1. ನನ್ನ ಮೇಲೆ ಕರುಣೆಯಿಡು, ಓ ದೇವರೇ, ನನ್ನನ್ನು ಕರುಣಿಸು; ನನ್ನ ಪ್ರಾಣವು ನಿನ್ನನ್ನು ಆಶ್ರಯಿಸಿಕೊಳ್ಳುತ್ತದೆ. ಆಪತ್ತುಗಳು ದಾಟುವ ವರೆಗೂ ನಿನ್ನ ರೆಕ್ಕೆಗಳ ನೆರಳನ್ನೇ ನಾನು ಆಶ್ರಯಿಸಿಕೊಳ್ಳುತ್ತೇನೆ.
|
3. ಆತನು ಪರಲೋಕದಿಂದ ಕಳುಹಿಸಿ ನುಂಗಲಿರುವ ವನ ನಿಂದೆಯಿಂದ ನನ್ನನ್ನು ರಕ್ಷಿಸುವನು. ಸೆಲಾ. ದೇವರು ಕೃಪೆಯನ್ನೂ ತನ್ನ ಸತ್ಯವನ್ನೂ ಕಳುಹಿಸುವನು.
|
4. ನನ್ನ ಪ್ರಾಣವು ಸಿಂಹಗಳ ಮಧ್ಯದಲ್ಲಿದೆ; ಬೆಂಕಿಯಂತೆ ಉರಿಯುವ ಮನುಷ್ಯರ ಮಧ್ಯದಲ್ಲಿ ಬಿದ್ದಿದ್ದೇನೆ. ಅವರ ಹಲ್ಲುಗಳು ಭಲ್ಲೆಬಾಣಗಳೂ; ಅವರ ನಾಲಿಗೆ ಹದವಾದ ಕತ್ತಿ.
|
6. ಅವರು ನನ್ನ ಹೆಜ್ಜೆಗಳಿಗೆ ಬಲೆಯೊಡ್ಡಿದ್ದಾರೆ. ನನ್ನ ಪ್ರಾಣವು ಕುಗ್ಗಿಹೋಗಿದೆ; ನನ್ನ ಮುಂದೆ ಕುಣಿಯನ್ನು ಅಗೆದು ಅದರ ನಡುವೆ ತಾವೇ ಬಿದ್ದಿದ್ದಾರೆ. ಸೆಲಾ.
|
10. ಆಕಾಶದ ವರೆಗೆ ನಿನ್ನ ಕರುಣೆಯೂ ಮೇಘಗಳ ವರೆಗೆ ನಿನ್ನ ಸತ್ಯವೂ ದೊಡ್ಡದಾದವು ಗಳಾಗಿವೆ.ಓ ದೇವರೇ, ಆಕಾಶಕ್ಕಿಂತ ಉನ್ನತನಾಗು; ಭೂಮಿಯ ಮೇಲೆಲ್ಲಾ ನಿನ್ನ ಘನವು ಇರಲಿ.
|