ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಕೀರ್ತನೆಗಳು
1. ಕರ್ತನನ್ನು ಸ್ತುತಿಸಿರಿ. ನನ್ನ ಪ್ರಾಣವೇ, ಕರ್ತನನ್ನು ಸ್ತುತಿಸು.
2. ನನ್ನ ಪ್ರಾಣವಿರುವ ವರೆಗೂ ಕರ್ತನನ್ನು ಸ್ತುತಿಸುವೆನು; ನನ್ನ ಜೀವಮಾನವೆಲ್ಲಾ ನನ್ನ ದೇವರನ್ನು ಕೀರ್ತಿ ಸುವೆನು.
3. ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನ ವರನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತ ನಲ್ಲ;
4. ಅವನ ಉಸಿರು ಹೋಗಲು ಅವನು ಮಣ್ಣಿಗೆ ಹಿಂತಿರುಗುವನು; ಅದೇ ದಿನದಲ್ಲಿ ಅವನ ಸಂಕಲ್ಪ ಗಳೆಲ್ಲಾ ನಾಶವಾಗುತ್ತವೆ.
5. ಯಾಕೋಬನ ದೇವರನ್ನು ತನ್ನ ಸಹಾಯವನ್ನಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಕರ್ತನ ಮೇಲೆ ತನ್ನ ನಿರೀಕ್ಷೆ ಇಡುವನು.
6. ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದಾತನೇ ಎಂದೆಂದಿಗೂ ವಾಗ್ದಾನ ನೆರವೇರಿಸುತ್ತಾನೆ.
7. ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ ಹಸಿ ದವರಿಗೆ ಆಹಾರ ಕೊಡುವವನೂ ಆತನೇ.
8. ಕರ್ತನು ಸೆರೆಯವರನ್ನು ಬಿಡಿಸುತ್ತಾನೆ. ಕರ್ತನು ಕುರುಡರ ಕಣ್ಣುಗಳನ್ನು ತೆರೆಯುತ್ತಾನೆ; ಕರ್ತನು ದೀನರನ್ನು ಎತ್ತು ತ್ತಾನೆ; ಕರ್ತನು ನೀತಿವಂತರನ್ನು ಪ್ರೀತಿಮಾಡುತ್ತಾನೆ;
9. ಕರ್ತನು ಪರದೇಶಸ್ಥರನ್ನು ಕಾಪಾಡುತ್ತಾನೆ; ದಿಕ್ಕಿಲ್ಲದ ವರನ್ನೂ ವಿಧವೆಯರನ್ನೂ ಪರಾಮರಿಸುತ್ತಾನೆ; ಆದರೆ ದುಷ್ಟರ ಮಾರ್ಗವನ್ನು ಡೊಂಕುಮಾಡುತ್ತಾನೆ.
10. ಓ ಚೀಯೋನೇ, ನಿನ್ನ ದೇವರಾದ ಕರ್ತನು ತಾನೇ ತಲತಲಾಂತರಕ್ಕೂ ಆಳುತ್ತಾನೆ. ಕರ್ತನನ್ನು ಸ್ತುತಿಸಿರಿ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 146 / 150
1 ಕರ್ತನನ್ನು ಸ್ತುತಿಸಿರಿ. ನನ್ನ ಪ್ರಾಣವೇ, ಕರ್ತನನ್ನು ಸ್ತುತಿಸು. 2 ನನ್ನ ಪ್ರಾಣವಿರುವ ವರೆಗೂ ಕರ್ತನನ್ನು ಸ್ತುತಿಸುವೆನು; ನನ್ನ ಜೀವಮಾನವೆಲ್ಲಾ ನನ್ನ ದೇವರನ್ನು ಕೀರ್ತಿ ಸುವೆನು. 3 ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನ ವರನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತ ನಲ್ಲ; 4 ಅವನ ಉಸಿರು ಹೋಗಲು ಅವನು ಮಣ್ಣಿಗೆ ಹಿಂತಿರುಗುವನು; ಅದೇ ದಿನದಲ್ಲಿ ಅವನ ಸಂಕಲ್ಪ ಗಳೆಲ್ಲಾ ನಾಶವಾಗುತ್ತವೆ. 5 ಯಾಕೋಬನ ದೇವರನ್ನು ತನ್ನ ಸಹಾಯವನ್ನಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಕರ್ತನ ಮೇಲೆ ತನ್ನ ನಿರೀಕ್ಷೆ ಇಡುವನು. 6 ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದಾತನೇ ಎಂದೆಂದಿಗೂ ವಾಗ್ದಾನ ನೆರವೇರಿಸುತ್ತಾನೆ. 7 ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ ಹಸಿ ದವರಿಗೆ ಆಹಾರ ಕೊಡುವವನೂ ಆತನೇ. 8 ಕರ್ತನು ಸೆರೆಯವರನ್ನು ಬಿಡಿಸುತ್ತಾನೆ. ಕರ್ತನು ಕುರುಡರ ಕಣ್ಣುಗಳನ್ನು ತೆರೆಯುತ್ತಾನೆ; ಕರ್ತನು ದೀನರನ್ನು ಎತ್ತು ತ್ತಾನೆ; ಕರ್ತನು ನೀತಿವಂತರನ್ನು ಪ್ರೀತಿಮಾಡುತ್ತಾನೆ;
9 ಕರ್ತನು ಪರದೇಶಸ್ಥರನ್ನು ಕಾಪಾಡುತ್ತಾನೆ; ದಿಕ್ಕಿಲ್ಲದ ವರನ್ನೂ ವಿಧವೆಯರನ್ನೂ ಪರಾಮರಿಸುತ್ತಾನೆ; ಆದರೆ ದುಷ್ಟರ ಮಾರ್ಗವನ್ನು ಡೊಂಕುಮಾಡುತ್ತಾನೆ.
10 ಓ ಚೀಯೋನೇ, ನಿನ್ನ ದೇವರಾದ ಕರ್ತನು ತಾನೇ ತಲತಲಾಂತರಕ್ಕೂ ಆಳುತ್ತಾನೆ. ಕರ್ತನನ್ನು ಸ್ತುತಿಸಿರಿ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 146 / 150
×

Alert

×

Kannada Letters Keypad References