ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
2 ಕೊರಿಂಥದವರಿಗೆ
1. {#1ಪೌಲನ ಸೇವೆಯ ಸಮರ್ಥನೆ } [PS]ನಾನು ನಿಮ್ಮ ಬಳಿಯಲ್ಲಿ ಮುಖಾಮುಖಿಯಾಗಿ ಮಾತನಾಡುವಾಗ, “ಮೃದುವಾಗಿಯೂ” ನಿಮ್ಮಿಂದ ದೂರವಿರುವಾಗ “ಕಠಿಣನಾಗಿಯೂ ವರ್ತಿಸುವವನು” ಎಂತಲೂ ನೀವು ತಿಳಿದಿದ್ದೀರಿ. ಅಂಥ ಪೌಲನೆಂಬ, ನಾನು ಕ್ರಿಸ್ತ ಯೇಸುವಿನ ದೀನತ್ವದಿಂದಲೂ ಸಾತ್ವಿಕತೆಯಿಂದಲೂ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ:
2. ನಾನು ನಿಮ್ಮ ಬಳಿಗೆ ಬಂದಾಗ, ಕಠಿಣವಾಗಿ ವರ್ತಿಸಲು ನನಗೆ ಅವಕಾಶಕೊಡಬೇಡಿರಿ. ಏಕೆಂದರೆ ನಾವು ಪ್ರಾಪಂಚಿಕ ರೀತಿಗನುಸಾರವಾಗಿ ನಡೆಯುತ್ತಿದ್ದೇವೆಂದು ಆಕ್ಷೇಪಿಸುವ ಕೆಲವರ ವಿರುದ್ಧ ಖಂಡಿತವಾಗಿಯು ಕಠಿಣನಾಗಿಯೇ ವರ್ತಿಸಬೇಕೆಂದಿದ್ದೇನೆ.
3. ನಾವು ಈ ಲೋಕದಲ್ಲಿ ಜೀವಿಸುವವರಾದರೂ, ನಾವು ಲೋಕದವರಂತೆ ಹೋರಾಟ ಮಾಡುವವರಲ್ಲ.
4. ನಾವು ಹೋರಾಡುವಾಗ ಉಪಯೋಗಿಸುವ ಆಯುಧಗಳು ಲೋಕದವುಗಳಲ್ಲ. ಅವುಗಳಿಗೆ ಕೋಟೆಗಳನ್ನೇ ಕೆಡವಿ ಹಾಕುವ ದೈವಿಕ ಶಕ್ತಿ ಇದೆ.
5. ನಾವು ದೈವಜ್ಞಾನವನ್ನು ವಿರೋಧಿಸುವ ವಾಗ್ವಾದಗಳನ್ನೂ ಪ್ರತಿಯೊಂದು ನಟನೆಯನ್ನೂ ಧ್ವಂಸಮಾಡುತ್ತೇವೆ. ಪ್ರತಿಯೊಂದು ಯೋಚನೆಗಳನ್ನು ಕ್ರಿಸ್ತ ಯೇಸುವಿಗೆ ವಿಧೇಯವಾಗುವಂತೆ ಸೆರೆಹಿಡಿಯುವವರು ಆಗಿದ್ದೇವೆ.
6. ನಿಮ್ಮ ವಿಧೇಯತ್ವವು ಪರಿಪೂರ್ಣವಾದಾಗ, ನಾವು ಪ್ರತಿಯೊಂದು ಅವಿಧೇಯತ್ವವನ್ನೂ ಶಿಕ್ಷಿಸಲು ಸಿದ್ಧರಾಗಿದ್ದೇವೆ. [PE]
7. [PS]ನೀವು ಹೊರಗಿನ ತೋರಿಕೆಗಳನ್ನು ಮಾತ್ರ ತೀರ್ಪುಮಾಡುವವರಾಗಿದ್ದೀರಿ. ಯಾರಾದರೂ ತಾನು ಯೇಸುವಿಗೆ ಸೇರಿದವನು ಎಂದು ದೃಢವಾಗಿ ನಂಬುವುದಾದರೆ, ತಾನು ಹೇಗೆ ಕ್ರಿಸ್ತ ಯೇಸುವಿನವನೋ, ಹಾಗೆಯೇ ನಾವೂ ಕ್ರಿಸ್ತ ಯೇಸುವಿನವರು ಎಂದು ಅವನು ತಿಳಿದುಕೊಳ್ಳಲಿ.
8. ನಿಮ್ಮನ್ನು ಕೆಡವಿ ಹಾಕುವುದಕ್ಕಲ್ಲ. ನಿಮ್ಮ ಭಕ್ತಿವೃದ್ಧಿಮಾಡಲಿಕ್ಕೆ ಕರ್ತ ಯೇಸು ನಮಗೆ ಅಧಿಕಾರವನ್ನು ಕೊಟ್ಟಿದ್ದಾರೆ. ಈ ಅಧಿಕಾರದ ಬಗ್ಗೆ ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾನು ನಾಚಿಕೆಪಡುವುದಿಲ್ಲ.
9. ನನ್ನ ಪತ್ರಗಳಿಂದ ನಾನು ನಿಮಗೆ ಭಯ ಹುಟ್ಟಿಸಲು ಪ್ರಯತ್ನಿಸುವುದಕ್ಕೆ ನನಗೆ ಮನಸ್ಸಿಲ್ಲ.
10. “ಅವನ ಪತ್ರಗಳು ತೀಕ್ಷ್ಣವಾಗಿಯೂ ಶಕ್ತಿಯುತವಾಗಿಯೂ ಇವೆ. ಆದರೆ ಅವನು ಎದುರು ಬಂದಾಗ ನಿರ್ಬಲನೂ ಕೆಲಸಕ್ಕೆ ಬಾರದ ಮಾತುಗಳನ್ನಾಡುವವನೂ ಆಗಿದ್ದಾನೆ,” ಎಂದು ಕೆಲವರು ಹೇಳುತ್ತಾರೆ.
11. ಆದರೆ, ನಾವು ದೂರದಲ್ಲಿರುವಾಗ ಪತ್ರಗಳ ಮಾತಿನಲ್ಲಿ ಎಂಥವರಾಗಿದ್ದೇವೋ, ಹತ್ತಿರದಲ್ಲಿರುವಾಗಲೂ ಕೃತ್ಯದಲ್ಲಿ ಅಂಥವರಾಗಿಯೇ ಇರುತ್ತೇವೆ ಎಂದು ಅಂಥವರು ಅರ್ಥಮಾಡಿಕೊಳ್ಳಲಿ. [PE]
12. [PS]ತಮ್ಮನ್ನು ತಾವೇ ಹೊಗಳಿಕೊಳ್ಳುವವರೊಂದಿಗೆ ನಾವು ಹೋಲಿಸಿಕೊಳ್ಳಲು ಯತ್ನಿಸುವುದಿಲ್ಲ. ಏಕೆಂದರೆ, ಅವರು ತಮ್ಮತಮ್ಮೊಳಗೆ ತಮ್ಮನ್ನು ಅಳತೆ ಮಾಡಿಕೊಂಡು ಒಬ್ಬರೊಂದಿಗೊಬ್ಬರು ಹೋಲಿಸಿಕೊಳ್ಳುವುದರಿಂದ ವಿವೇಕವಿಲ್ಲದವರಾಗಿರುತ್ತಾರೆ.
13. ನಾವಾದರೋ ಮೇರೆ ತಪ್ಪಿ ಹೊಗಳಿಕೊಳ್ಳುವುದಿಲ್ಲ; ದೇವರು ತಾವೇ ನಮಗೆ ನೇಮಿಸಿದ ಸೇವಾಕ್ಷೇತ್ರದ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. ಆ ಮೇರೆಯೊಳಗೆ ನೀವೂ ಒಳಪಟ್ಟಿದ್ದೀರಿ.
14. ನಾವು ಮೊದಲು ನಿಮ್ಮ ಬಳಿಗೆ ಬಾರದಿದ್ದರೆ, ನಮ್ಮ ಹೊಗಳಿಕೊಳ್ಳುವಿಕೆಯು ಮೇರೆಯನ್ನು ಉಲ್ಲಂಘಿಸುವುದಾಗಿರುತ್ತಿತ್ತು; ಆದರೆ ನಾವು ನಿಮಗೆ ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದಕ್ಕಾಗಿ ನಿಮ್ಮ ಬಳಿಗೆ ಬಂದೇವಲ್ಲಾ.
15. ಬೇರೆಯವರು ಮಾಡಿದ ಪ್ರಯಾಸದ ಫಲಕ್ಕಾಗಿ, ನಾವು ಮೇರೆ ತಪ್ಪಿ ಹೊಗಳಿಕೊಳ್ಳುವವರಲ್ಲ. ಆದರೆ ನಿಮ್ಮ ವಿಶ್ವಾಸವು ವೃದ್ಧಿಯಾದಂತೆ, ನಿಮ್ಮ ಮಧ್ಯೆ ನಮ್ಮ ಸೇವಾಕ್ಷೇತ್ರವು ಅಧಿಕವಾಗಿ ವಿಸ್ತಾರವಾಗಬೇಕೆಂದು ನಿರೀಕ್ಷಿಸುತ್ತೇವೆ.
16. ಏಕೆಂದರೆ, ನಿಮ್ಮ ಪ್ರದೇಶಗಳಿಗೆ ಆಚೆ ಇರುವ ಸ್ಥಳಗಳಲ್ಲಿಯೂ ನಾವು ಸುವಾರ್ತೆಯನ್ನು ಸಾರಬೇಕು. ಇತರರು ಮಾಡಿದ ಸೇವಾಕ್ಷೇತ್ರದಲ್ಲಿ ನಾವು ಸೇವೆಮಾಡಿ, ಹೆಚ್ಚಳ ಪಡುವುದಕ್ಕೆ ನಮಗಿಷ್ಟವಿಲ್ಲ.
17. ಆದರೆ, “ಹೆಚ್ಚಳ ಪಡುವವನು ಕರ್ತ ದೇವರಲ್ಲಿಯೇ ಹೆಚ್ಚಳ ಪಡಲಿ.”[* ಯೆರೆ 9:24 ]
18. ತನ್ನನ್ನು ತಾನೇ ಹೊಗಳಿಕೊಳ್ಳುವವನಲ್ಲ, ಕರ್ತ ಯೇಸು ಯಾರನ್ನು ಹೊಗಳುತ್ತಾರೋ ಅವನೇ ಯೋಗ್ಯನು. [PE]
ಒಟ್ಟು 13 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 10 / 13
1 2 3 4 5 6 7 8 9 10 11 12 13
ಪೌಲನ ಸೇವೆಯ ಸಮರ್ಥನೆ 1 ನಾನು ನಿಮ್ಮ ಬಳಿಯಲ್ಲಿ ಮುಖಾಮುಖಿಯಾಗಿ ಮಾತನಾಡುವಾಗ, “ಮೃದುವಾಗಿಯೂ” ನಿಮ್ಮಿಂದ ದೂರವಿರುವಾಗ “ಕಠಿಣನಾಗಿಯೂ ವರ್ತಿಸುವವನು” ಎಂತಲೂ ನೀವು ತಿಳಿದಿದ್ದೀರಿ. ಅಂಥ ಪೌಲನೆಂಬ, ನಾನು ಕ್ರಿಸ್ತ ಯೇಸುವಿನ ದೀನತ್ವದಿಂದಲೂ ಸಾತ್ವಿಕತೆಯಿಂದಲೂ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ: 2 ನಾನು ನಿಮ್ಮ ಬಳಿಗೆ ಬಂದಾಗ, ಕಠಿಣವಾಗಿ ವರ್ತಿಸಲು ನನಗೆ ಅವಕಾಶಕೊಡಬೇಡಿರಿ. ಏಕೆಂದರೆ ನಾವು ಪ್ರಾಪಂಚಿಕ ರೀತಿಗನುಸಾರವಾಗಿ ನಡೆಯುತ್ತಿದ್ದೇವೆಂದು ಆಕ್ಷೇಪಿಸುವ ಕೆಲವರ ವಿರುದ್ಧ ಖಂಡಿತವಾಗಿಯು ಕಠಿಣನಾಗಿಯೇ ವರ್ತಿಸಬೇಕೆಂದಿದ್ದೇನೆ. 3 ನಾವು ಈ ಲೋಕದಲ್ಲಿ ಜೀವಿಸುವವರಾದರೂ, ನಾವು ಲೋಕದವರಂತೆ ಹೋರಾಟ ಮಾಡುವವರಲ್ಲ. 4 ನಾವು ಹೋರಾಡುವಾಗ ಉಪಯೋಗಿಸುವ ಆಯುಧಗಳು ಲೋಕದವುಗಳಲ್ಲ. ಅವುಗಳಿಗೆ ಕೋಟೆಗಳನ್ನೇ ಕೆಡವಿ ಹಾಕುವ ದೈವಿಕ ಶಕ್ತಿ ಇದೆ. 5 ನಾವು ದೈವಜ್ಞಾನವನ್ನು ವಿರೋಧಿಸುವ ವಾಗ್ವಾದಗಳನ್ನೂ ಪ್ರತಿಯೊಂದು ನಟನೆಯನ್ನೂ ಧ್ವಂಸಮಾಡುತ್ತೇವೆ. ಪ್ರತಿಯೊಂದು ಯೋಚನೆಗಳನ್ನು ಕ್ರಿಸ್ತ ಯೇಸುವಿಗೆ ವಿಧೇಯವಾಗುವಂತೆ ಸೆರೆಹಿಡಿಯುವವರು ಆಗಿದ್ದೇವೆ. 6 ನಿಮ್ಮ ವಿಧೇಯತ್ವವು ಪರಿಪೂರ್ಣವಾದಾಗ, ನಾವು ಪ್ರತಿಯೊಂದು ಅವಿಧೇಯತ್ವವನ್ನೂ ಶಿಕ್ಷಿಸಲು ಸಿದ್ಧರಾಗಿದ್ದೇವೆ. 7 ನೀವು ಹೊರಗಿನ ತೋರಿಕೆಗಳನ್ನು ಮಾತ್ರ ತೀರ್ಪುಮಾಡುವವರಾಗಿದ್ದೀರಿ. ಯಾರಾದರೂ ತಾನು ಯೇಸುವಿಗೆ ಸೇರಿದವನು ಎಂದು ದೃಢವಾಗಿ ನಂಬುವುದಾದರೆ, ತಾನು ಹೇಗೆ ಕ್ರಿಸ್ತ ಯೇಸುವಿನವನೋ, ಹಾಗೆಯೇ ನಾವೂ ಕ್ರಿಸ್ತ ಯೇಸುವಿನವರು ಎಂದು ಅವನು ತಿಳಿದುಕೊಳ್ಳಲಿ. 8 ನಿಮ್ಮನ್ನು ಕೆಡವಿ ಹಾಕುವುದಕ್ಕಲ್ಲ. ನಿಮ್ಮ ಭಕ್ತಿವೃದ್ಧಿಮಾಡಲಿಕ್ಕೆ ಕರ್ತ ಯೇಸು ನಮಗೆ ಅಧಿಕಾರವನ್ನು ಕೊಟ್ಟಿದ್ದಾರೆ. ಈ ಅಧಿಕಾರದ ಬಗ್ಗೆ ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾನು ನಾಚಿಕೆಪಡುವುದಿಲ್ಲ. 9 ನನ್ನ ಪತ್ರಗಳಿಂದ ನಾನು ನಿಮಗೆ ಭಯ ಹುಟ್ಟಿಸಲು ಪ್ರಯತ್ನಿಸುವುದಕ್ಕೆ ನನಗೆ ಮನಸ್ಸಿಲ್ಲ. 10 “ಅವನ ಪತ್ರಗಳು ತೀಕ್ಷ್ಣವಾಗಿಯೂ ಶಕ್ತಿಯುತವಾಗಿಯೂ ಇವೆ. ಆದರೆ ಅವನು ಎದುರು ಬಂದಾಗ ನಿರ್ಬಲನೂ ಕೆಲಸಕ್ಕೆ ಬಾರದ ಮಾತುಗಳನ್ನಾಡುವವನೂ ಆಗಿದ್ದಾನೆ,” ಎಂದು ಕೆಲವರು ಹೇಳುತ್ತಾರೆ. 11 ಆದರೆ, ನಾವು ದೂರದಲ್ಲಿರುವಾಗ ಪತ್ರಗಳ ಮಾತಿನಲ್ಲಿ ಎಂಥವರಾಗಿದ್ದೇವೋ, ಹತ್ತಿರದಲ್ಲಿರುವಾಗಲೂ ಕೃತ್ಯದಲ್ಲಿ ಅಂಥವರಾಗಿಯೇ ಇರುತ್ತೇವೆ ಎಂದು ಅಂಥವರು ಅರ್ಥಮಾಡಿಕೊಳ್ಳಲಿ. 12 ತಮ್ಮನ್ನು ತಾವೇ ಹೊಗಳಿಕೊಳ್ಳುವವರೊಂದಿಗೆ ನಾವು ಹೋಲಿಸಿಕೊಳ್ಳಲು ಯತ್ನಿಸುವುದಿಲ್ಲ. ಏಕೆಂದರೆ, ಅವರು ತಮ್ಮತಮ್ಮೊಳಗೆ ತಮ್ಮನ್ನು ಅಳತೆ ಮಾಡಿಕೊಂಡು ಒಬ್ಬರೊಂದಿಗೊಬ್ಬರು ಹೋಲಿಸಿಕೊಳ್ಳುವುದರಿಂದ ವಿವೇಕವಿಲ್ಲದವರಾಗಿರುತ್ತಾರೆ. 13 ನಾವಾದರೋ ಮೇರೆ ತಪ್ಪಿ ಹೊಗಳಿಕೊಳ್ಳುವುದಿಲ್ಲ; ದೇವರು ತಾವೇ ನಮಗೆ ನೇಮಿಸಿದ ಸೇವಾಕ್ಷೇತ್ರದ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. ಆ ಮೇರೆಯೊಳಗೆ ನೀವೂ ಒಳಪಟ್ಟಿದ್ದೀರಿ. 14 ನಾವು ಮೊದಲು ನಿಮ್ಮ ಬಳಿಗೆ ಬಾರದಿದ್ದರೆ, ನಮ್ಮ ಹೊಗಳಿಕೊಳ್ಳುವಿಕೆಯು ಮೇರೆಯನ್ನು ಉಲ್ಲಂಘಿಸುವುದಾಗಿರುತ್ತಿತ್ತು; ಆದರೆ ನಾವು ನಿಮಗೆ ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದಕ್ಕಾಗಿ ನಿಮ್ಮ ಬಳಿಗೆ ಬಂದೇವಲ್ಲಾ. 15 ಬೇರೆಯವರು ಮಾಡಿದ ಪ್ರಯಾಸದ ಫಲಕ್ಕಾಗಿ, ನಾವು ಮೇರೆ ತಪ್ಪಿ ಹೊಗಳಿಕೊಳ್ಳುವವರಲ್ಲ. ಆದರೆ ನಿಮ್ಮ ವಿಶ್ವಾಸವು ವೃದ್ಧಿಯಾದಂತೆ, ನಿಮ್ಮ ಮಧ್ಯೆ ನಮ್ಮ ಸೇವಾಕ್ಷೇತ್ರವು ಅಧಿಕವಾಗಿ ವಿಸ್ತಾರವಾಗಬೇಕೆಂದು ನಿರೀಕ್ಷಿಸುತ್ತೇವೆ. 16 ಏಕೆಂದರೆ, ನಿಮ್ಮ ಪ್ರದೇಶಗಳಿಗೆ ಆಚೆ ಇರುವ ಸ್ಥಳಗಳಲ್ಲಿಯೂ ನಾವು ಸುವಾರ್ತೆಯನ್ನು ಸಾರಬೇಕು. ಇತರರು ಮಾಡಿದ ಸೇವಾಕ್ಷೇತ್ರದಲ್ಲಿ ನಾವು ಸೇವೆಮಾಡಿ, ಹೆಚ್ಚಳ ಪಡುವುದಕ್ಕೆ ನಮಗಿಷ್ಟವಿಲ್ಲ. 17 ಆದರೆ, “ಹೆಚ್ಚಳ ಪಡುವವನು ಕರ್ತ ದೇವರಲ್ಲಿಯೇ ಹೆಚ್ಚಳ ಪಡಲಿ.”* ಯೆರೆ 9:24 18 ತನ್ನನ್ನು ತಾನೇ ಹೊಗಳಿಕೊಳ್ಳುವವನಲ್ಲ, ಕರ್ತ ಯೇಸು ಯಾರನ್ನು ಹೊಗಳುತ್ತಾರೋ ಅವನೇ ಯೋಗ್ಯನು.
ಒಟ್ಟು 13 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 10 / 13
1 2 3 4 5 6 7 8 9 10 11 12 13
×

Alert

×

Kannada Letters Keypad References