ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು
1. ಓ ಕರ್ತನೇ, ನಿನ್ನನ್ನು ಕೊಂಡಾಡುವೆನು; ನೀನು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿ ನನ್ನನ್ನು ಮೇಲಕ್ಕೆ ಎತ್ತಿದ್ದೀ.
2. ನನ್ನ ದೇವರಾದ ಓ ಕರ್ತನೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದ್ದೀ.
3. ಓ ಕರ್ತನೇ, ನನ್ನ ಪ್ರಾಣವನ್ನು ಸಮಾಧಿಯಿಂದ ಎತ್ತಿದ್ದೀ; ನಾನು ತಗ್ಗಿಗೆ ಇಳಿಯದಂತೆ ನನ್ನನ್ನು ಜೀವದಲ್ಲಿ ಕಾಪಾಡಿದ್ದೀ.
4. ಓ ಕರ್ತನ ಪರಿಶುದ್ಧರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.
5. ಆತನ ಕೋಪವು ಕ್ಷಣಮಾತ್ರ. ಆತನ ಕಟಾಕ್ಷವು ಜೀವವೇ; ರಾತ್ರಿಯಲ್ಲಿ ದುಃಖವು ತಂಗಬಹುದಾದರೂ ಬೆಳಿಗ್ಗೆ ಆನಂದವು ಬರುವದು.
6. ನನ್ನ ಅಭಿವೃದ್ಧಿಯಲ್ಲಿ--ನಾನು ಎಂದಿಗೂ ಕದಲು ವದಿಲ್ಲ ಎಂದು ಹೇಳಿದೆನು.
7. ಕರ್ತನೇ, ನಿನ್ನ ಕಟಾ ಕ್ಷದಿಂದ ನನ್ನ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀ, ನಿನ್ನ ಮುಖವನ್ನು ಮರೆಮಾಡಲು ಕಳವಳಗೊಂಡೆನು.
8. ಓ ಕರ್ತನೇ, ನಾನು ನಿನಗೆ ಕೂಗಿಕೊಂಡೆನು; ಕರ್ತ ನಿಗೆ ವಿಜ್ಞಾಪನೆ ಮಾಡಿದೆನು.
9. ನಾನು ಕುಣಿಯಲ್ಲಿಳಿ ದರೆ ನನ್ನ ರಕ್ತದಲ್ಲಿ ಲಾಭವೇನು? ಧೂಳು ನಿನ್ನನ್ನು ಕೊಂಡಾಡುವದೋ? ಅದು ನಿನ್ನ ಸತ್ಯವನ್ನು ತಿಳಿಸು ವದೋ?
10. ಓ ಕರ್ತನೇ, ಕೇಳು; ನನ್ನ ಮೇಲೆ ಕರುಣೆಯಿಡು. ಕರ್ತನೇ, ನನಗೆ ಸಹಾಯಕನಾಗಿರು.
11. ನೀನು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರು ಗಿಸಿದ್ದೀ; ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಸಂತೋಷ ದಿಂದ ನನ್ನ ನಡುವನ್ನು ಕಟ್ಟಿದ್ದೀ.ಹೀಗೆ ನನ್ನ ಹೆಚ್ಚಳವು ಮೌನವಾಗಿರದೆ ನಿನ್ನನ್ನು ಕೀರ್ತಿಸುವದು. ನನ್ನ ದೇವರಾದ ಓ ಕರ್ತನೇ, ಯುಗಯುಗಕ್ಕೂ ನಿನ್ನನ್ನು ಕೊಂಡಾಡುವೆನು.
12. ಹೀಗೆ ನನ್ನ ಹೆಚ್ಚಳವು ಮೌನವಾಗಿರದೆ ನಿನ್ನನ್ನು ಕೀರ್ತಿಸುವದು. ನನ್ನ ದೇವರಾದ ಓ ಕರ್ತನೇ, ಯುಗಯುಗಕ್ಕೂ ನಿನ್ನನ್ನು ಕೊಂಡಾಡುವೆನು.

Notes

No Verse Added

Total 150 Chapters, Current Chapter 30 of Total Chapters 150
ಕೀರ್ತನೆಗಳು 30:27
1. ಕರ್ತನೇ, ನಿನ್ನನ್ನು ಕೊಂಡಾಡುವೆನು; ನೀನು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿ ನನ್ನನ್ನು ಮೇಲಕ್ಕೆ ಎತ್ತಿದ್ದೀ.
2. ನನ್ನ ದೇವರಾದ ಕರ್ತನೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದ್ದೀ.
3. ಕರ್ತನೇ, ನನ್ನ ಪ್ರಾಣವನ್ನು ಸಮಾಧಿಯಿಂದ ಎತ್ತಿದ್ದೀ; ನಾನು ತಗ್ಗಿಗೆ ಇಳಿಯದಂತೆ ನನ್ನನ್ನು ಜೀವದಲ್ಲಿ ಕಾಪಾಡಿದ್ದೀ.
4. ಕರ್ತನ ಪರಿಶುದ್ಧರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.
5. ಆತನ ಕೋಪವು ಕ್ಷಣಮಾತ್ರ. ಆತನ ಕಟಾಕ್ಷವು ಜೀವವೇ; ರಾತ್ರಿಯಲ್ಲಿ ದುಃಖವು ತಂಗಬಹುದಾದರೂ ಬೆಳಿಗ್ಗೆ ಆನಂದವು ಬರುವದು.
6. ನನ್ನ ಅಭಿವೃದ್ಧಿಯಲ್ಲಿ--ನಾನು ಎಂದಿಗೂ ಕದಲು ವದಿಲ್ಲ ಎಂದು ಹೇಳಿದೆನು.
7. ಕರ್ತನೇ, ನಿನ್ನ ಕಟಾ ಕ್ಷದಿಂದ ನನ್ನ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀ, ನಿನ್ನ ಮುಖವನ್ನು ಮರೆಮಾಡಲು ಕಳವಳಗೊಂಡೆನು.
8. ಕರ್ತನೇ, ನಾನು ನಿನಗೆ ಕೂಗಿಕೊಂಡೆನು; ಕರ್ತ ನಿಗೆ ವಿಜ್ಞಾಪನೆ ಮಾಡಿದೆನು.
9. ನಾನು ಕುಣಿಯಲ್ಲಿಳಿ ದರೆ ನನ್ನ ರಕ್ತದಲ್ಲಿ ಲಾಭವೇನು? ಧೂಳು ನಿನ್ನನ್ನು ಕೊಂಡಾಡುವದೋ? ಅದು ನಿನ್ನ ಸತ್ಯವನ್ನು ತಿಳಿಸು ವದೋ?
10. ಕರ್ತನೇ, ಕೇಳು; ನನ್ನ ಮೇಲೆ ಕರುಣೆಯಿಡು. ಕರ್ತನೇ, ನನಗೆ ಸಹಾಯಕನಾಗಿರು.
11. ನೀನು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರು ಗಿಸಿದ್ದೀ; ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಸಂತೋಷ ದಿಂದ ನನ್ನ ನಡುವನ್ನು ಕಟ್ಟಿದ್ದೀ.ಹೀಗೆ ನನ್ನ ಹೆಚ್ಚಳವು ಮೌನವಾಗಿರದೆ ನಿನ್ನನ್ನು ಕೀರ್ತಿಸುವದು. ನನ್ನ ದೇವರಾದ ಕರ್ತನೇ, ಯುಗಯುಗಕ್ಕೂ ನಿನ್ನನ್ನು ಕೊಂಡಾಡುವೆನು.
12. ಹೀಗೆ ನನ್ನ ಹೆಚ್ಚಳವು ಮೌನವಾಗಿರದೆ ನಿನ್ನನ್ನು ಕೀರ್ತಿಸುವದು. ನನ್ನ ದೇವರಾದ ಕರ್ತನೇ, ಯುಗಯುಗಕ್ಕೂ ನಿನ್ನನ್ನು ಕೊಂಡಾಡುವೆನು.
Total 150 Chapters, Current Chapter 30 of Total Chapters 150
×

Alert

×

kannada Letters Keypad References