ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
2 ಪೂರ್ವಕಾಲವೃತ್ತಾ
1. {#1ಯೆಹೂದ್ಯರ ಅರಸನಾದ ಯೆಹೋಷಾಫಾಟನು } [PS]ಆಸನ ಮಗ ಯೆಹೋಷಾಫಾಟನು ಅವನಿಗೆ ಬದಲಾಗಿ ಆಳಿದನು. ಅವನು ಇಸ್ರಾಯೇಲಿಗೆ ವಿರೋಧವಾಗಿ ತನ್ನನ್ನು ಬಲಪಡಿಸಿಕೊಂಡನು.
2. ಇದಲ್ಲದೆ ಅವನು ಯೆಹೂದದಲ್ಲಿ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯವನ್ನು ಇಟ್ಟು, ಯೆಹೂದದಲ್ಲಿಟ್ಟ ಹಾಗೆ ತನ್ನ ತಂದೆಯಾದ ಆಸನು ತೆಗೆದುಕೊಂಡ ಎಫ್ರಾಯೀಮನ ಪಟ್ಟಣಗಳಲ್ಲಿ ಸೈನ್ಯಗಳನ್ನು ಇಟ್ಟನು. [PE]
3. [PS]ಯೆಹೋಷಾಫಾಟನು ಬಾಳ್ ದೇವರುಗಳನ್ನು ಅನುಸರಿಸದೆ, ತನ್ನ ತಂದೆ ದಾವೀದನ ಮೊದಲಿನ ಮಾರ್ಗದಲ್ಲಿ ನಡೆದದ್ದರಿಂದ, ಯೆಹೋವ ದೇವರು ಅವನ ಸಂಗಡ ಇದ್ದರು.
4. ತನ್ನ ತಂದೆಯ ದೇವರನ್ನು ಹುಡುಕಿ, ಇಸ್ರಾಯೇಲಿನ ಕ್ರಿಯೆಗಳ ಪ್ರಕಾರ ನಡೆಯದೆ, ದೇವರ ಆಜ್ಞೆಗಳಲ್ಲಿ ನಡೆದನು.
5. ಆದ್ದರಿಂದ ಯೆಹೋವ ದೇವರು ರಾಜ್ಯವನ್ನು ಅವನ ಕೈಯಲ್ಲಿ ಸ್ಥಿರಪಡಿಸಿದರು. ಯೆಹೂದವೆಲ್ಲವೂ ಯೆಹೋಷಾಫಾಟನಿಗೆ ಕಾಣಿಕೆಯನ್ನು ಕೊಟ್ಟದ್ದರಿಂದ, ಅವನಿಗೆ ಐಶ್ವರ್ಯವೂ, ಘನತೆಯೂ ಅಧಿಕವಾಯಿತು.
6. ಅವನ ಹೃದಯವು ಯೆಹೋವ ದೇವರ ಮಾರ್ಗಗಳಲ್ಲಿ ಸಮರ್ಪಿತವಾಗಿತ್ತು. ಇದಲ್ಲದೆ ಅವನು ಯೆಹೂದದಲ್ಲಿದ್ದ ಉನ್ನತ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದುಹಾಕಿದನು. [PE]
7. [PS]ಅವನ ಆಳಿಕೆಯ ಮೂರನೆಯ ವರ್ಷದಲ್ಲಿ ಅವನು ತನ್ನ ಪ್ರಧಾನರಾದ ಬೆನ್ಹೈಲನನ್ನೂ, ಓಬದ್ಯನನ್ನೂ, ಜೆಕರ್ಯನನ್ನೂ, ನೆತನೆಯೇಲನನ್ನೂ, ಮೀಕಾಯನನ್ನೂ ಯೆಹೂದದ ಪಟ್ಟಣಗಳಲ್ಲಿ ಬೋಧಿಸಲು ಕರೆಕಳುಹಿಸಿದನು.
8. ಅವರ ಸಂಗಡ ಲೇವಿಯರಾದ ಶೆಮಾಯನನ್ನೂ, ನೆತನ್ಯನನ್ನೂ, ಜೆಬದ್ಯನನ್ನೂ, ಅಸಾಯೇಲನನ್ನೂ, ಶೆಮೀರಾಮೋತನನ್ನೂ, ಯೆಹೋನಾತಾನನನ್ನೂ, ಅದೋನೀಯನನ್ನೂ, ಟೋಬೀಯನನ್ನೂ, ಟೋಬದೋನಿಯನನ್ನೂ, ಇವರ ಸಂಗಡ ಯಾಜಕರಾದ ಎಲೀಷಾಮನನ್ನೂ, ಯೆಹೋರಾಮನನ್ನೂ ಕಳುಹಿಸಿದನು.
9. ಇವರು ಯೆಹೂದದಲ್ಲಿ ಬೋಧಿಸಿದರು. ಅವರ ಬಳಿಯಲ್ಲಿ ಯೆಹೋವ ದೇವರ ನಿಯಮದ ಗ್ರಂಥ ಇತ್ತು. ಯೆಹೂದದ ಸಮಸ್ತ ಪಟ್ಟಣಗಳನ್ನು ಸಂಚರಿಸಿ, ಜನರಿಗೆ ಬೋಧಿಸಿದರು. [PE]
10. [PS]ಯೆಹೋವ ದೇವರ ಭಯವು ಯೆಹೂದದ ಸುತ್ತಲಿರುವ ದೇಶಗಳ ಸಮಸ್ತ ರಾಜ್ಯಗಳ ಮೇಲೆ ಇದ್ದುದರಿಂದ, ಅವರು ಯೆಹೋಷಾಫಾಟನ ಮೇಲೆ ಯುದ್ಧಮಾಡಲಿಲ್ಲ.
11. ಇದಲ್ಲದೆ ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಗಳನ್ನೂ, ಕಪ್ಪದ ಹಣವನ್ನು ತಂದರು. ಅರಬಿಯ ದೇಶದವರು ತಮ್ಮ ಮಂದೆಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಹೋತಗಳನ್ನೂ ತಂದರು. [PE]
12. [PS]ಯೆಹೋಷಾಫಾಟನು ಬರಬರುತ್ತಾ ಬಹಳ ಅಭಿವೃದ್ಧಿಯಾಗಿ ಯೆಹೂದದಲ್ಲಿ ಅರಮನೆಗಳನ್ನೂ, ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
13. ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿ ದವಸ ಧಾನ್ಯಗಳ ದೊಡ್ಡ ಮಳಿಗೆಯನ್ನು ಕಟ್ಟಿದನು. ಪರಾಕ್ರಮಶಾಲಿಗಳಾದ ಯುದ್ಧವೀರರು ಯೆರೂಸಲೇಮಿನಲ್ಲಿದ್ದರು.
14. ತಮ್ಮ ಪಿತೃಗಳ ಮನೆಯ ಪ್ರಕಾರವಾಗಿರುವ ಅವರ ಲೆಕ್ಕವೇನೆಂದರೆ: [PE][PBR] [LS]ಯೆಹೂದದ 1,000 ಅಧಿಪತಿಗಳಲ್ಲಿ ಅದ್ನಾನು ಮುಖ್ಯಸ್ಥನಾಗಿದ್ದನು. [LE][LS2]ಅವನ ಸಂಗಡ ಪರಾಕ್ರಮಶಾಲಿಗಳು 3,00,000 ಮಂದಿ ಇದ್ದರು. [LE]
15. [LS2] ಅವನ ತರುವಾಯ ಅಧಿಪತಿಯಾದ ಯೆಹೋಹಾನಾನನು; ಅವನ ಸಂಗಡ 2,80,000 ಮಂದಿಯು. [LE]
16. [LS2] ಇವನ ತರುವಾಯ ಯೆಹೋವ ದೇವರಿಗೆ ತನ್ನನ್ನು ಮನಃಪೂರ್ವಕವಾಗಿ ಒಪ್ಪಿಸಿದ ಜಿಕ್ರಿಯ ಮಗನಾದ ಅಮಸ್ಯನು; ಅವನ ಸಂಗಡ 2,00,000 ಮಂದಿ ಪರಾಕ್ರಮಶಾಲಿಗಳು. [LE]
17. [LS] ಬೆನ್ಯಾಮೀನ್ಯರಲ್ಲಿ [LE][LS2]ಪರಾಕ್ರಮಶಾಲಿಯಾದ ಎಲ್ಯಾದ; ಇವನ ಸಂಗಡ ಬಿಲ್ಲನ್ನೂ, ಗುರಾಣಿಯನ್ನೂ ಧರಿಸಿಕೊಂಡಿರುವ 2,00,000 ಮಂದಿಯು. [LE]
18. [LS2] ಇವನ ತರುವಾಯ ಯೆಹೋಜಾಬಾದನು; ಅವನ ಸಂಗಡ ಯುದ್ಧಕ್ಕೆ ಸಿದ್ಧವಾಗಿರುವ 1,80,000 ಮಂದಿಯು. [LE][PBR]
19. [MS] ಅರಸನಿಂದ ಸಮಸ್ತ ಯೆಹೂದದಲ್ಲಿರುವ ಕೋಟೆಯುಳ್ಳ ಪಟ್ಟಣಗಳಲ್ಲಿ ಇದ್ದವರ ಹೊರತಾಗಿ, ಇವರು ಅರಸನ ಬಳಿಯಲ್ಲಿ ಸೇವೆಮಾಡುತ್ತಿದ್ದರು. [ME]
ಒಟ್ಟು 36 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 17 / 36
ಯೆಹೂದ್ಯರ ಅರಸನಾದ ಯೆಹೋಷಾಫಾಟನು 1 ಆಸನ ಮಗ ಯೆಹೋಷಾಫಾಟನು ಅವನಿಗೆ ಬದಲಾಗಿ ಆಳಿದನು. ಅವನು ಇಸ್ರಾಯೇಲಿಗೆ ವಿರೋಧವಾಗಿ ತನ್ನನ್ನು ಬಲಪಡಿಸಿಕೊಂಡನು. 2 ಇದಲ್ಲದೆ ಅವನು ಯೆಹೂದದಲ್ಲಿ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯವನ್ನು ಇಟ್ಟು, ಯೆಹೂದದಲ್ಲಿಟ್ಟ ಹಾಗೆ ತನ್ನ ತಂದೆಯಾದ ಆಸನು ತೆಗೆದುಕೊಂಡ ಎಫ್ರಾಯೀಮನ ಪಟ್ಟಣಗಳಲ್ಲಿ ಸೈನ್ಯಗಳನ್ನು ಇಟ್ಟನು. 3 ಯೆಹೋಷಾಫಾಟನು ಬಾಳ್ ದೇವರುಗಳನ್ನು ಅನುಸರಿಸದೆ, ತನ್ನ ತಂದೆ ದಾವೀದನ ಮೊದಲಿನ ಮಾರ್ಗದಲ್ಲಿ ನಡೆದದ್ದರಿಂದ, ಯೆಹೋವ ದೇವರು ಅವನ ಸಂಗಡ ಇದ್ದರು. 4 ತನ್ನ ತಂದೆಯ ದೇವರನ್ನು ಹುಡುಕಿ, ಇಸ್ರಾಯೇಲಿನ ಕ್ರಿಯೆಗಳ ಪ್ರಕಾರ ನಡೆಯದೆ, ದೇವರ ಆಜ್ಞೆಗಳಲ್ಲಿ ನಡೆದನು. 5 ಆದ್ದರಿಂದ ಯೆಹೋವ ದೇವರು ರಾಜ್ಯವನ್ನು ಅವನ ಕೈಯಲ್ಲಿ ಸ್ಥಿರಪಡಿಸಿದರು. ಯೆಹೂದವೆಲ್ಲವೂ ಯೆಹೋಷಾಫಾಟನಿಗೆ ಕಾಣಿಕೆಯನ್ನು ಕೊಟ್ಟದ್ದರಿಂದ, ಅವನಿಗೆ ಐಶ್ವರ್ಯವೂ, ಘನತೆಯೂ ಅಧಿಕವಾಯಿತು. 6 ಅವನ ಹೃದಯವು ಯೆಹೋವ ದೇವರ ಮಾರ್ಗಗಳಲ್ಲಿ ಸಮರ್ಪಿತವಾಗಿತ್ತು. ಇದಲ್ಲದೆ ಅವನು ಯೆಹೂದದಲ್ಲಿದ್ದ ಉನ್ನತ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದುಹಾಕಿದನು. 7 ಅವನ ಆಳಿಕೆಯ ಮೂರನೆಯ ವರ್ಷದಲ್ಲಿ ಅವನು ತನ್ನ ಪ್ರಧಾನರಾದ ಬೆನ್ಹೈಲನನ್ನೂ, ಓಬದ್ಯನನ್ನೂ, ಜೆಕರ್ಯನನ್ನೂ, ನೆತನೆಯೇಲನನ್ನೂ, ಮೀಕಾಯನನ್ನೂ ಯೆಹೂದದ ಪಟ್ಟಣಗಳಲ್ಲಿ ಬೋಧಿಸಲು ಕರೆಕಳುಹಿಸಿದನು. 8 ಅವರ ಸಂಗಡ ಲೇವಿಯರಾದ ಶೆಮಾಯನನ್ನೂ, ನೆತನ್ಯನನ್ನೂ, ಜೆಬದ್ಯನನ್ನೂ, ಅಸಾಯೇಲನನ್ನೂ, ಶೆಮೀರಾಮೋತನನ್ನೂ, ಯೆಹೋನಾತಾನನನ್ನೂ, ಅದೋನೀಯನನ್ನೂ, ಟೋಬೀಯನನ್ನೂ, ಟೋಬದೋನಿಯನನ್ನೂ, ಇವರ ಸಂಗಡ ಯಾಜಕರಾದ ಎಲೀಷಾಮನನ್ನೂ, ಯೆಹೋರಾಮನನ್ನೂ ಕಳುಹಿಸಿದನು. 9 ಇವರು ಯೆಹೂದದಲ್ಲಿ ಬೋಧಿಸಿದರು. ಅವರ ಬಳಿಯಲ್ಲಿ ಯೆಹೋವ ದೇವರ ನಿಯಮದ ಗ್ರಂಥ ಇತ್ತು. ಯೆಹೂದದ ಸಮಸ್ತ ಪಟ್ಟಣಗಳನ್ನು ಸಂಚರಿಸಿ, ಜನರಿಗೆ ಬೋಧಿಸಿದರು. 10 ಯೆಹೋವ ದೇವರ ಭಯವು ಯೆಹೂದದ ಸುತ್ತಲಿರುವ ದೇಶಗಳ ಸಮಸ್ತ ರಾಜ್ಯಗಳ ಮೇಲೆ ಇದ್ದುದರಿಂದ, ಅವರು ಯೆಹೋಷಾಫಾಟನ ಮೇಲೆ ಯುದ್ಧಮಾಡಲಿಲ್ಲ. 11 ಇದಲ್ಲದೆ ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಗಳನ್ನೂ, ಕಪ್ಪದ ಹಣವನ್ನು ತಂದರು. ಅರಬಿಯ ದೇಶದವರು ತಮ್ಮ ಮಂದೆಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಹೋತಗಳನ್ನೂ ತಂದರು. 12 ಯೆಹೋಷಾಫಾಟನು ಬರಬರುತ್ತಾ ಬಹಳ ಅಭಿವೃದ್ಧಿಯಾಗಿ ಯೆಹೂದದಲ್ಲಿ ಅರಮನೆಗಳನ್ನೂ, ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು. 13 ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿ ದವಸ ಧಾನ್ಯಗಳ ದೊಡ್ಡ ಮಳಿಗೆಯನ್ನು ಕಟ್ಟಿದನು. ಪರಾಕ್ರಮಶಾಲಿಗಳಾದ ಯುದ್ಧವೀರರು ಯೆರೂಸಲೇಮಿನಲ್ಲಿದ್ದರು. 14 ತಮ್ಮ ಪಿತೃಗಳ ಮನೆಯ ಪ್ರಕಾರವಾಗಿರುವ ಅವರ ಲೆಕ್ಕವೇನೆಂದರೆ: ಯೆಹೂದದ 1,000 ಅಧಿಪತಿಗಳಲ್ಲಿ ಅದ್ನಾನು ಮುಖ್ಯಸ್ಥನಾಗಿದ್ದನು. ಅವನ ಸಂಗಡ ಪರಾಕ್ರಮಶಾಲಿಗಳು 3,00,000 ಮಂದಿ ಇದ್ದರು. 15 ಅವನ ತರುವಾಯ ಅಧಿಪತಿಯಾದ ಯೆಹೋಹಾನಾನನು; ಅವನ ಸಂಗಡ 2,80,000 ಮಂದಿಯು. 16 ಇವನ ತರುವಾಯ ಯೆಹೋವ ದೇವರಿಗೆ ತನ್ನನ್ನು ಮನಃಪೂರ್ವಕವಾಗಿ ಒಪ್ಪಿಸಿದ ಜಿಕ್ರಿಯ ಮಗನಾದ ಅಮಸ್ಯನು; ಅವನ ಸಂಗಡ 2,00,000 ಮಂದಿ ಪರಾಕ್ರಮಶಾಲಿಗಳು. 17 ಬೆನ್ಯಾಮೀನ್ಯರಲ್ಲಿ ಪರಾಕ್ರಮಶಾಲಿಯಾದ ಎಲ್ಯಾದ; ಇವನ ಸಂಗಡ ಬಿಲ್ಲನ್ನೂ, ಗುರಾಣಿಯನ್ನೂ ಧರಿಸಿಕೊಂಡಿರುವ 2,00,000 ಮಂದಿಯು. 18 ಇವನ ತರುವಾಯ ಯೆಹೋಜಾಬಾದನು; ಅವನ ಸಂಗಡ ಯುದ್ಧಕ್ಕೆ ಸಿದ್ಧವಾಗಿರುವ 1,80,000 ಮಂದಿಯು. 19 ಅರಸನಿಂದ ಸಮಸ್ತ ಯೆಹೂದದಲ್ಲಿರುವ ಕೋಟೆಯುಳ್ಳ ಪಟ್ಟಣಗಳಲ್ಲಿ ಇದ್ದವರ ಹೊರತಾಗಿ, ಇವರು ಅರಸನ ಬಳಿಯಲ್ಲಿ ಸೇವೆಮಾಡುತ್ತಿದ್ದರು.
ಒಟ್ಟು 36 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 17 / 36
×

Alert

×

Kannada Letters Keypad References