1. {#1ಕುರಿಮರಿಯು ಮತ್ತು ಆತನ ಜನರು } [PS]ಆನಂತರ ನಾನು ನೋಡಲಾಗಿ [* ಪ್ರಕ 5:6: ]ಯಜ್ಞದ ಕುರಿಮರಿಯಾದಾತನು [† ಕೀರ್ತ 2:6; ಇಬ್ರಿ. 12:22: ]ಚೀಯೋನ್ ಪರ್ವತದ ಮೇಲೆ ನಿಂತಿರುವುದನ್ನು ಕಂಡೆನು. ಆತನ ಜೊತೆಯಲ್ಲಿ [‡ ಪ್ರಕ 7:4: ]ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. [§ ಪ್ರಕ 7:3: ]ಅವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು.
2. ಇದಲ್ಲದೆ ಪರಲೋಕದಿಂದ [* ಪ್ರಕ 1:15: ]ಜಲಪ್ರವಾಹದ ಘೋಷದಂತೆಯೂ [† ಪ್ರಕ 6:1; 19:6: ]ದೊಡ್ಡ ಗುಡುಗಿನ ಶಬ್ದದಂತೆಯೂ ಇದ್ದ ಮಹಾಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು [‡ ಪ್ರಕ 5:8; 15:2: ]ವೀಣೆಗಳನ್ನು [§ ತ್ರಿಕೋನಾಕಾರದ ಒಂದು ಬಗೆಯ ತಂತಿ ವಾದ್ಯ ] ನುಡಿಸಿಕೊಂಡು ಹಾಡುತ್ತಿರುವ ವೀಣೆಗಾರರ ಶಬ್ದದಂತಿತ್ತು.
3. ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ [* ಪ್ರಕ 5:9: ]ಹೊಸ ಹಾಡನ್ನು ಹಾಡಿದರು. ಭೂಲೋಕದಿಂದ ಕೊಂಡುಕೊಳ್ಳಲ್ಪಟ್ಟ ಆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಜನರ ಹೊರತು [† ಪ್ರಕ 2:17; 19:12: ]ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.
4. ಇವರು [‡ ತಮ್ಮ ಶೀಲವನ್ನು ಶುದ್ಧವಾಗಿ ಇಟ್ಟುಕೊಂಡವರು ಅಥವಾ ಶೀಲವನ್ನುಳಿಸಿಕೊಂಡವರು. ]ಕನ್ಯೆಯರಂತೆ [§ 2 ಕೊರಿ 11:2: ]ಕಳಂಕರಹಿತರು, ಸ್ತ್ರೀ ಸಹವಾಸದಿಂದ ಮಲಿನರಾಗದವರು. ಯಜ್ಞದ ಕುರಿಮರಿಯಾದಾತನು ಎಲ್ಲಿ ಹೋದರೂ ಇವರು ಆತನನ್ನು ಹಿಂಬಾಲಿಸುವರು. ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ [* ಅರಣ್ಯ 18:12; ಯಾಕೋಬ 1:18: ]ಪ್ರಥಮಫಲದಂತಾದರು.
5. ಇವರ ಬಾಯಲ್ಲಿ ಸುಳ್ಳು ಇರಲೇ ಇಲ್ಲ. ಇವರು [† ಯೂದ. 24: ]ನಿರ್ದೋಷಿಗಳಾಗಿದ್ದಾರೆ. [PE]
6. {#1ಮೂವರು ದೇವದೂತರ ಸಂದೇಶಗಳು } [PS]ಮತ್ತೊಬ್ಬ ದೇವದೂತನು [‡ ಪ್ರಕ 8:13: ]ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ, ಕುಲ, ಭಾಷೆ, ಜನಗಳೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯವಾದ ಶುಭವರ್ತಮಾನವು ಆತನಲ್ಲಿತ್ತು.
7. ಆ ದೂತನು, “ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ, ಸಮುದ್ರವನ್ನೂ, [§ ಪ್ರಕ 8:10; 16:4: ]ನೀರಿನ ಬುಗ್ಗೆಗಳನ್ನೂ [* ನೆಹೆ 9:6; ಪ್ರಕ 4:11: ]ಉಂಟುಮಾಡಿದಾತನನ್ನು ಆರಾಧಿಸಿರಿ” ಎಂದು ಮಹಾಧ್ವನಿಯಿಂದ ಹೇಳಿದನು. [PE]
8.
21. [PS]ಅವನ ಹಿಂದೆ ಎರಡನೆಯ ದೇವದೂತನು ಬಂದು, [† ಯೆಶಾ 21:9; ಯೆರೆ 51:8; ಪ್ರಕ 18:2: ]“ಬಿದ್ದಳು! ಬಿದ್ದಳು! [‡ ದಾನಿ. 4:30; ಪ್ರಕ 16:19; 17:5; 18:10: ]ಬಾಬೆಲೆಂಬ ಮಹಾನಗರಿಯು ಬಿದ್ದಳು, ಆಕೆಯು ಸಕಲ ಜನಾಂಗಗಳಿಗೆ [§ ಅಥವಾ. ಜಾರತ್ವದಿಂದಾಗುವ ದೇವರ ರೌದ್ರವೆಂಬ. ಪ್ರಕ 18:3: ]ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು [* ಯೆರೆ 51:7: ]ಕುಡಿಸಿದಳು” ಎಂದು ಹೇಳಿದನು. [PE][PS]ಅವನ ಹಿಂದೆ ಮೂರನೆಯ ದೇವದೂತನು ಬಂದು, “ಯಾವನಾದರೂ ಯಾವುದೇ [† ಪ್ರಕ 13:15: ]ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ [‡ ಪ್ರಕ 13:16: ]ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿಕೊಂಡಿದ್ದರೆ,
10. ಅವನೂ ಸಹ [§ ಪ್ರಕ 18:6: ]ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೇ ಹಾಕಿದ [* ಪ್ರಕ 16:19; ಯೋಬ. 21:20 ]ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ [† ಪ್ರಕ 20:10: ]ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು.
11. [‡ ಯೆಶಾ 34:10; ಆದಿ 19:28; 18:18; 19:3: ]ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ, [§ ಪ್ರಕ 13:15: ]ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರಾಗಲಿ [* ಪ್ರಕ 4:8: ]ಹಗಲೂ ರಾತ್ರಿ ವಿಶ್ರಾಂತಿಯಿಲ್ಲದೆ ಇರುವರು” ಎಂದು ಮಹಾಶಬ್ದದಿಂದ ಹೇಳಿದನು.
12. [† ಪ್ರಕ 12:17: ]ಇದರಲ್ಲಿ ದೇವರ ಆಜ್ಞೆಗಳನ್ನೂ, ಯೇಸುವಿನ ಬಗ್ಗೆ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ [‡ ಪ್ರಕ 13:10: ]ದೇವಜನರ ತಾಳ್ಮೆಯು ಇಲ್ಲಿ ತೋರಿಬರಬೇಕಾಗಿದೆ. [PE]
13.
1. [PS]ಪರಲೋಕದಿಂದ ಒಂದು ಧ್ವನಿಯು ನನಗೆ ಕೇಳಿಸಿತು. ಅದು, “ಇಂದಿನಿಂದ [§ 1 ಕೊರಿ 15:18; 1 ಥೆಸ. 4:16: ]ಕರ್ತನ ಭಕ್ತರಾಗಿ ಸಾಯುವವರು [* ಪ್ರಕ 20:6; ಪ್ರಸಂಗಿ 4:2: ]ಧನ್ಯರು ಎಂಬುದಾಗಿ ಬರೆ” ಎಂದು ನನಗೆ ಹೇಳಿತು. ಅದಕ್ಕೆ ಆತ್ಮನು, “ಹೌದು, ಅವರು ಧನ್ಯರೇ. [† ಪ್ರಕ 6:11: ]ಅವರು ತಮ್ಮ ಶ್ರಮೆಗಳಿಂದ ಮುಕ್ತರಾಗಿ ವಿಶ್ರಮಿಸಿಕೊಳ್ಳುತ್ತಾರೆ ಮತ್ತು ಅವರ ಸುಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ” ಎಂದು ಹೇಳುತ್ತಾನೆ. [PE]{#1ಭೂಲೋಕದ ಸುಗ್ಗಿಕಾಲವನ್ನು ಕುರಿತದ್ದು } [PS]ಆಗ ನಾನು ನೋಡಲಾಗಿ ಇಗೋ, ಒಂದು ಬಿಳಿ ಮೇಘವು ಕಾಣಿಸಿತು. ಆ ಮೇಘದ ಮೇಲೆ [‡ ದಾನಿ. 7:13; ಪ್ರಕ 1:13 ]ಮನುಷ್ಯಕುಮಾರನಂತಿದ್ದ ಒಬ್ಬಾತನು ಕುಳಿತಿರುವುದನ್ನು ಕಂಡೆನು. [§ ಪ್ರಕ 6:2: ]ಆತನ ತಲೆಯ ಮೇಲೆ ಚಿನ್ನದ ಕಿರೀಟವೂ, ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು.
15. ಆಗ ಮತ್ತೊಬ್ಬ ದೂತನು [* ಪ್ರಕ 15:6: ]ದೇವಾಲಯದೊಳಗಿನಿಂದ ಬಂದು ಮೇಘದ ಮೇಲೆ ಕುಳಿತಿದ್ದಾತನಿಗೆ, [† ಯೆರೆ 51:33: ]“ಭೂಮಿಯ ಪೈರು ಮಾಗಿದೆ, ಕೊಯ್ಯುವ ಕಾಲ ಬಂದಿದೆ. [‡ ವ. 18; ಯೋವೇ. 3:13; ಮಾರ್ಕ 4:29; ಮತ್ತಾ 13:39: ]ನಿನ್ನ ಕುಡುಗೋಲನ್ನು ಹಾಕಿ ಪೈರನ್ನು ಕೊಯ್ಯಿ” ಎಂದು ಮಹಾಧ್ವನಿಯಿಂದ ಕೂಗಿದನು.
16. ಮೇಘದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು. [PE]
17. [PS]ಮತ್ತೊಬ್ಬ ದೇವದೂತನು ಪರಲೋಕದಲ್ಲಿರುವ ದೇವಾಲಯದೊಳಗಿನಿಂದ ಬಂದನು. ಅವನ ಬಳಿಯೂ ಹರಿತವಾದ ಕುಡುಗೋಲು ಇತ್ತು.
18. ತರುವಾಯ [§ ಪ್ರಕ 16:8: ]ಬೆಂಕಿಯ ಮೇಲೆ ಅಧಿಕಾರ ಹೊಂದಿದ್ದ ಇನ್ನೊಬ್ಬ ದೂತನು ಯಜ್ಞವೇದಿಯ ಬಳಿಯಿಂದ ಬಂದು, ಆ ಹರಿತವಾದ ಕುಡುಗೋಲಿನವನಿಗೆ, “ನಿನ್ನ ಹರಿತವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷಿಗೊಂಚಲುಗಳನ್ನು ಕೊಯ್ಯಿ. [* ಯೋವೇ. 3:13: ]ಅದರ ಹಣ್ಣುಗಳು ಪೂರಾ ಮಾಗಿವೆ” ಎಂದು ಮಹಾಧ್ವನಿಯಿಂದ ಕೂಗಿದನು.
19. ಆಗ ಆ ದೂತನು ತನ್ನ ಕುಡುಗೋಲಿನಿಂದ ಭೂಮಿಯ ಮೇಲಿನ ದ್ರಾಕ್ಷಿಬಳ್ಳಿಯಲ್ಲಿದ್ದ ದ್ರಾಕ್ಷಿಹಣ್ಣನ್ನು ಕೊಯ್ದು ಕೂಡಿಸಿ, [† ಯೆಶಾ 63:2, 3; ಪ್ರಲಾ 1:15; ಪ್ರಕ 19:15: ]ದೇವರ ರೌದ್ರವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಹಾಕಿದನು.
20. ಆಗ ಆಲೆಯನ್ನು [‡ ಇಬ್ರಿ. 13:12: ]ಪಟ್ಟಣದ ಹೊರಗೆ ತೆಗೆದುಕೊಂಡು ಹೋಗಿ ತುಳಿದರು. ಆ ಆಲೆಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಮೇಲಕ್ಕೆ ಬಂದು [§ ಮೂಲ: ಸಾವಿರದ ಆರುನೂರು ಸ್ತಾದ್ಯ. ]ಮುನ್ನೂರು ಕಿಲೋಮೀಟರಿನಷ್ಟು ದೂರ ಹರಿಯಿತು. [PE]