1. {#1ಸುರುಳಿಯೂ ಕುರಿಮರಿಯೂ } [PS]ನಾನು[* ಯೆಹೆ. 2:9, 10: ] ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು [† ಪುಸ್ತಕ ]ಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು. [‡ ಯೆಶಾ 29:11; ದಾನಿ. 12:4: ]ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.
2. ಇದಲ್ಲದೆ [§ ಪ್ರಕ 10:1; 18:21: ]ಬಲಿಷ್ಠನಾದ ಒಬ್ಬ ದೇವದೂತನು “ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು.
3. ಆದರೆ ಆ ಸುರುಳಿಯನ್ನು ತೆರೆಯುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾರಿಂದಲೂ ಆಗಲಿಲ್ಲ.
4. ಸುರುಳಿಯನ್ನು ತೆರೆಯುವುದಕ್ಕಾಗಲಿ ಅದನ್ನು ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವೆಂದು ನಾನು ಬಹಳವಾಗಿ ದುಃಖಿಸುತ್ತಿರುವಾಗ.
5. ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ ನೋಡು, [* ಇಬ್ರಿ. 7:14: ]ಯೂದ ಕುಲದಲ್ಲಿ ಜನಿಸಿದ [† ಅಥವಾ, ಸಿಂಹಪ್ರಾಯನೂ; ಆದಿ 49:9: ]ಸಿಂಹವೂ [‡ ಯೆಶಾ 11:1, 10; ರೋಮಾ. 15:12; ಪ್ರಕ 22:16: ]ದಾವೀದನ ವಂಶಜನೂ ಆಗಿರುವ ಒಬ್ಬನು, ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನೂ ತೆರೆಯುವುದಕ್ಕೆ ಜಯವೀರನಾಗಿದ್ದಾನೆ” ಎಂದು ಹೇಳಿದನು. [PE]
6. [PS]ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ [§ ಎಲ್ಲಾ ಸ್ಥಳಗಳಲ್ಲಿಯೂ ಹಾಗೆಯೇ; ಯೆಶಾ 53:7; ಯೋಹಾ 1:29, 36; 1 ಪೇತ್ರ. 1:19. ಪ್ರಕ 5:9, 12; 13:8: ]ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ [* ಜೆಕ. 3:9; 4:10: ]ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳೇ.
7. ಈತನು ಮುಂದೆ ಬಂದು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯೊಳಗಿಂದ ಆ ಸುರುಳಿಯನ್ನು ತೆಗೆದುಕೊಂಡನು.
8. ಅದನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಪಾದಕ್ಕೆ ಅಡ್ಡ [† ಪ್ರಕ 4:10: ]ಬಿದ್ದರು. ಹಿರಿಯರ ಕೈಗಳಲ್ಲಿ [‡ ಪ್ರಕ 14:2; 15:2: ]ವೀಣೆಗಳೂ [§ ಕೀರ್ತ 141:2; ಪ್ರಕ 8:3, 4: ]ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ [* ಪ್ರಕ 15:7: ]ಚಿನ್ನದ ಧೂಪಾರತಿಗಳೂ ಇದ್ದವು.
9. ಅವರು [† ಕೀರ್ತ 40. 3; 96:1; ಯೆಶಾ 42:10; ಪ್ರಕ 14:3: ]ಹೊಸಹಾಡನ್ನು ಹಾಡುತ್ತಾ, [PE][QS]“ನೀನು ಸುರುಳಿಯನ್ನು ಸ್ವೀಕರಿಸಲು [QE][QS2]ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ. [QE][QS]ನೀನು ವಧಿಸಲ್ಪಟ್ಟು, [‡ ವ. 6: ]ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ [QE][QS2] [§ ಪ್ರಕ 7:9; 11:9; 14:6; ದಾನಿ. 3:4: ]ಸಕಲ ಕುಲ, ಭಾಷೆ, ಜನ, ಜನಾಂಗಗಳನ್ನು [* ಪ್ರಕ 14:3, 4; 2 ಪೇತ್ರ. 2:1: ]ದೇವರಿಗಾಗಿ ಕೊಂಡುಕೊಂಡಿರುವೆ. [QE]
10. [QS]ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ, [† ವಿಮೋ 19:6; ಪ್ರಕ 1:6: ]ಯಾಜಕರನ್ನಾಗಿಯೂ ಮಾಡಿರುವೆ. [QE][QS2]ಅವರು ಭೂಮಿಯನ್ನು ಆಳುವರು.” [QE]
11. [PS]ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು. [‡ ದಾನಿ. 7:19; ಇಬ್ರಿ. 12:22: ]ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು.
12. ಅವರು [PE][QS]“ವಧಿಸಲ್ಪಟ್ಟ ಕುರಿಮರಿಯು [QE][QS2][§ ಪ್ರಕ 4:11: ]ಬಲ, ಐಶ್ವರ್ಯ, ಜ್ಞಾನ, ಸಾಮರ್ಥ್ಯ, [QE][QS2]ಘನತೆ, ಮಹಿಮೆ ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯನು” [QE][MS]ಎಂದು ಮಹಾಧ್ವನಿಯಿಂದ ಹಾಡಿದರು. [ME]
13. [PS]ಇದಲ್ಲದೆ [* ಕೀರ್ತ 145:21; 150. 6: ]ಆಕಾಶದಲ್ಲಿಯೂ, ಭೂಮಿಯ ಮೇಲೆಯೂ, ಭೂಮಿಯ ಕೆಳಗಡೆಯೂ, ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಅಂದರೆ ಭೂಮ್ಯಾಕಾಶ ಸಮುದ್ರಗಳೊಳಗೆ ಇರುವುದೆಲ್ಲವೂ, [PE][QS]“ಸಿಂಹಾಸನದ ಮೇಲೆ ಕುಳಿತಿದ್ದಾತನಿಗೂ ಕುರಿಮರಿಯಾದಾತನಿಗೂ [QE][QS2]ಸ್ತೋತ್ರ, ಗೌರವ, ಮಹಿಮೆ, ಅಧಿಪತ್ಯಗಳು [QE][QS2]ಯುಗಯುಗಾಂತರಗಳಲ್ಲಿಯೂ ಇರಲಿ” [QE][MS]ಎಂದು ಹೇಳುವುದನ್ನು ಕೇಳಿದೆನು.
14. ಆಗ ನಾಲ್ಕು ಜೀವಿಗಳು [† ಪ್ರಕ 7:12; 19:4: ]“ಆಮೆನ್” ಅಂದವು ಮತ್ತು [‡ ವ. 8; ಪ್ರಕ 4:10: ]ಹಿರಿಯರು ಅಡ್ಡಬಿದ್ದು ಆರಾಧಿಸಿದರು. [ME]