1. {#1ಮೊದಲನೆಯ ಗೀತೆ } [QS]ಸೊಲೊಮೋನನು ರಚಿಸಿದ ಪರಮಗೀತೆ. [QE]
2. {#1ನಲ್ಲೆ } [QS]ನಿನ್ನ ಬಾಯ ಮುದ್ದುಗಳಿಂದ ನನಗೆ ಮುದ್ದಿಡು [QE][QS2]ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ. [QE]
3. [QS]ನಿನ್ನ ತೈಲವು ಸುಗಂಧ; [QE][QS2]ನಿನ್ನ ಹೆಸರು ಸುರಿದ ತೈಲದ ಸುಗಂಧದಂತೆ ವ್ಯಾಪಿಸಿರುವುದರಿಂದ, [QE][QS2]ತರುಣಿಯರು ನಿನ್ನನ್ನು ಪ್ರೀತಿಸುವರು. [QE]
4. {#1ಸ್ತ್ರೀಯರು - ನಲ್ಲೆ } [QS]ನನ್ನನ್ನು ನಿನ್ನಡೆಗೆ ಸೆಳೆದುಕೋ; ನಿನ್ನ ಹಿಂದೆ ಓಡಿ ಬರುವೆನು; [QE][QS2]ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ; [QE][QS2]ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು, [QE][QS2]ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮವಾದುದು; [QE][QS2]ಸ್ತ್ರೀಯರು ನಿನ್ನನ್ನು ಯಥಾರ್ಥವಾಗಿ ಪ್ರೀತಿಸುವರು. [QE]
5. [QS]ಯೆರೂಸಲೇಮಿನ ಮಹಿಳೆಯರೇ, ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ,[* ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ, ಕೇದಾರ್ ಅರೇಬಿಯಾಕ್ಕೆ ಸಂಬಂಧಿಸಿರುವ ಇಷ್ಮಾಯೇಲ್ಯರ ಕುಲದವರು (ಆದಿ 25:13; ಯೆಶಾ 21:16-17; ಕೀರ್ತ 120:5). ಈ ಕುಲದವರು ಸಾಮಾನ್ಯವಾಗಿ ಕಪ್ಪು ಗುಡಾರಗಳಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಕೇದಾರ್ ಯುವತಿಯ ಕಪ್ಪು ಚರ್ಮವನ್ನು ಸೂಚಿಸುತ್ತದೆ. ] [QE][QS2]ಸೊಲೊಮೋನನ ಪರದೆಗಳಂತೆ ಚೆಲುವಾಗಿದ್ದೇನೆ. [QE]
6. [QS]ನಾನು ಕಪ್ಪಾಗಿದ್ದೇನೆ ಎಂದು ನನ್ನನ್ನು ದಿಟ್ಟಿಸಿ ನೋಡಬೇಡಿರಿ. [QE][QS2]ನಾನು ಕಪ್ಪಾಗಿರುವುದು ಸೂರ್ಯನ ತಾಪದಿಂದ. [QE][QS2]ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು [QE][QS2]ದ್ರಾಕ್ಷಿತೋಟಗಳನ್ನು[† ದ್ರಾಕ್ಷಿತೋಟಗಳನ್ನು ದ್ರಾಕ್ಷಿತೋಟವು “ಯುವತಿಯನ್ನು ಸೂಚಿಸಬಹುದು, ಬಹುಶಃ ಆಳವಾದ ಲೈಂಗಿಕತೆಯ ಅರ್ಥವನ್ನು ಸಹ ಒಳಗೊಂಡಿರಬಹುದು. ] ಕಾಯುವುದಕ್ಕೆ ಇಟ್ಟರು; [QE][QS2]ಆದುದರಿಂದ ನನ್ನ ಸ್ವಂತ ದ್ರಾಕ್ಷಿ ತೋಟವನ್ನೂ ನಾನು ಕಾಯ್ದುಕೊಳ್ಳಲಾಗಲಿಲ್ಲ. [QE]
7. [QS]ನನ್ನ ಪ್ರಾಣಪ್ರಿಯನೇ, [QE][QS2]ನಿನ್ನ ಮಂದೆಯನ್ನು ಎಲ್ಲಿ ಮೇಯಿಸುವೆ? [QE][QS2]ನಡುಹಗಲಲ್ಲಿ ನಿನ್ನ ಮಂದೆಯು ಎಲ್ಲಿ ವಿಶ್ರಮಿಸುತ್ತಾರೆ? ಹೇಳು. [QE][QS2]ನಾನೇಕೆ ಅಲೆಮಾರಿಗಳಂತೆ[‡ ಅಲೆಮಾರಿಗಳಂತೆ ಮುಸುಕು ಹಾಕಿದವಳಂತೆ ] [QE][QS2]ನಿನ್ನ ಗೆಳೆಯರ ಮಂದೆಗಳ ಹತ್ತಿರ ಅಲೆಯಬೇಕು? [QE]
8. {#1ನಲ್ಲ } [QS]ಸ್ತ್ರೀಯರಲ್ಲಿ ಅತಿ ಸುಂದರವಾದ ಹೆಣ್ಣು ನೀನು, [QE][QS2]ನಿನಗಿದು ಗೊತ್ತಿಲ್ಲವಾದರೆ [QE][QS2]ಹಿಂಡಿನ ಹೆಜ್ಜೆಯ ಜಾಡನ್ನು ಹಿಡಿದು ಹೋಗಿ, [QE][QS2]ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಮರಿಗಳನ್ನು ಮೇಯಿಸು. [QE]
9. [QS]ಪ್ರಿಯಳೇ, ನಿನ್ನನ್ನು ಫರೋಹನ ರಥವನ್ನೆಳೆವ ಹೆಣ್ಣು ಕುದುರೆಗೆ ಹೋಲಿಸಿದ್ದೇನೆ. [QE]
10. [QS]ನಿನ್ನ ಕೆನ್ನೆಗಳು ಆಭರಣಗಳಿಂದಲೂ, [QE][QS2]ನಿನ್ನ ಕಂಠವು ಹಾರಗಳಿಂದಲೂ ಎಷ್ಟೋ ಅಂದವಾಗಿವೆ! [QE]
11. [QS]ನಾನು ನಿನಗಾಗಿ ಬಂಗಾರದ ಅಂಚಿನಿಂದ ಕೂಡಿರುವ, [QE][QS2]ಬೆಳ್ಳಿಯ ಕುಚ್ಚಗಳನ್ನು ಮಾಡಿಸುವೆನು. [QE]
12. {#1ನಲ್ಲೆ } [QS]ರಾಜನು ಔತಣದಲ್ಲಿದ್ದಾಗ[§ ರಾಜನು ಔತಣದಲ್ಲಿದ್ದಾಗ ಅಥವಾ ರಾಜನು ಅತ್ತ ಓಲಗದಲ್ಲಿದ್ದಾಗ. ] [QE][QS2]ಇತ್ತ ನನ್ನ ಸುಗಂಧತೈಲವು ಪರಿಮಳವನ್ನು ಬೀರುತ್ತಿತ್ತು. [QE]
13. [QS]ಎನ್ನಿನಿಯನು [* ಎನ್ನಿನಿಯನು ಪ್ರಿಯನು ]ನನ್ನ ಸ್ತನಗಳ ಮಧ್ಯದಲ್ಲಿನ ರಕ್ತಬೋಳದ ಚೀಲ; [QE]
14. [QS]ನನ್ನ ಪಾಲಿಗೆ ನನ್ನ ನಲ್ಲನು ಏನ್ಗೆದಿಯ[† ಏನ್ಗೆದಿಯ ಏನ್ಗೆದಿ ಎಂಬುದು ಲವಣ ಸಮುದ್ರದ ನೈಋತ್ಯ ತೀರದಲ್ಲಿರುವ ಓಯಸಿಸ್ (ಮರಳುಗಾಡಿನ ಫಲವತ್ತಾದ ಪ್ರದೇಶ) ಆಗಿದೆ; ಇದು ಒಂದು ಉಲ್ಲಾಸಕರ ಮತ್ತು ಫಲವತ್ತಾದ ಸ್ಥಳವಾಗಿ ಪರಿಚಿತವಾಗಿದೆ ಏಕೆಂದರೆ ಇದು ವಸಂತಕಾಲದಲ್ಲಿ ನೀರಿರುವಂತೆ ಮಾಡುತ್ತದೆ. ] ದ್ರಾಕ್ಷಿ ತೋಟಗಳ [QE][QS2]ಗೋರಂಟೆಯ ಹೂಗೊಂಚಲು. [QE]
15. {#1ನಲ್ಲ } [QS]ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ, [QE][QS2]ಆಹಾ, ನೀನು ಎಷ್ಟು ಸುಂದರಿ! [QE][QS2]ನಿನ್ನ ನೇತ್ರಗಳು ಪಾರಿವಾಳಗಳಂತಿವೆ. [QE]
16. {#1ನಲ್ಲೆ } [QS]ಆಹಾ, ಎನ್ನಿನಿಯನೇ, ನೀನೆಷ್ಟು ಸುಂದರ, ನೀನೆಷ್ಟು ಮನೋಹರ! [QE][QS2]ಹಚ್ಚ ಹಸಿರು ಚಿಗುರುಗಳು ನಮ್ಮ ಮಂಚ, [QE]
17. [QS]ನಮ್ಮ ಮನೆಯ ಛಾವಣಿ ತುರಾಯಿ ಮರಗಳೇ; [QE][QS2]ತೊಲೆಗಳು ದೇವದಾರು ವೃಕ್ಷಗಳೇ. [QE]