ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಲೂಕನು
1. ಇದಾದ ಮೇಲೆ ಆತನು ಗೆನೇಜರೆತ್ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ ಜನರು ದೇವರ ವಾಕ್ಯವನ್ನು ಕೇಳುವದಕ್ಕಾಗಿ ಆತನ ಮೇಲೆ ನೂಕಾಡುತ್ತಿದ್ದರು.
2. ಆಗ ಆತನು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡನು; ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.
3. ಆಗ ಅವುಗಳಲ್ಲಿ ಸೀಮೋನನದಾಗಿದ್ದ ದೋಣಿಯನ್ನು ಆತನು ಹತ್ತಿದ ಮೇಲೆ ಅದನ್ನು ಭೂಮಿಯಿಂದ ಸ್ವಲ್ಪ ನೂಕ ಬೇಕೆಂದು ಅವನನ್ನು ಕೇಳಿಕೊಂಡನು. ಆತನು ಕೂತುಕೊಂಡು ದೋಣಿಯೊಳಗಿಂದ ಜನರಿಗೆ ಬೋಧಿಸಿದನು.
4. ಆತನು ಮಾತನಾಡುವದನ್ನು ಮುಗಿಸಿದ ಮೇಲೆ ಸೀಮೋನನಿಗೆ--(ದೋಣಿಯನ್ನು) ಆಳವಾದ ಸ್ಥಳಕ್ಕೆ ನಡಿಸಿ ವಿಾನು ಹಿಡಿಯುವದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ ಎಂದು ಹೇಳಿದನು.
5. ಅದಕ್ಕೆ ಪ್ರತ್ಯುತ್ತರವಾಗಿ ಸೀಮೋನನು ಆತನಿಗೆ--ಗುರುವೇ, ನಾವು ರಾತ್ರಿ ಯೆಲ್ಲಾ ಪ್ರಯಾಸಪಟ್ಟೆವು. ಆದರೆ ಏನೂ ಸಿಕ್ಕಲಿಲ್ಲ; ಆದಾಗ್ಯೂ ನಿನ್ನ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ ಎಂದು ಹೇಳಿದನು.
6. ಅವರು ಅದರಂತೆ ಮಾಡಿ ವಿಾನಿನ ದೊಡ್ಡ ರಾಶಿಯನ್ನು ಹಿಡಿದರು. ಅವರ ಬಲೆಯು ಹರಿಯಿತು.
7. ಆಗ ಬೇರೆ ದೋಣಿ ಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆ ಮಾಡಿದರು; ಮತ್ತು ಅವರು ಬಂದು ಎರಡು ದೋಣಿಗಳನ್ನು ತುಂಬಿ ಸಲಾಗಿ ಅವು ಮುಳುಗಲಾರಂಭಿಸಿದವು.
8. ಸೀಮೋನ್ ಪೇತ್ರನು ಅದನ್ನು ಕಂಡಾಗ ಯೇಸುವಿನ ಮೊಣಕಾಲಿಗೆ ಬಿದ್ದು--ನನ್ನನ್ನು ಬಿಟ್ಟು ಹೋಗು; ಓ ಕರ್ತನೇ, ನಾನು ಪಾಪಾತ್ಮನು ಅಂದನು.
9. ಯಾಕಂದರೆ ಅವರು ಹಿಡಿದ ವಿಾನುಗಳ ರಾಶಿಗಾಗಿ ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು.
10. ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರೂ ಹಾಗೆಯೇ ವಿಸ್ಮಯ ಪಟ್ಟರು. ಆಗ ಯೇಸು ಸೀಮೋನನಿಗೆ--ಹೆದರಬೇಡ. ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವಿ ಅಂದನು.
11. ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದಾಗ ಎಲ್ಲವನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
12. ತರುವಾಯ ಆತನು ಒಂದಾನೊಂದು ಪಟ್ಟಣ ದಲ್ಲಿದ್ದಾಗ ಇಗೋ, ತುಂಬಾ ಕುಷ್ಠವಿದ್ದ ಒಬ್ಬ ಮನುಷ್ಯನು ಯೇಸುವನ್ನು ನೋಡಿ ಬೋರಲ ಬಿದ್ದು ಆತನಿಗೆ--ಕರ್ತನೇ, ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಆತನನ್ನು ಬೇಡಿಕೊಂಡನು.
13. ಆತನು ತನ್ನ ಕೈಚಾಚಿ ಅವನನ್ನು ಮುಟ್ಟಿ ಅವ ನಿಗೆ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಎಂದು ಹೇಳಿದನು. ಕೂಡಲೆ ಆ ಕುಷ್ಠವು ಅವನಿಂದ ಹೊರಟುಹೋಯಿತು.
14. ಆತನು ಅವನಿಗೆ--ನೀನು ಯಾರಿಗೂ ಹೇಳಬಾರದು; ಆದರೆ ಹೋಗಿ ಜನರಿಗೆ ಸಾಕ್ಷಿಯಾಗಿರುವಂತೆ ಯಾಜಕನಿಗೆ ನಿನ್ನನ್ನು ತೋರಿಸಿ ಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆಯು ಅಪ್ಪಣೆ ಕೊಟ್ಟಂತೆ ಅರ್ಪಿಸು ಎಂದು ಆಜ್ಞಾಪಿಸಿದನು.
15. ಆದರೂ ಆತನ ಕೀರ್ತಿಯು ಇನ್ನೂ ಹೆಚ್ಚಾಗಿ ದೂರದವರೆಗೂ ಹರಡಿತು; ದೊಡ್ಡ ಸಮೂಹಗಳು ಆತನ ಉಪದೇಶವನ್ನು ಕೇಳುವದಕ್ಕೂ ತಮ್ಮ ರೋಗಗಳನ್ನು ಆತನಿಂದ ವಾಸಿಮಾಡಿಸಿಕೊಳ್ಳು ವದಕ್ಕೂ ಕೂಡಿ ಬಂದರು.
16. ಆತನಾದರೋ ತನ್ನನ್ನು ಪ್ರತ್ಯೇಕಿಸಿಕೊಂಡು ಅರಣ್ಯಕ್ಕೆ ಹೋಗಿ ಪ್ರಾರ್ಥಿಸಿದನು.
17. ಇದಾದ ಮೇಲೆ ಒಂದಾನೊಂದು ದಿನ ಆತನು ಬೋಧಿಸುತ್ತಿದ್ದಾಗ ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ ನ್ಯಾಯಪ್ರಮಾಣದ ಪಂಡಿತರೂ ಅಲ್ಲಿ ಕೂತುಕೊಂಡಿದ್ದರು. ಕರ್ತನ ಶಕ್ತಿಯು ಅವರನ್ನು ಸ್ವಸ್ಥ ಮಾಡುವದಕ್ಕೆ ಸಿದ್ಧವಿತ್ತು.
18. ಆಗ ಇಗೋ, ಪಾರ್ಶ್ವವಾಯು ರೋಗವಿದ್ದ ಒಬ್ಬ ಮನುಷ್ಯನನ್ನು ಕೆಲವರು ಹಾಸಿಗೆಯಲ್ಲಿ ಹೊತ್ತು ಕೊಂಡು ಬಂದು ಅವನನ್ನು ಒಳಗೆ ಆತನ ಎದುರಿಗೆ ತರುವ ವಿಧಾನವನ್ನು ಹುಡುಕಿದರು.
19. ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ ಮನೆಯಮೇಲೆ ಹೋಗಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ನಡುವೆ ಯೇಸುವಿನ ಮುಂದೆ ಇಳಿಸಿದರು.
20. ಆಗ ಆತನು ಅವರ ನಂಬಿಕೆಯನ್ನು ನೋಡಿ ಅವನಿಗೆ-- ಮನುಷ್ಯನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು.
21. ಆಗ ಶಾಸ್ತ್ರಿಗಳೂ ಫರಿ ಸಾಯರೂ--ದೇವದೂಷಣೆಗಳನ್ನು ಮಾಡುವದಕ್ಕೆ ಇವನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು ಎಂದು ತಮ್ಮಲ್ಲಿ ಮಾತನಾಡಿಕೊಂಡರು.
22. ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು ಪ್ರತ್ಯುತ್ತರವಾಗಿ ಅವರಿಗೆ--ನೀವು ನಿಮ್ಮ ಹೃದಯಗಳಲ್ಲಿ ಅಂದು ಕೊಳ್ಳುತ್ತಿರುವದೇನು?
23. ಯಾವದು ಸುಲಭ-- ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಡೆ ಅನ್ನುವದೋ?
24. ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸುವದಕ್ಕೆ ಭೂಮಿಯ ಮೇಲೆ ಅಧಿಕಾರವುಂಟೆಂದು ನೀವು ತಿಳಿಯಬೇಕು (ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ)--ಎದ್ದು ನಿನ್ನ ಹಾಸಿಗೆಯನ್ನು ತಕ್ಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
25. ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ತನ್ನ ಸ್ವಂತ ಮನೆಗೆ ಹೊರಟುಹೋದನು.
26. ಅಲ್ಲಿದ್ದವ ರೆಲ್ಲರೂ ವಿಸ್ಮಯಗೊಂಡು ದೇವರನ್ನು ಮಹಿಮೆ ಪಡಿಸಿದರು. ಮತ್ತು ಅವರು ಭಯದಿಂದ ಕೂಡಿದ ವರಾಗಿ--ನಾವು ಈ ದಿನ ಅಪೂರ್ವವಾದವುಗಳನ್ನು ನೋಡಿದ್ದೇವೆ ಅಂದರು.
27. ಇವುಗಳಾದ ಮೇಲೆ ಆತನು ಮುಂದೆ ಹೋಗಿ ತೆರಿಗೆಯ ಕಚೇರಿಯಲ್ಲಿ ಕೂತುಕೊಂಡಿದ್ದ ಲೇವಿಯ ನೆಂಬ ಹೆಸರುಳ್ಳ ಒಬ್ಬ ಸುಂಕದವನನ್ನು ನೋಡಿ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.
28. ಅವನು ಎಲ್ಲವನ್ನು ಬಿಟ್ಟು ಎದ್ದು ಆತನನ್ನು ಹಿಂಬಾಲಿಸಿದನು.
29. ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಆತನಿಗೆ ದೊಡ್ಡ ಔತಣವನ್ನು ಮಾಡಿಸಲು ಸುಂಕದವರು ಮತ್ತು ಬೇರೆ ಬಹಳ ಜನರು ಅವರೊಂದಿಗೆ ಕೂತುಕೊಂಡರು.
30. ಆದರೆ ಅವರ ಶಾಸ್ತ್ರಿಗಳೂ ಫರಿಸಾಯರೂ ಆತನ ಶಿಷ್ಯರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಯಾಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ ಎಂದು ಕೇಳಿದರು.
31. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಕ್ಷೇಮದಲ್ಲಿ ಇರುವವರಿಗೆ ಅಲ್ಲ, ಆದರೆ ಕ್ಷೇಮವಿಲ್ಲದವರಿಗೆ ವೈದ್ಯನು ಬೇಕು.
32. ನಾನು ನೀತಿವಂತರನ್ನಲ್ಲ, ಆದರೆ ಪಾಪಿಗಳನ್ನು ಮಾನಸಾಂತರಕ್ಕೆ ಕರೆಯುವದಕ್ಕಾಗಿ ಬಂದೆನು ಎಂದು ಹೇಳಿದನು.
33. ಅವರು ಆತನಿಗೆ--ಯೋಹಾನನ ಶಿಷ್ಯರು ಪದೇ ಪದೇ ಉಪವಾಸವಿದ್ದು ಪ್ರಾರ್ಥನೆಗಳನ್ನು ಮಾಡುತ್ತಾರೆ; ಅದರಂತೆಯೇ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನವರು ಯಾಕೆ ತಿಂದು ಕುಡಿಯುತ್ತಾರೆ ಎಂದು ಹೇಳಿದರು.
34. ಆತನು ಅವರಿಗೆ--ಮದುಮಗನು ಮದುವೆ ಮನೆಯ ಮಕ್ಕಳ ಜೊತೆಯಲ್ಲಿ ಇರುವಾಗ ಅವರಿಗೆ ಉಪವಾಸ ಮಾಡಿಸುವಂತೆ ನಿಮ್ಮಿಂದಾದೀತೇ?
35. ಆದರೆ ಮದುಮಗನು ಅವ ರಿಂದ ತೆಗೆಯಲ್ಪಡುವ ದಿವಸಗಳು ಬರುವವು; ಆಗ ಆ ದಿವಸಗಳಲ್ಲಿ ಅವರು ಉಪವಾಸ ಮಾಡುವರು ಎಂದು ಹೇಳಿದನು.
36. ಆತನು ಅವರಿಗೆ ಒಂದು ಸಾಮ್ಯವನ್ನು ಸಹ ಹೇಳಿದ್ದೇನಂದರೆ--ಹಳೇ ವಸ್ತ್ರಕ್ಕೆ ಹೊಸ ಬಟ್ಟೆಯ ತುಂಡನ್ನು ಯಾರೂ ಹಚ್ಚುವದಿಲ್ಲ; ಹಚ್ಚಿದರೆ ಹೊಸದು ಹರಿದು ಹೋಗುವದು ಮತ್ತು ಹೊಸದರಿಂದ ತೆಗೆದ ತುಂಡು ಹಳೇದರೊಂದಿಗೆ ಸರಿಬೀಳುವದಿಲ್ಲ.
37. ಯಾರೂ ಹಳೇಬುದ್ದಲಿಗಳಲ್ಲಿ ಹೊಸದ್ರಾಕ್ಷಾರಸವನ್ನು ಹಾಕುವದಿಲ್ಲ; ಹಾಕಿದರೆ ಹೊಸದ್ರಾಕ್ಷಾರಸವು ಬುದ್ದಲಿಗಳನ್ನು ಒಡೆಯುವದ ರಿಂದ ಅದು ಚೆಲ್ಲಿ ಹೋಗುವದು ಮತ್ತು ಬುದ್ದಲಿಗಳು ಹಾಳಾಗಿ ಹೋಗುವವು.
38. ಆದರೆ ಹೊಸದ್ರಾಕ್ಷಾ ರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು; ಹೀಗೆ ಅವೆರಡೂ ಭದ್ರವಾಗಿರುವವು.
39. ಯಾವನಾದರೂ ಹಳೇದ್ರಾಕ್ಷಾರಸವನ್ನು ಕುಡಿದ ಕೂಡಲೆ ಹೊಸದನ್ನು ಅಪೇಕ್ಷಿಸುವದಿಲ್ಲ; ಯಾಕಂದರೆ ಅವನು--ಹಳೇದೇ ಉತ್ತಮ ಅನ್ನುವನು.
ಒಟ್ಟು 24 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 5 / 24
1 ಇದಾದ ಮೇಲೆ ಆತನು ಗೆನೇಜರೆತ್ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ ಜನರು ದೇವರ ವಾಕ್ಯವನ್ನು ಕೇಳುವದಕ್ಕಾಗಿ ಆತನ ಮೇಲೆ ನೂಕಾಡುತ್ತಿದ್ದರು. 2 ಆಗ ಆತನು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡನು; ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. 3 ಆಗ ಅವುಗಳಲ್ಲಿ ಸೀಮೋನನದಾಗಿದ್ದ ದೋಣಿಯನ್ನು ಆತನು ಹತ್ತಿದ ಮೇಲೆ ಅದನ್ನು ಭೂಮಿಯಿಂದ ಸ್ವಲ್ಪ ನೂಕ ಬೇಕೆಂದು ಅವನನ್ನು ಕೇಳಿಕೊಂಡನು. ಆತನು ಕೂತುಕೊಂಡು ದೋಣಿಯೊಳಗಿಂದ ಜನರಿಗೆ ಬೋಧಿಸಿದನು. 4 ಆತನು ಮಾತನಾಡುವದನ್ನು ಮುಗಿಸಿದ ಮೇಲೆ ಸೀಮೋನನಿಗೆ--(ದೋಣಿಯನ್ನು) ಆಳವಾದ ಸ್ಥಳಕ್ಕೆ ನಡಿಸಿ ವಿಾನು ಹಿಡಿಯುವದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ ಎಂದು ಹೇಳಿದನು. 5 ಅದಕ್ಕೆ ಪ್ರತ್ಯುತ್ತರವಾಗಿ ಸೀಮೋನನು ಆತನಿಗೆ--ಗುರುವೇ, ನಾವು ರಾತ್ರಿ ಯೆಲ್ಲಾ ಪ್ರಯಾಸಪಟ್ಟೆವು. ಆದರೆ ಏನೂ ಸಿಕ್ಕಲಿಲ್ಲ; ಆದಾಗ್ಯೂ ನಿನ್ನ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ ಎಂದು ಹೇಳಿದನು. 6 ಅವರು ಅದರಂತೆ ಮಾಡಿ ವಿಾನಿನ ದೊಡ್ಡ ರಾಶಿಯನ್ನು ಹಿಡಿದರು. ಅವರ ಬಲೆಯು ಹರಿಯಿತು. 7 ಆಗ ಬೇರೆ ದೋಣಿ ಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆ ಮಾಡಿದರು; ಮತ್ತು ಅವರು ಬಂದು ಎರಡು ದೋಣಿಗಳನ್ನು ತುಂಬಿ ಸಲಾಗಿ ಅವು ಮುಳುಗಲಾರಂಭಿಸಿದವು. 8 ಸೀಮೋನ್ ಪೇತ್ರನು ಅದನ್ನು ಕಂಡಾಗ ಯೇಸುವಿನ ಮೊಣಕಾಲಿಗೆ ಬಿದ್ದು--ನನ್ನನ್ನು ಬಿಟ್ಟು ಹೋಗು; ಓ ಕರ್ತನೇ, ನಾನು ಪಾಪಾತ್ಮನು ಅಂದನು. 9 ಯಾಕಂದರೆ ಅವರು ಹಿಡಿದ ವಿಾನುಗಳ ರಾಶಿಗಾಗಿ ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು. 10 ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರೂ ಹಾಗೆಯೇ ವಿಸ್ಮಯ ಪಟ್ಟರು. ಆಗ ಯೇಸು ಸೀಮೋನನಿಗೆ--ಹೆದರಬೇಡ. ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವಿ ಅಂದನು. 11 ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದಾಗ ಎಲ್ಲವನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು. 12 ತರುವಾಯ ಆತನು ಒಂದಾನೊಂದು ಪಟ್ಟಣ ದಲ್ಲಿದ್ದಾಗ ಇಗೋ, ತುಂಬಾ ಕುಷ್ಠವಿದ್ದ ಒಬ್ಬ ಮನುಷ್ಯನು ಯೇಸುವನ್ನು ನೋಡಿ ಬೋರಲ ಬಿದ್ದು ಆತನಿಗೆ--ಕರ್ತನೇ, ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಆತನನ್ನು ಬೇಡಿಕೊಂಡನು. 13 ಆತನು ತನ್ನ ಕೈಚಾಚಿ ಅವನನ್ನು ಮುಟ್ಟಿ ಅವ ನಿಗೆ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಎಂದು ಹೇಳಿದನು. ಕೂಡಲೆ ಆ ಕುಷ್ಠವು ಅವನಿಂದ ಹೊರಟುಹೋಯಿತು. 14 ಆತನು ಅವನಿಗೆ--ನೀನು ಯಾರಿಗೂ ಹೇಳಬಾರದು; ಆದರೆ ಹೋಗಿ ಜನರಿಗೆ ಸಾಕ್ಷಿಯಾಗಿರುವಂತೆ ಯಾಜಕನಿಗೆ ನಿನ್ನನ್ನು ತೋರಿಸಿ ಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆಯು ಅಪ್ಪಣೆ ಕೊಟ್ಟಂತೆ ಅರ್ಪಿಸು ಎಂದು ಆಜ್ಞಾಪಿಸಿದನು. 15 ಆದರೂ ಆತನ ಕೀರ್ತಿಯು ಇನ್ನೂ ಹೆಚ್ಚಾಗಿ ದೂರದವರೆಗೂ ಹರಡಿತು; ದೊಡ್ಡ ಸಮೂಹಗಳು ಆತನ ಉಪದೇಶವನ್ನು ಕೇಳುವದಕ್ಕೂ ತಮ್ಮ ರೋಗಗಳನ್ನು ಆತನಿಂದ ವಾಸಿಮಾಡಿಸಿಕೊಳ್ಳು ವದಕ್ಕೂ ಕೂಡಿ ಬಂದರು. 16 ಆತನಾದರೋ ತನ್ನನ್ನು ಪ್ರತ್ಯೇಕಿಸಿಕೊಂಡು ಅರಣ್ಯಕ್ಕೆ ಹೋಗಿ ಪ್ರಾರ್ಥಿಸಿದನು. 17 ಇದಾದ ಮೇಲೆ ಒಂದಾನೊಂದು ದಿನ ಆತನು ಬೋಧಿಸುತ್ತಿದ್ದಾಗ ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ ನ್ಯಾಯಪ್ರಮಾಣದ ಪಂಡಿತರೂ ಅಲ್ಲಿ ಕೂತುಕೊಂಡಿದ್ದರು. ಕರ್ತನ ಶಕ್ತಿಯು ಅವರನ್ನು ಸ್ವಸ್ಥ ಮಾಡುವದಕ್ಕೆ ಸಿದ್ಧವಿತ್ತು. 18 ಆಗ ಇಗೋ, ಪಾರ್ಶ್ವವಾಯು ರೋಗವಿದ್ದ ಒಬ್ಬ ಮನುಷ್ಯನನ್ನು ಕೆಲವರು ಹಾಸಿಗೆಯಲ್ಲಿ ಹೊತ್ತು ಕೊಂಡು ಬಂದು ಅವನನ್ನು ಒಳಗೆ ಆತನ ಎದುರಿಗೆ ತರುವ ವಿಧಾನವನ್ನು ಹುಡುಕಿದರು. 19 ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ ಮನೆಯಮೇಲೆ ಹೋಗಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ನಡುವೆ ಯೇಸುವಿನ ಮುಂದೆ ಇಳಿಸಿದರು. 20 ಆಗ ಆತನು ಅವರ ನಂಬಿಕೆಯನ್ನು ನೋಡಿ ಅವನಿಗೆ-- ಮನುಷ್ಯನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು. 21 ಆಗ ಶಾಸ್ತ್ರಿಗಳೂ ಫರಿ ಸಾಯರೂ--ದೇವದೂಷಣೆಗಳನ್ನು ಮಾಡುವದಕ್ಕೆ ಇವನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು ಎಂದು ತಮ್ಮಲ್ಲಿ ಮಾತನಾಡಿಕೊಂಡರು. 22 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು ಪ್ರತ್ಯುತ್ತರವಾಗಿ ಅವರಿಗೆ--ನೀವು ನಿಮ್ಮ ಹೃದಯಗಳಲ್ಲಿ ಅಂದು ಕೊಳ್ಳುತ್ತಿರುವದೇನು? 23 ಯಾವದು ಸುಲಭ-- ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಡೆ ಅನ್ನುವದೋ? 24 ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸುವದಕ್ಕೆ ಭೂಮಿಯ ಮೇಲೆ ಅಧಿಕಾರವುಂಟೆಂದು ನೀವು ತಿಳಿಯಬೇಕು (ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ)--ಎದ್ದು ನಿನ್ನ ಹಾಸಿಗೆಯನ್ನು ತಕ್ಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
25 ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ತನ್ನ ಸ್ವಂತ ಮನೆಗೆ ಹೊರಟುಹೋದನು.
26 ಅಲ್ಲಿದ್ದವ ರೆಲ್ಲರೂ ವಿಸ್ಮಯಗೊಂಡು ದೇವರನ್ನು ಮಹಿಮೆ ಪಡಿಸಿದರು. ಮತ್ತು ಅವರು ಭಯದಿಂದ ಕೂಡಿದ ವರಾಗಿ--ನಾವು ಈ ದಿನ ಅಪೂರ್ವವಾದವುಗಳನ್ನು ನೋಡಿದ್ದೇವೆ ಅಂದರು. 27 ಇವುಗಳಾದ ಮೇಲೆ ಆತನು ಮುಂದೆ ಹೋಗಿ ತೆರಿಗೆಯ ಕಚೇರಿಯಲ್ಲಿ ಕೂತುಕೊಂಡಿದ್ದ ಲೇವಿಯ ನೆಂಬ ಹೆಸರುಳ್ಳ ಒಬ್ಬ ಸುಂಕದವನನ್ನು ನೋಡಿ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು. 28 ಅವನು ಎಲ್ಲವನ್ನು ಬಿಟ್ಟು ಎದ್ದು ಆತನನ್ನು ಹಿಂಬಾಲಿಸಿದನು. 29 ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಆತನಿಗೆ ದೊಡ್ಡ ಔತಣವನ್ನು ಮಾಡಿಸಲು ಸುಂಕದವರು ಮತ್ತು ಬೇರೆ ಬಹಳ ಜನರು ಅವರೊಂದಿಗೆ ಕೂತುಕೊಂಡರು. 30 ಆದರೆ ಅವರ ಶಾಸ್ತ್ರಿಗಳೂ ಫರಿಸಾಯರೂ ಆತನ ಶಿಷ್ಯರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಯಾಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ ಎಂದು ಕೇಳಿದರು. 31 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಕ್ಷೇಮದಲ್ಲಿ ಇರುವವರಿಗೆ ಅಲ್ಲ, ಆದರೆ ಕ್ಷೇಮವಿಲ್ಲದವರಿಗೆ ವೈದ್ಯನು ಬೇಕು. 32 ನಾನು ನೀತಿವಂತರನ್ನಲ್ಲ, ಆದರೆ ಪಾಪಿಗಳನ್ನು ಮಾನಸಾಂತರಕ್ಕೆ ಕರೆಯುವದಕ್ಕಾಗಿ ಬಂದೆನು ಎಂದು ಹೇಳಿದನು. 33 ಅವರು ಆತನಿಗೆ--ಯೋಹಾನನ ಶಿಷ್ಯರು ಪದೇ ಪದೇ ಉಪವಾಸವಿದ್ದು ಪ್ರಾರ್ಥನೆಗಳನ್ನು ಮಾಡುತ್ತಾರೆ; ಅದರಂತೆಯೇ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನವರು ಯಾಕೆ ತಿಂದು ಕುಡಿಯುತ್ತಾರೆ ಎಂದು ಹೇಳಿದರು. 34 ಆತನು ಅವರಿಗೆ--ಮದುಮಗನು ಮದುವೆ ಮನೆಯ ಮಕ್ಕಳ ಜೊತೆಯಲ್ಲಿ ಇರುವಾಗ ಅವರಿಗೆ ಉಪವಾಸ ಮಾಡಿಸುವಂತೆ ನಿಮ್ಮಿಂದಾದೀತೇ? 35 ಆದರೆ ಮದುಮಗನು ಅವ ರಿಂದ ತೆಗೆಯಲ್ಪಡುವ ದಿವಸಗಳು ಬರುವವು; ಆಗ ಆ ದಿವಸಗಳಲ್ಲಿ ಅವರು ಉಪವಾಸ ಮಾಡುವರು ಎಂದು ಹೇಳಿದನು. 36 ಆತನು ಅವರಿಗೆ ಒಂದು ಸಾಮ್ಯವನ್ನು ಸಹ ಹೇಳಿದ್ದೇನಂದರೆ--ಹಳೇ ವಸ್ತ್ರಕ್ಕೆ ಹೊಸ ಬಟ್ಟೆಯ ತುಂಡನ್ನು ಯಾರೂ ಹಚ್ಚುವದಿಲ್ಲ; ಹಚ್ಚಿದರೆ ಹೊಸದು ಹರಿದು ಹೋಗುವದು ಮತ್ತು ಹೊಸದರಿಂದ ತೆಗೆದ ತುಂಡು ಹಳೇದರೊಂದಿಗೆ ಸರಿಬೀಳುವದಿಲ್ಲ. 37 ಯಾರೂ ಹಳೇಬುದ್ದಲಿಗಳಲ್ಲಿ ಹೊಸದ್ರಾಕ್ಷಾರಸವನ್ನು ಹಾಕುವದಿಲ್ಲ; ಹಾಕಿದರೆ ಹೊಸದ್ರಾಕ್ಷಾರಸವು ಬುದ್ದಲಿಗಳನ್ನು ಒಡೆಯುವದ ರಿಂದ ಅದು ಚೆಲ್ಲಿ ಹೋಗುವದು ಮತ್ತು ಬುದ್ದಲಿಗಳು ಹಾಳಾಗಿ ಹೋಗುವವು. 38 ಆದರೆ ಹೊಸದ್ರಾಕ್ಷಾ ರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು; ಹೀಗೆ ಅವೆರಡೂ ಭದ್ರವಾಗಿರುವವು. 39 ಯಾವನಾದರೂ ಹಳೇದ್ರಾಕ್ಷಾರಸವನ್ನು ಕುಡಿದ ಕೂಡಲೆ ಹೊಸದನ್ನು ಅಪೇಕ್ಷಿಸುವದಿಲ್ಲ; ಯಾಕಂದರೆ ಅವನು--ಹಳೇದೇ ಉತ್ತಮ ಅನ್ನುವನು.
ಒಟ್ಟು 24 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 5 / 24
×

Alert

×

Kannada Letters Keypad References