ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಕೀರ್ತನೆಗಳು
1. ಓ ದೇವರೇ, ನೀನು ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ತಂದೆಗಳ ದಿವಸದಲ್ಲಿ ಮಾಡಿದ ಕಾರ್ಯವನ್ನು ಅವರು ನಮಗೆ ವಿವರಿಸಿದ್ದಾರೆ; ಅದನ್ನು ನಾವು ನಮ್ಮ ಕಿವಿಗಳಿಂದ ಕೇಳಿದ್ದೇವೆ.
2. ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ.
3. ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ.
4. ಓ ದೇವರೇ, ನೀನೇ ನನ್ನ ಅರಸನು; ಯಾಕೋಬ ನಿಗೆ ಬಿಡುಗಡೆಗಳನ್ನು ಆಜ್ಞಾಪಿಸು.
5. ನಿನ್ನಿಂದ ನಮ್ಮ ವೈರಿಗಳನ್ನು ದೊಬ್ಬುವೆವು; ನಿನ್ನ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು.
6. ನಾನು ನನ್ನ ಬಿಲ್ಲಿ ನಲ್ಲಿ ಭರವಸವಿಡುವದಿಲ್ಲ. ನನ್ನ ಕತ್ತಿಯು ನನ್ನನ್ನು ರಕ್ಷಿಸುವದಿಲ್ಲ.
7. ನೀನು ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿದಿ; ನಮ್ಮನ್ನು ಹಗೆಮಾಡಿದವರನ್ನು ನಾಚಿಕೆ ಪಡಿಸಿದಿ.
8. ನಾವು ದಿನವೆಲ್ಲಾ ದೇವರಲ್ಲಿ ಹೆಚ್ಚಳ ಪಡುವೆವು; ನಿನ್ನ ಹೆಸರನ್ನು ಯುಗಯುಗಕ್ಕೂ ಕೊಂಡಾ ಡುವೆವು. ಸೆಲಾ.
9. ಆದರೆ ನೀನು ನಮ್ಮನ್ನು ತಳ್ಳಿಬಿಟ್ಟು ನಮ್ಮನ್ನು ಅವಮಾನಪಡಿಸುತ್ತೀ; ನಮ್ಮ ಸೈನ್ಯಗಳ ಸಂಗಡ ನೀನು ಹೊರಟುಹೋಗುವದಿಲ್ಲ.
10. ವೈರಿಯ ಮುಂದೆ ನಾವು ಹಿಂದಿರುಗ ಮಾಡುತ್ತೀ; ನಮ್ಮ ಹಗೆಯವರು ತಮಗೋಸ್ಕರ ಕೊಳ್ಳೆ ಇಡುತ್ತಾರೆ.
11. ತಿನ್ನತಕ್ಕ ಕುರಿಗಳ ಹಾಗೆ ನಮ್ಮನ್ನು ಅವರಿಗೆ ಒಪ್ಪಿಸಿದ್ದೀ; ಅನ್ಯಜನಾಂಗ ಗಳಲ್ಲಿ ನಮ್ಮನ್ನು ಚದರಿಸಿದ್ದೀ.
12. ನಿನ್ನ ಜನರನ್ನು ಕ್ರಯವಿಲ್ಲದೆ ಮಾರಿಬಿಡುತ್ತೀ. ಅವರ ಬೆಲೆಯಿಂದ ನೀನು ನಿನ್ನ ಸಂಪತ್ತನ್ನು ಹೆಚ್ಚು ಮಾಡಲಿಲ್ಲ.
13. ನಮ್ಮ ನೆರೆಯವರಿಗೆ ನಮ್ಮನ್ನು ನಿಂದೆಗೂ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವಾಗಿಯೂ ನಮ್ಮನ್ನು ಇಡುತ್ತೀ.
14. ಅನ್ಯಜನಾಂಗಗಳಲ್ಲಿ ಗಾದೆಯಾಗಿಯೂ ಪ್ರಜೆಗಳಲ್ಲಿ ತಲೆಯಾಡಿಸುವಂತೆ ನಮ್ಮನ್ನು ಇಡುತ್ತೀ.
15. ನಿಂದಕನ ಮತ್ತು ದೂಷಕನ ಸ್ವರಕ್ಕೋಸ್ಕರವೂ ಶತ್ರುವಿನ ಮುಯ್ಯಿಗೆಮುಯ್ಯಿ ಕೊಡುವವನ ನಿಮಿ ತ್ತವೂ
16. ದಿನವೆಲ್ಲಾ ನನ್ನ ಗಲಿಬಿಲಿಯು ನನ್ನ ಮುಂದೆ ಇದೆ; ನನ್ನ ಮುಖದ ನಾಚಿಕೆಯು ನನ್ನನ್ನು ಮುಚ್ಚಿಯದೆ.
17. ಇದೆಲ್ಲಾ ನಮ್ಮ ಮೇಲೆ ಬಂತು; ಆದರೆ ನಿನ್ನನ್ನು ಮರೆತುಬಿಡಲಿಲ್ಲ; ನಿನ್ನ ಒಡಂಬಡಿಕೆಯಲ್ಲಿ ಸುಳ್ಳಾ ಡಲಿಲ್ಲ.
18. ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಹೆಜ್ಜೆಗಳು ನಿನ್ನ ಹಾದಿಯಿಂದ ತೊಲಗಲಿಲ್ಲ.
19. ಆದಾ ಗ್ಯೂ ಮಹಾಘಟಸರ್ಪಗಳ ಸ್ಥಳದಲ್ಲಿ ನಮ್ಮನ್ನು ಜಜ್ಜಿ ಮರಣದ ನೆರಳಿನಿಂದ ನಮ್ಮನ್ನು ಮುಚ್ಚಿಬಿಟ್ಟಿದ್ದೀ.
20. ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದರೆ
21. ದೇವರು ಅದನ್ನು ವಿಚಾರಿಸನೋ? ಆತನು ಹೃದಯದ ಮರ್ಮ ಗಳನ್ನು ತಿಳಿದಿದ್ದಾನೆ.
22. ಹೌದು, ನಿನ್ನ ನಿಮಿತ್ತ ದಿನ ವೆಲ್ಲಾ ಕೊಲ್ಲಲ್ಪಡುತ್ತೇವೆ; ಕೊಯ್ಗುರಿಗಳ ಹಾಗೆ ಎಣಿಸಲ್ಪಡುತ್ತೇವೆ.
23. ಓ ಕರ್ತನೇ, ಎಚ್ಚರವಾಗು, ಯಾಕೆ ನಿದ್ರೆ ಮಾಡುತ್ತೀ? ಎದ್ದೇಳು; ಸದಾಕಾಲಕ್ಕೂ ನಮ್ಮನ್ನು ತಳ್ಳಿಬಿಡಬೇಡ.
24. ಯಾಕೆ ನಿನ್ನ ಮುಖವನ್ನು ಮರೆ ಮಾಡಿ ನಮ್ಮ ಸಂಕಟವನ್ನೂ ಬಾಧೆಯನ್ನೂ ಮರೆತು ಬಿಡುತ್ತೀ.
25. ನಮ್ಮ ಪ್ರಾಣವು ಧೂಳಿನ ವರೆಗೂ ಬೊಗ್ಗಿಯದೆ; ನಮ್ಮ ಹೊಟ್ಟೆಯು ಭೂಮಿಗೆ ಅಂಟಿ ಕೊಂಡಿದೆ.
26. ನಮಗೆ ಸಹಾಯವಾಗಿ ಏಳು; ನಿನ್ನ ಕೃಪೆಯ ನಿಮಿತ್ತ ನಮ್ಮನ್ನು ವಿಮೋಚಿಸು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 44 / 150
1 ಓ ದೇವರೇ, ನೀನು ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ತಂದೆಗಳ ದಿವಸದಲ್ಲಿ ಮಾಡಿದ ಕಾರ್ಯವನ್ನು ಅವರು ನಮಗೆ ವಿವರಿಸಿದ್ದಾರೆ; ಅದನ್ನು ನಾವು ನಮ್ಮ ಕಿವಿಗಳಿಂದ ಕೇಳಿದ್ದೇವೆ. 2 ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ. 3 ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ. 4 ಓ ದೇವರೇ, ನೀನೇ ನನ್ನ ಅರಸನು; ಯಾಕೋಬ ನಿಗೆ ಬಿಡುಗಡೆಗಳನ್ನು ಆಜ್ಞಾಪಿಸು. 5 ನಿನ್ನಿಂದ ನಮ್ಮ ವೈರಿಗಳನ್ನು ದೊಬ್ಬುವೆವು; ನಿನ್ನ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು. 6 ನಾನು ನನ್ನ ಬಿಲ್ಲಿ ನಲ್ಲಿ ಭರವಸವಿಡುವದಿಲ್ಲ. ನನ್ನ ಕತ್ತಿಯು ನನ್ನನ್ನು ರಕ್ಷಿಸುವದಿಲ್ಲ. 7 ನೀನು ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿದಿ; ನಮ್ಮನ್ನು ಹಗೆಮಾಡಿದವರನ್ನು ನಾಚಿಕೆ ಪಡಿಸಿದಿ. 8 ನಾವು ದಿನವೆಲ್ಲಾ ದೇವರಲ್ಲಿ ಹೆಚ್ಚಳ ಪಡುವೆವು; ನಿನ್ನ ಹೆಸರನ್ನು ಯುಗಯುಗಕ್ಕೂ ಕೊಂಡಾ ಡುವೆವು. ಸೆಲಾ. 9 ಆದರೆ ನೀನು ನಮ್ಮನ್ನು ತಳ್ಳಿಬಿಟ್ಟು ನಮ್ಮನ್ನು ಅವಮಾನಪಡಿಸುತ್ತೀ; ನಮ್ಮ ಸೈನ್ಯಗಳ ಸಂಗಡ ನೀನು ಹೊರಟುಹೋಗುವದಿಲ್ಲ. 10 ವೈರಿಯ ಮುಂದೆ ನಾವು ಹಿಂದಿರುಗ ಮಾಡುತ್ತೀ; ನಮ್ಮ ಹಗೆಯವರು ತಮಗೋಸ್ಕರ ಕೊಳ್ಳೆ ಇಡುತ್ತಾರೆ. 11 ತಿನ್ನತಕ್ಕ ಕುರಿಗಳ ಹಾಗೆ ನಮ್ಮನ್ನು ಅವರಿಗೆ ಒಪ್ಪಿಸಿದ್ದೀ; ಅನ್ಯಜನಾಂಗ ಗಳಲ್ಲಿ ನಮ್ಮನ್ನು ಚದರಿಸಿದ್ದೀ. 12 ನಿನ್ನ ಜನರನ್ನು ಕ್ರಯವಿಲ್ಲದೆ ಮಾರಿಬಿಡುತ್ತೀ. ಅವರ ಬೆಲೆಯಿಂದ ನೀನು ನಿನ್ನ ಸಂಪತ್ತನ್ನು ಹೆಚ್ಚು ಮಾಡಲಿಲ್ಲ. 13 ನಮ್ಮ ನೆರೆಯವರಿಗೆ ನಮ್ಮನ್ನು ನಿಂದೆಗೂ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವಾಗಿಯೂ ನಮ್ಮನ್ನು ಇಡುತ್ತೀ. 14 ಅನ್ಯಜನಾಂಗಗಳಲ್ಲಿ ಗಾದೆಯಾಗಿಯೂ ಪ್ರಜೆಗಳಲ್ಲಿ ತಲೆಯಾಡಿಸುವಂತೆ ನಮ್ಮನ್ನು ಇಡುತ್ತೀ. 15 ನಿಂದಕನ ಮತ್ತು ದೂಷಕನ ಸ್ವರಕ್ಕೋಸ್ಕರವೂ ಶತ್ರುವಿನ ಮುಯ್ಯಿಗೆಮುಯ್ಯಿ ಕೊಡುವವನ ನಿಮಿ ತ್ತವೂ 16 ದಿನವೆಲ್ಲಾ ನನ್ನ ಗಲಿಬಿಲಿಯು ನನ್ನ ಮುಂದೆ ಇದೆ; ನನ್ನ ಮುಖದ ನಾಚಿಕೆಯು ನನ್ನನ್ನು ಮುಚ್ಚಿಯದೆ. 17 ಇದೆಲ್ಲಾ ನಮ್ಮ ಮೇಲೆ ಬಂತು; ಆದರೆ ನಿನ್ನನ್ನು ಮರೆತುಬಿಡಲಿಲ್ಲ; ನಿನ್ನ ಒಡಂಬಡಿಕೆಯಲ್ಲಿ ಸುಳ್ಳಾ ಡಲಿಲ್ಲ. 18 ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಹೆಜ್ಜೆಗಳು ನಿನ್ನ ಹಾದಿಯಿಂದ ತೊಲಗಲಿಲ್ಲ. 19 ಆದಾ ಗ್ಯೂ ಮಹಾಘಟಸರ್ಪಗಳ ಸ್ಥಳದಲ್ಲಿ ನಮ್ಮನ್ನು ಜಜ್ಜಿ ಮರಣದ ನೆರಳಿನಿಂದ ನಮ್ಮನ್ನು ಮುಚ್ಚಿಬಿಟ್ಟಿದ್ದೀ. 20 ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದರೆ 21 ದೇವರು ಅದನ್ನು ವಿಚಾರಿಸನೋ? ಆತನು ಹೃದಯದ ಮರ್ಮ ಗಳನ್ನು ತಿಳಿದಿದ್ದಾನೆ. 22 ಹೌದು, ನಿನ್ನ ನಿಮಿತ್ತ ದಿನ ವೆಲ್ಲಾ ಕೊಲ್ಲಲ್ಪಡುತ್ತೇವೆ; ಕೊಯ್ಗುರಿಗಳ ಹಾಗೆ ಎಣಿಸಲ್ಪಡುತ್ತೇವೆ. 23 ಓ ಕರ್ತನೇ, ಎಚ್ಚರವಾಗು, ಯಾಕೆ ನಿದ್ರೆ ಮಾಡುತ್ತೀ? ಎದ್ದೇಳು; ಸದಾಕಾಲಕ್ಕೂ ನಮ್ಮನ್ನು ತಳ್ಳಿಬಿಡಬೇಡ. 24 ಯಾಕೆ ನಿನ್ನ ಮುಖವನ್ನು ಮರೆ ಮಾಡಿ ನಮ್ಮ ಸಂಕಟವನ್ನೂ ಬಾಧೆಯನ್ನೂ ಮರೆತು ಬಿಡುತ್ತೀ.
25 ನಮ್ಮ ಪ್ರಾಣವು ಧೂಳಿನ ವರೆಗೂ ಬೊಗ್ಗಿಯದೆ; ನಮ್ಮ ಹೊಟ್ಟೆಯು ಭೂಮಿಗೆ ಅಂಟಿ ಕೊಂಡಿದೆ.
26 ನಮಗೆ ಸಹಾಯವಾಗಿ ಏಳು; ನಿನ್ನ ಕೃಪೆಯ ನಿಮಿತ್ತ ನಮ್ಮನ್ನು ವಿಮೋಚಿಸು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 44 / 150
×

Alert

×

Kannada Letters Keypad References