4. ನಿಮ್ಮ ಪ್ರಾಣವು ನನ್ನ ಪ್ರಾಣದ ಸ್ಥಳದಲ್ಲಿ ಇದ್ದರೆ ನಾನು ಸಹ ನಿಮ್ಮ ಹಾಗೆ ಮಾತಾಡಬಹುದು; ಮಾತುಗಳನ್ನು ನಿಮ್ಮ ಮೇಲೆ ಕೂಡಿಸಬಹುದು; ನಿಮಗೆ ವಿರೋಧವಾಗಿ ನನ್ನ ತಲೆ ಅಲ್ಲಾಡಿಸಬಹುದು.
|
8. ನನ್ನನ್ನು ಸುಕ್ಕುಗಳಿಂದ ತುಂಬಿಸಿದ್ದೀ; ಅವು ನನಗೆ ವಿರೋಧವಾಗಿ ಸಾಕ್ಷಿಯಾದವು; ನನ್ನ ಬಡಕಲತನವು ನನ್ನಲ್ಲಿ ಎದ್ದು ನನ್ನ ಮುಖದ ಎದುರು ಸಾಕ್ಷಿಕೊಡುತ್ತವೆ.
|
9. ಆತನು ತನ್ನ ಕೋಪದಲ್ಲಿ ನನ್ನನ್ನು ಹರಿದುಬಿಡುತ್ತಾನೆ; ನನ್ನನ್ನು ಹಗೆಮಾಡುತ್ತಾನೆ. ತನ್ನ ಹಲ್ಲುಗಳನ್ನು ನನ್ನ ಮೇಲೆ ಕಡಿಯುತ್ತಾನೆ; ನನ್ನ ವೈರಿಯು ತನ್ನ ಕಣ್ಣುಗಳನ್ನು ನನ್ನ ಮೇಲೆ ಮಸೆಯುತ್ತಾನೆ.
|
10. ನನ್ನ ಮೇಲೆ ತಮ್ಮ ಬಾಯಿ ತೆರೆಯುತ್ತಾರೆ; ನಿಂದೆಗಾಗಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ. ಏಕವಾಗಿ ನನ್ನ ಮೇಲೆ ಕೂಡಿಕೊಳ್ಳುತ್ತಾರೆ.
|
12. ನಾನು ಶಾಂತವಾಗಿದ್ದಾಗ ನನ್ನನ್ನು ಪುಡಿಪುಡಿ ಮಾಡಿದನು. ನನ್ನ ಕುತ್ತಿಗೆ ಹಿಡಿದು ಚೂರುಚೂರಾಗಿ ಮಾಡಿದನು; ನನ್ನನ್ನು ತನಗೆ ಗುರಿಯಾಗಿ ನಿಲ್ಲಿಸಿದನು;
|
13. ಆತನ ಬಿಲ್ಲುಗಾರರು ನನ್ನನ್ನು ಸುತ್ತಿಕೊಂಡಿದ್ದಾರೆ; ನನ್ನ ಗುಂಡಿಗೆಗಳನ್ನು ಕಡಿಯುತ್ತಾನೆ. ಕರುಣಿಸುವದಿಲ್ಲ; ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾನೆ.
|
21. ಒಬ್ಬನು ತನ್ನ ನೆರೆಯವನಿಗೋಸ್ಕರ ವ್ಯಾಜ್ಯವಾಡುವಂತೆ ಮನುಷ್ಯನಿಗೋಸ್ಕರ ದೇವರ ಮುಂದೆ ವ್ಯಾಜ್ಯವಾಡುತ್ತಿದ್ದರೆ ಎಷ್ಟೋ ಒಳ್ಳೇದು.ಕೆಲವು ವರುಷಗಳು ಮುಗಿದಾಗ ನಾನು ತಿರುಗಿ ಬಾರದ ದಾರಿಹಿಡಿದು ಹೋಗುತ್ತೇನೆ.
|