2. ಆತನು ನನ್ನ ಒಳ್ಳೇತನವೂ ನನ್ನ ಕೋಟೆಯೂ ನನ್ನ ಎತ್ತರವಾದ ದುರ್ಗವೂ ನನ್ನನ್ನು ತಪ್ಪಿಸುವವನೂ ನನ್ನ ಭರವಸವೂ ನನ್ನ ಗುರಾಣಿಯೂ ನನ್ನ ಜನರನ್ನು ನನಗೆ ವಶಮಾಡುವಾತನೂ ಆಗಿದ್ದಾನೆ.
|
3. ಕರ್ತನೇ, ನೀನು ಮನುಷ್ಯನನ್ನು ತಿಳುಕೊಳ್ಳುವ ಹಾಗೆ ಅವನು ಎಷ್ಟರವನು? ನೀನು ಅವನನ್ನು ಲಕ್ಷಿಸುವ ಹಾಗೆ ನರಪುತ್ರನು ಎಷ್ಟರವನು?
|
7. ನಿನ್ನ ಕೈಯನ್ನು ಉನ್ನತದಿಂದ ಚಾಚಿ, ಮಹಾಜಲಗಳಿಂದಲೂ ಅನ್ಯರ ಮಕ್ಕಳ ಕೈಯಿಂದಲೂ ನನ್ನನ್ನು ತಪ್ಪಿಸು, ನನ್ನನ್ನು ಬಿಡಿಸು.
|
11. ಅನ್ಯರ ಮಕ್ಕಳ ಕೈಯಿಂದ ನನ್ನನ್ನು ತಪ್ಪಿಸಿ, ನನ್ನನ್ನು ಬಿಡಿಸು; ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು; ಅವರ ಬಲಗೈ ಮೋಸದ ಬಲಗೈ ಆಗಿದೆ.
|
12. ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ ತಮ್ಮ ಯೌವನದಲ್ಲಿ ಬೆಳೆದವರಾಗಿರಲಿ; ನಮ್ಮ ಹೆಣ್ಣು ಮಕ್ಕಳು ಅರಮನೆಯ ಕಟ್ಟುವಿಕೆಯ ಪ್ರಕಾರ ಕೆತ್ತಲ್ಪಟ್ಟ ಮೂಲೆಯ ಕಲ್ಲುಗಳ ಹಾಗಿರಲಿ.
|
13. ನಮ್ಮ ಉಗ್ರಾಣಗಳು ತುಂಬಿ ನಾನಾ ವಿಧವಾದ ಪದಾರ್ಥಗಳನ್ನು ಹಂಚಲಿ; ನಮ್ಮ ಕುರಿಮಂದೆಗಳು ಸಹಸ್ರ ಸಹಸ್ರವಾಗಿ ನಮ್ಮ ಬೀದಿಗಳಲ್ಲಿ ಹೆಚ್ಟಲಿ.
|
14. ನಮ್ಮ ಎತ್ತುಗಳು ಪ್ರಯಾಸಪಡುವದಕ್ಕೆ ಬಲವುಳ್ಳ ವುಗಳಾಗಲಿ; ಒಳಗೆ ನುಗ್ಗುವದಾಗಲಿ ಹೊರಗೆ ಹೋಗು ವದಾಗಲಿ ಆಗದಿರಲಿ; ನಮ್ಮ ಬೀದಿಗಳಲ್ಲಿ ದೂರು ವದು ಇಲ್ಲದಿರಲಿ.ಹೀಗಿರುವ ಜನರು ಧನ್ಯರು; ಕರ್ತನು ತಮಗೆ ದೇವರಾಗಿರುವ ಜನರು ಧನ್ಯರು.
|