1. ದೇವರೇ, ಕೊಂಡಾಡುತ್ತೇವೆ; [QBR] ನಿನ್ನನ್ನು ಕೊಂಡಾಡುತ್ತೇವೆ. ನಿನ್ನ ನಾಮ ಮಹತ್ವವನ್ನು ನೆನಪುಮಾಡಿಕೊಂಡು; [QBR] ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುತ್ತೇವೆ. [QBR]
2. ದೇವರು ನುಡಿದದ್ದು, “ನಿಯಮಿತ ಕಾಲವು ಬಂದಾಗ, [QBR] ನಾನೇ ನೀತಿಯಿಂದ ತೀರ್ಪುಕೊಡುವೆನು. [QBR]
3. ಎಲ್ಲಾ ನಿವಾಸಿಗಳೊಡನೆ ಭೂಮಿಯು ಕರಗಿ ಹೋದರೂ, [QBR] ಅದರ ಸ್ತಂಭಗಳನ್ನು ಸ್ಥಾಪಿಸುವವನು ನಾನೇ” ಎಂಬುದು. ಸೆಲಾ
4. ನಾನು ಹೆಮ್ಮೆಗಾರರಿಗೆ, “ಕೊಚ್ಚಿಕೊಳ್ಳಬೇಡಿರಿ” ಎಂದು; [QBR] ದುಷ್ಟರಿಗೆ, “ನಿಮ್ಮ ಕೊಂಬುಗಳನ್ನು ಮೇಲೆತ್ತಬೇಡಿರಿ; [QBR]
5. ಕೊಂಬುಗಳನ್ನು ಮೇಲೆತ್ತಬೇಡಿರಿ; [QBR] ಸೊಕ್ಕಿನಿಂದ ಮಾತನಾಡಬೇಡಿರಿ” ಎಂದು ಹೇಳುವೆನು. [QBR]
6. ಏಕೆಂದರೆ ಉದ್ಧಾರವು ಪೂರ್ವದಿಂದಾಗಲಿ, ಪಶ್ಚಿಮದಿಂದಾಗಲಿ, [QBR] ಅರಣ್ಯದಿಂದಾಗಲಿ ಬರುವುದಿಲ್ಲ. [QBR]
7. ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು, [QBR] ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ. [QBR]
8. ಯೆಹೋವನ ಕೈಯಲ್ಲಿ ಪಾತ್ರೆ ಇದೆ; [QBR] ಅದು ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿದೆ. [QBR] ಅದರಿಂದ ಹೊಯ್ದು ಹಂಚುತ್ತಾನೆ. [QBR] ಲೋಕದ ದುಷ್ಟರೆಲ್ಲರೂ ಅದರೊಳಗಿನ ಮಡ್ಡಿಯನ್ನು ಸಹ ಕುಡಿದು ಮುಗಿಸಬೇಕು. [QBR]
9. ನಾನಾದರೋ ಸದಾ ವರ್ಣಿಸುವವನಾಗಿ, [QBR] ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುತ್ತಾ ವರ್ಣಿಸಿ ಹಾಡುವೆನು. [QBR]
10. ದುಷ್ಟರ ಕೊಂಬುಗಳನ್ನೆಲ್ಲಾ [* ಕೊಂಬುಗಳನ್ನೆಲ್ಲಾ ಅಥವಾ ಬಲವನ್ನು.] ಮುರಿದುಬಿಡುವೆನು; [QBR] ಆದರೆ ನೀತಿವಂತರ ಕೊಂಬುಗಳನ್ನು [† ಕೊಂಬುಗಳನ್ನು ಅಥವಾ ಬಲವನ್ನು.] ಉನ್ನತಮಟ್ಟಕ್ಕೆ ಎತ್ತಲ್ಪಡುವವು. [PE]