1. {#1ದೀಪಸ್ತಂಭದ ಮತ್ತು ಎಣ್ಣೇ ಮರಗಳ ದರ್ಶನ } [PS]ಅನಂತರ ವಿವರಿಸುವ ದೇವದೂತನು ಮತ್ತೆ ಬಂದು ನಿದ್ರೆಹತ್ತಿದವನ ಹಾಗಿದ್ದ ನನ್ನನ್ನು ಎಚ್ಚರಗೊಳಿಸಿ “ಏನು ನೋಡುತ್ತೀ?” ಎಂದು ಕೇಳಲು ನಾನು,
2. “ಇಗೋ, ಏಳು ದೀಪಗಳುಳ್ಳ ಸುವರ್ಣಮಯವಾದ ಒಂದು ದೀಪಸ್ತಂಭವನ್ನು ನೋಡುತ್ತೇನೆ; ಅದರ ಮೇಲಿನ ದೀಪಗಳಿಗೆ ಏಳು ನಾಳಗಳಿವೆ; ಅದರ ಮೇಲ್ಗಡೆ ಎಣ್ಣೆಯ ಪಾತ್ರೆಯಿದೆ;
3. ಆ ಪಾತ್ರೆಯ ಬಲಗಡೆಯಲ್ಲಿ ಒಂದು ಎಣ್ಣೆಯ ಮರ, ಎಡಗಡೆಯಲ್ಲಿ ಒಂದು ಎಣ್ಣೆಯ ಮರ, ಮತ್ತು ಎರಡು ಮರಗಳು ಅದರ ಪಕ್ಕಗಳಲ್ಲಿ ಇದೆ” ಎಂದು ಹೇಳಿದೆನು. [PE]
4. [QS]ಪುನಃ ನಾನು ಪ್ರಸ್ತಾಪವನ್ನೆತ್ತಿ ವಿವರಿಸುವ ದೇವದೂತನನ್ನು, “ಸ್ವಾಮೀ, ಇವು ಏನನ್ನು ಸೂಚಿಸುತ್ತದೆ?” ಎಂದು ಕೇಳಿದ್ದಕ್ಕೆ, [QE]
5. [QS]ಆ ದೇವದೂತನು “ಇವು ಏನೆಂದು ನಿನಗೆ ತಿಳಿಯುವುದಿಲ್ಲವೋ?” ಎಂಬುದಾಗಿ ನನ್ನನ್ನು ಪ್ರಶ್ನೆಮಾಡಲು, “ನಾನು ಇಲ್ಲ ಸ್ವಾಮಿ” ಎಂದು ಅರಿಕೆ ಮಾಡಿದೆನು. [QE]
6.
7. [PS]ಆಗ ಅವನು ನನಗೆ ಪ್ರತ್ಯುತ್ತರವಾಗಿ ಹೀಗೆ ಹೇಳಿದನು, “ಪರಾಕ್ರಮದಿಂದಲ್ಲ, ಬಲದಿಂದಲ್ಲ. ನನ್ನ ಆತ್ಮದಿಂದಲೇ ಎಂಬುದು ಸೇನಾಧೀಶ್ವರನಾದ ಯೆಹೋವನ ನುಡಿ” ಎಂಬ ಈ ಮಾತುಗಳನ್ನು ಯೆಹೋವನು ಜೆರುಬ್ಬಾಬೆಲನಿಗೆ ದಯಪಾಲಿಸಿದ್ದಾನೆ. [PE]
8. [PS]ದೊಡ್ಡ ಬೆಟ್ಟವೇ, “ನೀನು ಯಾರು? ಜೆರುಬ್ಬಾಬೆಲನ ಮುಂದೆ ನೆಲಸಮವಾಗುವಿ; ಅವನು ಕಲಶದ ಕಲ್ಲನ್ನು ಕೋಲಾಹಲದೊಡನೆ ಮೆರವಣಿಗೆ ಮಾಡುವನು; ಇದರ ಮೇಲೆ ದೇವರ ದಯೆಯಿರಲಿ[* ದಯೆಯಿರಲಿ ಸುಂದರ. ]” ಎಂಬ ಜನಘೋಷವಾಗುವುದು. [PE][PS]ಅಲ್ಲದೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದ್ದಾನೆ,
9. “ಜೆರುಬ್ಬಾಬೆಲನ ಕೈಗಳು ಈ ಆಲಯದ ಅಸ್ತಿವಾರವನ್ನು ಹಾಕಿವೆ. ಆ ಕೈಗಳೇ ಇದನ್ನು ಪೂರೈಸುವವು. ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದವನು ಸೇನಾಧೀಶ್ವರನಾದ ಯೆಹೋವನೇ” ಎಂದು ನನಗೆ ಗೊತ್ತಾಗುವುದು. [PE]
10. [PS]ಆಗ ದೂತನು “ಈ ದೀಪಗಳಿಂದ ಸೂಚಿತವಾದ ಯೆಹೋವನ ಏಳು ಕಣ್ಣುಗಳು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ಪ್ರಸರಿಸುತ್ತಾ ತೂಕದ ಗುಂಡು ಜೆರುಬ್ಬಾಬೆಲನ ಕೈಯಲ್ಲಿರುವುದನ್ನು ಸಂತೋಷದಿಂದ ನೋಡುತ್ತೇವೆ. ಹೀಗಿರುವಲ್ಲಿ ಅಲ್ಪ ಕಾರ್ಯಗಳ ದಿನವನ್ನು ಯಾರು ತಿರಸ್ಕರಿಸಿದವರು ಯಾರು? [PE]
11. [MS] ಆಗ ನಾನು ದೇವದೂತನಿಗೆ, ದೀಪಸ್ತಂಭದ ಎಡಬಲದಲ್ಲಿರುವ ಈ ಎಣ್ಣೆಯ ಮರಗಳು ಏನು?” ಎಂದೆನು. [ME]
12. [QS]ಮತ್ತೆ ನಾನು ಅವನಿಗೆ, ತಮ್ಮೊಳಗಿಂದ ಚಿನ್ನದಂಥ ಎಣ್ಣೆಯನ್ನು ಪಾತ್ರೆಯಲ್ಲಿ ತುಂಬಿಸುವ ಎರಡು ಬಂಗಾರದ ನಾಳಗಳಿವೆಯಲ್ಲಾ. ಆ ನಾಳಗಳ ಬಾಯಿಗೆ ಸೇರಿರುವ ಎರಡು ಎಣ್ಣೆಕಾಯಿಗುತ್ತಿಗಳು ಏನು? ಎಂದು ಕೇಳಿದೆ. [QE]
13. [QS]ಅದಕ್ಕೆ ಆ ದೂತನು ನನಗೆ, “ಇವು ಏನೆಂದು ನಿನಗೆ ತಿಳಿಯುವುದಿಲ್ಲವೋ?” ಎಂದು ಕೇಳಿದಾಗ ನಾನು, “ಇಲ್ಲ ಸ್ವಾಮೀ” ಎಂದೆ. [QE]
14. [QS]ಅದಕ್ಕೆ ಅವನು, “ಇವು ದೇವರಿಂದ ಆಯ್ಕೆಯಾಗಿ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟ ಆ ಇಬ್ಬರು ವ್ಯಕ್ತಿಗಳನ್ನು ಸೂಚಿಸುತ್ತವೆ. ಸರ್ವ ಲೋಕದ ಒಡೆಯನ ಸನ್ನಿಧಿಯಲ್ಲಿರುವ ಸೇವಕರನ್ನು ಸೂಚಿಸುತ್ತವೆ” ಎಂದು ಹೇಳಿದನು. [QE]