಗಿ ಅರಸನಾದ ದಾವೀದನಿಗೆ ಹೇಳಬೇಕಾಗಿತ್ತು. ಏಕೆಂದರೆ ಪಟ್ಟಣದಲ್ಲಿ ಪ್ರವೇಶಿಸುವುದನ್ನು ಬೇರೆಯವರು ನೋಡುವ ಗಂಡಾಂತರಕ್ಕೆ ಒಳಗಾಗಲು ಅಪೇಕ್ಷಿಸಿರಲಿಲ್ಲ. 18 ಆದರೆ ಒಬ್ಬ ಹುಡುಗನು ಅವರನ್ನು ಕಂಡು ಅಬ್ಷಾಲೋಮನಿಗೆ ತಿಳಿಸಿದನು. ಆದ್ದರಿಂದ ಅವರಿಬ್ಬರು ಶೀಘ್ರವಾಗಿ ಹೋಗಿ, ಬಹುರೀಮಿನಲ್ಲಿರುವ ಒಬ್ಬ ಮನುಷ್ಯನ ಮನೆಯಲ್ಲಿ ಪ್ರವೇಶಿಸಿ, ಅವನ ಅಂಗಳದಲ್ಲಿರುವ ಬಾವಿಯಲ್ಲಿ ಇಳಿದರು. 19 ಆಗ ಆ ಮನೆಯವಳು ಬಾವಿಯ ಮೇಲೆ ಒಂದು ವಸ್ತ್ರವನ್ನು ಹಾಸಿ ನುಚ್ಚನ್ನು ಹರವಿದಳು. ಈ ಕಾರ್ಯ ಯಾರಿಗೂ ತಿಳಿಯದೆ ಹೋಯಿತು. 20 21 ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು, “ಅಹೀಮಾಚನೂ, ಯೋನಾತಾನನೂ ಎಲ್ಲಿ,” ಎಂದು ಕೇಳಿದರು. ಅವಳು ಅವರಿಗೆ, “ಹಳ್ಳವನ್ನು ದಾಟಿಹೋದರು,” ಎಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂದಿರುಗಿದರು. ಇವರು ಹೋದ ತರುವಾಯ, ಅವರು ಬಾವಿಯೊಳಗಿಂದ ಏರಿಹೋಗಿ, ಅರಸನಾದ ದಾವೀದನಿಗೆ, “ನೀನು ಶೀಘ್ರವಾಗಿ ಎದ್ದು ನದಿಯನ್ನು ದಾಟಿ ಹೋಗು; ಏಕೆಂದರೆ ಈ ಪ್ರಕಾರ ಅಹೀತೋಫೆಲನು ನಿನಗೆ ವಿರೋಧವಾಗಿ ಆಲೋಚನೆ ಹೇಳಿದ್ದಾನೆ,” ಎಂದರು. 22 ಆಗ ದಾವೀದನೂ, ಅವನ ಸಂಗಡ ಇದ್ದ ಸಮಸ್ತ ಜನರೂ ಎದ್ದು ಯೊರ್ದನನ್ನು ದಾಟಿದರು. ಉದಯವಾದಾಗ ದಾಟಬೇಕಾದವರು ಒಬ್ಬರಾದರೂ ಉಳಿದಿರಲಿಲ್ಲ. 23 24 ಆದರೆ ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ, ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ, ತನ್ನ ಪಟ್ಟಣದಲ್ಲಿರುವ ತನ್ನ ಮನೆಗೆ ಹೋದನು. ಅವನು ಮನೆಯನ್ನು ಕ್ರಮಪಡಿಸಿ, ಉರುಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅಬ್ಷಾಲೋಮನ ಮರಣ ದಾವೀದನು ಮಹನಯಿಮಿಗೆ ಬಂದನು. ಇದಲ್ಲದೆ ಅಬ್ಷಾಲೋಮನೂ, ಅವನ ಸಂಗಡ ಇಸ್ರಾಯೇಲ್ ಮನುಷ್ಯರೂ ಯೊರ್ದನನ್ನು ದಾಟಿದರು. 25 ಅಬ್ಷಾಲೋಮನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೈನ್ಯದ ಅಧಿಪತಿಯಾಗಿ ಇಟ್ಟಿದ್ದನು. ಈ ಅಮಾಸನು ಇಸ್ರಾಯೇಲನಾದ ಇತ್ರನ ಮಗನು. ಈ ಇತ್ರನು ನಾಹಾಷನ ಮಗಳೂ, ಯೋವಾಬನ ತಾಯಿಯೂ, ಚೆರೂಯಳ ಸಹೋದರಿಯೂ ಆದ ಅಬೀಗೈಲಳನ್ನು ಮದುವೆಯಾಗಿದ್ದನು. 26 ಇಸ್ರಾಯೇಲರೂ, ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ದಂಡಿಳಿದರು. 27 ದಾವೀದನು ಮಹನಯಿಮಿಗೆ ಬಂದಾಗ, ಅಮ್ಮೋನಿಯರ ರಬ್ಬಾ ಪಟ್ಟಣದ ನಾಹಾಷನ ಮಗ ಶೋಬಿಯೂ, ಲೋದೆಬಾರು ಊರಿನವನಾಗಿರುವ ಅಮ್ಮಿಯೇಲನ ಮಗ ಮಾಕೀರನೂ, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈಯೂ 28 ಹಾಸಿಗೆಗಳನ್ನು, ಬಟ್ಟಲುಗಳನ್ನು, ಮಡಕೆ, ಗೋಧಿ, ಜವೆಗೋಧಿ, ಹಿಟ್ಟು, ಹುರಿದ ಕಾಳು ಅವರೆ, ಅಲಸಂದಿ, 29 ಹುರಿದ ಕಡಲೆ, ಜೇನುತುಪ್ಪ, ಬೆಣ್ಣೆ, ಕುರಿ, ಹಸುವಿನ ಗಿಣ್ಣು ಇವುಗಳನ್ನು ದಾವೀದನಿಗೂ, ಅವನ ಸಂಗಡ ಇದ್ದ ಜನರಿಗೂ ತಿನ್ನುವುದಕ್ಕೆ ತಂದರು. ಏಕೆಂದರೆ, “ಮರುಭೂಮಿಯಲ್ಲಿ ಜನರು ಹಸಿದು ದಣಿದು ದಾಹಗೊಂಡಿರುವರು,” ಎಂದುಕೊಂಡರು.
ಒಟ್ಟು 24 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 17 / 24
×

Alert

×

Kannada Letters Keypad References