1. {#1ದೇವರ ಇಬ್ಬರು ಸಾಕ್ಷಿಗಳು } [PS]ತರುವಾಯ [* ಜೆಕ. 2:1, 2; ಯೆಹೆ. 40. 3:5; ಪ್ರಕ 21:15, 16: ]ಅಳತೆಗೊಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು, “ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಎಣಿಕೆಮಾಡು.
2. [† ಯೆಹೆ. 40. 17, 20: ]ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು, [‡ ಲೂಕ 21:24: ]ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು [§ ಪ್ರಕ 12:6; 13:5: ]ನಲವತ್ತೆರಡು ತಿಂಗಳು ತುಳಿದಾಡುವರು.
3. ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು [* ಯೆಶಾ 20:2: ]ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.”
4. ಭೂಲೋಕದ ಒಡೆಯನ ಮುಂದೆ ನಿಂತಿರುವ [† ಜೆಕ. 4:3, 11, 14: ]ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪಸ್ತಂಭಗಳೂ ಇವರೇ.
5. ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ [‡ 2 ಅರಸು. 1:10, 12; ಯೆರೆ 5:14: ]ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಕೇಡನ್ನು [§ ಅರಣ್ಯ 16:29, 35: ]ಉಂಟುಮಾಡಬಯಸುವವರಿಗೆ ಆ ರೀತಿಯಾಗಿ ಹತರಾಗಬೇಕು.
6. [* ಅರಣ್ಯ 17:1; ಲೂಕ 4:25; ಯಾಕೋಬ. 5:17: ]ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ [† ವಿಮೋ 7:19: ]ನೀರು ರಕ್ತವಾಗುವಂತೆ ಮಾಡುವುದಕ್ಕೂ [‡ ವಿಮೋ 7-10; 1 ಸಮು 4:8: ]ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು. [PE]
7. [PS]ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, [§ ಪ್ರಕ 9:1: ]ಅಧೋಲೋಕದಿಂದ ಬರುವ [* ಪ್ರಕ 17:8; ಪ್ರಕ 13:1: ]ಮೃಗವು [† ದಾನಿ. 7:21: ]ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು.
8. ಈ ಸಾಕ್ಷಿಗಳ ಶವಗಳು [‡ ಪ್ರಕ 16:19; 17:18; 18:10: ]ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ [§ ಯೆಶಾ 1:9, 10; 3:9: ]ಸೊದೋಮ್ ಎಂದು, [* ಯೆಹೆ. 23:3, 8, 19:27: ]ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು.
9. ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ [† ಕೀರ್ತ 79:2, 3: ]ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ.
10. ಈ ಇಬ್ಬರು ಪ್ರವಾದಿಗಳು [‡ ಪ್ರಕ 11:5, 6; 1 ಅರಸು. 18:17: ]ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು [§ ಯೋಹಾ 16:20; ಪ್ರಕ 3:10: ]ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.
11. ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು, [* ಆದಿ 2:7; ಯೆಹೆ. 37:5, 9, 10, 14: ]ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು.
12. ಅನಂತರ ಅವರಿಗೆ, [† ಪ್ರಕ 4:1: ]“ಇಲ್ಲಿ ಮೇಲಕ್ಕೆ ಏರಿ ಬನ್ನಿರಿ!” ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು [‡ ಅ. ಕೃ. 1:9; 1 ಥೆಸ. 4:17: ]ಮೇಘದಲ್ಲಿ [§ ಪ್ರಕ 12:5; 2 ಅರಸು. 2:11: ]ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು.
13. ಅದೇ ಗಳಿಗೆಯಲ್ಲಿ [* ಪ್ರಕ 6:12: ]ಮಹಾ ಭೂಕಂಪವುಂಟಾಗಿ [† ಪ್ರಕ 16:19: ]ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು. ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ [‡ 2 ಪೂರ್ವ 36:23; ಯೋನ. 1:9: ]ಪರಲೋಕದ ದೇವರನ್ನು [§ ಯೆಹೋ. 7:19; ಪ್ರಕ 14:7; 16:9, 19:7: ]ಘನಪಡಿಸಿದರು. [PE]
14.
8. [PS] [* ಪ್ರಕ 8:13; 9:12: ]ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ. [PE]{ [† ಪ್ರಕ 10:7 ]ಏಳನೆಯ ತುತ್ತೂರಿ }
16. [PS]ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ [‡ ಪ್ರಕ 16:17; 19:1: ]ಮಹಾಶಬ್ದಗಳುಂಟಾಗಿ, [§ ಪ್ರಕ 12:10: ]“ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ [* ಕೀರ್ತ 2:2; ಲೂಕ 9:20; ಅ. ಕೃ. 4:26: ]ಆತನ ಕ್ರಿಸ್ತನಿಗೂ ಬಂದಿದೆ, [† ದಾನಿ. 2:44; 7:14, 18, 27; ಲೂಕ 1:33; ಇಬ್ರಿ. 1:8; ಯೋಹಾ 12:34: ]ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು” ಎಂಬ ಮಹಾಘೋಷಣೆಯಾಯಿತು. [PE]
4. [PS]ತರುವಾಯ [‡ ಪ್ರಕ 4:4: ]ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ [§ ಪ್ರಕ 4:10: ]ಅಡ್ಡಬಿದ್ದು, [PE][QS]“ಕರ್ತನೇ, ಸರ್ವಶಕ್ತನಾದ ದೇವರೇ, [* ಮೂಲ. ಇರುವಾತನೇ, ಇದ್ದಾತನೇ. ಪ್ರಕ 16:5; ಪ್ರಕ 1:4, 8; 4:8: ]ಇರುವಾತನೇ ಇದ್ದಾತನೇ, [QE][QS] [† ಕೀರ್ತ 97:1; ಪ್ರಕ 19:6: ]ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳುತ್ತಿರುವುದರಿಂದ [QE][QS2]ನಾವು ನಿನಗೆ ಕೃತಜ್ಞತಾಸುತ್ತಿ ಸಲ್ಲಿಸುತ್ತೇವೆ. [QE]
18. [QS]ಜನಾಂಗಗಳು ಕೋಪಿಸಿಕೊಂಡವು. [QE][QS2][‡ ಕೀರ್ತ 2:5; 110:5: ]ನಿನ್ನ ಕೋಪವೂ ಪ್ರಕಟವಾಯಿತು. [QE][QS] [§ ಪ್ರಕ 6:10; 20:12; ದಾನಿ. 7:10; 2 ಥೆಸ. 1:6, 7: ]ಸತ್ತವರು ತೀರ್ಪುಹೊಂದುವ ಸಮಯವು ಬಂದಿದೆ. [QE][QS2]ನೀನು ನಿನ್ನ ದಾಸರಾದ ಪ್ರವಾದಿಗಳಿಗೂ, ದೇವಜನರಿಗೂ, [QE][QS] [* ಪ್ರಕ 19:5: ]ನಿನ್ನ ನಾಮಕ್ಕೆ ಭಯಪಡುವ ಹಿರಿಯರೂ ಕಿರಿಯರೂ ಆಗಿರುವ [QE][QS2]ನಿನ್ನ ಭಕ್ತರಿಗೆ ಪ್ರತಿಫಲವನ್ನು ಕೊಡುವುದಕ್ಕೂ [† ಪ್ರಕ 13:10: ]ಲೋಕನಾಶಕರನ್ನು ವಿನಾಶಗೊಳಿಸುವ ಕಾಲವು ಬಂದಿದೆ” [QE][MS]ಎಂದು ಆತನನ್ನು ಆರಾಧಿಸಿದರು. [ME]
19. [PS] [‡ ಪ್ರಕ 15:5: ]ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. [§ ಇಬ್ರಿ. 9:4: ]ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, [* ಪ್ರಕ 16:21: ]ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು. [PE]