ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
2 ಪೂರ್ವಕಾಲವೃತ್ತಾ
1. {#1ಯೆಹೋಷಾಫಾಟನು ಮೋವಾಬ್ಯರನ್ನು ಮತ್ತು ಅಮ್ಮೋನಿಯರನ್ನು ಸೋಲಿಸಿದ್ದು }
2. [PS]ಇದರ ತರುವಾಯ ಮೋವಾಬ್ಯರೂ, ಅಮ್ಮೋನಿಯರೂ, ಮೆಗೂನ್ಯರೂ ಯೆಹೋಷಾಫಾಟನ ಮೇಲೆ ಯುದ್ಧಮಾಡಲು ಬಂದರು. [PE][PS]ಆಗ ಕೆಲವರು ಬಂದು ಯೆಹೋಷಾಫಾಟನಿಗೆ, “ಅರಾಮಿನ ಈಚೆಯಲ್ಲಿರುವ ಲವಣ ಸಮುದ್ರದ ಆಚೆಯಿಂದ ನಿನಗೆ ವಿರೋಧವಾಗಿ ಮಹಾ ಸಮೂಹವೊಂದು ಬರುತ್ತದೆ. ಅವರು ಏನ್ಗೆದಿ ಎಂಬ ಹಜಜೋನ್ ತಾಮಾರಿನಲ್ಲಿ ಇದ್ದಾರೆ,” ಎಂದು ತಿಳಿಸಿದರು.
3. ಇದನ್ನು ಕೇಳಿ ಯೆಹೋಷಾಫಾಟನು ಭಯಪಟ್ಟು ಯೆಹೋವ ದೇವರನ್ನು ಹುಡುಕಲು ನಿರ್ಣಯಿಸಿಕೊಂಡು ಸಮಸ್ತ ಯೆಹೂದದಲ್ಲಿ ಉಪವಾಸ ಮಾಡಬೇಕೆಂದು ಸಾರಿದನು.
4. ಆದ್ದರಿಂದ ಯೆಹೂದದವರು ಯೆಹೋವ ದೇವರಿಂದ ಸಹಾಯವನ್ನು ಕೇಳಿಕೊಳ್ಳಲು ಸಮಸ್ತ ಯೆಹೂದದ ಪಟ್ಟಣಗಳಿಂದ ಕೂಡಿಬಂದರು. [PE]
5.
6. [PS]ಆಗ ಯೆಹೋಷಾಫಾಟನು ಹೊಸ ಅಂಗಳದ ಮುಂದೆ ಯೆಹೋವ ದೇವರ ಮಂದಿರದಲ್ಲಿರುವ ಯೆಹೂದದ ಯೆರೂಸಲೇಮಿನ ಜನಸಮೂಹದ ಮಧ್ಯದಲ್ಲಿ ನಿಂತು: [PE] [PMS] “ನಮ್ಮ ಪಿತೃಗಳ ದೇವರಾದ ಯೆಹೋವ ದೇವರೇ, ಪರಲೋಕದಲ್ಲಿರುವ ದೇವರು ನೀವಲ್ಲವೋ? ನೀವು ಜನಾಂಗಗಳ ಸಕಲ ರಾಜ್ಯಗಳ ಮೇಲೆ ಆಳುತ್ತೀರಲ್ಲವೋ? ಯಾವನೂ ನಿಮ್ಮನ್ನು ಎದುರಿಸಲಾಗದ ಹಾಗೆ ನಿಮ್ಮ ಕೈಯಲ್ಲಿ ಶಕ್ತಿಯೂ, ಪರಾಕ್ರಮವೂ ಇಲ್ಲವೋ?
7. ನೀವು ನಿಮ್ಮ ಜನವಾದ ಇಸ್ರಾಯೇಲಿನ ಎದುರಿನಿಂದ ಈ ದೇಶದ ನಿವಾಸಿಗಳನ್ನು ಓಡಿಸಿಬಿಟ್ಟು, ಅದನ್ನು ನಿಮ್ಮ ಸ್ನೇಹಿತನಾದ ಅಬ್ರಹಾಮನ ಸಂತತಿಗೆ ಎಂದೆಂದಿಗೂ ಕೊಟ್ಟ ನೀವು, ನಮ್ಮ ದೇವರಲ್ಲವೋ?
8. ಅವರು ಅದರಲ್ಲಿ ನಿವಾಸಮಾಡಿ, ಅದರಲ್ಲಿ ನಿಮ್ಮ ಹೆಸರಿಗೆ ಪರಿಶುದ್ಧವಾದ ಸ್ಥಳವನ್ನು ಕಟ್ಟಿಸಿ,
9. ‘ನಿಮ್ಮ ಹೆಸರು ಈ ಆಲಯದಲ್ಲಿರುವುದರಿಂದ ಖಡ್ಗವೂ ನ್ಯಾಯತೀರಿಸುವ ಶಿಕ್ಷೆಯೂ, ಘೋರವ್ಯಾಧಿಯೂ ಬರವೇನಾದರೂ ನಮ್ಮ ಮೇಲೆ ಬಂದರೆ, ನಾವು ಈ ಆಲಯದ ಮುಂದೆಯೂ, ನಿಮ್ಮ ಸಮ್ಮುಖದಲ್ಲಿಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿಮ್ಮನ್ನು ಕೂಗುವಾಗ, ನೀವು ಕೇಳಿ ರಕ್ಷಿಸುವಿರಿ,’ ಎಂದು ಹೇಳಲಿಲ್ಲವೇ? [PME]
10. [PMS] “ಈಗ, ಅಮ್ಮೋನ್ ಮೋವಾಬ್, ಸೇಯೀರ್ ಬೆಟ್ಟದ ಜನರು, ಇಸ್ರಾಯೇಲರು ಈಜಿಪ್ಟ್ ದೇಶದೊಳಗಿಂದ ಹೊರಟು ಬರುವಾಗ, ಅವರ ಕಡೆಗೆ ಹೋಗಲು ನೀವು ಇವರಿಗೆ ಅಪ್ಪಣೆ ಕೊಡದೆ ಇದ್ದುದರಿಂದ, ಇವರು ಅವರನ್ನು ಬಿಟ್ಟು ತೊಲಗಿ ಅವರನ್ನು ನಾಶಮಾಡದೆ ಹೋದರು.
11. ಅವರು ಬಂದು, ನೀವು ನಮಗೆ ಸ್ವಾಧೀನಮಾಡಿಕೊಳ್ಳಲು ಕೊಟ್ಟ ನಿಮ್ಮ ಸ್ವಾಸ್ತ್ಯದೊಳಗಿಂದ ನಮ್ಮನ್ನು ಹೊರಡಿಸುವುದರಿಂದ ನಮಗೆ ಪ್ರತೀಕಾರ ಮಾಡುತ್ತಾರೆ.
12. ನಮ್ಮ ದೇವರೇ, ನೀವು ಅವರಿಗೆ ನ್ಯಾಯತೀರಿಸುವುದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾ ಗುಂಪನ್ನು ಎದುರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯದು. ಆದರೆ ನಮ್ಮ ಕಣ್ಣುಗಳು ನಿಮ್ಮ ಮೇಲೆ ಇವೆ,” ಎಂದನು. [PME]
13.
14. [PS]ಹೀಗೆ ಯೆಹೂದದವರೆಲ್ಲರು ತಮ್ಮ ಹೆಂಡತಿಯರು, ಮಕ್ಕಳು, ಚಿಕ್ಕವರು ಸಹಿತವಾಗಿ ಯೆಹೋವ ದೇವರ ಮುಂದೆ ನಿಂತರು. [PE]
15. [PS]ಆಗ ಜನಸಮೂಹದ ಮಧ್ಯದಲ್ಲಿ ಆಸಾಫನ ವಂಶದಲ್ಲಿ ಒಬ್ಬನಾದಂಥ ಲೇವಿಯನಾದ ಯಹಜಿಯೇಲನ ಮೇಲೆ ಯೆಹೋವ ದೇವರ ಆತ್ಮ ಬರಲು, ಇವನು ಮತ್ತನ್ಯನಿಗೆ ಹುಟ್ಟಿದ ಯೆಹೀಯೇಲನ ಮರಿಮಗ, ಬೆನಾಯನ ಮೊಮ್ಮಗ, ಹಾಗೂ ಜೆಕರ್ಯನ ಮಗ. [PE][PS]ಆಗ ಯಹಜೀಯೇಲನು, “ಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಯೆಹೋವ ದೇವರು ನಿಮಗೆ ಹೀಗೆ ಹೇಳುತ್ತಾರೆ: ಈ ಮಹಾ ಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರಬೇಡಿರಿ. ಏಕೆಂದರೆ ಯುದ್ಧವು ನಿಮ್ಮದಲ್ಲ, ದೇವರದೇ.
16. ನಾಳೆ ಬೆಳಿಗ್ಗೆ ನೀವು ಅವರ ವಿರೋಧವಾಗಿ ಹೋಗಿರಿ. ಅವರು ಚೀಚ್ ಎಂಬ ಕಣಿವೆಯಿಂದ ಬರುತ್ತಾರೆ. ಯೆರೂಯೇಲ್ ಮರುಭೂಮಿಯ ಮುಂಭಾಗದಲ್ಲಿರುವ ಹಳ್ಳದ ಅಂತ್ಯದಲ್ಲಿ ಅವರನ್ನು ಕಂಡುಕೊಳ್ಳುವಿರಿ.
17. ಇದರಲ್ಲಿ ನೀವು ಯುದ್ಧಮಾಡಲು ಅವಶ್ಯವಲ್ಲ. ನೀವು ನೆಲೆಯಾಗಿ ನಿಂತುಕೊಂಡು, ಯೆಹೋವ ದೇವರು ನಿಮಗೆ ಕೊಡುವ ಬಿಡುಗಡೆಯನ್ನು ನೋಡಿರಿ. ಯೆಹೂದದವರೇ, ಯೆರೂಸಲೇಮಿನವರೇ, ಭಯಪಡಬೇಡಿರಿ, ಹೆದರಬೇಡಿರಿ. ಮೂರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ. ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ,” ಎಂದನು. [PE]
18. [PS]ಆಗ ಯೆಹೋಷಾಫಾಟನು ತನ್ನ ಮುಖವನ್ನು ನೆಲಕ್ಕೆ ಬಾಗಿಸಿದನು. ಯೆಹೂದದವರೆಲ್ಲರೂ, ಯೆರೂಸಲೇಮಿನ ನಿವಾಸಿಗಳೆಲ್ಲರೂ ಯೆಹೋವ ದೇವರ ಮುಂದೆ ಅಡ್ಡಬಿದ್ದು ಯೆಹೋವ ದೇವರನ್ನು ಆರಾಧಿಸಿದರು.
19. ಇದಲ್ಲದೆ ಕೊಹಾತ್ಯರ ಮಕ್ಕಳಲ್ಲಿಯೂ, ಕೋರಹೀಯರ ಮಕ್ಕಳಲ್ಲಿರುವ ಲೇವಿಯರು ಗಟ್ಟಿಯಾಗಿ ದೊಡ್ಡ ಶಬ್ದದಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ತುತಿಸಲು ಎದ್ದು ನಿಂತರು. [PE]
20. [PS]ಅವರು ಉದಯದಲ್ಲಿ ಎದ್ದು ತೆಕೋವದ ಮರುಭೂಮಿಗೆ ಹೊರಟರು. ಅವರು ಹೊರಟು ಹೋಗುತ್ತಿರುವಾಗ ಯೆಹೋಷಾಫಾಟನು ನಿಂತುಕೊಂಡು, “ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಯೆಹೋವ ದೇವರನ್ನು ನಂಬಿ ಸ್ಥಿರವಾಗಿರಿ. ದೇವರ ಪ್ರವಾದಿಗಳನ್ನು ನಂಬಿರಿ, ಆಗ ಜಯ ಹೊಂದುವಿರಿ,” ಎಂದನು.
21. ಜನರ ಸಂಗಡ ಆಲೋಚನೆ ಮಾಡಿದ ತರುವಾಯ ಯೆಹೋಷಾಫಾಟನು, ಪರಿಶುದ್ಧತ್ವದ ವೈಭವದಿಂದ ಯೆಹೋವ ದೇವರಿಗೆ ಹಾಡುವಂತೆ ಸಂಗೀತಗಾರರನ್ನು ನೇಮಿಸಿದನು. ಅವರು ಸೈನ್ಯದ ಮುಂದೆ ಹೋಗುತ್ತಾ, [PE][QS]“ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ. [QE][QS2]ಅವರ ಪ್ರೀತಿಯು ಯುಗಯುಗಕ್ಕೂ ಇರುವುದು,” [QE][MS]ಎಂದು ಹಾಡುವಂತೆ ನೇಮಿಸಿದನು. [ME]
22. [PS]ಅವರು ಹಾಡುವುದಕ್ಕೂ, ಸ್ತುತಿಸುವುದಕ್ಕೂ ಆರಂಭಿಸಿದಾಗಲೇ ಯೆಹೋವ ದೇವರು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯೀರ್ ಪರ್ವತಗಳ ಜನರನ್ನು ಸೋಲಿಸುವುದಕ್ಕೆ ಅವರಲ್ಲಿಯೇ ಹೊಂಚಿಕೊಳ್ಳುವವರನ್ನು ಇರಿಸಿದ್ದರು.
23. ಅಮ್ಮೋನಿಯರು, ಮೋವಾಬ್ಯರು ಸೇಯೀರ್ ಪರ್ವತದ ನಿವಾಸಿಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯೀರನ ನಿವಾಸಿಗಳನ್ನು ಪೂರ್ಣವಾಗಿ ವಧಿಸಿದ ತರುವಾಯ, ತಾವೇ ಒಬ್ಬರನ್ನೊಬ್ಬರು ಕೊಲ್ಲುವುದಕ್ಕೆ ಪ್ರಾರಂಭಿಸಿದರು. [PE]
24. [PS]ಯೆಹೂದದವರು ಮರುಭೂಮಿಯಲ್ಲಿರುವ ಎತ್ತರದ ಸ್ಥಳಕ್ಕೆ ಬಂದು, ಅಲ್ಲಿನ ಗುಂಪನ್ನು ನೋಡಿದಾಗ, ಅವರಲ್ಲಿ ಒಬ್ಬನೂ ಉಳಿಯದ ಹಾಗೆ ಎಲ್ಲರೂ ನೆಲಕ್ಕೆ ಬಿದ್ದು ಹೆಣಗಳಾಗಿದ್ದರು.
25. ಯೆಹೋಷಾಫಾಟನೂ, ಅವನ ಜನರೂ ಅವರ ವಸ್ತ್ರಗಳನ್ನೂ, ವಸ್ತುಗಳನ್ನೂ ಕೊಳ್ಳೆಮಾಡಲು ಬಂದಾಗ, ಅವರು ಹೆಣಗಳ ಬಳಿಯಲ್ಲಿ ದ್ರವ್ಯವನ್ನೂ, ಆಭರಣಗಳನ್ನೂ ಬಹಳವಾಗಿ ಕಂಡುಕೊಂಡು, ತಾವು ಒಯ್ಯಲಿಕ್ಕಾಗದಷ್ಟು ಹೆಚ್ಚಾಗಿ ಸುಲಿದುಕೊಂಡರು. ಕೊಳ್ಳೆಯು ಅಷ್ಟು ಅಧಿಕವಾದುದರಿಂದ ಅದನ್ನು ಮೂರು ದಿವಸಗಳವರೆಗೂ ಸುಲಿದುಕೊಳ್ಳುತ್ತಾ ಇದ್ದರು.
26. ನಾಲ್ಕನೆಯ ದಿವಸದಲ್ಲಿ ಅವರು ಬೆರಾಕವೆಂಬ ತಗ್ಗಿನಲ್ಲಿ ಕೂಡಿಕೊಂಡರು. ಅಲ್ಲಿ ಯೆಹೋವ ದೇವರನ್ನು ಸ್ತುತಿಸಿದರು. ಆದಕಾರಣ ಇಂದಿನವರೆಗೂ ಆ ಸ್ಥಳಕ್ಕೆ ಬೆರಾಕ[* ಬೆರಾಕ ಅಂದರೆ ಸ್ತುತಿಸುವುದು ] ತಗ್ಗು ಎಂದು ಕರೆಯುತ್ತಾರೆ. [PE]
27. [PS]ಯೆಹೋವ ದೇವರು ಅವರ ಶತ್ರುಗಳ ಮೇಲೆ ಅವರು ಸಂತೋಷಪಡುವಂತೆ ಮಾಡಿದ್ದರಿಂದ, ಅವರು ಹರ್ಷಗೊಂಡು ಯೆರೂಸಲೇಮಿಗೆ ತಿರುಗಿ ಹೋಗುವುದಕ್ಕೆ ಯೆಹೂದ ಮತ್ತು ಯೆರೂಸಲೇಮಿನವರ ಮುಂಭಾಗದಲ್ಲಿ ಯೆಹೋಷಾಫಾಟನೂ ಹೊರಟು,
28. ಸ್ವರಮಂಡಲ, ಕಿನ್ನರಿ, ತುತೂರಿ ಇವುಗಳೊಡನೆ ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದರು. [PE]
29. [PS]ಯೆಹೋವ ದೇವರು ಇಸ್ರಾಯೇಲರ ಶತ್ರುಗಳ ಮೇಲೆ ಯುದ್ಧ ಮಾಡಿದರೆಂದು ಜನರು ಕೇಳಿದಾಗ, ದೇವರ ಭಯವು ಆ ದೇಶದಲ್ಲಿ ಸಕಲ ರಾಜ್ಯಗಳ ಮೇಲೆ ಇತ್ತು.
30. ಹೀಗೆ ಯೆಹೋಷಾಫಾಟನ ರಾಜ್ಯವು ಶಾಂತವಾಗಿತ್ತು. ಅವನ ದೇವರು ಸುತ್ತಲೂ ಅವನಿಗೆ ವಿಶ್ರಾಂತಿಕೊಟ್ಟರು. [PE]
31. {#1ಯೆಹೋಷಾಫಾಟನ ಆಳಿಕೆಯ ಸಮಾಪ್ತಿಯು } [PS]ಯೆಹೋಷಾಫಾಟನು ಯೆಹೂದ್ಯರ ಮೇಲೆ ಆಳಿದನು. ಅವನು ಅರಸನಾದಾಗ ಮೂವತ್ತೈದು ವರ್ಷದವನಾಗಿದ್ದನು. ಯೆರೂಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಅವನ ತಾಯಿ.
32. ಅವನು ತನ್ನ ತಂದೆ ಆಸನ ಮಾರ್ಗಗಳಲ್ಲಿ ನಡೆದು, ಅದನ್ನು ಬಿಟ್ಟು ತೊಲಗದೇ, ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು.
33. ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ. ಜನರು ಅವರ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸ್ಥಿರ ಮಾಡಿಕೊಂಡಿರಲಿಲ್ಲ. [PE]
34.
35. [PS]ಯೆಹೋಷಾಫಾಟನ ಇತರ ಕ್ರಿಯೆಗಳು, ಆರಂಭದಿಂದ ಅಂತ್ಯದವರೆಗೆ, ಇಸ್ರಾಯೇಲರ ಅರಸುಗಳ ಗ್ರಂಥದಲ್ಲಿ, ಅಂದರೆ, ಹನಾನೀಯ ಮಗನಾದ ಯೇಹುವಿನ ಗ್ರಂಥದಲ್ಲಿ ಬರೆದಿರುತ್ತವೆ. [PE][PS]ಇದರ ತರುವಾಯ ಯೆಹೂದದ ಅರಸನಾದ ಯೆಹೋಷಾಫಾಟನು, ಬಹು ದುಷ್ಟನಾಗಿ ನಡೆದ ಇಸ್ರಾಯೇಲಿನ ಅರಸನಾದ ಅಹಜ್ಯನ ಸಂಗಡ ಒಪ್ಪಂದ ಮಾಡಿಕೊಂಡನು.
36. ಇದಲ್ಲದೆ ತಾರ್ಷೀಷಿಗೆ ಹೋಗುವುದಕ್ಕಾಗಿ ಹಡಗುಗಳನ್ನು ಮಾಡಿಸಲು, ಅವನ ಸಂಗಡ ಒಪ್ಪಂದ ಮಾಡಿಕೊಂಡು ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಮಾಡಿಸಿದರು.
37. ಆಗ ಮಾರೇಷಾ ಊರಿನ ದೋದವಾಹುವಿನ ಮಗನಾದ ಎಲೀಯೆಜೆರನು ಯೆಹೋಷಾಫಾಟನಿಗೆ ವಿರೋಧವಾಗಿ ಪ್ರವಾದಿಸಿ, “ನೀನು ಅಹಜ್ಯನ ಸಂಗಡ ಒಪ್ಪಂದ ಮಾಡಿಕೊಂಡಿದ್ದರಿಂದ, ಯೆಹೋವ ದೇವರು ನೀನು ಮಾಡಿದವುಗಳನ್ನು ನಾಶಮಾಡುವರು,” ಎಂದು ಹೇಳಿದನು. ಅದರಂತೆಯೇ, ಆ ಹಡಗುಗಳು ತಾರ್ಷೀಷಿಗೆ ಹೋಗದೆ ಒಡೆದುಹೋದವು. [PE]
ಒಟ್ಟು 36 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 20 / 36
ಯೆಹೋಷಾಫಾಟನು ಮೋವಾಬ್ಯರನ್ನು ಮತ್ತು ಅಮ್ಮೋನಿಯರನ್ನು ಸೋಲಿಸಿದ್ದು 1 2 ಇದರ ತರುವಾಯ ಮೋವಾಬ್ಯರೂ, ಅಮ್ಮೋನಿಯರೂ, ಮೆಗೂನ್ಯರೂ ಯೆಹೋಷಾಫಾಟನ ಮೇಲೆ ಯುದ್ಧಮಾಡಲು ಬಂದರು. ಆಗ ಕೆಲವರು ಬಂದು ಯೆಹೋಷಾಫಾಟನಿಗೆ, “ಅರಾಮಿನ ಈಚೆಯಲ್ಲಿರುವ ಲವಣ ಸಮುದ್ರದ ಆಚೆಯಿಂದ ನಿನಗೆ ವಿರೋಧವಾಗಿ ಮಹಾ ಸಮೂಹವೊಂದು ಬರುತ್ತದೆ. ಅವರು ಏನ್ಗೆದಿ ಎಂಬ ಹಜಜೋನ್ ತಾಮಾರಿನಲ್ಲಿ ಇದ್ದಾರೆ,” ಎಂದು ತಿಳಿಸಿದರು. 3 ಇದನ್ನು ಕೇಳಿ ಯೆಹೋಷಾಫಾಟನು ಭಯಪಟ್ಟು ಯೆಹೋವ ದೇವರನ್ನು ಹುಡುಕಲು ನಿರ್ಣಯಿಸಿಕೊಂಡು ಸಮಸ್ತ ಯೆಹೂದದಲ್ಲಿ ಉಪವಾಸ ಮಾಡಬೇಕೆಂದು ಸಾರಿದನು. 4 ಆದ್ದರಿಂದ ಯೆಹೂದದವರು ಯೆಹೋವ ದೇವರಿಂದ ಸಹಾಯವನ್ನು ಕೇಳಿಕೊಳ್ಳಲು ಸಮಸ್ತ ಯೆಹೂದದ ಪಟ್ಟಣಗಳಿಂದ ಕೂಡಿಬಂದರು. 5 6 ಆಗ ಯೆಹೋಷಾಫಾಟನು ಹೊಸ ಅಂಗಳದ ಮುಂದೆ ಯೆಹೋವ ದೇವರ ಮಂದಿರದಲ್ಲಿರುವ ಯೆಹೂದದ ಯೆರೂಸಲೇಮಿನ ಜನಸಮೂಹದ ಮಧ್ಯದಲ್ಲಿ ನಿಂತು: “ನಮ್ಮ ಪಿತೃಗಳ ದೇವರಾದ ಯೆಹೋವ ದೇವರೇ, ಪರಲೋಕದಲ್ಲಿರುವ ದೇವರು ನೀವಲ್ಲವೋ? ನೀವು ಜನಾಂಗಗಳ ಸಕಲ ರಾಜ್ಯಗಳ ಮೇಲೆ ಆಳುತ್ತೀರಲ್ಲವೋ? ಯಾವನೂ ನಿಮ್ಮನ್ನು ಎದುರಿಸಲಾಗದ ಹಾಗೆ ನಿಮ್ಮ ಕೈಯಲ್ಲಿ ಶಕ್ತಿಯೂ, ಪರಾಕ್ರಮವೂ ಇಲ್ಲವೋ? 7 ನೀವು ನಿಮ್ಮ ಜನವಾದ ಇಸ್ರಾಯೇಲಿನ ಎದುರಿನಿಂದ ಈ ದೇಶದ ನಿವಾಸಿಗಳನ್ನು ಓಡಿಸಿಬಿಟ್ಟು, ಅದನ್ನು ನಿಮ್ಮ ಸ್ನೇಹಿತನಾದ ಅಬ್ರಹಾಮನ ಸಂತತಿಗೆ ಎಂದೆಂದಿಗೂ ಕೊಟ್ಟ ನೀವು, ನಮ್ಮ ದೇವರಲ್ಲವೋ? 8 ಅವರು ಅದರಲ್ಲಿ ನಿವಾಸಮಾಡಿ, ಅದರಲ್ಲಿ ನಿಮ್ಮ ಹೆಸರಿಗೆ ಪರಿಶುದ್ಧವಾದ ಸ್ಥಳವನ್ನು ಕಟ್ಟಿಸಿ, 9 ‘ನಿಮ್ಮ ಹೆಸರು ಈ ಆಲಯದಲ್ಲಿರುವುದರಿಂದ ಖಡ್ಗವೂ ನ್ಯಾಯತೀರಿಸುವ ಶಿಕ್ಷೆಯೂ, ಘೋರವ್ಯಾಧಿಯೂ ಬರವೇನಾದರೂ ನಮ್ಮ ಮೇಲೆ ಬಂದರೆ, ನಾವು ಈ ಆಲಯದ ಮುಂದೆಯೂ, ನಿಮ್ಮ ಸಮ್ಮುಖದಲ್ಲಿಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿಮ್ಮನ್ನು ಕೂಗುವಾಗ, ನೀವು ಕೇಳಿ ರಕ್ಷಿಸುವಿರಿ,’ ಎಂದು ಹೇಳಲಿಲ್ಲವೇ? 10 “ಈಗ, ಅಮ್ಮೋನ್ ಮೋವಾಬ್, ಸೇಯೀರ್ ಬೆಟ್ಟದ ಜನರು, ಇಸ್ರಾಯೇಲರು ಈಜಿಪ್ಟ್ ದೇಶದೊಳಗಿಂದ ಹೊರಟು ಬರುವಾಗ, ಅವರ ಕಡೆಗೆ ಹೋಗಲು ನೀವು ಇವರಿಗೆ ಅಪ್ಪಣೆ ಕೊಡದೆ ಇದ್ದುದರಿಂದ, ಇವರು ಅವರನ್ನು ಬಿಟ್ಟು ತೊಲಗಿ ಅವರನ್ನು ನಾಶಮಾಡದೆ ಹೋದರು. 11 ಅವರು ಬಂದು, ನೀವು ನಮಗೆ ಸ್ವಾಧೀನಮಾಡಿಕೊಳ್ಳಲು ಕೊಟ್ಟ ನಿಮ್ಮ ಸ್ವಾಸ್ತ್ಯದೊಳಗಿಂದ ನಮ್ಮನ್ನು ಹೊರಡಿಸುವುದರಿಂದ ನಮಗೆ ಪ್ರತೀಕಾರ ಮಾಡುತ್ತಾರೆ. 12 ನಮ್ಮ ದೇವರೇ, ನೀವು ಅವರಿಗೆ ನ್ಯಾಯತೀರಿಸುವುದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾ ಗುಂಪನ್ನು ಎದುರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯದು. ಆದರೆ ನಮ್ಮ ಕಣ್ಣುಗಳು ನಿಮ್ಮ ಮೇಲೆ ಇವೆ,” ಎಂದನು. 13 14 ಹೀಗೆ ಯೆಹೂದದವರೆಲ್ಲರು ತಮ್ಮ ಹೆಂಡತಿಯರು, ಮಕ್ಕಳು, ಚಿಕ್ಕವರು ಸಹಿತವಾಗಿ ಯೆಹೋವ ದೇವರ ಮುಂದೆ ನಿಂತರು. 15 ಆಗ ಜನಸಮೂಹದ ಮಧ್ಯದಲ್ಲಿ ಆಸಾಫನ ವಂಶದಲ್ಲಿ ಒಬ್ಬನಾದಂಥ ಲೇವಿಯನಾದ ಯಹಜಿಯೇಲನ ಮೇಲೆ ಯೆಹೋವ ದೇವರ ಆತ್ಮ ಬರಲು, ಇವನು ಮತ್ತನ್ಯನಿಗೆ ಹುಟ್ಟಿದ ಯೆಹೀಯೇಲನ ಮರಿಮಗ, ಬೆನಾಯನ ಮೊಮ್ಮಗ, ಹಾಗೂ ಜೆಕರ್ಯನ ಮಗ. ಆಗ ಯಹಜೀಯೇಲನು, “ಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಯೆಹೋವ ದೇವರು ನಿಮಗೆ ಹೀಗೆ ಹೇಳುತ್ತಾರೆ: ಈ ಮಹಾ ಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರಬೇಡಿರಿ. ಏಕೆಂದರೆ ಯುದ್ಧವು ನಿಮ್ಮದಲ್ಲ, ದೇವರದೇ. 16 ನಾಳೆ ಬೆಳಿಗ್ಗೆ ನೀವು ಅವರ ವಿರೋಧವಾಗಿ ಹೋಗಿರಿ. ಅವರು ಚೀಚ್ ಎಂಬ ಕಣಿವೆಯಿಂದ ಬರುತ್ತಾರೆ. ಯೆರೂಯೇಲ್ ಮರುಭೂಮಿಯ ಮುಂಭಾಗದಲ್ಲಿರುವ ಹಳ್ಳದ ಅಂತ್ಯದಲ್ಲಿ ಅವರನ್ನು ಕಂಡುಕೊಳ್ಳುವಿರಿ. 17 ಇದರಲ್ಲಿ ನೀವು ಯುದ್ಧಮಾಡಲು ಅವಶ್ಯವಲ್ಲ. ನೀವು ನೆಲೆಯಾಗಿ ನಿಂತುಕೊಂಡು, ಯೆಹೋವ ದೇವರು ನಿಮಗೆ ಕೊಡುವ ಬಿಡುಗಡೆಯನ್ನು ನೋಡಿರಿ. ಯೆಹೂದದವರೇ, ಯೆರೂಸಲೇಮಿನವರೇ, ಭಯಪಡಬೇಡಿರಿ, ಹೆದರಬೇಡಿರಿ. ಮೂರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ. ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ,” ಎಂದನು. 18 ಆಗ ಯೆಹೋಷಾಫಾಟನು ತನ್ನ ಮುಖವನ್ನು ನೆಲಕ್ಕೆ ಬಾಗಿಸಿದನು. ಯೆಹೂದದವರೆಲ್ಲರೂ, ಯೆರೂಸಲೇಮಿನ ನಿವಾಸಿಗಳೆಲ್ಲರೂ ಯೆಹೋವ ದೇವರ ಮುಂದೆ ಅಡ್ಡಬಿದ್ದು ಯೆಹೋವ ದೇವರನ್ನು ಆರಾಧಿಸಿದರು. 19 ಇದಲ್ಲದೆ ಕೊಹಾತ್ಯರ ಮಕ್ಕಳಲ್ಲಿಯೂ, ಕೋರಹೀಯರ ಮಕ್ಕಳಲ್ಲಿರುವ ಲೇವಿಯರು ಗಟ್ಟಿಯಾಗಿ ದೊಡ್ಡ ಶಬ್ದದಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ತುತಿಸಲು ಎದ್ದು ನಿಂತರು. 20 ಅವರು ಉದಯದಲ್ಲಿ ಎದ್ದು ತೆಕೋವದ ಮರುಭೂಮಿಗೆ ಹೊರಟರು. ಅವರು ಹೊರಟು ಹೋಗುತ್ತಿರುವಾಗ ಯೆಹೋಷಾಫಾಟನು ನಿಂತುಕೊಂಡು, “ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಯೆಹೋವ ದೇವರನ್ನು ನಂಬಿ ಸ್ಥಿರವಾಗಿರಿ. ದೇವರ ಪ್ರವಾದಿಗಳನ್ನು ನಂಬಿರಿ, ಆಗ ಜಯ ಹೊಂದುವಿರಿ,” ಎಂದನು. 21 ಜನರ ಸಂಗಡ ಆಲೋಚನೆ ಮಾಡಿದ ತರುವಾಯ ಯೆಹೋಷಾಫಾಟನು, ಪರಿಶುದ್ಧತ್ವದ ವೈಭವದಿಂದ ಯೆಹೋವ ದೇವರಿಗೆ ಹಾಡುವಂತೆ ಸಂಗೀತಗಾರರನ್ನು ನೇಮಿಸಿದನು. ಅವರು ಸೈನ್ಯದ ಮುಂದೆ ಹೋಗುತ್ತಾ, “ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ. ಅವರ ಪ್ರೀತಿಯು ಯುಗಯುಗಕ್ಕೂ ಇರುವುದು,” ಎಂದು ಹಾಡುವಂತೆ ನೇಮಿಸಿದನು. 22 ಅವರು ಹಾಡುವುದಕ್ಕೂ, ಸ್ತುತಿಸುವುದಕ್ಕೂ ಆರಂಭಿಸಿದಾಗಲೇ ಯೆಹೋವ ದೇವರು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯೀರ್ ಪರ್ವತಗಳ ಜನರನ್ನು ಸೋಲಿಸುವುದಕ್ಕೆ ಅವರಲ್ಲಿಯೇ ಹೊಂಚಿಕೊಳ್ಳುವವರನ್ನು ಇರಿಸಿದ್ದರು. 23 ಅಮ್ಮೋನಿಯರು, ಮೋವಾಬ್ಯರು ಸೇಯೀರ್ ಪರ್ವತದ ನಿವಾಸಿಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯೀರನ ನಿವಾಸಿಗಳನ್ನು ಪೂರ್ಣವಾಗಿ ವಧಿಸಿದ ತರುವಾಯ, ತಾವೇ ಒಬ್ಬರನ್ನೊಬ್ಬರು ಕೊಲ್ಲುವುದಕ್ಕೆ ಪ್ರಾರಂಭಿಸಿದರು. 24 ಯೆಹೂದದವರು ಮರುಭೂಮಿಯಲ್ಲಿರುವ ಎತ್ತರದ ಸ್ಥಳಕ್ಕೆ ಬಂದು, ಅಲ್ಲಿನ ಗುಂಪನ್ನು ನೋಡಿದಾಗ, ಅವರಲ್ಲಿ ಒಬ್ಬನೂ ಉಳಿಯದ ಹಾಗೆ ಎಲ್ಲರೂ ನೆಲಕ್ಕೆ ಬಿದ್ದು ಹೆಣಗಳಾಗಿದ್ದರು. 25 ಯೆಹೋಷಾಫಾಟನೂ, ಅವನ ಜನರೂ ಅವರ ವಸ್ತ್ರಗಳನ್ನೂ, ವಸ್ತುಗಳನ್ನೂ ಕೊಳ್ಳೆಮಾಡಲು ಬಂದಾಗ, ಅವರು ಹೆಣಗಳ ಬಳಿಯಲ್ಲಿ ದ್ರವ್ಯವನ್ನೂ, ಆಭರಣಗಳನ್ನೂ ಬಹಳವಾಗಿ ಕಂಡುಕೊಂಡು, ತಾವು ಒಯ್ಯಲಿಕ್ಕಾಗದಷ್ಟು ಹೆಚ್ಚಾಗಿ ಸುಲಿದುಕೊಂಡರು. ಕೊಳ್ಳೆಯು ಅಷ್ಟು ಅಧಿಕವಾದುದರಿಂದ ಅದನ್ನು ಮೂರು ದಿವಸಗಳವರೆಗೂ ಸುಲಿದುಕೊಳ್ಳುತ್ತಾ ಇದ್ದರು. 26 ನಾಲ್ಕನೆಯ ದಿವಸದಲ್ಲಿ ಅವರು ಬೆರಾಕವೆಂಬ ತಗ್ಗಿನಲ್ಲಿ ಕೂಡಿಕೊಂಡರು. ಅಲ್ಲಿ ಯೆಹೋವ ದೇವರನ್ನು ಸ್ತುತಿಸಿದರು. ಆದಕಾರಣ ಇಂದಿನವರೆಗೂ ಆ ಸ್ಥಳಕ್ಕೆ ಬೆರಾಕ* ಬೆರಾಕ ಅಂದರೆ ಸ್ತುತಿಸುವುದು ತಗ್ಗು ಎಂದು ಕರೆಯುತ್ತಾರೆ. 27 ಯೆಹೋವ ದೇವರು ಅವರ ಶತ್ರುಗಳ ಮೇಲೆ ಅವರು ಸಂತೋಷಪಡುವಂತೆ ಮಾಡಿದ್ದರಿಂದ, ಅವರು ಹರ್ಷಗೊಂಡು ಯೆರೂಸಲೇಮಿಗೆ ತಿರುಗಿ ಹೋಗುವುದಕ್ಕೆ ಯೆಹೂದ ಮತ್ತು ಯೆರೂಸಲೇಮಿನವರ ಮುಂಭಾಗದಲ್ಲಿ ಯೆಹೋಷಾಫಾಟನೂ ಹೊರಟು, 28 ಸ್ವರಮಂಡಲ, ಕಿನ್ನರಿ, ತುತೂರಿ ಇವುಗಳೊಡನೆ ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದರು. 29 ಯೆಹೋವ ದೇವರು ಇಸ್ರಾಯೇಲರ ಶತ್ರುಗಳ ಮೇಲೆ ಯುದ್ಧ ಮಾಡಿದರೆಂದು ಜನರು ಕೇಳಿದಾಗ, ದೇವರ ಭಯವು ಆ ದೇಶದಲ್ಲಿ ಸಕಲ ರಾಜ್ಯಗಳ ಮೇಲೆ ಇತ್ತು. 30 ಹೀಗೆ ಯೆಹೋಷಾಫಾಟನ ರಾಜ್ಯವು ಶಾಂತವಾಗಿತ್ತು. ಅವನ ದೇವರು ಸುತ್ತಲೂ ಅವನಿಗೆ ವಿಶ್ರಾಂತಿಕೊಟ್ಟರು. ಯೆಹೋಷಾಫಾಟನ ಆಳಿಕೆಯ ಸಮಾಪ್ತಿಯು 31 ಯೆಹೋಷಾಫಾಟನು ಯೆಹೂದ್ಯರ ಮೇಲೆ ಆಳಿದನು. ಅವನು ಅರಸನಾದಾಗ ಮೂವತ್ತೈದು ವರ್ಷದವನಾಗಿದ್ದನು. ಯೆರೂಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಅವನ ತಾಯಿ. 32 ಅವನು ತನ್ನ ತಂದೆ ಆಸನ ಮಾರ್ಗಗಳಲ್ಲಿ ನಡೆದು, ಅದನ್ನು ಬಿಟ್ಟು ತೊಲಗದೇ, ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು. 33 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ. ಜನರು ಅವರ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸ್ಥಿರ ಮಾಡಿಕೊಂಡಿರಲಿಲ್ಲ. 34 35 ಯೆಹೋಷಾಫಾಟನ ಇತರ ಕ್ರಿಯೆಗಳು, ಆರಂಭದಿಂದ ಅಂತ್ಯದವರೆಗೆ, ಇಸ್ರಾಯೇಲರ ಅರಸುಗಳ ಗ್ರಂಥದಲ್ಲಿ, ಅಂದರೆ, ಹನಾನೀಯ ಮಗನಾದ ಯೇಹುವಿನ ಗ್ರಂಥದಲ್ಲಿ ಬರೆದಿರುತ್ತವೆ. ಇದರ ತರುವಾಯ ಯೆಹೂದದ ಅರಸನಾದ ಯೆಹೋಷಾಫಾಟನು, ಬಹು ದುಷ್ಟನಾಗಿ ನಡೆದ ಇಸ್ರಾಯೇಲಿನ ಅರಸನಾದ ಅಹಜ್ಯನ ಸಂಗಡ ಒಪ್ಪಂದ ಮಾಡಿಕೊಂಡನು. 36 ಇದಲ್ಲದೆ ತಾರ್ಷೀಷಿಗೆ ಹೋಗುವುದಕ್ಕಾಗಿ ಹಡಗುಗಳನ್ನು ಮಾಡಿಸಲು, ಅವನ ಸಂಗಡ ಒಪ್ಪಂದ ಮಾಡಿಕೊಂಡು ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಮಾಡಿಸಿದರು. 37 ಆಗ ಮಾರೇಷಾ ಊರಿನ ದೋದವಾಹುವಿನ ಮಗನಾದ ಎಲೀಯೆಜೆರನು ಯೆಹೋಷಾಫಾಟನಿಗೆ ವಿರೋಧವಾಗಿ ಪ್ರವಾದಿಸಿ, “ನೀನು ಅಹಜ್ಯನ ಸಂಗಡ ಒಪ್ಪಂದ ಮಾಡಿಕೊಂಡಿದ್ದರಿಂದ, ಯೆಹೋವ ದೇವರು ನೀನು ಮಾಡಿದವುಗಳನ್ನು ನಾಶಮಾಡುವರು,” ಎಂದು ಹೇಳಿದನು. ಅದರಂತೆಯೇ, ಆ ಹಡಗುಗಳು ತಾರ್ಷೀಷಿಗೆ ಹೋಗದೆ ಒಡೆದುಹೋದವು.
ಒಟ್ಟು 36 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 20 / 36
×

Alert

×

Kannada Letters Keypad References