3. ನೀವು ವಾಸವಾಗಿದ್ದ ಐಗುಪ್ತದೇಶದ ಕೃತ್ಯಗಳಂತೆ ಮಾಡಬಾರದು; ನಾನು ನಿಮ್ಮನ್ನು ತರುವದಕ್ಕಿರುವ ಕಾನಾನ್ದೇಶದ ಕೃತ್ಯಗಳಂತೆ ನೀವು ಮಾಡಬಾರದು ಇಲ್ಲವೆ ನೀವು ಅವರ ನಿಯಮಗಳಿಗನುಸಾರವೂ ನಡೆ ಯಬಾರದು.
|
4. ನೀವು ನನ್ನ ನಿರ್ಣಯಗಳನ್ನು ಕೈಕೊಂಡು ಅವುಗಳಲ್ಲಿ ನಡೆಯುವ ಹಾಗೆ ನನ್ನ ಕಟ್ಟಳೆಗಳಂತೆ ನಡೆಯಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
|
5. ಆದದರಿಂದ ನೀವು ನನ್ನ ನಿಯಮಗಳನ್ನೂ ನಿರ್ಣಯಗಳನ್ನೂ ಕೈಕೊಳ್ಳಿರಿ. ಒಬ್ಬನು ಅವುಗಳನ್ನು ಮಾಡಿದರೆ ಅವನು ಅವುಗಳಲ್ಲಿ ಜೀವಿಸುವನು; ನಾನೇ ಕರ್ತನು.
|
6. ನಿಮ್ಮಲ್ಲಿ ಯಾವನಾದರೂ ತನ್ನ ಹತ್ತಿರ ಸಂಬಂಧಿಯ ಬೆತ್ತಲೆತನವನ್ನು ಬಯಲು ಮಾಡುವದಕ್ಕೆ ಅವಳ ಸವಿಾಪಕ್ಕೆ ಹೋಗಬಾರದು; ನಾನೇ ಕರ್ತನು.
|
7. ನಿನ್ನ ತಂದೆತಾಯಿಯ ಬೆತ್ತಲೆತನವನ್ನಾಗಲಿ ನೀನು ಕಾಣಿಸು ವಂತೆ ಮಾಡಬಾರದು; ಆಕೆಯು ನಿನ್ನ ತಾಯಿಯಾಗಿ ದ್ದಾಳೆ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
|
9. ನಿನ್ನ ಸಹೋದರಿಯ ಇಲ್ಲವೆ ನಿನ್ನ ತಂದೆಯ ಮಗಳ, ಅಂದರೆ ಅವಳು ಮನೆಯಲ್ಲಿ ಹುಟ್ಟಿದವಳಾಗಿರಲಿ ಹೊರಗೆ ಹುಟ್ಟಿದ ವಳಾಗಿರಲಿ ಅವರ ಬೆತ್ತಲೆತನವನ್ನು ಕಾಣುವಂತೆ ನೀನು ಮಾಡಬಾರದು.
|
11. ಅವನ ಬೆತ್ತಲೆತನವು ನಿನ್ನ ಸ್ವಂತ ಬೆತ್ತಲೆತನವಾಗಿದೆ. ನಿನ್ನ ತಂದೆಗೆ ಹುಟ್ಟಿ ದಂಥ ನಿನ್ನ ತಂದೆಯ ಮಗಳು ನಿನಗೆ ಸಹೋದರಿ ಯಾಗಿರುವದರಿಂದ ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
|
12. ನಿನ್ನ ತಂದೆಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಂದೆಗೆ ಹತ್ತಿರ ಸಂಬಂಧಿ ಯಾಗಿದ್ದಾಳೆ.
|
13. ನಿನ್ನ ತಾಯಿಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಾಯಿಗೆ ಹತ್ತಿರದ ಸಂಬಂಧಿಯಾಗಿ ದ್ದಾಳೆ.
|
14. ನೀನು ನಿನ್ನ ತಂದೆಯ ಸಹೋದರನ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು. ನೀನು ಅವನ ಹೆಂಡತಿಯ ಬಳಿಗೆ ಹೋಗಬಾರದು; ಅವಳು ನಿನಗೆ ದೊಡ್ಡ ತಾಯಿ (ಚಿಕ್ಕತಾಯಿ).
|
15. ನಿನ್ನ ಸೊಸೆಯ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು; ಅವಳು ನಿನ್ನ ಮಗನ ಹೆಂಡತಿ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
|
17. ನೀನು ಒಬ್ಬ ಸ್ತ್ರೀಯ ಮತ್ತು ಅವಳ ಮಗಳ ಬೆತ್ತಲೆ ತನವನ್ನು ಕಾಣುವಂತೆ ಮಾಡಬಾರದು ಇಲ್ಲವೆ ಅವಳ ಮಗನ ಮಗಳ ಅಥವಾ ಮಗಳ ಮಗಳ ಬೆತ್ತಲೆತನ ವನ್ನು ಕಾಣುವಂತೆ ಮಾಡಬಾರದು. ಅವರು ಅವಳ ಹತ್ತಿರದ ಸಂಬಂಧಿಯಾಗಿದ್ದಾರೆ. ಅದು ದುಷ್ಟತನ ವಾಗಿದೆ.
|
18. ಇಲ್ಲವೆ ಅವಳಿಗೆ ವೈರಿಯಾಗುವ ಹಾಗೆ ಅವಳ ಸಹೋದರಿಯನ್ನು ಹೆಂಡತಿಯಾಗಿ ತೆಗೆದು ಕೊಳ್ಳಬೇಡ. ಒಬ್ಬಳು ಜೀವದಿಂದ ಇರುವಾಗ ಮತ್ತೊ ಬ್ಬಳ ಬೆತ್ತಲೆತನವನ್ನು ಕಾಣುವಂತೆ ಮಾಡಬೇಡ.
|
19. ಇದು ಮಾತ್ರವಲ್ಲದೆ ಒಬ್ಬಳು ತನ್ನ ಅಶುದ್ಧತ್ವದ ನಿಮಿತ್ತವಾಗಿ ಪ್ರತ್ಯೇಕಿಸಲ್ಪಟ್ಟಾಗ ನೀನು ಆ ಸ್ತ್ರೀಯ ಬೆತ್ತಲೆತನವನ್ನು ನೋಡುವಂತೆ ಅವಳ ಹತ್ತಿರ ಹೋಗ ಬೇಡ.
|
21. ನಿನ್ನ ದೇವರ ಹೆಸರನ್ನು ಅಶುದ್ಧಪಡಿಸುವಂತೆ ನಿನ್ನ ಸಂತಾನವನ್ನು ಮೋಲೆಕನಿಗೆ ಬೆಂಕಿಯ ಮೂಲಕ ಅರ್ಪಿಸಬಾರದು; ನಾನೇ ಕರ್ತನು.
|
23. ಇದಲ್ಲದೆ ಪಶುವಿನೊಂದಿಗೆ ನೀನು ಮಲಗಿ ನಿನ್ನನ್ನು ಹೊಲೆಮಾಡಿಕೊಳ್ಳಬಾರದು; ಯಾವ ಸ್ತ್ರೀಯೂ ಅದರಿಂದ ಸಂಗಮಿಸಿಕೊಳ್ಳುವದಕ್ಕೆ ಪಶುವಿನ ಮುಂದೆ ನಿಲ್ಲಬಾರದು; ಅದು ಗಲಿಬಿಲಿಯಾದದ್ದು.
|
24. ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಹೊಲೆ ಮಾಡಿಕೊಳ್ಳಬಾರದು. ನಿಮ್ಮ ಮುಂದೆ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಲ್ಲಿ ಹೊಲೆಯಾಗಿವೆ.
|
25. ದೇಶವೂ ಹೊಲೆಯಾಗಿದೆ. ಆದದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು, ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವದು.
|
26. ಆದದರಿಂದ ನೀವು ನನ್ನ ನಿಯಮಗಳನ್ನು ನಿರ್ಣಯಗಳನ್ನು ಕೈಕೊಳ್ಳಬೇಕು. ನಿಮ್ಮ ದೇಶದವರಲ್ಲಿ ಯಾವನೇ ಆಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನಾದರೂ ಮಾಡ ಬಾರದು.
|
29. ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವ ದನ್ನಾದರೂ ಮಾಡಿದರೆ ಅವುಗಳನ್ನು ಮಾಡುವ ಮನುಷ್ಯರನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
|
30. ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
|