2. ನನ್ನಲ್ಲಿ ಫಲಫಲಿಸದ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚಾಗಿ ಫಲಕೊಡುವ ಹಾಗೆ ಅದನ್ನು ಶುದ್ಧಿ ಮಾಡುತ್ತಾನೆ.
|
4. ನನ್ನಲ್ಲಿ ನೆಲೆಗೊಂಡಿರ್ರಿ, ನಾನು ನಿಮ್ಮಲ್ಲಿ ನೆಲೆ ಗೊಂಡಿರುವೆನು. ಕೊಂಬೆಯು ದ್ರಾಕ್ಷೇಯಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವೂ ನನ್ನಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.
|
5. ನಾನೇ ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ ಅವನೇ ಬಹಳ ಫಲವನ್ನು ಕೊಡುವನು; ಯಾಕಂದರೆ ನಾನಿಲ್ಲದೆ ನೀವು ಏನೂ ಮಾಡಲಾರಿರಿ.
|
6. ಒಬ್ಬನು ನನ್ನಲ್ಲಿ ನೆಲೆಗೊಂಡಿರದಿದ್ದರೆ ಅವನು ಕೊಂಬೆಯಂತೆ ಬಿಸಾಡಲ್ಪಟ್ಟು ಒಣಗಿ ಹೋಗುವದರಿಂದ ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು; ಅವು ಸುಡಲ್ಪಡುವವು.
|
7. ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆ ಯುವದು.
|
9. ತಂದೆಯು ನನ್ನನ್ನು ಪ್ರೀತಿಸಿದ ಹಾಗೆಯೇ ನಾನು ನಿಮ್ಮನ್ನು ಪ್ರೀತಿಸಿದ್ದೇನೆ; ನೀವು ನನ್ನ ಪ್ರೀತಿಯಲ್ಲಿ ನೆಲೆಯಾಗಿರ್ರಿ.
|
10. ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ಆತನ ಪ್ರೀತಿಯಲ್ಲಿ ನೆಲೆಯಾಗಿರು ವಂತೆಯೇ ನೀವು ನನ್ನ ಆಜ್ಞೆಗಳನ್ನು ಕೈಕೊಂಡರೆ ನನ್ನ ಪ್ರೀತಿಯಲ್ಲಿ ನೆಲೆಯಾಗಿರುವಿರಿ.
|
11. ನನ್ನ ಆನಂದವು ನಿಮ್ಮಲ್ಲಿರುವ ಹಾಗೆಯೂ ನಿಮ್ಮ ಆನಂದವು ಸಂಪೂರ್ಣವಾಗುವ ಹಾಗೆಯೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ.
|
15. ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವದಿಲ್ಲ; ಯಾಕಂದರೆ ತನ್ನ ದಣಿಯು ಮಾಡುವಂಥದ್ದು ಆಳಿಗೆ ತಿಳಿಯುವದಿಲ್ಲ; ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ; ಯಾಕಂದರೆ ನನ್ನ ತಂದೆಯಿಂದ ಕೇಳಿದವುಗಳನ್ನೆಲ್ಲಾ ನಾನು ನಿಮಗೆ ತಿಳಿಯಪಡಿಸಿದ್ದೇನೆ.
|
16. ನೀವು ನನ್ನನ್ನು ಆರಿಸಿಕೊಂಡಿಲ್ಲ; ಆದರೆ ನಾನು ನಿಮ್ಮನ್ನು ಆರಿಸಿ ಕೊಂಡು, ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ನೆಲೆಗೊಂಡಿರುವಂತೆಯೂ ನಿಮ್ಮನ್ನು ನೇಮಿಸಿದ್ದೇನೆ. ಆದಕಾರಣ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಆತನು ಅದನ್ನು ನಿಮಗೆ ಕೊಡುವನು.
|
19. ನೀವು ಲೋಕದವರಾಗಿದ್ದರೆ ಲೋಕವು ತನ್ನವರನ್ನು ಪ್ರೀತಿಸುತ್ತಿತ್ತು; ಆದರೆ ನೀವು ಲೋಕದವರಲ್ಲದೆ ಇರುವದರಿಂದಲೂ ನಾನು ಲೋಕದೊಳಗಿಂದ ನಿಮ್ಮನ್ನು ಆರಿಸಿಕೊಂಡದ್ದರಿಂದಲೂ ಲೋಕವು ನಿಮ್ಮನ್ನು ದ್ವೇಷಮಾಡುತ್ತದೆ.
|
20. ತನ್ನ ದಣಿಗಿಂತ ಆಳು ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ನನ್ನನ್ನು ಹಿಂಸಿಸಿದರೆ ನಿಮ್ಮನ್ನು ಸಹ ಹಿಂಸಿಸುವರು. ಅವರು ನನ್ನ ಮಾತನ್ನು ಕೈ ಕೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಕೊಳ್ಳುವರು.
|
21. ಆದರೆ ಅವರು ನನ್ನನ್ನು ಕಳುಹಿಸಿದಾತನನ್ನು ತಿಳಿಯದಿರುವದರಿಂದ ನನ್ನ ಹೆಸ ರಿನ ನಿಮಿತ್ತ ಇವುಗಳನ್ನೆಲ್ಲಾ ನಿಮಗೆ ಮಾಡುವರು.
|
24. ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರೊಳಗೆ ಮಾಡದಿದ್ದರೆ ಅವರಿಗೆ ಪಾಪವು ಇರು ತ್ತಿರಲಿಲ್ಲ; ಆದರೆ ಈಗ ಅವರು ನನ್ನನ್ನು ಮತ್ತು ನನ್ನ ತಂದೆಯನ್ನು ನೋಡಿ ದ್ವೇಷಮಾಡಿದ್ದಾರೆ.
|
25. ಆದರೆ--ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷ ಮಾಡಿದರೆಂದು ಅವರ ನ್ಯಾಯಪ್ರಮಾಣದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.
|
26. ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಆದರಿಕನು ಅಂದರೆ ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ ಆತನು ನನ್ನ ವಿಷಯವಾಗಿ ಸಾಕ್ಷಿ ಕೊಡುವನು.ನೀವು ಮೊದಲಿನಿಂದಲೂ ನನ್ನ ಸಂಗಡ ಇದ್ದದರಿಂದ ನೀವು ಸಹ ಸಾಕ್ಷಿ ಕೊಡುವಿರಿ.
|