ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೋಬನು
1. ಬೆಳ್ಳಿಗೆ ಗಣಿಯೂ ಬಂಗಾರಕ್ಕೆ ಚೊಕ್ಕ ಮಾಡುವ ಸ್ಥಳವೂ ಉಂಟಲ್ಲಾ?
2. ಕಬ್ಬಿಣ ವನ್ನು ಭೂಮಿಯಿಂದ ತೆಗೆಯುತ್ತಾರೆ; ಕಲ್ಲನ್ನು ಕರಗಿಸಿ ತಾಮ್ರವನ್ನು ತೆಗೆಯುತ್ತಾರೆ.
3. ಕತ್ತಲೆಗೆ ಮೇರೆ ಇಡು ತ್ತಾರೆ. ಅಂಧಕಾರದಲ್ಲಿಯೂ ಮರಣದ ನೆರಳಿನ ಲ್ಲಿಯೂ ಇರುವ ಕಲ್ಲುಗಳನ್ನು ಕಟ್ಟಕಡೇ ವರೆಗೂ ಅವರು ಶೋಧಿಸುತ್ತಾರೆ.
4. ನಿವಾಸದಿಂದ ಪ್ರವಾಹವು ಹೊರ ಚಿಮ್ಮುತ್ತದೆ. ನೀರುಗಳು ಕಾಲಿಗೆ ತಪ್ಪಿಸಿಕೊಂಡು ಒಣಗಿಹೋಗಿ ಮನುಷ್ಯರಿಗೆ ದೂರವಾಗಿವೆ.
5. ಭೂಮಿ ಯಿಂದ ರೊಟ್ಟಿಯು ಬರುತ್ತದೆ; ಆದರೆ ಅದರ ಕೆಳಗಿ ನದು ಬೆಂಕಿ ಬಿದ್ದಂತೆ ಹಾಳಾಗಿರುವದು.
6. ಅದರ ಕಲ್ಲುಗಳು ನೀಲಮಣಿಗಳ ಸ್ಥಳವಾಗಿವೆ; ಬಂಗಾರದ ಧೂಳು ಅದಕ್ಕೆ ಉಂಟು.
7. ಆ ಹಾದಿಯನ್ನು ಪಕ್ಷಿ ತಿಳಿಯಲಿಲ್ಲ; ಹದ್ದಿನ ಕಣ್ಣು ಅದನ್ನು ದೃಷ್ಟಿಸಲಿಲ್ಲ;
8. ಸಿಂಹದ ಮರಿಗಳು ಅದರಲ್ಲಿ ನಡೆಯಲಿಲ್ಲ. ಉಗ್ರ ವಾದ ಸಿಂಹವು ಅದನ್ನು ದಾಟಲಿಲ್ಲ.
9. ಅವನು ಬಂಡೆಯ ಮೇಲೆ ಕೈ ಹಾಕುತ್ತಾನೆ; ಪರ್ವತಗಳನ್ನು ಬುಡದಿಂದ ಮಗುಚುತ್ತಾನೆ.
10. ಬಂಡೆಗಳಲ್ಲಿ ಮಾರ್ಗ ಗಳನ್ನು ಕೊರೆದುಬಿಡುತ್ತಾನೆ; ಅವನ ಕಣ್ಣು ಅಮೂಲ್ಯ ವಾದದ್ದನ್ನೆಲ್ಲಾ ನೋಡುತ್ತದೆ.
11. ಅವನು ಪ್ರವಾಹ ಗಳನ್ನು ದಡ ವಿಾರದಂತೆ ಕಟ್ಟಿ ಮರೆಯಾದದ್ದನ್ನು ಬೆಳಕಿಗೆ ತರುತ್ತಾನೆ.
12. ಆದರೆ ಜ್ಞಾನವು ಎಲ್ಲಿ ದೊರಕುವದು? ಗ್ರಹಿಕೆ ಇರುವ ಸ್ಥಳ ಎಲ್ಲಿ?
13. ಮನುಷ್ಯನು ಅದರ ಬೆಲೆಯನ್ನು ತಿಳಿದುಕೊಳ್ಳುವದಿಲ್ಲ; ಜೀವಿತರ ಭೂಮಿಯಲ್ಲಿ ಅದು ದೊರಕುವದಿಲ್ಲ.
14. ಅಗಾಧವು--ಅದು ನನ್ನಲ್ಲಿ ಇಲ್ಲ ಅನ್ನುತ್ತದೆ; ಸಮುದ್ರವು--ನನ್ನ ಬಳಿಯಲ್ಲಿ ಇಲ್ಲ ಅನ್ನು ತ್ತದೆ.
15. ಅಪರಂಜಿಯನ್ನು ಅದಕ್ಕೆ ಬದಲಾಗಿ ಕೊಡು ವದಿಲ್ಲ; ಅದರ ಕ್ರಯಕ್ಕಾಗಿ ಬೆಳ್ಳಿಯನ್ನು ತೂಗುವ ದಿಲ್ಲ.
16. ಅದನ್ನು ಓಫೀರಿನ ಬಂಗಾರಕ್ಕೂ ಅಮೂಲ್ಯ ವಾದ ಗೋಮೇಧಿಕಕ್ಕೂ ನೀಲಕ್ಕೂ ಬೆಲೆ ಕಟ್ಟುವ ದಿಲ್ಲ.
17. ಬಂಗಾರವೂ ಸ್ಫಟಿಕವೂ ಅದಕ್ಕೆ ಸಮನಾಗಿರು ವದಿಲ್ಲ; ಅಪರಂಜಿಯ ಆಭರಣಗಳು ಅದಕ್ಕೆ ಸಮವಲ್ಲ;
18. ಹವಳವನ್ನೂ ಮುತ್ತುಗಳನ್ನೂ ನೆನಪು ಮಾಡುವದಿಲ್ಲ; ಜ್ಞಾನದ ಸಂಪತ್ತು ಮಾಣಿಕ್ಯಗಳಿಗಿಂತ ಮೇಲಾದದ್ದು.
19. ಕೂಷಿನ ಪುಷ್ಯರಾಗ ಅದಕ್ಕೆ ಈಡಾಗಿರುವದಿಲ್ಲ; ಶುದ್ಧ ಬಂಗಾರಕ್ಕೆ ಅದನ್ನು ತೂಗಿಸುವದಿಲ್ಲ.
20. ಆದರೆ ಜ್ಞಾನವು ಎಲ್ಲಿಂದ ಬರುವದು? ಗ್ರಹಿಕೆಯ ಸ್ಥಳವು ಎಲ್ಲಿ?
21. ಎಲ್ಲಾ ಜೀವಿಗಳ ಕಣ್ಣು ಗಳಿಗೆ ಅದು ಮರೆಯಾಗಿದೆ; ಆಕಾಶದ ಪಕ್ಷಿಗಳಿಗೆ ಮರೆಯಾಗಿದೆ.
22. ನಾಶಸ್ಥಾನವೂ ಮರಣವೂ --ಅದರ ಸುದ್ದಿಯನ್ನು ನಮ್ಮ ಕಿವಿಗಳಿಂದ ಕೇಳಿದ್ದೇವೆ ಅನ್ನುತ್ತವೆ.
23. ದೇವರು ಅದರ ಮಾರ್ಗವನ್ನು ಗ್ರಹಿಸಿ ಕೊಂಡಿದ್ದಾನೆ; ಆತನೇ ಅದರ ಸ್ಥಳವನ್ನು ತಿಳಿದಿದ್ದಾನೆ.
24. ಗಾಳಿಗೂ ತೂಕವನ್ನು ನೇಮಿಸಿ ಆತನು ಭೂಮಿಯ ಕಟ್ಟಕಡೆಗೂ ದೃಷ್ಟಿಸಿ ಆಕಾಶದ ಕೆಳಗೆ ನೋಡುತ್ತಾನೆ.
25. ನೀರನ್ನು ಅಳತೆಯಿಂದ ಪರಿಮಾಣ ನೋಡಿದ್ದಾನೆ.
26. ಆತನು ಮಳೆಗೆ ಕಟ್ಟಳೆಯನ್ನೂ ಗುಡುಗಿನ ಮಿಂಚಿಗೆ ಮಾರ್ಗವನ್ನೂ ಮಾಡಿದಾಗ
27. ಆಗಲೇ ಅದನ್ನು ನೋಡಿ ಪ್ರಕಟಿಸಿದನು; ಆತನು ಅದನ್ನು ಸಿದ್ಧಮಾಡಿ ಹೌದು, ಪರಿಶೋಧಿಸಿದನು.ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.
28. ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.

Notes

No Verse Added

Total 42 Chapters, Current Chapter 28 of Total Chapters 42
ಯೋಬನು 28:12
1. ಬೆಳ್ಳಿಗೆ ಗಣಿಯೂ ಬಂಗಾರಕ್ಕೆ ಚೊಕ್ಕ ಮಾಡುವ ಸ್ಥಳವೂ ಉಂಟಲ್ಲಾ?
2. ಕಬ್ಬಿಣ ವನ್ನು ಭೂಮಿಯಿಂದ ತೆಗೆಯುತ್ತಾರೆ; ಕಲ್ಲನ್ನು ಕರಗಿಸಿ ತಾಮ್ರವನ್ನು ತೆಗೆಯುತ್ತಾರೆ.
3. ಕತ್ತಲೆಗೆ ಮೇರೆ ಇಡು ತ್ತಾರೆ. ಅಂಧಕಾರದಲ್ಲಿಯೂ ಮರಣದ ನೆರಳಿನ ಲ್ಲಿಯೂ ಇರುವ ಕಲ್ಲುಗಳನ್ನು ಕಟ್ಟಕಡೇ ವರೆಗೂ ಅವರು ಶೋಧಿಸುತ್ತಾರೆ.
4. ನಿವಾಸದಿಂದ ಪ್ರವಾಹವು ಹೊರ ಚಿಮ್ಮುತ್ತದೆ. ನೀರುಗಳು ಕಾಲಿಗೆ ತಪ್ಪಿಸಿಕೊಂಡು ಒಣಗಿಹೋಗಿ ಮನುಷ್ಯರಿಗೆ ದೂರವಾಗಿವೆ.
5. ಭೂಮಿ ಯಿಂದ ರೊಟ್ಟಿಯು ಬರುತ್ತದೆ; ಆದರೆ ಅದರ ಕೆಳಗಿ ನದು ಬೆಂಕಿ ಬಿದ್ದಂತೆ ಹಾಳಾಗಿರುವದು.
6. ಅದರ ಕಲ್ಲುಗಳು ನೀಲಮಣಿಗಳ ಸ್ಥಳವಾಗಿವೆ; ಬಂಗಾರದ ಧೂಳು ಅದಕ್ಕೆ ಉಂಟು.
7. ಹಾದಿಯನ್ನು ಪಕ್ಷಿ ತಿಳಿಯಲಿಲ್ಲ; ಹದ್ದಿನ ಕಣ್ಣು ಅದನ್ನು ದೃಷ್ಟಿಸಲಿಲ್ಲ;
8. ಸಿಂಹದ ಮರಿಗಳು ಅದರಲ್ಲಿ ನಡೆಯಲಿಲ್ಲ. ಉಗ್ರ ವಾದ ಸಿಂಹವು ಅದನ್ನು ದಾಟಲಿಲ್ಲ.
9. ಅವನು ಬಂಡೆಯ ಮೇಲೆ ಕೈ ಹಾಕುತ್ತಾನೆ; ಪರ್ವತಗಳನ್ನು ಬುಡದಿಂದ ಮಗುಚುತ್ತಾನೆ.
10. ಬಂಡೆಗಳಲ್ಲಿ ಮಾರ್ಗ ಗಳನ್ನು ಕೊರೆದುಬಿಡುತ್ತಾನೆ; ಅವನ ಕಣ್ಣು ಅಮೂಲ್ಯ ವಾದದ್ದನ್ನೆಲ್ಲಾ ನೋಡುತ್ತದೆ.
11. ಅವನು ಪ್ರವಾಹ ಗಳನ್ನು ದಡ ವಿಾರದಂತೆ ಕಟ್ಟಿ ಮರೆಯಾದದ್ದನ್ನು ಬೆಳಕಿಗೆ ತರುತ್ತಾನೆ.
12. ಆದರೆ ಜ್ಞಾನವು ಎಲ್ಲಿ ದೊರಕುವದು? ಗ್ರಹಿಕೆ ಇರುವ ಸ್ಥಳ ಎಲ್ಲಿ?
13. ಮನುಷ್ಯನು ಅದರ ಬೆಲೆಯನ್ನು ತಿಳಿದುಕೊಳ್ಳುವದಿಲ್ಲ; ಜೀವಿತರ ಭೂಮಿಯಲ್ಲಿ ಅದು ದೊರಕುವದಿಲ್ಲ.
14. ಅಗಾಧವು--ಅದು ನನ್ನಲ್ಲಿ ಇಲ್ಲ ಅನ್ನುತ್ತದೆ; ಸಮುದ್ರವು--ನನ್ನ ಬಳಿಯಲ್ಲಿ ಇಲ್ಲ ಅನ್ನು ತ್ತದೆ.
15. ಅಪರಂಜಿಯನ್ನು ಅದಕ್ಕೆ ಬದಲಾಗಿ ಕೊಡು ವದಿಲ್ಲ; ಅದರ ಕ್ರಯಕ್ಕಾಗಿ ಬೆಳ್ಳಿಯನ್ನು ತೂಗುವ ದಿಲ್ಲ.
16. ಅದನ್ನು ಓಫೀರಿನ ಬಂಗಾರಕ್ಕೂ ಅಮೂಲ್ಯ ವಾದ ಗೋಮೇಧಿಕಕ್ಕೂ ನೀಲಕ್ಕೂ ಬೆಲೆ ಕಟ್ಟುವ ದಿಲ್ಲ.
17. ಬಂಗಾರವೂ ಸ್ಫಟಿಕವೂ ಅದಕ್ಕೆ ಸಮನಾಗಿರು ವದಿಲ್ಲ; ಅಪರಂಜಿಯ ಆಭರಣಗಳು ಅದಕ್ಕೆ ಸಮವಲ್ಲ;
18. ಹವಳವನ್ನೂ ಮುತ್ತುಗಳನ್ನೂ ನೆನಪು ಮಾಡುವದಿಲ್ಲ; ಜ್ಞಾನದ ಸಂಪತ್ತು ಮಾಣಿಕ್ಯಗಳಿಗಿಂತ ಮೇಲಾದದ್ದು.
19. ಕೂಷಿನ ಪುಷ್ಯರಾಗ ಅದಕ್ಕೆ ಈಡಾಗಿರುವದಿಲ್ಲ; ಶುದ್ಧ ಬಂಗಾರಕ್ಕೆ ಅದನ್ನು ತೂಗಿಸುವದಿಲ್ಲ.
20. ಆದರೆ ಜ್ಞಾನವು ಎಲ್ಲಿಂದ ಬರುವದು? ಗ್ರಹಿಕೆಯ ಸ್ಥಳವು ಎಲ್ಲಿ?
21. ಎಲ್ಲಾ ಜೀವಿಗಳ ಕಣ್ಣು ಗಳಿಗೆ ಅದು ಮರೆಯಾಗಿದೆ; ಆಕಾಶದ ಪಕ್ಷಿಗಳಿಗೆ ಮರೆಯಾಗಿದೆ.
22. ನಾಶಸ್ಥಾನವೂ ಮರಣವೂ --ಅದರ ಸುದ್ದಿಯನ್ನು ನಮ್ಮ ಕಿವಿಗಳಿಂದ ಕೇಳಿದ್ದೇವೆ ಅನ್ನುತ್ತವೆ.
23. ದೇವರು ಅದರ ಮಾರ್ಗವನ್ನು ಗ್ರಹಿಸಿ ಕೊಂಡಿದ್ದಾನೆ; ಆತನೇ ಅದರ ಸ್ಥಳವನ್ನು ತಿಳಿದಿದ್ದಾನೆ.
24. ಗಾಳಿಗೂ ತೂಕವನ್ನು ನೇಮಿಸಿ ಆತನು ಭೂಮಿಯ ಕಟ್ಟಕಡೆಗೂ ದೃಷ್ಟಿಸಿ ಆಕಾಶದ ಕೆಳಗೆ ನೋಡುತ್ತಾನೆ.
25. ನೀರನ್ನು ಅಳತೆಯಿಂದ ಪರಿಮಾಣ ನೋಡಿದ್ದಾನೆ.
26. ಆತನು ಮಳೆಗೆ ಕಟ್ಟಳೆಯನ್ನೂ ಗುಡುಗಿನ ಮಿಂಚಿಗೆ ಮಾರ್ಗವನ್ನೂ ಮಾಡಿದಾಗ
27. ಆಗಲೇ ಅದನ್ನು ನೋಡಿ ಪ್ರಕಟಿಸಿದನು; ಆತನು ಅದನ್ನು ಸಿದ್ಧಮಾಡಿ ಹೌದು, ಪರಿಶೋಧಿಸಿದನು.ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.
28. ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.
Total 42 Chapters, Current Chapter 28 of Total Chapters 42
×

Alert

×

kannada Letters Keypad References