4. ಹಾಗೆ ಎಂದಿಗೂ ಆಗು ವದಿಲ್ಲ; ಹೌದು, ಎಲ್ಲಾ ಮನುಷ್ಯರು ಸುಳ್ಳುಗಾರ ರಾದರೂ ದೇವರು ಸತ್ಯವಂತನೇ ಸರಿ;ಯಾಕಂದರೆ--ನೀನು ನಿನ್ನ ಮಾತುಗಳಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡಬೇಕೆಂತಲೂ ನಿನಗೆ ತೀರ್ಪಾದಾಗ ನೀನು ಗೆಲ್ಲಬೇಕೆಂತಲೂ ಬರೆದದೆ.
|
5. ಆದರೆ ನಮ್ಮ ಅನೀತಿಯು ದೇವರ ನೀತಿಯನ್ನು ಪ್ರಸಿದ್ಧಿಪಡಿಸುವದಾದರೆ ನಾವು ಏನು ಹೇಳೋಣ? ಪ್ರತೀಕಾರ ಮಾಡುವ ದೇವರು ಅನೀತಿವಂತನೇನು? (ನಾನು ಮನುಷ್ಯನಂತೆ ಮಾತನಾಡುತ್ತೇನೆ).
|
7. ನನ್ನ ಸುಳ್ಳಿನ ಮೂಲಕ ದೇವರ ವಿಷಯವಾದ ಸತ್ಯವು ಆತನ ಮಹಿಮೆಯನ್ನು ಹೆಚ್ಚಿಸು ವದಾದರೆ ನಾನು ಇನ್ನು ಪಾಪಿಯೆಂದು ಯಾಕೆ ತೀರ್ಪು ಹೊಂದಬೇಕು?
|
8. (ದೂಷಿಸಲ್ಪಡುವ ಪ್ರಕಾರವಾಗಿ ಯೂ ನಾವು ಹೇಳುತ್ತೇವೆಂದು ಕೆಲವರು ಅನ್ನುವ ಪ್ರಕಾರವಾಗಿಯೂ)--ಒಳ್ಳೆಯದು ಬರುವ ಹಾಗೆ ನಾವು ಕೆಟ್ಟದ್ದನ್ನು ಮಾಡೋಣವೇ? ಅಂಥವರ ದಂಡ ನೆಯು ನ್ಯಾಯವಾಗಿದೆ.
|
9. ಹಾಗಾದರೆ ಏನು? ನಾವು ಅವರಿಗಿಂತಲೂ ಉತ್ತಮರಾಗಿದ್ದೇವೋ? ಇಲ್ಲವೇ ಇಲ್ಲ; ಯಾಕಂದರೆ ಯೆಹೂದ್ಯರೂ ಅನ್ಯಜನರೂ ಎಲ್ಲರೂ ಪಾಪಕ್ಕೊಳಗಾಗಿದ್ದಾರೆಂದು ಮೊದಲೇ ನಾವು ಸ್ಥಾಪಿಸಿ ದ್ದೇವಲ್ಲಾ.
|
13. ಅವರ ಗಂಟಲು ತೆರೆದಿರುವ ಸಮಾಧಿಯಾಗಿದೆ. ಅವರು ತಮ್ಮ ನಾಲಿಗೆಗಳಿಂದ ವಂಚಿಸುತ್ತಾರೆ; ಅವರ ತುಟಿಗಳ ಕೆಳಗೆ ಹಾವಿನ ವಿಷವಿದೆ.
|
19. ಪ್ರತಿಯೊಂದು ಬಾಯಿ ಮುಚ್ಚಿ ಹೋಗುವಂತೆಯೂ ಲೋಕವೆಲ್ಲಾ ದೇವರ ಮುಂದೆ ದೋಷಿಯಾಗಿರುವಂತೆಯೂ ನ್ಯಾಯ ಪ್ರಮಾಣವು ಹೇಳುವವುಗಳನ್ನು ನ್ಯಾಯಪ್ರಮಾಣಕ್ಕೆ ಒಳಗಾದವರಿಗೆ ಹೇಳುತ್ತದೆಯೆಂದು ನಾವು ಬಲ್ಲೆವು.
|
20. ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವನೂ ಆತನ ದೃಷ್ಟಿಯಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲ. ಯಾಕಂದರೆ ನ್ಯಾಯಪ್ರಮಾಣ ದಿಂದಲೇ ಪಾಪದ ಅರುಹು ಉಂಟಾಗುತ್ತದೆ.
|
21. ಈಗಲಾದರೋ ದೇವರ ನೀತಿಯು ನ್ಯಾಯ ಪ್ರಮಾಣವಿಲ್ಲದೆ ಪ್ರಕಟವಾಗಿದೆ. ಅದು ನ್ಯಾಯ ಪ್ರಮಾಣದಿಂದಲೂ ಪ್ರವಾದಿಗಳಿಂದಲೂ ಸಾಕ್ಷಿಗೊಂ ಡಿದೆ.
|
22. ದೇವರಿಂದಾಗುವ ಆ ನೀತಿಯು ಯಾವ ದೆಂದರೆ ಯೇಸು ಕ್ರಿಸ್ತನನ್ನು ನಂಬುವದರಿಂದಲೇ. ನಂಬುವವರೆಲ್ಲರಿಗೆ ಮತ್ತು ಎಲ್ಲರ ಮೇಲೆಯೂ ದೊರ ಕುವಂಥದು. ಹೆಚ್ಚು ಕಡಿಮೆ ಏನೂ ಇಲ್ಲ;
|
24. ಅವರು ನೀತಿವಂತರೆಂದು ನಿರ್ಣಯ ಹೊಂದುವದು ಆತನ ಉಚಿತಾರ್ಥವಾದ ಕೃಪೆ ಯಿಂದಲೇ. ಇದು ಕ್ರಿಸ್ತ ಯೇಸುವಿನಿಂದಾದ ವಿಮೋ ಚನೆಯ ಮೂಲಕವಾಗಿ ಆಗುವದು.
|
25. ಈತನು ತನ್ನ ರಕ್ತದ ಮೂಲಕ ನಂಬಿಕೆಯಿದ್ದವರಿಗಾಗಿ ಪಾಪದ ಪ್ರಾಯಶ್ಚಿತ್ತವಾಗಿರಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನಕಾಲದ ಪಾಪಗಳನ್ನು ಸಹಿಸಿಕೊಂಡಿರಲಾಗಿ
|
26. ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿ ತಾನು ನೀತಿವಂತನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತ ರೆಂದು ನಿರ್ಣಯಿಸುವವನಾಗಿಯೂ ಪ್ರಸಿದ್ಧಿಪಡಿಸಿ ಕೊಂಡನು.
|
27. ಹಾಗಾದರೆ ಹೊಗಳಿಕೊಳ್ಳುವದು ಹೇಗೆ? ಅದು ಇಲ್ಲದೆ ಹೋಯಿತು. ಯಾವ ನಿಯಮದಿಂದ? ಕ್ರಿಯೆಗಳಿಂದಲೋ? ಅಲ್ಲ; ವಿಶ್ವಾಸ ನಿಯಮವನ್ನು ಅನುಸರಿಸುವದರಿಂದಲೇ.
|
28. ಆದದರಿಂದ ನ್ಯಾಯ ಪ್ರಮಾಣದ ಕ್ರಿಯೆಗಳಿಲ್ಲದೆ ನಂಬಿಕೆಯಿಂದಲೇ ಮನು ಷ್ಯನು ನೀತಿವಂತನೆಂದು ನಿರ್ಣಯಿಸಲ್ಪಡುವನೆಂಬ ದಾಗಿ ನಾವು ತೀರ್ಮಾನಿಸಿಕೊಂಡಿದ್ದೇವಲ್ಲಾ.
|
29. ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿ ದ್ದಾನೋ? ಅನ್ಯಜನಗಳಿಗೆ ಸಹ ದೇವರಲ್ಲವೇ? ಹೌದು, ಆತನು ಅನ್ಯಜನರಿಗೆ ಸಹ ದೇವರಾಗಿದ್ದಾನೆ;
|
30. ದೇವರು ಒಬ್ಬನೇ ಆಗಿರಲಾಗಿ ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸು ವದಕ್ಕೆ ಅವರ ನಂಬಿಕೆಯಿಂದಲೇ. ಸುನ್ನತಿಯಿಲ್ಲ ದವರನ್ನು ಹಾಗೆಯೇ ನಿರ್ಣಯಿಸುವದು ನಂಬಿಕೆಯ ಮೂಲಕವೇ.
|
31. ಹಾಗಾದರೆ ನಂಬಿಕೆಯಿಂದ ನ್ಯಾಯಪ್ರಮಾಣವನ್ನು ನಿರರ್ಥಕ ಮಾಡುತ್ತೇವೋ? ಹಾಗೆ ಎಂದಿಗೂ ಅಲ್ಲ; ಹೌದು, ನಾವು ನ್ಯಾಯಪ್ರಮಾಣವನ್ನು ಸ್ಥಿರಪಡಿಸುತ್ತೇವೆ.
|