1. {#1ಏಳು ಮುದ್ರೆಗಳು } [PS]ಕುರಿಮರಿಯಾದಾತನು [* ಪ್ರಕ 5:1, 5-7: ]ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು [† ಪ್ರಕ 4:7: ]ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು [‡ ಪ್ರಕ 14:2; 19:6: ]ಗುಡುಗಿನಂತಿದ್ದ ಸ್ವರದಿಂದ [§ ಅಥವಾ ಹೊರಟು ಬಾ; ಪ್ರಕ 22:20: ]“ಬಾ!” ಎಂದು ಹೇಳುವುದನ್ನು ಕೇಳಿದೆನು.
2. ನಾನು ನೋಡಲು ಇಗೋ [* ಜೆಕ. 1:8; 6:1-8; ಪ್ರಕ 19:11, 19, 21: ]ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು [† ಕೀರ್ತ 45:4, 5; ಹಬ 3:8, 9; ಜೆಕ. 9:13, 14: ]ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು [‡ ಪ್ರಕ 14:14: ]ಕಿರೀಟವು ಕೊಡಲ್ಪಟ್ಟಿತು. ಅವನು [§ ಪ್ರಕ 3:21: ]ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು. [PE]
3. [PS]ಆತನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು.
4. ಆಗ [* ಜೆಕ. 1:8; 6:2: ]ಕೆಂಪಾಗಿರುವ ಮತ್ತೊಂದು ಕುದುರೆಯು ಹೊರಟು ಬಂದಿತು. ಅದರ ಮೇಲೆ ಸವಾರಿಮಾಡುವವನಿಗೆ [† ಮತ್ತಾ 10:34; 24:6, 7. ]ಭೂಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೆ ಅಧಿಕಾರ ಕೊಡಲ್ಪಟ್ಟಿತು, ಇದರಿಂದ ಜನರು ಒಬ್ಬರನ್ನೊಬ್ಬರು ಕೊಲ್ಲುವವರಾದರು. ಅವನಿಗೆ ದೊಡ್ಡದೊಂದು ಖಡ್ಗವೂ ಕೊಡಲ್ಪಟ್ಟಿತು. [PE]
5. [PS]ಆತನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು. ಆಗ, ನಾನು ನೋಡಲು ಇಗೋ, ನನಗೆ [‡ ಜೆಕ. 6:2: ]ಕಪ್ಪು ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ತಕ್ಕಡಿ ಇತ್ತು.
6. ಆ ಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. [§ ಯಾಜ 26:26; 2 ಅರಸು. 7:1. ]ಒಂದು [* ಪ್ರಾಚೀನ ರೋಮನ್ನರ ಬೆಳ್ಳಿನಾಣ್ಯ. ಅಥವಾ ಒಂದು ದಿನದ ಸಂಬಳ ಅಥವಾ ಕೂಲಿ. ]“ದೀನಾರಿಗೆ ಒಂದು ಸೇರು ಗೋದಿ ಮತ್ತು ಒಂದು ದೀನಾರಿಗೆ ಮೂರು ಸೇರು ಜವೆಗೋದಿ, ಆದರೆ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಕೆಡಿಸಬೇಡ” ಎಂದು ಹೇಳಿತು. [PE]
7. [PS]ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು “ಬಾ”! ಎನ್ನುವ ಶಬ್ದವನ್ನು ಕೇಳಿದೆನು.
8. ಆಗ ನಾನು ನೋಡಲು ಇಗೋ, [† ನಸು ಹಸಿರು ಹಾಗು ಬೂದಿ ಮಿಶ್ರಿತ ಬಣ್ಣವನ್ನು ಹೆಣ ಅಥವಾ ಶವಗಳ ಬಣ್ಣವೆಂದು ಸ್ಪಷ್ಟವಾಗಿ ಪರಿಗಣಿಸಲಾಗಿದೆ. [BR] ಜೆಕ. 6:2. ]ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು [‡ ಯೆಹೆ. 14:21. ]ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು. [PE]
9. [PS]ಆತನು ಐದನೆಯ ಮುದ್ರೆಯನ್ನು ಒಡೆದಾಗ, [§ ಪ್ರಕ 1:9. ]ದೇವರ ವಾಕ್ಯದ ನಿಮಿತ್ತವಾಗಿಯೂ, [* ಪ್ರಕ 1:2. ]ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ, [† ಪ್ರಕ 20:4. ]ಹತರಾದವರ ಆತ್ಮಗಳು [‡ ಪ್ರಕ 14:18; 16:7 ]ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು.
10. ಅವರು, “ಸರ್ವಶಕ್ತನಾದ ಕರ್ತನೇ, [§ ಪ್ರಕ 3:7. ]ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ [* ಪ್ರಕ 3:10. ]ಭೂಲೋಕ ನಿವಾಸಿಗಳಿಗೆ ನೀನು [† ಕೀರ್ತ 94:3; ಜೆಕ. 1:12 ]ಇನ್ನೆಷ್ಟು ಸಮಯ [‡ ಕೀರ್ತ 79:10; 119:84; ಲೂಕ 18:7, 8: ]ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ?” ಎಂದು ಮಹಾಶಬ್ದದಿಂದ ಕೂಗಿದರು.
11. ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು [§ ಪ್ರಕ 3:4; 7:9: ]ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು [* ಪ್ರಕ 14:13: ]ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ [† ಇಬ್ರಿ. 11:40. ]ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು. [PE]
12. [PS]ಆತನು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ [‡ ಪ್ರಕ 11:13; 16:18: ]ಮಹಾಭೂಕಂಪ ಉಂಟಾಯಿತು. [§ ಯೆಶಾ 13:10; 24:23 ]ಸೂರ್ಯನು [* ಯೆಶಾ 50. 3: ]ಕರೀಕಂಬಳಿಯಂತೆ ಕಪ್ಪಾದನು ಮತ್ತು ಪೂರ್ಣಚಂದ್ರನು ರಕ್ತದಂತಾದನು.
13. [† ಯೆಶಾ 34:4: ]ಅಂಜೂರದ ಮರವು ಬಿರುಗಾಳಿಯಿಂದ ಬಡಿಯಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಹಾಗೆ [‡ ಯೋವೇ. 3:15; ಮತ್ತಾ 24:29: ]ಆಕಾಶದಿಂದ ನಕ್ಷತ್ರಗಳು ಭೂಮಿಗೆ ಉದುರಿ ಬಿದ್ದವು.
14. ಆಕಾಶವು ಸುರುಳಿಯಂತೆ ಸುತ್ತಲ್ಪಟ್ಟು [§ ಪ್ರಕ 20:11; 21:1: ]ಮರೆಯಾಯಿತು. [* ಪ್ರಕ 16:20; ಯೆಹೆ. 38:20: ]ಎಲ್ಲಾ ಬೆಟ್ಟಗಳು ಮತ್ತು ದ್ವೀಪಗಳು ತಮ್ಮತಮ್ಮ ಸ್ಥಳಗಳಿಂದ ಕದಲಿದವು.
15. ಆಗ ಭೂರಾಜರುಗಳೂ, ಮಹಾಪುರುಷರೂ, ಸಹಸ್ರಾಧಿಪತಿಗಳೂ, ಐಶ್ವರ್ಯವಂತರೂ, ಪರಾಕ್ರಮಶಾಲಿಗಳೂ, ಎಲ್ಲಾ ದಾಸರೂ ಮತ್ತು ಸ್ವತಂತ್ರರೂ [† ಯೆಶಾ 2:19, 21: ]ಬೆಟ್ಟಗಳ ಗವಿಗಳಿಗೂ ಮತ್ತು ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡರು.
16. [‡ ಹೋಶೇ. 10:8; ಲೂಕ 23:30. ]ಬೆಟ್ಟಗಳಿಗೂ ಬಂಡೆಗಳಿಗೂ, “ನಮ್ಮ ಮೇಲೆ ಬೀಳಿರಿ!, [§ ಪ್ರಕ 4:2: ]ಸಿಂಹಾಸನದ ಮೇಲೆ ಕುಳಿತಿರುವಾತನ ಮುಖವನ್ನು ನೋಡದ ಹಾಗೆಯೂ ಕುರಿಮರಿಯ ಕೋಪಾಗ್ನಿಯು ತಟ್ಟದ ಹಾಗೆಯೂ ನಮ್ಮನ್ನು ಮರೆಮಾಡಿರಿ.
17. ಏಕೆಂದರೆ ಅವರ [* ಯೆರೆ 30. 7; ಯೋವೇ. 2:11, 31; ಚೆಫ. 1:14: ]ಕೋಪಾಗ್ನಿಯು ಕಾಣಿಸುವ ಮಹಾ ದಿನವು ಬಂದಿದೆ, [† ಎಜ್ರ. 9:15; ಕೀರ್ತ 76:7; ಮಲಾ. 3:2; ಲೂಕ 21:36: ]ಅದರ ಮುಂದೆ ನಿಲ್ಲುವುದಕ್ಕೆ ಯಾರಿಂದಾದೀತು?” ಎಂದು ಹೇಳಿದರು. [PE]