ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೋಬನು
1. ಆಗ ಶೂಹ್ಯನಾದ ಬಿಲ್ದದನು ಈ ಪ್ರಕಾರಉತ್ತರಿಸಿದನು--
2. ಎಷ್ಟರ ವರೆಗೆ ನೀನು ಇವುಗಳನ್ನು ನುಡಿಯುವಿ? ಎಷ್ಟರ ವರೆಗೆ ನಿನ್ನ ಬಾಯಿಯ ಮಾತುಗಳು ಬಿರುಗಾಳಿಯಂತಿರುವವು?
3. ದೇವರು ಅನ್ಯಾಯವಾದ ತೀರ್ಪುಮಾಡುತ್ತಾನೋ? ಸರ್ವಶಕ್ತನು ನೀತಿಗೆ ವಿರುದ್ಧವಾದದ್ದನ್ನು ಮಾಡು ವನೋ?
4. ನಿನ್ನ ಮಕ್ಕಳು ಆತನಿಗೆ ವಿರೋಧವಾಗಿ ಪಾಪಮಾಡಿದ್ದರೆ, ಅವರ ದ್ರೋಹದ ದೆಸೆಯಿಂದ ಅವರನ್ನು ತಳ್ಳಿಬಿಡುವನು.
5. ನೀನೇ ದೇವರನ್ನು ಜಾಗ್ರ ತೆಯಾಗಿ ಹುಡುಕಿ ಸರ್ವಶಕ್ತನಿಗೆ ಬಿನ್ನಹ ಮಾಡಿದರೆ
6. ನೀನು ಶುದ್ಧನೂ ಯಥಾರ್ಥನೂ ಆಗಿದ್ದರೆ ನಿಶ್ಚಯ ವಾಗಿ ಈಗಲೇ ಆತನು ನಿನಗೋಸ್ಕರ ಎಚ್ಚತ್ತು ನಿನ್ನ ನೀತಿಯ ನಿವಾಸವನ್ನು ಅಭಿವೃದ್ಧಿಗೊಳಿಸುವನು.
7. ನಿನ್ನ ಆರಂಭವು ಅಲ್ಪವಾಗಿದ್ದರೂ ನಿನ್ನ ಅಂತ್ಯವು ಬಹಳವಾಗಿ ವೃದ್ಧಿಹೊಂದುವದು.
8. ದಯಮಾಡಿ ಪೂರ್ವಿಕರನ್ನು ವಿಚಾರಿಸು; ಅವರ ಪಿತೃಗಳು ಕಂಡುಕೊಂಡದನ್ನು ಗಮನಿಸು.
9. ನಾವು ನಿನ್ನೆ ಹುಟ್ಟಿದವರೂ ಏನೂ ಅರಿಯವದವರೂ ಆಗಿ ದ್ದೇವೆ; ನಮ್ಮ ದಿವಸಗಳು ಭೂಮಿಯ ಮೇಲೆ ನೆರಳಿ ನಂತಿವೆ.
10. ಅವರು ನಿನಗೆ ಬೋಧಿಸುವದಿಲ್ಲವೋ? ನಿನ್ನೊಂದಿಗೆ ಮಾತನಾಡುವದಿಲ್ಲವೋ ? ತಮ್ಮ ಮಾತು ಗಳನ್ನು ಹೃದಯದೊಳಗಿಂದ ಹೊರತರುವದಿಲ್ಲವೋ?
11. ಕೆಸರಿಲ್ಲದೆ ಆಪು ಬೆಳೆಯುವದೋ? ನೀರಿಲ್ಲದೆ ಜಂಬು ಬೆಳೆಯುವದೋ?
12. ಅದು ಹಸುರಾಗಿ ಇನ್ನೂ ಕೊಯ್ಯದೆ ಇದ್ದಾಗಲೂ ಎಲ್ಲಾ ಹುಲ್ಲಿಗಿಂತಲೂ ಅದು ಮೊದಲು ಬಾಡುವದು.
13. ದೇವರನ್ನು ಮರೆಯುವ ವರೆಲ್ಲರ ಹಾದಿಗಳು ಹಾಗೆಯೇ; ಕಪಟಿಯ ನಿರೀಕ್ಷೆಯು ನಾಶವಾಗುವದು.
14. ಅವನ ನಿರೀಕ್ಷೆಯು ಕತ್ತರಿಸಲ್ಪಡುತ್ತದೆ; ಅವನ ಭರವಸವು ಜೇಡರ ಹುಳದ ಮನೆಯೇ.
15. ಅವನು ತನ್ನ ಮನೆಗೆ ಆತುಕೊಂಡರೆ ಅದು ನಿಲ್ಲದು; ಅದನ್ನು ಬಿಗಿ ಹಿಡಿದರೆ ಅದು ತಡೆಯಲಾರದು.
16. ಸೂರ್ಯನ ಮುಂದೆ ಅವನು ಹಸುರಾಗಿದ್ದಾನೆ; ಅವನ ಬಳ್ಳಿಯು ಅವನ ತೋಟದಲ್ಲಿ ಹಬ್ಬುವದು.
17. ಅವನ ಬೇರುಗಳು ರಾಶಿಯ ಮೇಲೆ ಸುತ್ತಿ ಕಲ್ಲಿನ ಸ್ಥಳವನ್ನು ಕಾಣುತ್ತವೆ.
18. ಅವನನ್ನು ಅವನ ಸ್ಥಳದಿಂದ ಕಿತ್ತಿದರೆ ಅದು--ನಾನು ನಿನ್ನನ್ನು ನೋಡಲಿಲ್ಲವೆಂದು ಅವನನ್ನು ಬೊಂಕುವದು;
19. ಇಗೋ, ಇದು ಅವನ ಮಾರ್ಗದ ಆನಂದವು. ಆದರೆ ಭೂಮಿಯೊಳಗಿನಿಂದ ಬೇರೆಯವರು ಮೊಳೆಯುವರು.
20. ಇಗೋ, ದೇವರು ಪರಿಶುದ್ಧನನ್ನು ತಿರಸ್ಕರಿಸು ವದಿಲ್ಲ; ಕೆಡುಕರಿಗೆ ಆತನು ಸಹಾಯ ಮಾಡುವದಿಲ್ಲ.
21. ಇನ್ನು ಆತನು ನಿನ್ನ ಬಾಯನ್ನು ನಗೆಯಿಂದ, ನಿನ್ನ ತುಟಿಗಳನ್ನು ಜಯಧ್ವನಿಯಿಂದ ತುಂಬಿಸುವನು.ನಿನ್ನನ್ನು ಹಗೆ ಮಾಡುವವರು ನಾಚಿಕೆಯನ್ನು ಧರಿಸಿಕೊಳ್ಳುವರು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವದು.
22. ನಿನ್ನನ್ನು ಹಗೆ ಮಾಡುವವರು ನಾಚಿಕೆಯನ್ನು ಧರಿಸಿಕೊಳ್ಳುವರು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವದು.

Notes

No Verse Added

Total 42 Chapters, Current Chapter 8 of Total Chapters 42
ಯೋಬನು 8:12
1. ಆಗ ಶೂಹ್ಯನಾದ ಬಿಲ್ದದನು ಪ್ರಕಾರಉತ್ತರಿಸಿದನು--

×

Alert

×

kannada Letters Keypad References