4. ಆಗ ಕರ್ತನು ಮೋಶೆಗೆ--ಕರ್ತನ ಕೋಪಾಗ್ನಿಯು ಇಸ್ರಾಯೇಲಿ ನಿಂದ ತಿರುಗಿಕೊಳ್ಳುವ ಹಾಗೆ ನೀನು ಜನರ ಮುಖ್ಯಸ್ಥ ರೆಲ್ಲರನ್ನು ತಕ್ಕೊಂಡು ಅವರನ್ನು ಸೂರ್ಯನಿಗೆದುರಾಗಿ ಕರ್ತನ ಮುಂದೆ ತೂಗಹಾಕು.
|
5. ಮೋಶೆ ಇಸ್ರಾಯೇ ಲಿನ ನ್ಯಾಯಾಧಿಪತಿಗಳಿಗೆ--ನಿಮ್ಮಲ್ಲಿ ಒಬ್ಬೊಬ್ಬನು ಬಾಳ್ಪೆಯೋರಿಗೆ ಕೂಡಿಕೊಂಡಿರುವ ತನ್ನ ಮನುಷ್ಯರನ್ನು ಕೊಲ್ಲಬೇಕು ಅಂದನು.
|
6. ಇಗೋ, ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬನು ಬಂದು ಮೋಶೆಗೂ ಸಭೆಯ ಗುಡಾರದ ಮುಂದೆ ಅಳುತ್ತಿರುವ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಗೂ ಕಾಣುವ ಹಾಗೆ ತನ್ನ ಸಹೋದರರೊಳಗೆ ಒಬ್ಬ ಮಿದ್ಯಾನ್ ಸ್ತ್ರೀಯನ್ನು ತಂದನು.
|
7. ಆರೋನನ ಮಗನಾಗಿದ್ದ ಎಲೀಯಾಜರನ ಮಗನಾದ ಫೀನೆಹಾಸನೆಂಬ ಯಾಜಕನು ಅದನ್ನು ನೋಡಿ ಸಭೆಯ ಮಧ್ಯದಿಂದ ಎದ್ದು ತನ್ನ ಕೈಯಲ್ಲಿ ಭಲ್ಲೆಯನ್ನು ಹಿಡುಕೊಂಡು
|
8. ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ ಇಸ್ರಾಯೇಲಿನವನನ್ನೂ ಆ ಸ್ತ್ರೀಯನ್ನೂ ಇಬ್ಬರ ಹೊಟ್ಟೆಯನ್ನು ತಿವಿದನು; ಹೀಗೆ ಇಸ್ರಾಯೇಲ್ ಮಕ್ಕಳಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.
|
11. ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನಾದ ಯಾಜಕ ನಾಗಿರುವ ಫೀನೆಹಾಸನು ಇಸ್ರಾಯೇಲಿನ ಮಕ್ಕಳಲ್ಲಿ ನನಗೋಸ್ಕರ ಆಸಕ್ತನಾಗಿದ್ದು ನಾನು ನನ್ನ ರೋಷದಿಂದ ಅವರನ್ನು ನಾಶಮಾಡದ ಹಾಗೆ ನನ್ನ ಕೋಪವನ್ನು ಅವರ ಮೇಲಿನಿಂದ ತಿರುಗಿಸಿ ಬಿಟ್ಟಿದ್ದಾನೆ.
|
13. ಅವನು ತನ್ನ ದೇವರಿಗೋಸ್ಕರ ಆಸಕ್ತನಾಗಿದ್ದು ಇಸ್ರಾಯೇಲಿನ ಮಕ್ಕಳಿಗೋಸ್ಕರ ಪಾಪ ಪ್ರಾಯಶ್ಚಿತ್ತ ಮಾಡಿದ್ದರಿಂದ ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆಯಾಗಿರುವದು ಎಂದು ಹೇಳಿದನು.
|
14. ಆದರೆ ಮಿದ್ಯಾನ್ ಸ್ತ್ರೀಯ ಸಂಗಡ ಕೊಲ್ಲಲ್ಪಟ್ಟ ಆ ಇಸ್ರಾಯೇಲಿನವನ ಹೆಸರು ಜಿವ್ರೆಾ; ಅವನು ಸಾಲೂವಿನ ಮಗನು; ಸಿಮೆಯೋನ್ಯರ ತಂದೆ ಮನೆಯ ಪ್ರಧಾನನು.
|
15. ಕೊಲ್ಲಲ್ಪಟ್ಟ ಮಿದ್ಯಾನ್ ಸ್ತ್ರೀಯ ಹೆಸರು ಕೊಜ್ಬೀ; ಅವಳು ಮಿದ್ಯಾನ್ಯರ ಪ್ರಜೆಯ ಮುಖ್ಯಸ್ಥನೂ ಮನೆಯ ಯಜಮಾನನೂ ಆಗಿರುವ ಚೂರನ ಮಗಳಾಗಿದ್ದಳು.
|
17. ಮಿದ್ಯಾನ್ಯರಿಗೆ ಉಪದ್ರ ಕೊಟ್ಟು ಅವರನ್ನು ಹೊಡೆಯಬೇಕು.ಅವರು ಪೆಗೋರಿನ ವಿಷಯದಲ್ಲಿಯೂ ಪೆಗೋರಿಗೋಸ್ಕರ ವ್ಯಾಧಿಯ ದಿವಸದಲ್ಲಿ ಕೊಲ್ಲಲ್ಪಟ್ಟ ತಮ್ಮ ಸಹೋದರಿ ಯಾಗಿಯೂ ಮಿದ್ಯಾನ್ಯರ ಪ್ರಧಾನ ಮಗಳಾಗಿಯೂ ಇದ್ದ ಕೊಜ್ಬೀಯ ವಿಷಯದಲ್ಲಿಯೂ ನಿಮಗೆ ಮಾಡಿದ ಮೋಸಗಳಿಂದ ನಿಮಗೆ ಉಪದ್ರಕೊಡುತ್ತಾರೆ ಎಂದು ಹೇಳಿದನು.
|
18. ಅವರು ಪೆಗೋರಿನ ವಿಷಯದಲ್ಲಿಯೂ ಪೆಗೋರಿಗೋಸ್ಕರ ವ್ಯಾಧಿಯ ದಿವಸದಲ್ಲಿ ಕೊಲ್ಲಲ್ಪಟ್ಟ ತಮ್ಮ ಸಹೋದರಿ ಯಾಗಿಯೂ ಮಿದ್ಯಾನ್ಯರ ಪ್ರಧಾನ ಮಗಳಾಗಿಯೂ ಇದ್ದ ಕೊಜ್ಬೀಯ ವಿಷಯದಲ್ಲಿಯೂ ನಿಮಗೆ ಮಾಡಿದ ಮೋಸಗಳಿಂದ ನಿಮಗೆ ಉಪದ್ರಕೊಡುತ್ತಾರೆ ಎಂದು ಹೇಳಿದನು.
|