1. ಆದದರಿಂದ ಪರಿಶುದ್ಧರಾದ ಸಹೋ ದರರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಒಪ್ಪಿಕೊಂಡಿರುವ ಅಪೊ ಸ್ತಲನೂ ಮಹಾಯಾಜಕನೂ ಆಗಿರುವ ಕ್ರಿಸ್ತ ಯೇಸುವನ್ನು ಆಲೋಚಿಸಿರಿ.
|
3. ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವದರಿಂದ ಮೋಶೆಗಿಂತ ಈತನು (ಕ್ರಿಸ್ತ ಯೇಸು) ಹೆಚ್ಚಾದ ಮಾನಕ್ಕೆ ಯೋಗ್ಯನೆಂದೆಣಿಸ ಲ್ಪಟ್ಟಿದ್ದಾನೆ.
|
5. ನಿಜವಾಗಿಯೂ ಮೋಶೆಯು ಸೇವಕನಾಗಿ ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದನು; ಅವನು ಮುಂದೆ ಪ್ರಕಟವಾಗಬೇಕಾಗಿದ್ದವುಗಳಿಗೆ ಸಾಕ್ಷಿಯಾಗಿ ದ್ದನು.
|
6. ಕ್ರಿಸ್ತನಾದರೋ ಮಗನಾಗಿ ತನ್ನ ಸ್ವಂತ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ; ನಾವು ನಮ್ಮ ಧೈರ್ಯ ವನ್ನೂ ನಮ್ಮ ನಿರೀಕ್ಷೆಯಿಂದುಂಟಾಗುವ ಉತ್ಸಾಹವನ್ನೂ ಕಡೇತನಕ ದೃಢವಾಗಿ ಹಿಡುಕೊಂಡವರಾದರೆ ನಾವೇ ಆತನ ಮನೆಯಾಗಿದ್ದೇವೆ.
|
8. ಅರಣ್ಯ ದಲ್ಲಿದ್ದಾಗ ಶೋಧನೆಯ ದಿನದಲ್ಲಿ ದೇವರಿಗೆ ಕೋಪ ವನ್ನೆಬ್ಬಿಸಿದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿ ಕೊಳ್ಳಬೇಡಿರಿ.
|
9. ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ ದರು, ನನ್ನನ್ನು ಪರೀಕ್ಷಿಸಿದರು, ನಾಲ್ವತ್ತು ವರುಷ ನನ್ನ ಕಾರ್ಯಗಳನ್ನು ನೋಡಿದರು.
|
10. ಆದದರಿಂದ ನಾನು ಆ ಸಂತತಿಯವರ ಮೇಲೆ ಬಹಳವಾಗಿ ಸಂತಾಪಗೊಂಡು--ಅವರು ಯಾವಾ ಗಲೂ ಹೃದಯದಲ್ಲಿ ತಪ್ಪಿಹೋಗುತ್ತಾರೆ ಎಂದು ಹೇಳಿದನು. ಅವರು ನನ್ನ ಮಾರ್ಗಗಳನ್ನು ತಿಳ್ಳುಕೊಳ್ಳ ಲಿಲ್ಲ.
|
11. ಹೀಗಿರಲು--ಅವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ನಾನು ನನ್ನ ಕೋಪದಲ್ಲಿ ಪ್ರಮಾಣಮಾಡಿದೆನು ಎಂದು ಆತನು ಹೇಳಿದ್ದಾನೆ).
|
12. ಸಹೋದರರೇ, ಎಚ್ಚರಿಕೆಯಿಂದ ನೋಡಿಕೊ ಳ್ಳಿರಿ; ಜೀವಸ್ವರೂಪನಾದ ದೇವರನ್ನು ಬಿಟ್ಟು ಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು.
|
13. ನಿಮ್ಮಲ್ಲಿ ಒಬ್ಬ ರಾದರೂ ಪಾಪದಿಂದ ಮೋಸಹೋಗಿ ಕಠಿಣರಾಗ ದಂತೆ--ಈ ದಿನ ಎಂದು ಕರೆಯಲ್ಪಡುವಾಗಲೇ ಪ್ರತಿ ನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ.
|
14. ಮೊದಲಿ ನಿಂದಿರುವ ನಮ್ಮ ಭರವಸವನ್ನು ಅಂತ್ಯದವರೆಗೂ ನಾವು ದೃಢವಾಗಿ ಹಿಡುಕೊಳ್ಳು ವದಾದರೆ ಕ್ರಿಸ್ತನಲ್ಲಿ ಪಾಲುಗಾರಾಗಿದ್ದೇವಲ್ಲಾ!
|
15. ಈ ಹೊತ್ತು ನೀವು ಆತನ ಧ್ವನಿಯನ್ನು ಕೇಳಿದರೆ ಎಂದು ಹೇಳುವಾಗ (ನಿಮ್ಮ ಹಿರಿಯರು) ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದಯ ಗಳನ್ನು ಕಠಿಣಮಾಡಿಕೊಳ್ಳಬೇಡಿರಿ.
|
16. ಕೆಲವರು ಆತನು ನುಡಿದದ್ದನ್ನು ಕೇಳಿದಾಗ ಕೋಪವ ನ್ನೆಬ್ಬಿಸಿದರು; ಆದಾಗ್ಯೂ ಮೋಶೆಯ ಮೂಲಕ ಐಗುಪ್ತದಿಂದ ಬಂದವರೆಲ್ಲರೂ ಅಲ್ಲ.
|
17. ಆದರೆ ನಾಲ್ವತ್ತು ವರುಷ ಆತನು ಯಾರಮೇಲೆ ಸಂತಾಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ!
|
18. ತನ್ನ ವಿಶ್ರಾಂತಿಯಲ್ಲಿ ಅವರು ಸೇರುವದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನು? ನಂಬದವರ ವಿಷಯ ವಾಗಿ ಅಲ್ಲವೇ?
|