ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಕೀರ್ತನೆಗಳು
1. ಓ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗೆ ನಿನ್ನನ್ನು ಮರೆಮಾಡಿಕೊಳ್ಳಬೇಡ.
2. ನನ್ನನ್ನು ಆಲೈಸಿ ನನಗೆ ಕಿವಿಗೊಡು; ನನ್ನ ಚಿಂತೆಯಲ್ಲಿ ನಾನು ದುಃಖಿಸುತ್ತಾ
3. ಶತ್ರುವಿನ ಶಬ್ದಕ್ಕೋಸ್ಕರವೂ ದುಷ್ಟನ ಉಪದ್ರವದ ನಿಮಿತ್ತವೂ ನರಳುತ್ತೇನೆ; ಅವರು ನನ್ನ ಮೇಲೆ ಅಪರಾಧವನ್ನು ಬೀಳಮಾಡಿ ಕೋಪದಿಂದ ನನ್ನನ್ನು ಹಗೆಮಾಡುತ್ತಾರೆ.
4. ನನ್ನ ಹೃದಯವು ನನ್ನ ಅಂತ ರಂಗದಲ್ಲಿ ನೊಂದುಕೊಳ್ಳುತ್ತದೆ; ಮರಣದ ಬೆದರಿಕೆ ಗಳು ನನ್ನ ಮೇಲೆ ಬಿದ್ದವೆ.
5. ಭಯವೂ ನಡುಗೂ ನನಗೆ ಬಂದವೆ; ಭೀತಿಯು ನನ್ನನ್ನು ಮುಚ್ಚಿಯದೆ.
6. ನನಗೆ ಪಾರಿವಾಳದಂತೆ ರೆಕ್ಕೆಗಳಿರುತ್ತಿದ್ದರೆ ಹಾರಿ ಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆನು ಎಂದು ಅಂದುಕೊಂಡೆನು.
7. ಇಗೋ, ದೂರದ ಅರ ಣ್ಯಕ್ಕೆ ಅಲೆದಾಡುತ್ತಾ ಹೋಗಿ ತಂಗುವೆನು. ಸೆಲಾ.
8. ಗಾಳಿಯ ತುಫಾನಿಗೂ ಬಿರುಗಾಳಿಗೂ ತಪ್ಪಿಸಿಕೊಳ್ಳಲು ತ್ವರೆಪಡುವೆನು.
9. ಓ ಕರ್ತನೇ, (ಅವರನ್ನು) ನಾಶಮಾಡು. ಅವರ ನಾಲಿಗೆಗಳನ್ನು ಭೇದಿಸು; ಯಾಕಂದರೆ ಬಲಾತ್ಕಾರ ವನ್ನೂ ವಿವಾದವನ್ನೂ ಪಟ್ಟಣದಲ್ಲಿ ನಾನು ನೋಡಿ ದ್ದೇನೆ;
10. ಹಗಲು ಇರುಳು ಅದರ ಗೋಡೆಗಳ ಮೇಲೆ ಅವರು ಸುತ್ತುತ್ತಾರೆ; ಕೇಡೂ ದುಃಖವೂ ಅವರ ಮಧ್ಯದಲ್ಲಿದೆ;
11. ದುಷ್ಟತನವು ಅದರ ಮಧ್ಯ ದಲ್ಲಿದೆ; ಅದರ ಬೀದಿಗಳೊಳಗಿಂದ ಮೋಸವೂ ವಂಚನೆಯೂ ತೊಲಗುವದಿಲ್ಲ.
12. ನನ್ನನ್ನು ನಿಂದಿಸಿದವನು ಶತ್ರುವಲ್ಲ; ಶತ್ರುವಾದರೆ ತಾಳಿಕೊಳ್ಳುತ್ತಿದ್ದೆನು; ನಿನಗೆ ವಿರೋಧವಾಗಿ ಹೆಚ್ಚಿಸಿ ಕೊಳ್ಳುವವನು ನನ್ನ ಹಗೆಯವನಲ್ಲ; ಹಗೆಯವನಾದರೆ ಅವನಿಗೆ ಅಡಗಿಕೊಳ್ಳುತ್ತಿದ್ದೆನು.
13. ಆದರೆ ನೀನು ನನ್ನ ಜೊತಗಾರನೂ ನಡಿಸುವವನೂ ನನ್ನ ಪರಿಚಿತನೂ ಆಗಿದ್ದೀ.
14. ನಾವು ಒಟ್ಟಾಗಿ ಇಂಪಾದ ಸಂಭಾಷಣೆ ಮಾಡಿದೆವು; ದೇವರ ಆಲಯಕ್ಕೆ ಗುಂಪಿನೊಂದಿಗೆ ನಡೆದುಹೋದೆವು.
15. ಮರಣವು ಅವರನ್ನು ಹಿಡಿ ಯಲಿ; ತ್ವರಿತವಾಗಿ ನರಕಕ್ಕೆ ಅವರು ಇಳಿದುಹೋಗಲಿ; ಅವರ ವಾಸಸ್ಥಳದಲ್ಲಿಯೂ ಮಧ್ಯದಲ್ಲಿಯೂ ದುಷ್ಟತನ ಇದೆ.
16. ನಾನಾದರೋ ದೇವರನ್ನು ಕರೆಯುವೆನು; ಕರ್ತ ನು ನನ್ನನ್ನು ರಕ್ಷಿಸುವನು.
17. ಸಂಜೆಯಲ್ಲಿ ಮುಂಜಾನೆ ಯಲ್ಲಿ ಮಧ್ಯಾಹ್ನದಲ್ಲಿ ಪ್ರಾರ್ಥಿಸಿ ಕೂಗುವೆನು;ಆತನು ನನ್ನ ಸ್ವರವನ್ನು ಕೇಳುವನು.
18. ನನಗೆ ವಿರೋಧ ವಾಗಿದ್ದ ಕಾಳಗದಿಂದ ಆತನು ನನ್ನ ಪ್ರಾಣವನ್ನು ಸಮಾಧಾನದಲ್ಲಿ ವಿಮೋಚಿಸಿದ್ದಾನೆ; ಹೇಗಂದರೆ ಅನೇಕರು ನನ್ನ ಸಂಗಡ ಇದ್ದರು.
19. ಅನಾದಿಯಿಂದ ಇರುವ ದೇವರು ಲಕ್ಷ್ಯವಿಟ್ಟು ಅವರನ್ನು ಕುಗ್ಗಿಸುವನು. ಸೆಲಾ. ಅವರಲ್ಲಿ ಮಾರ್ಪಾಡುವಿಕೆಗಳು ಇಲ್ಲ; ಆದಕಾರಣ ದೇವರಿಗೆ ಅವರು ಭಯಪಡುವದಿಲ್ಲ.
20. ಅವನು ತನ್ನ ಸಂಗಡ ಸಮಾಧಾನವುಳ್ಳವರಿಗೆ ವಿರೋಧವಾಗಿ ತನ್ನ ಕೈಗಳನ್ನು ಹಾಕಿದ್ದಾನೆ; ತನ್ನ ಒಡಂಬಡಿಕೆಯನ್ನು ಮುರಿದಿದ್ದಾನೆ.
21. ಅವನ ಬಾಯಿ ಮಾತುಗಳು ಬೆಣ್ಣೆಗಿಂತ ನುಣುಪಾಗಿವೆ; ಅವನ ಹೃದ ಯವೋ ಕಲಹಮಯವೇ. ಅವನ ಮಾತುಗಳು ಎಣ್ಣೆ ಗಿಂತ ನಯವಾಗಿವೆ; ಆದರೆ ಅವು ಬಿಚ್ಚು ಕತ್ತಿಗಳಾಗಿವೆ.
22. ನಿನ್ನ ಭಾರವನ್ನು ಕರ್ತನ ಮೇಲೆ ಹಾಕು; ಆತನು ನಿನಗೆ ಆಧಾರವಾಗಿರುವನು. ಆತನು ಎಂದೆಂದಿಗೂ ನೀತಿವಂತನನ್ನು ಕದಲಗೊಡಿಸನು.
23. ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 55 / 150
1 ಓ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗೆ ನಿನ್ನನ್ನು ಮರೆಮಾಡಿಕೊಳ್ಳಬೇಡ. 2 ನನ್ನನ್ನು ಆಲೈಸಿ ನನಗೆ ಕಿವಿಗೊಡು; ನನ್ನ ಚಿಂತೆಯಲ್ಲಿ ನಾನು ದುಃಖಿಸುತ್ತಾ 3 ಶತ್ರುವಿನ ಶಬ್ದಕ್ಕೋಸ್ಕರವೂ ದುಷ್ಟನ ಉಪದ್ರವದ ನಿಮಿತ್ತವೂ ನರಳುತ್ತೇನೆ; ಅವರು ನನ್ನ ಮೇಲೆ ಅಪರಾಧವನ್ನು ಬೀಳಮಾಡಿ ಕೋಪದಿಂದ ನನ್ನನ್ನು ಹಗೆಮಾಡುತ್ತಾರೆ. 4 ನನ್ನ ಹೃದಯವು ನನ್ನ ಅಂತ ರಂಗದಲ್ಲಿ ನೊಂದುಕೊಳ್ಳುತ್ತದೆ; ಮರಣದ ಬೆದರಿಕೆ ಗಳು ನನ್ನ ಮೇಲೆ ಬಿದ್ದವೆ. 5 ಭಯವೂ ನಡುಗೂ ನನಗೆ ಬಂದವೆ; ಭೀತಿಯು ನನ್ನನ್ನು ಮುಚ್ಚಿಯದೆ. 6 ನನಗೆ ಪಾರಿವಾಳದಂತೆ ರೆಕ್ಕೆಗಳಿರುತ್ತಿದ್ದರೆ ಹಾರಿ ಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆನು ಎಂದು ಅಂದುಕೊಂಡೆನು. 7 ಇಗೋ, ದೂರದ ಅರ ಣ್ಯಕ್ಕೆ ಅಲೆದಾಡುತ್ತಾ ಹೋಗಿ ತಂಗುವೆನು. ಸೆಲಾ. 8 ಗಾಳಿಯ ತುಫಾನಿಗೂ ಬಿರುಗಾಳಿಗೂ ತಪ್ಪಿಸಿಕೊಳ್ಳಲು ತ್ವರೆಪಡುವೆನು. 9 ಓ ಕರ್ತನೇ, (ಅವರನ್ನು) ನಾಶಮಾಡು. ಅವರ ನಾಲಿಗೆಗಳನ್ನು ಭೇದಿಸು; ಯಾಕಂದರೆ ಬಲಾತ್ಕಾರ ವನ್ನೂ ವಿವಾದವನ್ನೂ ಪಟ್ಟಣದಲ್ಲಿ ನಾನು ನೋಡಿ ದ್ದೇನೆ; 10 ಹಗಲು ಇರುಳು ಅದರ ಗೋಡೆಗಳ ಮೇಲೆ ಅವರು ಸುತ್ತುತ್ತಾರೆ; ಕೇಡೂ ದುಃಖವೂ ಅವರ ಮಧ್ಯದಲ್ಲಿದೆ; 11 ದುಷ್ಟತನವು ಅದರ ಮಧ್ಯ ದಲ್ಲಿದೆ; ಅದರ ಬೀದಿಗಳೊಳಗಿಂದ ಮೋಸವೂ ವಂಚನೆಯೂ ತೊಲಗುವದಿಲ್ಲ. 12 ನನ್ನನ್ನು ನಿಂದಿಸಿದವನು ಶತ್ರುವಲ್ಲ; ಶತ್ರುವಾದರೆ ತಾಳಿಕೊಳ್ಳುತ್ತಿದ್ದೆನು; ನಿನಗೆ ವಿರೋಧವಾಗಿ ಹೆಚ್ಚಿಸಿ ಕೊಳ್ಳುವವನು ನನ್ನ ಹಗೆಯವನಲ್ಲ; ಹಗೆಯವನಾದರೆ ಅವನಿಗೆ ಅಡಗಿಕೊಳ್ಳುತ್ತಿದ್ದೆನು. 13 ಆದರೆ ನೀನು ನನ್ನ ಜೊತಗಾರನೂ ನಡಿಸುವವನೂ ನನ್ನ ಪರಿಚಿತನೂ ಆಗಿದ್ದೀ. 14 ನಾವು ಒಟ್ಟಾಗಿ ಇಂಪಾದ ಸಂಭಾಷಣೆ ಮಾಡಿದೆವು; ದೇವರ ಆಲಯಕ್ಕೆ ಗುಂಪಿನೊಂದಿಗೆ ನಡೆದುಹೋದೆವು. 15 ಮರಣವು ಅವರನ್ನು ಹಿಡಿ ಯಲಿ; ತ್ವರಿತವಾಗಿ ನರಕಕ್ಕೆ ಅವರು ಇಳಿದುಹೋಗಲಿ; ಅವರ ವಾಸಸ್ಥಳದಲ್ಲಿಯೂ ಮಧ್ಯದಲ್ಲಿಯೂ ದುಷ್ಟತನ ಇದೆ. 16 ನಾನಾದರೋ ದೇವರನ್ನು ಕರೆಯುವೆನು; ಕರ್ತ ನು ನನ್ನನ್ನು ರಕ್ಷಿಸುವನು. 17 ಸಂಜೆಯಲ್ಲಿ ಮುಂಜಾನೆ ಯಲ್ಲಿ ಮಧ್ಯಾಹ್ನದಲ್ಲಿ ಪ್ರಾರ್ಥಿಸಿ ಕೂಗುವೆನು;ಆತನು ನನ್ನ ಸ್ವರವನ್ನು ಕೇಳುವನು. 18 ನನಗೆ ವಿರೋಧ ವಾಗಿದ್ದ ಕಾಳಗದಿಂದ ಆತನು ನನ್ನ ಪ್ರಾಣವನ್ನು ಸಮಾಧಾನದಲ್ಲಿ ವಿಮೋಚಿಸಿದ್ದಾನೆ; ಹೇಗಂದರೆ ಅನೇಕರು ನನ್ನ ಸಂಗಡ ಇದ್ದರು. 19 ಅನಾದಿಯಿಂದ ಇರುವ ದೇವರು ಲಕ್ಷ್ಯವಿಟ್ಟು ಅವರನ್ನು ಕುಗ್ಗಿಸುವನು. ಸೆಲಾ. ಅವರಲ್ಲಿ ಮಾರ್ಪಾಡುವಿಕೆಗಳು ಇಲ್ಲ; ಆದಕಾರಣ ದೇವರಿಗೆ ಅವರು ಭಯಪಡುವದಿಲ್ಲ. 20 ಅವನು ತನ್ನ ಸಂಗಡ ಸಮಾಧಾನವುಳ್ಳವರಿಗೆ ವಿರೋಧವಾಗಿ ತನ್ನ ಕೈಗಳನ್ನು ಹಾಕಿದ್ದಾನೆ; ತನ್ನ ಒಡಂಬಡಿಕೆಯನ್ನು ಮುರಿದಿದ್ದಾನೆ. 21 ಅವನ ಬಾಯಿ ಮಾತುಗಳು ಬೆಣ್ಣೆಗಿಂತ ನುಣುಪಾಗಿವೆ; ಅವನ ಹೃದ ಯವೋ ಕಲಹಮಯವೇ. ಅವನ ಮಾತುಗಳು ಎಣ್ಣೆ ಗಿಂತ ನಯವಾಗಿವೆ; ಆದರೆ ಅವು ಬಿಚ್ಚು ಕತ್ತಿಗಳಾಗಿವೆ. 22 ನಿನ್ನ ಭಾರವನ್ನು ಕರ್ತನ ಮೇಲೆ ಹಾಕು; ಆತನು ನಿನಗೆ ಆಧಾರವಾಗಿರುವನು. ಆತನು ಎಂದೆಂದಿಗೂ ನೀತಿವಂತನನ್ನು ಕದಲಗೊಡಿಸನು. 23 ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 55 / 150
×

Alert

×

Kannada Letters Keypad References