3. {#3ಸರ್ವಶಕ್ತನಾದ ದೇವರು ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂಬ ಪ್ರಾರ್ಥನೆ }[PS]*ಜೇರಹ ಕುಲದವನಾದ ಏತಾನನ ಪದ್ಯ. [BR]2ಸಮು 7; ಕೀರ್ತ 44; 80 *[PE][QS]ಯೆಹೋವನೇ, ನಿತ್ಯವೂ ನಿನ್ನ ಕೃಪಾತಿಶಯವನ್ನು ಹಾಡಿಹರಸುವೆನು; [QE][QS]ನನ್ನ ಬಾಯಿ ನಿನ್ನ ಸತ್ಯವನ್ನು, [QE][QS]ಮುಂದಣ ಸಂತಾನದವರೆಲ್ಲರಿಗೂ ತಿಳಿಯಮಾಡುವುದು. [QE]
2. [QS]ನಿನ್ನ ಪ್ರೀತಿಸಂಕಲ್ಪವು ನಿತ್ಯವು ಸಿದ್ಧಿಗೆ ಬರುತ್ತಲೇ ಇರುವುದು; [QE][QS]ಆಕಾಶದಲ್ಲಿ ನಿನ್ನ ಸತ್ಯತೆಯನ್ನು ಸ್ಥಾಪಿಸುವಿ ಎಂದು ತಿಳಿದುಕೊಂಡಿದ್ದೇನೆ. [QE]
3. [QS]ನೀನು ನುಡಿದದ್ದೇನೆಂದರೆ, “ನಾನು ಆರಿಸಿಕೊಂಡ [QE][QS]ಸೇವಕನಾದ ದಾವೀದನ ಸಂಗಡ ಒಡಂಬಡಿಕೆ ಮಾಡಿಕೊಂಡು ಆಣೆಯಿಟ್ಟು, [QE]
4. [QS]‘ಶಾಶ್ವತವಾಗಿ ನಿನ್ನ ಸಂತತಿಯನ್ನು ಸ್ಥಾಪಿಸುವೆನು, [QE][QS]ತಲತಲಾಂತರಗಳಿಗೂ ನಿನ್ನ ಸಿಂಹಾಸನವನ್ನು ಸ್ಥಿರಪಡಿಸುವೆನು [QE][QS]ಎಂದು ಹೇಳಿದ್ದೇನೆ’ ” ಎಂಬುವುದೇ. [QE][QSS]ಸೆಲಾ [QSE]
5. [QS]ಯೆಹೋವನೇ, ಗಗನವು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವುದು; [QE][QS]ನಿನ್ನ ಸತ್ಯವನ್ನು ಪರಿಶುದ್ಧರ ಸಭೆಯಲ್ಲಿ ಕೀರ್ತಿಸುವೆನು. [QE]
6. [QS]ಮೇಘಮಂಡಲದಲ್ಲಿ ಯೆಹೋವನಿಗೆ ಸಮಾನರು ಯಾರು? [QE][QS]ದೇವದೂತರಲ್ಲಿ ಯೆಹೋವನಿಗೆ ಸರಿಯಾದವರು ಯಾರು? [QE]
7. [QS]ಆತನು ಪರಿಶುದ್ಧರ ಸಭೆಯಲ್ಲಿ ಘನ ಹೊಂದುವ ದೇವರು; [QE][QS]ತನ್ನ ಎಲ್ಲಾ ಪರಿವಾರದವರಿಗಿಂತ ಭಯಂಕರನು. [QE]
8. [QS]ಯೆಹೋವನೇ, ಸೇನಾಧೀಶ್ವರನಾದ ದೇವರೇ, [QE][QS]ನಿನಗೆ ಸಮಾನರು ಯಾರು? [QE][QS]ಯಾಹುವೇ, ನೀನು ಶಕ್ತನು, ಸತ್ಯತೆಯಿಂದ ಆವರಿಸಲ್ಪಟ್ಟವನು. [QE]
9. [QS]ಸಮುದ್ರದ ಅಲ್ಲಕಲ್ಲೋಲಗಳನ್ನು ಅಧೀನದಲ್ಲಿ ಇಟ್ಟುಕೊಂಡಿರುವವನು ನೀನು; [QE][QS]ತೆರೆಗಳು ಏಳುವಾಗ ಅವುಗಳನ್ನು ತಡೆಯುವವನು ನೀನು. [QE]
10. [QS]ರಹಬನ್ನು[* ರಹಬನ್ನು ಪೌರಾಣಿಕ ಸಮುದ್ರ ದೈತ್ಯ ರಹಬನು ಯೋಬ. 9:13; 26:2; ಯೆಶಾ 51:9 ರಲ್ಲಿ ಕೂಡ ಉಲ್ಲೇಖಿಸಲಾಗಿದೆ; 87:4 ರಲ್ಲಿ ಅದರ ಬಳಕೆಯು ಭಿನ್ನವಾಗಿದೆ, ಇಲ್ಲಿ ರಹಬ ಕಡಲ ಪೌರಾಣಿಕ ಸರ್ಪವನ್ನು ಸೂಚಿಸುತ್ತದೆ. ] ಛೇದಿಸಿ ಸಾಯಿಸಿದವನು ನೀನು; [QE][QS]ನಿನ್ನ ಭುಜಬಲದಿಂದ ಶತ್ರುಗಳನ್ನು ಚದರಿಸಿಬಿಟ್ಟಿದ್ದಿ. [QE]
11. [QS]ಆಕಾಶವೂ ನಿನ್ನದು, ಭೂಮಿಯೂ ನಿನ್ನದೇ; [QE][QS]ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನಿರ್ಮಿಸಿದವನು ನೀನು. [QE]
12. [QS]ದಕ್ಷಿಣೋತ್ತರ ದಿಕ್ಕುಗಳನ್ನು ಉಂಟುಮಾಡಿದವನು ನೀನು. [QE][QS]ತಾಬೋರ್[† ತಾಬೋರ್ ತಾಬೋರ್ ಗಲಿಲಾಯ ಸರೋವರದ ದಕ್ಷಿಣದ ತುದಿಯಲ್ಲಿರುವ ಪರ್ವತವಾಗಿದೆ, 555 ಮೀಟರ್ ಎತ್ತರವಿದೆ. ], ಹೆರ್ಮೋನ್ [‡ ಹೆರ್ಮೋನ್ ಹೆರ್ಮೋನ್ ಪರ್ವತವು ಗಲಿಲಾಯ ಸರೋವರದಿಂದ 75 ಕಿಲೋಮೀಟರ್ (45 ಮೈಲುಗಳು) ಈಶಾನ್ಯ ಭಾಗದಲ್ಲಿದೆ, ಸುಮಾರು 2,750 ಮೀಟರ್ (8,940 ಅಡಿ) ಎತ್ತರವಿದೆ. ] ಪರ್ವತಗಳು ನಿನ್ನ ನಾಮದಲ್ಲಿ ಆನಂದಧ್ವನಿ ಮಾಡುತ್ತವೆ. [QE]
13. [QS]ನಿನ್ನ ಭುಜಬಲವು ಮಹಾಬಲವುಳ್ಳದ್ದು. ನಿನ್ನ ಹಸ್ತವು ಶಕ್ತಿಯುಳ್ಳದ್ದು; [QE][QS]ನಿನ್ನ ಬಲಗೈ ಮಹತ್ತುಗಳನ್ನು ನಡೆಸುತ್ತದೆ. [QE]
14. [QS]ನೀತಿ ಮತ್ತು ನ್ಯಾಯಗಳು ನಿನ್ನ ಸಿಂಹಾಸನದ ಅಸ್ತಿವಾರವು; [QE][QS]ನಿನ್ನ ಸಾನ್ನಿಧ್ಯದೂತರು ಪ್ರೀತಿ ಮತ್ತು ಸತ್ಯತೆಗಳೇ. [QE]
15. [QS]ಉತ್ಸಾಹಧ್ವನಿಯನ್ನು [§ ಉತ್ಸಾಹಧ್ವನಿಯನ್ನು ಅಂದರೆ ದೇವರನ್ನು ಆರಾಧಿಸುವಾಗ ಮಾಡುವ ಶಬ್ದ. ]ತಿಳಿದಿರುವ ಜನರು ಧನ್ಯರು; [QE][QS]ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ. [QE]
16. [QS]ಯಾವಾಗಲೂ ನಿನ್ನ ನಾಮದಲ್ಲಿ ಆನಂದಿಸುತ್ತಾರೆ; [QE][QS]ನಿನ್ನ ನೀತಿಯಿಂದ ಏಳಿಗೆ ಹೊಂದುತ್ತಾರೆ. [QE]
17. [QS]ಅವರು ಹಿಗ್ಗುವ ಬಲವು ನೀನೇ. [QE][QS]ನಿನ್ನ ಕರುಣೆಯ ಕಟಾಕ್ಷದಿಂದ ನಮ್ಮ ಕೊಂಬು[* ಕೊಂಬು ಅಂದರೆ ಬಲ. ] ಎತ್ತಲ್ಪಟ್ಟಿರುವುದು. [QE]
18. [QS]ನಮಗೆ ಗುರಾಣಿಯಂತಿರುವ ನಮ್ಮ ಅರಸನು ಯೆಹೋವನೇ; [QE][QS]ಅವನು ಇಸ್ರಾಯೇಲರ ಸದಮಲಸ್ವಾಮಿಯ, ಸ್ವಕೀಯನು. [QE]
19. [QS]ಆ ಕಾಲದಲ್ಲಿ ನೀನು ದರ್ಶನದಲ್ಲಿ ನಿನ್ನ ಭಕ್ತರಿಗೆ ಹೇಳಿದ್ದೇನೆಂದರೆ, [QE][QS]“ಒಬ್ಬ ಶೂರನಿಗೆ ರಕ್ಷಾಬಲವನ್ನು ಅನುಗ್ರಹಿಸಿದ್ದೇನೆ; [QE][QS]ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತಸ್ಥಾನದಲ್ಲಿಟ್ಟಿದ್ದೇನೆ. [QE]
20. [QS]ನನ್ನ ಸೇವಕನಾದ ದಾವೀದನನ್ನು ಕಂಡು, [QE][QS]ಪರಿಶುದ್ಧ ತೈಲದಿಂದ ಅವನನ್ನು ಅಭಿಷೇಕಿಸಿದ್ದೇನೆ. [QE]
21. [QS]ನನ್ನ ಹಸ್ತವು ಅವನ ಮೇಲೆ ಸ್ಥಿರವಾಗಿರುವುದು; [QE][QS]ನನ್ನ ಭುಜವು ಅವನನ್ನು ಬಲಪಡಿಸುವುದು. [QE]
22. [QS]ವೈರಿಯ ಕುತಂತ್ರವು ಅವನಲ್ಲಿ ಸಾಗದು; [QE][QS]ಯಾವ ಕೆಡುಕನೂ ಅವನನ್ನು ಕುಗ್ಗಿಸಲಾರನು. [QE]
23. [QS]ಅವನ ವಿರೋಧಿಗಳನ್ನು ಅವನ ಮುಂದೆಯೇ ಜಜ್ಜಿ ಹಾಕುವೆನು; [QE][QS]ಅವನ ದ್ವೇಷಿಗಳನ್ನು ಹತಮಾಡಿಬಿಡುವೆನು. [QE]
24. [QS]ಆದರೆ ನನ್ನ ಪ್ರೀತಿ ಮತ್ತು ಸತ್ಯತೆಗಳು ಅವನೊಡನೆ ಇರುವವು; [QE][QS]ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವುದು. [QE]
25. [QS]ಸಮುದ್ರದಿಂದ ನದಿಗಳವರೆಗೂ ಅವನ ಹಸ್ತಕ್ಕೆ ಅಧಿಕಾರವನ್ನು ಕೊಡುವೆನು. [QE]
26. [QS]ಅವನು ನನಗೆ, ‘ನನ್ನ ತಂದೆಯೂ, ದೇವರೂ, [QE][QS]ಆಶ್ರಯದುರ್ಗವೂ ನೀನೇ’ ಎಂದು ಹೇಳುವನು. [QE]
27. [QS]ನಾನಾದರೋ ಅವನನ್ನು ಜ್ಯೇಷ್ಠಪುತ್ರನನ್ನಾಗಿಯೂ, [QE][QS]ಭೂರಾಜರಲ್ಲಿ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು. [QE]
28. [QS]ನನ್ನ ಕೃಪೆಯು ಅವನಲ್ಲಿ ಶಾಶ್ವತವಾಗಿ ಇರುವುದು; [QE][QS]ನನ್ನ ಒಡಂಬಡಿಕೆಯು ಅವನಲ್ಲಿ ಸ್ಥಿರವಾಗಿರುವುದು. [QE]
29. [QS]ಅವನ ಸಂತಾನವನ್ನು ಯಾವಾಗಲೂ ಉಳಿಸುವೆನು. [QE][QS]ಅವನ ಸಿಂಹಾಸನವು ಆಕಾಶವಿರುವವರೆಗೂ ಇರುವುದು. [QE]
30. [QS]ಅವನ ಸಂತಾನದವರು ನನ್ನ ಧರ್ಮಶಾಸ್ತ್ರವನ್ನು ಬಿಟ್ಟು, [QE][QS]ನನ್ನ ಆಜ್ಞೆಗಳಲ್ಲಿ ನಡೆಯದೆ, [QE]
31. [QS]ನನ್ನ ವಿಧಿಗಳನ್ನು ಮೀರಿ, ನನ್ನ ನೇಮಗಳನ್ನು ಪಾಲಿಸದೆ ಹೋದರೆ, [QE]
32. [QS]ಆಗ ನಾನು ಅವರ ದ್ರೋಹಕ್ಕಾಗಿ ಅವರನ್ನು ಬೆತ್ತದಿಂದ ಹೊಡೆಯುವೆನು; [QE][QS]ಅವರ ಅಪರಾಧಕ್ಕಾಗಿ ಪೆಟ್ಟುಕೊಡುವೆನು. [QE]
33. [QS]ಆದರೂ ನಾನು ಅವನಲ್ಲಿಟ್ಟಿರುವ ಕೃಪೆಯನ್ನು ತಪ್ಪಿಸುವುದಿಲ್ಲ; [QE][QS]ನನ್ನ ನಂಬಿಗಸ್ತಿಕೆಯಿಂದ ಜಾರುವುದಿಲ್ಲ. [QE]
34. [QS]ನನ್ನ ಒಡಂಬಡಿಕೆಯನ್ನು ಭಂಗಪಡಿಸುವುದಿಲ್ಲ; [QE][QS]ನನ್ನ ಮಾತನ್ನು ಬದಲಿಸುವುದಿಲ್ಲ. [QE]
35. [QS]ನನ್ನ ಪವಿತ್ರತ್ವದಲ್ಲಿ ಆಣೆಯಿಟ್ಟು ಒಂದು ಸಂಗತಿಯನ್ನು ಹೇಳಿದ್ದೇನೆ; [QE][QS]ಅದರ ವಿಷಯದಲ್ಲಿ ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ. [QE]
36. [QS]ಅದೇನೆಂದರೆ, ಅವನ ಸಂತತಿಯು ಶಾಶ್ವತವಾಗಿ ಇರುವುದು; [QE][QS]ಅವನ ಸಿಂಹಾಸನವು ಸೂರ್ಯನಂತೆ ನನ್ನ ಎದುರಿನಲ್ಲಿದ್ದು, [QE]
37. [QS]ಚಂದ್ರನಂತೆ ನಿತ್ಯಕ್ಕೂ ಸ್ಥಿರವಾಗಿರುವುದು. [QE][QS]ಪರಲೋಕದ ಸಾಕ್ಷಿ ಸತ್ಯವೇ ಸರಿ.” [QE][QSS]ಸೆಲಾ. [QSE]
38. [QS]ಹೀಗೆ ಹೇಳಿದ ನೀನು ನಿನ್ನ ಅಭಿಷಿಕ್ತನ ಮೇಲೆ ಕೋಪಗೊಂಡವನಾಗಿ, [QE][QS]ಅವನನ್ನು ಅಸಹ್ಯಿಸಿ ತಳ್ಳಿಬಿಟ್ಟಿದ್ದೀ. [QE]
39. [QS]ನೀನು ನಿನ್ನ ಸೇವಕನ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿ, [QE][QS]ಅವನ ಕಿರೀಟವನ್ನು ನೆಲಕ್ಕೆ ಹಾಕಿ ಅಪವಿತ್ರಮಾಡಿದ್ದೀ. [QE]
40. [QS]ಅವನ ದೇಶದ ಮೇರೆಗಳನ್ನು ಕೆಡವಿ, ಕೋಟೆಗಳನ್ನು ಹಾಳುಮಾಡಿದ್ದೀ. [QE]
41. [QS]ದಾರಿಗರೆಲ್ಲರೂ ಅವನನ್ನು ಸುಲಿಗೆ ಮಾಡುತ್ತಾರೆ; [QE][QS]ಅವನು ನೆರೆಹೊರೆಯವರ ಪರಿಹಾಸ್ಯಕ್ಕೆ ಗುರಿಯಾಗಿದ್ದಾನೆ. [QE]
42. [QS]ಅವನ ವಿರೋಧಿಗಳ ಹಸ್ತವನ್ನು ಉನ್ನತಪಡಿಸಿದ್ದೀ; [QE][QS]ಅವನ ವೈರಿಗಳಿಗೆಲ್ಲಾ ಆನಂದವಾಗುವಂತೆ ಮಾಡಿದ್ದೀ. [QE]
43. [QS]ಇದಲ್ಲದೆ ಅವನ ಕತ್ತಿಯನ್ನು ತಿರುಗಿಸಿಬಿಟ್ಟಿದ್ದೀ; [QE][QS]ಅವನನ್ನು ಯುದ್ಧದಲ್ಲಿ ನಿಲ್ಲದಂತೆ ಮಾಡಿದ್ದೀ. [QE]
44. [QS]ಅವನ ವೈಭವವನ್ನು[† ವೈಭವವನ್ನು ಅಂದರೆ ರಾಜದಂಡ. ] ತಡೆದುಬಿಟ್ಟಿದ್ದೀ; [QE][QS]ಅವನ ಸಿಂಹಾಸನವನ್ನು ನೆಲಕ್ಕುರುಳಿಸಿದ್ದೀ. [QE]
45. [QS]ಅವನ ಯೌವನದ ದಿನಗಳನ್ನು ಬೇಗ ಮುಗಿಸಿ, [QE][QS]ನಾಚಿಕೆಯು ಅವನನ್ನು ಕವಿಯುವಂತೆ ಮಾಡಿದ್ದಿ. [QE][QSS]ಸೆಲಾ [QSE]
46. [QS]ಯೆಹೋವನೇ, ಇನ್ನೆಷ್ಟರವರೆಗೆ ಮರೆಯಾಗಿರುವಿ? [QE][QS]ನಿನ್ನ ಕೋಪಾಗ್ನಿಯು ನಮ್ಮ ಮೇಲೆ ಸದಾ ಉರಿಯುತ್ತಿರಬೇಕೋ? [QE]
47. [QS]ನನ್ನ ಆಯುಷ್ಯವು ಎಷ್ಟು ಅಲ್ಪವೆಂದೂ, [QE][QS]ಎಂಥಾ ವ್ಯರ್ಥ ಜೀವಿತಕ್ಕಾಗಿ ಮನುಷ್ಯರನ್ನು ನಿರ್ಮಿಸಿದ್ದಿ ಎಂದೂ ಜ್ಞಾಪಿಸಿಕೋ. [QE]
48. [QS]ತಮ್ಮನ್ನು ಪಾತಾಳಕ್ಕೆ ತಪ್ಪಿಸಿಕೊಂಡು, ಮರಣಹೊಂದದೆ [QE][QS]ಚಿರಂಜೀವಿಯಾಗಿರುವವರು ಯಾರು? [QE][QSS]ಸೆಲಾ [QSE]
49. [QS]ಕರ್ತನೇ, ನೀನು ನಿನ್ನ ಸತ್ಯತೆಯಲ್ಲಿ ಆಣೆಯಿಟ್ಟು, [QE][QS]ದಾವೀದನಿಗೆ ವಾಗ್ದಾನಮಾಡಿ ನಡೆಸುತ್ತಿದ್ದ ಹಿಂದಿನ ಕೃಪಾಕಾರ್ಯಗಳು ಎಲ್ಲಿ? [QE]
50. [QS]ಯೆಹೋವನೇ, ನಿನ್ನ ವೈರಿಗಳು ನಿಂದಿಸುತ್ತಾರೆ; [QE][QS]ನಿನ್ನ ಅಭಿಷಿಕ್ತನನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡುತ್ತಾರೆ. [QE]
51. [QS]ಕರ್ತನೇ, ನಿನ್ನ ಸೇವಕರಿಗಾಗುವ ಅಪವಾದವನ್ನೂ, [QE][QS]ನಾನು ಎಲ್ಲಾ ಜನಾಂಗಗಳ ನಿಂದಾಭಾರವನ್ನು ಉಡಿಲಲ್ಲಿ ಕಟ್ಟಿರುವುದನ್ನೂ ಜ್ಞಾಪಿಸಿಕೋ. [QE]
52. [QS]ಯೆಹೋವನಿಗೆ ಸದಾಕಾಲವೂ ಕೊಂಡಾಟವಾಗಲಿ. ಆಮೆನ್, ಆಮೆನ್. [QE]