1. {#1ದಾವೀದನು ಮತ್ತೊಮ್ಮೆ ಸೌಲನನ್ನು ಉಳಿಸಿದ್ದು }
2. [PS]ಜೀಫ್ಯರು ಗಿಬೆಯದಲ್ಲಿರುವ ಸೌಲನ ಬಳಿಗೆ ಬಂದು, “ದಾವೀದನು ಯೆಷಿಮೋನಿಗೆ ಎದುರಾದ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿದ್ದಾನೆ,” ಎಂದರು. [PE][PS]ಆಗ ಸೌಲನು ಎದ್ದು ಜೀಫ್ ಮರುಭೂಮಿಯಲ್ಲಿರುವ ದಾವೀದನನ್ನು ಹುಡುಕಲು ಇಸ್ರಾಯೇಲಿನಲ್ಲಿ ಆಯ್ದ ಮೂರು ಸಾವಿರ ಜನರ ಸಂಗಡ ಜೀಫ್ ಮರುಭೂಮಿಗೆ ಹೊರಟುಹೋಗಿ,
3. ಯೆಷಿಮೋನಿಗೆ ಎದುರಾದ ಮಾರ್ಗದಲ್ಲಿರುವ ಹಕೀಲಾ ಬೆಟ್ಟದಲ್ಲಿ ದಂಡಿಳಿಸಿದನು. ದಾವೀದನು ಸೌಲನು ತನ್ನ ಹಿಂದೆ ಮರುಭೂಮಿಗೆ ಬಂದದ್ದನ್ನು ನೋಡಿ, ಮರುಭೂಮಿಯಲ್ಲಿ ನಿಂತನು.
4. ದಾವೀದನು ಗೂಢಚಾರರನ್ನು ಕಳುಹಿಸಿ, ಸೌಲನು ಬಂದದ್ದು ನಿಶ್ಚಯವೆಂದು ತಿಳಿದುಕೊಂಡನು. [PE]
5.
6. [PS]ದಾವೀದನು ಎದ್ದು ಸೌಲನು ಇಳಿದುಕೊಂಡಿದ್ದ ಸ್ಥಳಕ್ಕೆ ಬಂದನು. ಸೌಲನೂ, ಅವನ ದಂಡಿನ ನಾಯಕನಾಗಿರುವ ನೇರನ ಮಗನಾದ ಅಬ್ನೇರನೂ ಮಲಗಿರುವ ಸ್ಥಳವನ್ನು ದಾವೀದನು ನೋಡಿದನು. ಸೌಲನು ಮಧ್ಯದಲ್ಲಿ ಮಲಗಿದ್ದನು. ಜನರು ಅವನ ಸುತ್ತಲೂ ದಂಡಾಗಿ ಇಳಿದುಕೊಂಡಿದ್ದರು. [PE]
7. [PS]ಆಗ ದಾವೀದನು ಹಿತ್ತಿಯನಾದ ಅಹೀಮೆಲೆಕನನ್ನು ಮತ್ತು ಚೆರೂಯಳ ಮಗನಾಗಿರುವ ಯೋವಾಬನ ಸಹೋದರ ಅಬೀಷೈಯನ್ನು ನೋಡಿ, “ನನ್ನ ಸಂಗಡ ಸೌಲನ ದಂಡಿನಲ್ಲಿ ಪ್ರವೇಶಿಸಲು ಬರುವವರು ಯಾರು?” ಎಂದು ಕೇಳಿದನು. [PE][PS]ಅದಕ್ಕೆ ಅಬೀಷೈಯನು, “ನಾನು ನಿನ್ನ ಸಂಗಡ ಬರುವೆನು,” ಎಂದನು. [PE]
8. [PS]ದಾವೀದನೂ, ಅಬೀಷೈಯನೂ ರಾತ್ರಿಯಲ್ಲಿ ಆ ಜನರ ಬಳಿಗೆ ಬಂದರು. ಸೌಲನು ಕಂದಕದೊಳಗೆ ಮಲಗಿ ನಿದ್ರೆ ಮಾಡುತ್ತಿದ್ದನು. ಅವನ ಈಟಿಯು ಅವನ ತಲೆದಿಂಬಿನ ಬಳಿಯಲ್ಲಿ ನೆಟ್ಟಿತ್ತು. ಆದರೆ ಅವನ ಸುತ್ತಲು ಅಬ್ನೇರನೂ, ಜನರೂ ಮಲಗಿದ್ದರು. [PE]
9. [PS]ಆಗ ಅಬೀಷೈಯನು ದಾವೀದನಿಗೆ, “ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾರೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಿಂದ ನೆಲಕ್ಕೆ ಹತ್ತುವಂತೆ ತಿವಿಯಲು ಅಪ್ಪಣೆಕೊಡಬೇಕು; ಎರಡು ಸಾರಿ ಹೊಡೆಯುವುದಿಲ್ಲ,” ಎಂದನು. [PE][PS]ಆದರೆ ದಾವೀದನು ಅಬೀಷೈಯನಿಗೆ, “ಅವನನ್ನು ಸಂಹರಿಸಬೇಡ. ಏಕೆಂದರೆ ಅಪರಾಧವಿಲ್ಲದೆ ಯೆಹೋವ ದೇವರ ಅಭಿಷಿಕ್ತನ ವಿರೋಧವಾಗಿ ಕೈ ಹಾಕುವವನು ಯಾರು?” ಎಂದನು.
10. ಇದಲ್ಲದೆ ಇನ್ನೂ ದಾವೀದನು, “ಯೆಹೋವ ದೇವರ ಜೀವದಾಣೆ, ಯೆಹೋವ ದೇವರೇ ಅವನನ್ನು ಹೊಡೆಯುವರು, ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು, ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.
11. ನಾನು ನನ್ನ ಕೈಯನ್ನು ಯೆಹೋವ ದೇವರ ಅಭಿಷಿಕ್ತನ ಮೇಲೆ ಹಾಕದ ಹಾಗೆ ಯೆಹೋವ ದೇವರು ನನಗೆ ತಡೆಯಲಿ. ಈಗ ಅವನ ತಲೆದಿಂಬಿನ ಬಳಿಯಲ್ಲಿರುವ ಈಟಿಯನ್ನೂ, ನೀರಿನ ತಂಬಿಗೆಯನ್ನೂ ತೆಗೆದುಕೋ ನಾವು ಹೋಗೋಣ,” ಎಂದನು. [PE]
12.
13. [PS]ದಾವೀದನು ಸೌಲನ ತಲೆದಿಂಬಿನ ಬಳಿಯಲ್ಲಿದ್ದ ಈಟಿಯನ್ನೂ, ನೀರಿನ ತಂಬಿಗೆಯನ್ನೂ ತೆಗೆದುಕೊಂಡನು. ಅವರು ಹೊರಟು ಹೋದರು. ಒಬ್ಬರಾದರೂ ನೋಡಲಿಲ್ಲ ಇಲ್ಲವೆ ತಿಳಿದುಕೊಳ್ಳಲಿಲ್ಲ, ಅರಿತಿದ್ದಿಲ್ಲ, ಯಾರೂ ಎಚ್ಚೆತ್ತಿರಲಿಲ್ಲ. ಏಕೆಂದರೆ ಯೆಹೋವ ದೇವರಿಂದ ಗಾಢನಿದ್ರೆಯು ಅವರ ಮೇಲೆ ಇಳಿದ ಕಾರಣ ಅವರೆಲ್ಲರು ಗಾಢ ನಿದ್ರೆಯಲ್ಲಿದ್ದರು. [PE][PS]ದಾವೀದನು ದಾಟಿ ಆ ಕಡೆಗೆ ಹೋಗಿ ತಮಗೂ, ಅವರಿಗೂ ಮಧ್ಯದಲ್ಲಿ ಬಹಳ ಸ್ಥಳ ಉಂಟಾಗುವ ಹಾಗೆ ದೂರವಾಗಿರುವ ಒಂದು ಬೆಟ್ಟದ ಕೊನೆಯಲ್ಲಿ ನಿಂತು,
14. ಸೈನಿಕರಿಗೂ ನೇರನ ಮಗನಾದ ಅಬ್ನೇರನಿಗೂ ಕೇಳಿಸುವಂತೆ ಕೂಗಿ, “ಅಬ್ನೇರನೇ, ನೀನು ಉತ್ತರ ಕೊಡುವುದಿಲ್ಲವೋ?” ಎಂದನು. [PE]
15. [PS]ಅದಕ್ಕೆ ಅಬ್ನೇರನು ಉತ್ತರವಾಗಿ, “ಅರಸನಿಗೆ ಎದುರಾಗಿ ಕೂಗುವ ನೀನು ಯಾರು?” ಎಂದನು. [PE][PS]ಆಗ ದಾವೀದನು ಅಬ್ನೇರನಿಗೆ, “ನೀನು ಪರಾಕ್ರಮಶಾಲಿಯಲ್ಲವೇ? ಇಸ್ರಾಯೇಲಿನಲ್ಲಿ ನಿನಗೆ ಸಮಾನನಾದವನು ಯಾರು? ಆದರೆ ನೀನು ನಿನ್ನ ಒಡೆಯನಾದ ಅರಸನನ್ನು ಕಾಯದೆ ಹೋದದ್ದೇನು? ಜನರಲ್ಲಿ ಒಬ್ಬನು ನಿನ್ನ ಒಡೆಯನಾದ ಅರಸನನ್ನು ಸಂಹರಿಸುವುದಕ್ಕೆ ಬಂದಿದ್ದನು.
16. ನೀನು ಮಾಡಿದ ಈ ಕಾರ್ಯ ಒಳ್ಳೆಯದಲ್ಲ. ಯೆಹೋವ ದೇವರ ಜೀವದಾಣೆ, ಯೆಹೋವ ದೇವರ ಅಭಿಷಿಕ್ತನಾದ ನಿಮ್ಮ ಒಡೆಯನನ್ನು ಕಾಯದೆ ಹೋದದ್ದರಿಂದ, ನೀವು ಮರಣಕ್ಕೆ ಯೋಗ್ಯರು. ಈಗ ಅರಸನ ತಲೆದಿಂಬಿನ ಬಳಿಯಲ್ಲಿದ್ದ ಅವನ ಈಟಿಯೂ, ನೀರಿನ ತಂಬಿಗೆಯೂ ಎಲ್ಲಿ ಇವೆಯೋ ನೋಡು,” ಎಂದನು. [PE]
17. [PS]ಆಗ ಸೌಲನು ದಾವೀದನ ಸ್ವರವನ್ನು ತಿಳಿದುಕೊಂಡು, “ನನ್ನ ಪುತ್ರನಾದ ದಾವೀದನೇ, ಇದು ನಿನ್ನ ಸ್ವರವಲ್ಲವೋ?” ಎಂದನು. [PE][PS]ದಾವೀದನು, “ಅರಸನಾದ ನನ್ನ ಒಡೆಯನೇ, ನನ್ನ ಧ್ವನಿಯೇ ಹೌದು,” ಎಂದನು.
18. “ನನ್ನ ಒಡೆಯನು ತನ್ನ ಸೇವಕನನ್ನು ಹೀಗೆ ಹಿಂದಟ್ಟುವುದೇನು? ನಾನೇನು ಮಾಡಿದೆನು?
19. ನನ್ನ ಕೈಯಲ್ಲಿ ಏನು ಕೆಟ್ಟತನವಿದೆ? ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಯೆಹೋವ ದೇವರು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ, ಕಾಣಿಕೆಯನ್ನು ಅಂಗೀಕರಿಸಲಿ. ಆದರೆ ಮಾನವರು ಇದನ್ನು ಮಾಡಿದರೆ, ಅವರು ಯೆಹೋವ ದೇವರ ಮುಂದೆ ಶಾಪಗ್ರಸ್ತರಾಗಿರಲಿ. ಏಕೆಂದರೆ, ‘ನೀನು ಹೋಗಿ? ಅನ್ಯದೇವರುಗಳನ್ನು ಸೇವಿಸು,’ ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಯೆಹೋವ ದೇವರ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.
20. ಆದ್ದರಿಂದ ಯೆಹೋವ ದೇವರ ಮುಖದ ಮುಂದೆ ನನ್ನ ರಕ್ತವು ನೆಲದ ಮೇಲೆ ಬೀಳದಿರಲಿ. ಒಬ್ಬನು ಬೆಟ್ಟಗಳಲ್ಲಿ ಕೌಜುಗವನ್ನು ಬೇಟೆಯಾಡುವಂತೆ, ಇಸ್ರಾಯೇಲಿನ ಅರಸನು ಒಂದು ನೊಣವನ್ನು ಹುಡುಕಲು ಹೊರಟನು,” ಎಂದನು. [PE]
21.
22. [PS]ಆಗ ಸೌಲನು, “ನಾನು ಪಾಪಮಾಡಿದೆನು. ನನ್ನ ಮಗನಾದ ದಾವೀದನೇ ತಿರುಗಿ ಬಾ. ಏಕೆಂದರೆ ನನ್ನ ಪ್ರಾಣ ಈ ಹೊತ್ತು ನಿನ್ನ ದೃಷ್ಟಿಗೆ ಅಮೂಲ್ಯವಾಗಿದ್ದರಿಂದ ನಾನು ಇನ್ನು ಮೇಲೆ ನಿನಗೆ ಕೇಡು ಮಾಡೆನು. ಇದುವರೆಗೆ ನಾನು ಮಾಡಿದ್ದು ಹುಚ್ಚುತನವೂ, ದೊಡ್ಡ ತಪ್ಪೂ ಆಗಿದೆ,” ಎಂದನು. [PE][PS]ದಾವೀದನು ಉತ್ತರವಾಗಿ, “ಅರಸನ ಈಟಿಯು ಇಲ್ಲಿ ಇದೆ. ಸೇವಕರಲ್ಲಿ ಒಬ್ಬನು ಈ ಕಡೆಗೆ ಬಂದು, ಅದನ್ನು ತೆಗೆದುಕೊಂಡು ಹೋಗಲಿ.
23. ಆದರೆ ಯೆಹೋವ ದೇವರು ಪ್ರತಿಯೊಬ್ಬನಿಗೆ ಅವನ ನೀತಿಗೂ, ಅವನ ನಂಬಿಗಸ್ತಿಕೆಗೂ ತಕ್ಕ ಫಲವನ್ನು ಕೊಡಲಿ. ಯೆಹೋವ ದೇವರು ಈ ಹೊತ್ತು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ಆದರೆ ನಾನು ಯೆಹೋವ ದೇವರ ಅಭಿಷಿಕ್ತನ ಮೇಲೆ ನನ್ನ ಕೈ ಚಾಚಲು ಮನಸ್ಸಿಲ್ಲದೆ ಇದ್ದೆನು.
24. ಈ ದಿನ ನಿನ್ನ ಪ್ರಾಣವು ನನ್ನ ದೃಷ್ಟಿಗೆ ಹೇಗೆ ದೊಡ್ಡದಾಗಿತ್ತೋ, ಹಾಗೆಯೇ ನನ್ನ ಪ್ರಾಣವು ಯೆಹೋವ ದೇವರ ದೃಷ್ಟಿಗೆ ದೊಡ್ಡದಾಗಿರಲಿ. ಅವರು ನನ್ನನ್ನು ಎಲ್ಲಾ ಸಂಕಟದಿಂದ ತಪ್ಪಿಸಿಬಿಡಲಿ,” ಎಂದನು. [PE]
25. [PS]ಆಗ ಸೌಲನು ದಾವೀದನಿಗೆ, “ನನ್ನ ಮಗನಾದ ದಾವೀದನೇ, ದೇವರು ನಿನ್ನನ್ನು ಆಶೀರ್ವದಿಸಲಿ. ನೀನು ಮಹತ್ಕಾರ್ಯಗಳನ್ನು ಮಾಡುವೆ, ಗೆದ್ದೇ ಗೆಲ್ಲುವೆ,” ಎಂದನು. [PE][PS]ಹಾಗೆಯೇ ದಾವೀದನು ತನ್ನ ಮಾರ್ಗವಾಗಿ ಹೋದನು. ಸೌಲನು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು. [PE]