1. ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ.
|
2. ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.
|
3. ನಾನೇ ನಿನ್ನ ಕರ್ತನೂ ದೇವರೂ ಇಸ್ರಾಯೇಲಿನ ಪರಿಶುದ್ಧನೂ ರಕ್ಷಕನೂ ಆಗಿದ್ದೇನೆ. ಐಗುಪ್ತವನ್ನು ನಿನ್ನ ವಿಮೋಚನೆಗೂ ಇಥಿಯೋಪ್ಯ ಮತ್ತು ಸೆಬಾ ಸೀಮೆಗಳನ್ನು ನಿನಗೊಸ್ಕರ ಕೊಟ್ಟಿದ್ದೇನೆ.
|
4. ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ (ಪ್ರತಿಯಾಗಿ) ಜನಾಂಗಗಳನ್ನೂ ಕೊಡುವೆನು.
|
5. ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ; ನಿನ್ನ ಸಂತತಿಯವರನ್ನು ಮೂಡಣದಿಂದ ತರುವೆನು; ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು.
|
6. ನಾನು--ಒಪ್ಪಿಸಿಬಿಡು ಎಂದು ಉತ್ತರಕ್ಕೆ ತಡೆಯಬೇಡ ಎಂದು ದಕ್ಷಿಣಕ್ಕೆ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನು ಭೂಮಿಯ ಅಂತ್ಯದಿಂದ ನನ್ನ ಕುಮಾರ್ತೆಯರನ್ನು
|
7. ನನ್ನ ಹೆಸರಿ ನಿಂದ ಕರೆಯಲ್ಪಟ್ಟ ಪ್ರತಿಯೊಬ್ಬನನ್ನೂ ಬರಮಾಡು ವೆನು; ಅವನನ್ನು ನನ್ನ ಮಹಿಮೆಗಾಗಿ ಸೃಷ್ಟಿಸಿದ್ದೇನೆ, ನಾನು ಅವನನ್ನು ನಿರ್ಮಿಸಿದ್ದೇನೆ: ಹೌದು, ನಾನು ಅವನನ್ನು ಉಂಟುಮಾಡಿದ್ದೇನೆ.
|
9. ಎಲ್ಲಾ ಜನಾಂಗಗಳು ಒಟ್ಟಿಗೆ ಕೂಡಿಕೊಳ್ಳಲಿ, ಎಲ್ಲಾ ಜನರೂ ಸೇರಿಕೊಳ್ಳಲಿ. ಅವರಲ್ಲಿ ಇದನ್ನು ಪ್ರಕಟಿಸುವವರೂ ಹಿಂದಿನವು ಗಳನ್ನು ನಮಗೆ ತೋರಿಸುವವರು ಯಾರು? ನಾವು ನೀತಿವಂತರೆಂದು ಸ್ಥಾಪಿಸಿಕೊಳ್ಳುವದಕ್ಕೆ ಸಾಕ್ಷಿಗಳನ್ನು ಕರತರಲಿ; ಆ ಸಾಕ್ಷಿಗಳು ಇದನ್ನು ಕೇಳಿ ನಿಜವೆಂದು ಹೇಳಲಿ.
|
10. ಕರ್ತನು ಹೇಳುವದೇನಂದರೆ--ನೀವು ನನ್ನ ಸಾಕ್ಷಿಗಳಾಗಿದ್ದೀರಿ; ನಾನೇ ಆತನೆಂದು ನೀವು ತಿಳಿದು ನಂಬಿ ಗ್ರಹಿಸುವ ಹಾಗೆಯೇ ನಾನು ನಿನ್ನನ್ನು ಸೇವಕನನ್ನಾಗಿ ಆರಿಸಿಕೊಂಡಿದ್ದೇನೆ. ನನಗಿಂತ ಮುಂಚೆ ಯೂ ನನ್ನ ನಂತರದಲ್ಲಿಯೂ ಯಾವ ದೇವರೂ ಇರಲಿಲ್ಲ.
|
12. ನಿಮ್ಮಲ್ಲಿ ಅನ್ಯದೇವರು ಇಲ್ಲದಿರುವಾಗಲೇ ನಾನೇ ರಕ್ಷಣೆ ಯನ್ನು ಪ್ರಕಟಿಸಿ ತೋರಿಸಿದ್ದೇನೆ; ಆದದರಿಂದ ನೀವು ನನ್ನ ಸಾಕ್ಷಿಗಳು; ನಾನೇ ದೇವರೆಂದು ಕರ್ತನು ನುಡಿಯು ತ್ತಾನೆ.
|
14. ನಿಮ್ಮ ವಿಮೋಚಕನೂ ಇಸ್ರಾಯೇಲಿನ ಪರಿ ಶುದ್ಧನೂ ಆಗಿರುವ ಕರ್ತನು ಇಂತೆನ್ನುತ್ತಾನೆ--ನಾನು ನಿಮಗೋಸ್ಕರ ಬಾಬೆಲಿಗೆ ಕಳುಹಿಸಿ ಅವರ ಘನ ವಂತರನ್ನೆಲ್ಲಾ ಮತ್ತು ಹಡಗುಗಳಲ್ಲಿ ಆರ್ಭಟಿಸುವ ಕಸ್ದೀಯರನ್ನು ತಗ್ಗಿಸಿದೆನು.
|
17. ಯಾವಾತನು ರಥ ಕುದುರೆ ಗಳ ದಂಡನ್ನು ಪರಾಕ್ರಮರಾದವರನ್ನು ಹೊರಡಿಸಿ ಅವು ಒಟ್ಟಿಗೆ ಬಿದ್ದು ಏಳಲಾರದಂತೆಯೂ ದೀಪದೋ ಪಾದಿಯಲ್ಲಿ ನಂದಿ ಆರಿಹೋಗುವಂತೆಯೂ ಮಾಡಿ ದನೋ ಆ ಕರ್ತನು ಇಂತೆನ್ನುತ್ತಾನೆ--
|
19. ಇಗೋ, ನಾನು ಒಂದು ಹೊಸ ಕಾರ್ಯವನ್ನು ಮಾಡುವೆನು, ಅದು ಈಗಲೇ ಮೊಳೆತು ಬರುವದು; ನಿಮಗೆ ಅದು ತಿಳಿದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಮರುಭೂಮಿಯಲ್ಲಿ ನದಿಗಳನ್ನು ಸಹ ಉಂಟುಮಾಡು ವೆನು.
|
20. ಅಡವಿಯ ಮೃಗಗಳು, ಘಟಸರ್ಪಗಳು ಮತ್ತು ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅಡವಿಯ ನೀರನ್ನು ಮರುಭೂಮಿಯಲ್ಲಿ ನದಿಗಳನ್ನು ನಾನು ಆರಿ ಸಿಕೊಂಡ ನನ್ನ ಪ್ರಜೆಗಳಿಗೆ ಕುಡಿಯುವದಕ್ಕೆ ಕೊಟ್ಟೆನು.
|
23. ನಿನ್ನ ದಹನಬಲಿಯ ಎಳೇ ಕರುಗಳನ್ನು ನನಗೆ ತರಲಿಲ್ಲ ಇಲ್ಲವೆ ನಿನ್ನ ಯಜ್ಞ ಗಳಿಂದ ನನ್ನನ್ನು ಸನ್ಮಾನಿಸಲಿಲ್ಲ; ನೀನು ಕಾಣಿಕೆಯನ್ನು ಅರ್ಪಿಸದೆ ಇದ್ದದ್ದಕ್ಕೆ ನಾನು ಕಾರಣವಲ್ಲ, ಇಲ್ಲವೆ ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.
|
24. ನೀನು ನನಗೋಸ್ಕರ ಹಣದಿಂದ ಗಂಧಕಾಷ್ಟವನ್ನು ಕೊಂಡು ಕೊಳ್ಳಲಿಲ್ಲ ಇಲ್ಲವೆ ನಿನ್ನ ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ತೊಂದರೆಗೊಳಿಸಿದ್ದೀ, ಅಕ್ರಮಗಳಿಂದ ನನ್ನನು ಬೇಸರಗೊಳಿಸಿದ್ದೀ.
|
27. ನಿನ್ನ ಮೂಲಪಿತೃ ಪಾಪ ಮಾಡಿದ್ದಾನೆ, ಬೋಧಕರು ನನಗೆ ವಿರೋಧವಾಗಿ ದ್ರೋಹಮಾಡಿದ್ದಾರೆ.ಆದಕಾರಣ ಪರಿಶುದ್ಧ ಸ್ಥಾನದ ಪ್ರಧಾನರನ್ನು ಅಪವಿತ್ರಮಾಡಿ, ಯಾಕೋ ಬನ್ನು ಶಾಪಕ್ಕೂ, ಇಸ್ರಾಯೇಲನ್ನು ದೂಷಣೆಗಳಿಗೂ ಒಪ್ಪಿಸಿಬಿಟ್ಟಿದ್ದೇನೆ.
|
28. ಆದಕಾರಣ ಪರಿಶುದ್ಧ ಸ್ಥಾನದ ಪ್ರಧಾನರನ್ನು ಅಪವಿತ್ರಮಾಡಿ, ಯಾಕೋ ಬನ್ನು ಶಾಪಕ್ಕೂ, ಇಸ್ರಾಯೇಲನ್ನು ದೂಷಣೆಗಳಿಗೂ ಒಪ್ಪಿಸಿಬಿಟ್ಟಿದ್ದೇನೆ.
|