1. ಓ ಕರ್ತನೇ, ನನ್ನ ಸಂಗಡ ವ್ಯಾಜ್ಯವಾಡುವವರೊಡನೆ ಸಂಗಡ ವ್ಯಾಜ್ಯವಾಡು; ನನಗೆ ವಿರೋಧವಾಗಿ ಯುದ್ಧಮಾಡುವವರ ಸಂಗಡ ಯುದ್ಧ ಮಾಡು.
|
3. ಭಲ್ಲೆ ಯನ್ನು ಹಿಡಿದು ನನ್ನನ್ನು ಹಿಂಸಿಸುವವರಿಗೆ ಎದುರಾಗಿ ಅಡ್ಡಗಟ್ಟಿ--ನಾನೇ ನಿನ್ನ ರಕ್ಷಣೆ ಎಂದು ನನ್ನ ಪ್ರಾಣಕ್ಕೆ ಹೇಳು.
|
4. ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.
|
7. ಕಾರಣವಿಲ್ಲದೆ ಅವರು ನನಗೋಸ್ಕರ ತಮ್ಮ ಬಲೆಯನ್ನು ಕುಣಿಯಲ್ಲಿ ಅಡಗಿಸಿಟ್ಟಿದ್ದಾರೆ; ಕಾರಣವಿಲ್ಲದೆ ನನ್ನ ಪ್ರಾಣಕೋಸ್ಕರ ಅದನ್ನು ಅಗೆದಿದ್ದಾರೆ.
|
8. ನಾಶನವು ಅವನಿಗೆ ತಿಳಿಯದೆ ಬರಲಿ; ಅವನು ಅಡಗಿಸಿಟ್ಟ ಬಲೆಯು ಅವನನ್ನೇ ಹಿಡಿಯಲಿ; ಅಂಥಾ ನಾಶನಕ್ಕಾಗಿ ಅವನು ಅದರಲ್ಲಿಯೇ ಬೀಳಲಿ,
|
10. ಕರ್ತನೇ, ಬಡವನನ್ನು ಅವನಿಗಿಂತ ಬಲಿಷ್ಠರಿಂದ ಹೌದು, ದರಿದ್ರರನ್ನೂ ಕೊರತೆಯುಳ್ಳವರನ್ನೂ ಸುಲುಕೊಳ್ಳುವವನಿಂದ ಬಿಡಿ ಸುವವನಾದ ನಿನ್ನ ಹಾಗೆ ಯಾರು ಎಂದು ನನ್ನ ಎಲು ಬುಗಳೆಲ್ಲಾ ಹೇಳುವವು.
|
13. ನಾನಾ ದರೋ ಅವರು ಅಸ್ವಸ್ಥವಾದಾಗ, ಗೋಣೀ ತಟ್ಟು ಹೊದ್ದುಕೊಂಡು ನನ್ನ ಪ್ರಾಣವನ್ನು ಉಪವಾಸದಿಂದ ಕುಂದಿಸಿದೆನು; ನನ್ನ ಪ್ರಾರ್ಥನೆಯು ನನ್ನ ಎದೆಗೆ ತಿರುಗಿತು.
|
14. ಅವನು ನನಗೆ ಸ್ನೇಹಿತನೂ ಇಲ್ಲವೆ ಸಹೋದರನೂ ಆದ ಹಾಗೆ ನಡೆದುಕೊಂಡೆನು; ತಾಯಿಗಾಗಿ ದುಃಖಪಡುವವನ ಹಾಗೆ ಭಾರವುಳ್ಳವ ನಾಗಿ ಬೊಗ್ಗಿಕೊಂಡೆನು.
|
15. ನನ್ನ ಆಪತ್ತಿನಲ್ಲಿ ಅವರು ಸಂತೋಷಪಟ್ಟು ಕೂಡಿಕೊಂಡರು; ಹೌದು, ನಾನರಿ ಯದ ದೂಷಕರು ನನಗೆ ವಿರೋಧವಾಗಿ ಕೂಡಿ ಕೊಂಡರು; ಸುಮ್ಮನಿರದೆ ನನ್ನನ್ನು ಸುಲುಕೊಂಡರು.
|
19. ನನ್ನ ಶತ್ರುಗಳು ನನ್ನ ವಿಷ ಯದಲ್ಲಿ ಸುಳ್ಳಾಗಿ ಸಂತೋಷಪಡದೆ ಇರಲಿ; ಇಲ್ಲವೆ ನನ್ನನ್ನು ಕಾರಣವಿಲ್ಲದೆ ಹಗೆಮಾಡುವವರು ಕಣ್ಣು ಸನ್ನೆಮಾಡದೆ ಇರಲಿ.
|
25. ಅವರು ತಮ್ಮ ಹೃದಯ ದಲ್ಲಿ--ಹಾ, ನಮ್ಮ ಇಷ್ಟವೇ ನೆರವೇರಿತು ಎಂದು ಹೇಳದಿರಲಿ. ಅವನನ್ನು ನುಂಗಿ ಬಿಟ್ಟೆವೆಂದೂ ಅವರು ಹೇಳದೆ ಇರಲಿ;
|
26. ನನ್ನ ಕೇಡಿನಲ್ಲಿ ಸಂತೋಷ ಪಡುವವರು ಕೂಡ ನಾಚಿಕೊಂಡು ಒಟ್ಟಿಗೆ ಗಲಿಬಿಲಿ ಯಾಗಿಲಿ, ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊದ್ದುಕೊಳ್ಳಲಿ.
|
27. ನನ್ನ ನೀತಿಯಲ್ಲಿ ಸಂತೋಷ ಪಡುವವರು ಉತ್ಸಾಹಧ್ವನಿಮಾಡಿ ಆನಂದಪಡಲಿ; ಹೌದು, ತನ್ನ ಸೇವಕನ ಅಭಿವೃದ್ಧಿಯಲ್ಲಿ ಸಂತೋ ಷಪಡುವ ಕರ್ತನು ಮಹಿಮೆಹೊಂದಲಿ ಎಂದು ಅವರು ಯಾವಾಗಲೂ ಹೇಳಲಿ.ಆಗ ನನ್ನ ನಾಲಿ ಗೆಯು ನಿನ್ನ ನೀತಿಯನ್ನೂ ಸ್ತೋತ್ರವನ್ನೂ ದಿನವೆಲ್ಲಾ ಉಚ್ಚರಿಸುವದು.
|