1. ಇದಲ್ಲದೆ ಅವನು ತಾಮ್ರದ ಬಲಿಪೀಠ ವನ್ನು ಮಾಡಿದನು. ಅದರ ಉದ್ದ ಇಪ್ಪತ್ತು ಮೊಳ, ಅಗಲ ಇಪ್ಪತ್ತು ಮೊಳ, ಎತ್ತರ ಹತ್ತು ಮೊಳ.
|
2. ಅವನು ಎರಕದ ಸಮುದ್ರವನ್ನು ಮಾಡಿಸಿದನು; ಅದು ಸುತ್ತಲಾಗಿ ಈ ಅಂಚಿನಿಂದ ಆ ಅಂಚಿಗೆ ಹತ್ತು ಮೊಳ, ಅದರ ಎತ್ತರ ಐದು ಮೊಳ, ಸುತ್ತಳತೆ ಮೂವತ್ತು ಮೊಳ ನೂಲಳತೆಯಾಗಿತ್ತು.
|
3. ಅದರ ಕೆಳಭಾಗದಲ್ಲಿ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೊಳಕ್ಕೆ ಹತ್ತಾಗಿ ಆ ಸಮುದ್ರದ ಸುತ್ತಲೂ ಇದ್ದವು. ಇದು ಎರಕ ಹೊಯ್ಯಲ್ಪಡುವಾಗ ಎತ್ತುಗಳ ರೂಪ ಎರಡು ಸಾಲಾಗಿ ಎರಕ ಹೊಯ್ಯ ಲ್ಪಟ್ಟಿದ್ದವು.
|
4. ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ ಮೂರು ಪಶ್ಚಿಮಕ್ಕೂ ಮೂರು ದಕ್ಷಿಣಕ್ಕೂ ಮೂರು ಪೂರ್ವಕ್ಕೂ ನೋಡು ತ್ತಿದ್ದವು. ಆ ಸಮುದ್ರವು ಅವುಗಳ ಮೇಲೆ ಇತ್ತು,
|
5. ಅವುಗಳ ಹಿಂಭಾಗಗಳೆಲ್ಲಾ ಒಳಗಾಗಿದ್ದವು. ಅದರ ದಪ್ಪವು ನಾಲ್ಕು ಬೆರಳಷ್ಟಾಗಿಯೂ ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ ತಾವರೆ ಪುಷ್ಪದ ಹಾಗೆಯೂ ಇತ್ತು; ಅದು ಮೂರು ಸಾವಿರ ಕೊಳಗ ಹಿಡಿಯುವದಾಗಿತ್ತು.
|
6. ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ ಅವುಗಳಲ್ಲಿ ದಹನಬಲಿಗೋಸ್ಕರ ಅರ್ಪಿಸು ವವುಗಳನ್ನು ತೊಳೆಯುವ ನಿಮಿತ್ತವಾಗಿ ಬಲಪಾರ್ಶ್ವ ದಲ್ಲಿ ಐದನ್ನೂ ಎಡಪಾರ್ಶ್ವದಲ್ಲಿ ಐದನ್ನೂ ಇರಿಸಿ ದನು. ಆದರೆ ಆ ಸಮುದ್ರವು ಯಾಜಕರಿಗೋಸ್ಕರ ತೊಳೆಯುವದಕ್ಕೆ ಇತ್ತು.
|
7. ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು.
|
8. ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
|
10. ಸಮುದ್ರವನ್ನು ತಾಮ್ರದಿಂದ ಹೊದಿಸಿ ದನು. ಸಮುದ್ರವನ್ನು ಪೂರ್ವ ಭಾಗದ ಬಲ ಪಾರ್ಶ್ವ ದಲ್ಲಿ ದಕ್ಷಿಣಕ್ಕೆ ಎದುರಾಗಿ ಇರಿಸಿದನು.
|
11. ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೀಗೆಯೇ ಹೂರಾ ಮನು ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊ ಮೋನನಿಗೆ ಮಾಡಬೇಕಾದ ಕಾರ್ಯವನ್ನು ಮಾಡಿ ತೀರಿಸಿದನು.
|
12. ಎರಡು ಸ್ತಂಭಗಳನ್ನೂ ಎರಡು ಸ್ತಂಭ ಗಳ ಮೇಲಿರುವ ಬೋದಿಗೆಗಳನ್ನೂ ಬೋದಿಗೆಗಳ ಮೇಲೆ ಮುಚ್ಚುವ ಎರಡು ಜಾಲರು ಹಣಿತೆಗಳನ್ನೂ
|
13. ಕಂಬಗಳ ಮೇಲಿರುವ ಎರಡು ಬೋದಿಗೆಗಳನ್ನೂ ಮುಚ್ಚತಕ್ಕದ್ದಾದ ಒಂದೊಂದು ಜಾಲರು ಹೆಣಿತಕ್ಕೆ ಎರಡು ಸಾಲು ದಾಳಿಂಬರ ಕಾಯಿಗಳನ್ನೂ ಜಾಲರು ಹಣಿತೆಗಳಿಗೆ ನಾನೂರು ದಾಳಿಂಬರ ಕಾಯಿಗಳನ್ನೂ ಮಾಡಿದನು.
|
16. ಅವುಗಳ ಎಲ್ಲಾ ಸಾಮಾನುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯಾದ ಹೂರಾಮನು ಹೊಳೆಯುವ ತಾಮ್ರದಿಂದ ಕರ್ತನ ಆಲಯಕ್ಕೋಸ್ಕರ ಮಾಡಿದನು.
|
17. ಯೊರ್ದನಿನ ತಗ್ಗಿ ನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ನಡುವೆ ಇರುವ ಜೇಡಿಮಣ್ಣಿನ ಸ್ಥಳದಲ್ಲಿ ಅರಸನು ಅವುಗಳನ್ನು ಎರಕ ಹೊಯಿಸಿದನು.
|
19. ಹೀಗೆಯೇ ಸೊಲೊಮೋನನು ಕರ್ತನ ಆಲಯದ ಎಲ್ಲಾ ಸಾಮಾನುಗಳನ್ನೂ ಬಂಗಾರದ ಧೂಪಪೀಠ ವನ್ನೂ ಸಮ್ಮುಖದ ರೊಟ್ಟಿಗಳನ್ನು ಇಡುವ ಮೇಜು ಗಳನ್ನೂ
|
21. ಅವುಗಳ ದೀಪಗಳನ್ನೂ ಹೂವು ಗಳನ್ನೂ ದೀಪಗಳ ಚಿಮಟೆಗಳನ್ನೂ ಬಂಗಾರದಿಂದ ಅಂದರೆ ನಿರ್ಮಲವಾದ ಬಂಗಾರದಿಂದ ಮಾಡಿಸಿ ದನು; ಕತ್ತರಿಗಳನ್ನೂ ಬೋಗುಣಿಗಳನ್ನೂ ಸೌಟು ಗಳನ್ನೂ ಅಗ್ನಿಪಾತ್ರೆಗಳನ್ನೂ ಶುದ್ಧ ಬಂಗಾರದಿಂದ ಮಾಡಿಸಿದನು.ಇದಲ್ಲದೆ ಆಲಯ ಪ್ರವೇಶದ ಸ್ಥಳವೂ ಅತಿಪರಿಶುದ್ಧ ಸ್ಥಾನಕ್ಕೋಸ್ಕರವಾಗಿರುವ ಅದರ ಅಂತರಂಗದ ಬಾಗಲುಗಳೂ ಮಂದಿರದ ಮನೇ ಬಾಗಲುಗಳೂ ಬಂಗಾರದವುಗಳಾಗಿದ್ದವು.
|
22. ಇದಲ್ಲದೆ ಆಲಯ ಪ್ರವೇಶದ ಸ್ಥಳವೂ ಅತಿಪರಿಶುದ್ಧ ಸ್ಥಾನಕ್ಕೋಸ್ಕರವಾಗಿರುವ ಅದರ ಅಂತರಂಗದ ಬಾಗಲುಗಳೂ ಮಂದಿರದ ಮನೇ ಬಾಗಲುಗಳೂ ಬಂಗಾರದವುಗಳಾಗಿದ್ದವು.
|