1. ಇನ್ನೂ ಹೆಚ್ಚಾಗಿ ಎಲೀಹು ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ--
2. ಓ ಜ್ಞಾನಿಗಳೇ, ನನ್ನ ನುಡಿಗಳನ್ನು ಕೇಳಿರಿ; ತಿಳಿದವರೇ ನನಗೆ ಕಿವಿಗೊಡಿರಿ.
3. ಆಹಾರವನ್ನು ಬಾಯಿ ರುಚಿನೋಡುವಂತೆ, ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ.
4. ನ್ಯಾಯವನ್ನು ನಾವು ಆದುಕೊಳ್ಳೋಣ; ಒಳ್ಳೇದೇನೆಂದು ನಮ್ಮೊಳಗೆ ನಾವೇ ತಿಳಿದುಕೊಳ್ಳೋಣ.
5. ಯೋಬನು--ನಾನು ನೀತಿವಂತನಾಗಿದ್ದೇನೆ, ದೇವರು ನನ್ನ ನ್ಯಾಯತೀ ರ್ಪನ್ನು ತೆಗೆದುಬಿಟ್ಟನು.
6. ನನ್ನ ನ್ಯಾಯಕ್ಕೆ ವಿರೋಧ ವಾಗಿ ನಾನು ಸುಳ್ಳಾಡಲೋ? ದ್ರೋಹವಿಲ್ಲದೆ ನನ್ನ ಗಾಯವು ಮಾಯದಂಥದ್ದೇ ಎಂದು ಹೇಳಿದ್ದನು.
7. ಯೋಬನಂತೆ ಹಾಸ್ಯವನ್ನು ನೀರಿನಂತೆ ಕುಡಿಯುವ ಪುರುಷನು ಯಾರು?
8. ಅವನು ಅಪರಾಧ ಮಾಡು ವವರ ಸಹವಾಸದಲ್ಲಿ ಹೋಗುತ್ತಾ, ದುಷ್ಟ ಜನರ ಸಂಗಡ ನಡೆದುಕೊಳ್ಳುತ್ತಾನೆ.
9. ಅವನು--ದೇವರ ಸಂಗಡ ಆನಂದಿಸುವದು ಮನುಷ್ಯನಿಗೆ ಉಪಯೋಗ ವಿಲ್ಲವೆಂದು ಹೇಳುತ್ತಾನೆ.
10. ಆದದರಿಂದ ತಿಳುವಳಿಕೆಯುಳ್ಳ ಜನರೇ, ನಾನು ಹೇಳುವದನ್ನು ಕೇಳಿರಿ, ದೇವರಿಗೆ ದುಷ್ಟತ್ವವೂ ಸರ್ವ ಶಕ್ತನಿಗೆ ಅನ್ಯಾಯವೂ ದೂರವಾಗಿರಲಿ.
11. ಮನುಷ್ಯನ ಕೆಲಸಕ್ಕೆ ಆತನು ಮುಯ್ಯಿಕೊಡುತ್ತಾನೆ, ಮನುಷ್ಯನ ಮಾರ್ಗದ ಪ್ರಕಾರ ಅವನು ಕಂಡುಕೊಳ್ಳುವಂತೆ ಮಾಡುತ್ತಾನೆ.
12. ಹೌದು, ನಿಶ್ಚಯವಾಗಿ ದೇವರು ದುಷ್ಟತ್ವವನ್ನು ಮಾಡುವದಿಲ್ಲ, ಇಲ್ಲವೆ ಸರ್ವಶಕ್ತನು ನ್ಯಾಯವನ್ನು ಡೊಂಕುಮಾಡುವದಿಲ್ಲ.
13. ಯಾವನು ಆತನಿಗೆ ಭೂಮಿಯ ಮೇಲೆ ಅಧಿಕಾರ ಕೊಟ್ಟಿದ್ದಾನೆ? ಇಲ್ಲವೆ ಆತನಿಗೆ ಸರ್ವಲೋಕವನ್ನು ಉಂಟುಮಾಡಿದ್ದಾನೆ?
14. ಆತನು ಮನುಷ್ಯನ ಮೇಲೆ ಮನಸ್ಸಿಟ್ಟು, ತನ್ನ ಆತ್ಮವನ್ನೂ ಶ್ವಾಸವನ್ನೂ ತನ್ನಲ್ಲಿ ಕೂಡಿಸಿದರೆ;
15. ಶರೀರಗಳೆಲ್ಲಾ ಒಟ್ಟಾಗಿ ನಾಶವಾಗು ವವು. ಮತ್ತು ಮನುಷ್ಯನು ದೂಳಿಗೆ ತಿರುಗುವನು.
16. ಗ್ರಹಿಕೆ ಇದ್ದರೆ ಇದನ್ನು ಕೇಳು; ನನ್ನ ನುಡಿಗಳ ಶಬ್ದಕ್ಕೆ ಕಿವಿಗೊಡು.
17. ನ್ಯಾಯವನ್ನು ಹಗೆಮಾಡುವ ವನು ಆಳುವನೋ? ಘನವಾದ ನೀತಿವಂತನನ್ನು ನೀನು ಖಂಡಿಸುತ್ತೀಯೋ?
18. ಅರಸನಿಗೆ ದುಷ್ಟನೆಂದೂ ಪ್ರಧಾನರಿಗೆ ಬಲಹೀನರೆಂದೂ ಹೇಳುವದುಂಟೋ?
19. ಆತನು ಪ್ರಧಾನರ ಮುಖದಾಕ್ಷಿಣ್ಯ ನೋಡು ವನೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ಲಕ್ಷಿ ಸುವನೋ? ಯಾಕಂದರೆ ಇಬ್ಬರೂ ಆತನ ಕೈ ಕೆಲಸ ವಾಗಿದ್ದಾರೆ.
20. ಅವರು ಕ್ಷಣಮಾತ್ರದಲ್ಲಿ ಸಾಯುತ್ತಾರೆ; ಮಧ್ಯ ರಾತ್ರಿಯಲ್ಲಿ ಜನರು ಕಳವಳಗೊಂಡು ಗತಿಸಿ ಹೋಗುತ್ತಾರೆ; ಪರಾಕ್ರಮಿಗಳು ಕೈ ಸೋಕದೆ ತೆಗೆಯಲ್ಪಡುತ್ತಾರೆ.
21. ಆತನ ಕಣ್ಣುಗಳು ಮನುಷ್ಯನ ಮಾರ್ಗಗಳ ಮೇಲೆ ಇರುತ್ತವೆ; ಅವನ ಹೋಗೋಣಗಳನ್ನೆಲ್ಲಾ ನೋಡುತ್ತಾನೆ.
22. ದುಷ್ಟತನ ಮಾಡುವವರು ಅಡಗಿ ಕೊಳ್ಳುವ ಹಾಗೆ ಕತ್ತಲೂ ಇಲ್ಲ, ಮರಣದ ನೆರಳೂ ಇಲ್ಲ.
23. ದೇವರ ಬಳಿಗೆ ನ್ಯಾಯಕ್ಕೆ ಬರುವ ಹಾಗೆ, ಮನುಷ್ಯನ ಮೇಲೆ ಆತನು ಹೆಚ್ಚು ಗಮನವಿಡುವದಿಲ್ಲ.
24. ಲೆಕ್ಕವಿಲ್ಲದ ಪರಾಕ್ರಮಿಗಳನ್ನು ಚೂರು ಚೂರು ಮಾಡಿ, ಮತ್ತೊಬ್ಬರನ್ನು ಅವರ ಸ್ಥಳದಲ್ಲಿ ನಿಲ್ಲಿಸು ತ್ತಾನೆ.
25. ಆದದರಿಂದ ಅವರು ನಾಶವಾಗುವಂತೆ ಆತನು ಅವರ ಕೆಲಸಗಳನ್ನು ತಿಳುಕೊಂಡು ರಾತ್ರಿಯಲ್ಲಿ ತಿರುಗಿಸಿ ಬಿಡುತ್ತಾನೆ.
26. ಅವರು ದುಷ್ಟರೆಂದು ಬೇರೆಯವರ ದೃಷ್ಟಿಯಲ್ಲಿ ಬಹಿರಂಗವಾಗಿ ಅವರನ್ನು ಹೊಡೆಯುತ್ತಾನೆ.
27. ಅವರು ಆತನಿಂದ ಹಿಂತಿರುಗಿ ಆತನ ಮಾರ್ಗಗಳನ್ನು ಲಕ್ಷಿಸಲಿಲ್ಲ.
28. ಹೀಗೆ ಬಡವರ ಕೂಗು ಆತನ ಬಳಿಗೆ ಬರುವಂತೆ ಮಾಡು ತ್ತಾರೆ, ಮತ್ತು ಆತನು ಬಾಧಿಸಲ್ಪಡುವವರ ಕೂಗನ್ನು ಕೇಳುತ್ತಾನೆ.
29. ಆತನು ಶಾಂತ ಮಾಡಿದರೆ ಯಾವನು ಕೇಡು ಮಾಡುವನು? ಆತನು ಮುಖವನ್ನು ಮರೆಮಾಡಿದರೆ ಆತನನ್ನು ದೃಷ್ಟಿಸುವವನು ಯಾರು? ಜನಾಂಗಕ್ಕೆ ವಿರೋಧವಾಗಿ ಮಾಡಿದರೂ ಸರಿ, ಮನುಷ್ಯ ಮಾತ್ರದ ವರಿಗಾದರೂ ಸರಿಯೇ.
30. ಹೀಗೆ ಜನರಿಗೆ ಉರು ಲಾಗದಂತೆ ಕಪಟಿಯು ಆಳುವದಿಲ್ಲ.
31. ನಿಶ್ಚಯವಾಗಿ ದೇವರಿಗೆ ಹೇಳತಕ್ಕದ್ದೇನಂದರೆ--ನಾನು ಶಿಕ್ಷೆಯನ್ನು ತಾಳಿದ್ದೇನೆ, ಇನ್ನು ಮೇಲೆ ಕೆಟ್ಟತನ ಮಾಡುವದಿಲ್ಲ.
32. ನಾನು ನೋಡಿದ್ದನ್ನು ನೀನು ನನಗೆ ಬೋಧಿಸು; ನಾನು ಅನ್ಯಾಯವನ್ನು ಮಾಡಿದ್ದರೆ, ಇನ್ನು ಮೇಲೆ ತಿರುಗಿ ಮಾಡೆನು.
33. ನಿನ್ನ ಮನಸ್ಸಿನ ಪ್ರಕಾರ ಇರ ಬೇಕೋ? ನೀನು ತಿರಸ್ಕರಿಸಿದರೂ ಆದು ಕೊಂಡರೂ ಆತನು ಪ್ರತಿಫಲ ಕೊಡುವನು ನಾನಲ್ಲ.
34. ತಿಳುವಳಿಕೆ ಯುಳ್ಳವರು ನನಗೆ ಹೇಳಲಿ, ಜ್ಞಾನಿಯು ನನ್ನ ಮಾತನ್ನು ಕೇಳಲಿ.
35. ಯೋಬನು ತಿಳುವಳಿಕೆಯಿಲ್ಲದೆ ಮಾತ ನಾಡಿದ್ದಾನೆ. ಅವನ ಮಾತುಗಳು ಬುದ್ಧಿಯುಳ್ಳವು ಗಳಲ್ಲ.
36. ದುಷ್ಟರಿಗಾಗಿ ಯೋಬನ ಪ್ರತ್ಯುತ್ತರ ಗಳಿಗೋಸ್ಕರ ಅವನು ಕಡೇ ವರೆಗೆ ಶೋಧಿಸಲ್ಪಡ ಬೇಕೆಂದು ನನ್ನ ಅಪೇಕ್ಷೆ.
37. ತನ್ನ ಪಾಪಕ್ಕೆ ದ್ರೋಹ ವನ್ನು ಕೂಡಿಸುತ್ತಾನೆ; ನಮ್ಮ ಮಧ್ಯದಲ್ಲಿ ಚಪ್ಪಾಳೆ ತಟ್ಟುತ್ತಾನೆ; ದೇವರಿಗೆ ವಿರೋಧವಾಗಿ ತನ್ನ ಮಾತು ಗಳನ್ನು ಅಧಿಕಮಾಡುತ್ತಾನೆ.