1. ದೇವರೇ, ನೀನು ನಮ್ಮನ್ನು ಸಂಪೂರ್ಣವಾಗಿ ತಳ್ಳಿಬಿಟ್ಟಿದ್ದೇಕೆ? [QBR] ನೀನು ಪಾಲಿಸುವ ಹಿಂಡಿನ ಮೇಲೆ ನಿನ್ನ ಕೋಪಾಗ್ನಿಯ ಹೊಗೆ ಏರುವುದೇಕೆ? [QBR]
2. ನೀನು ಹಿಂದಿನ ಕಾಲದಲ್ಲಿ ಸ್ವಕುಲವಾಗಿರಬೇಕೆಂದು [QBR] ಬಿಡುಗಡೆ ಮಾಡಿ ಸಂಪಾದಿಸಿಕೊಂಡ ನಿನ್ನ ಸಭಾಮಂಡಲಿಯನ್ನು ಜ್ಞಾಪಿಸಿಕೋ; [QBR] ನಿನ್ನ ವಾಸಸ್ಥಾನವಾಗಿದ್ದ ಚೀಯೋನ್ ಪರ್ವತವನ್ನು ಮರೆಯಬೇಡ. [QBR]
3. ಬಹುಕಾಲದಿಂದ ಹಾಳುಬಿದ್ದಿರುವ ಈ ಸ್ಥಾನದ ಕಡೆಗೆ ನೀನು ಹೆಜ್ಜೆ ಹಾಕು. [QBR] ನೋಡು, ವೈರಿಯು ಪವಿತ್ರಾಲಯದಲ್ಲಿ ಎಲ್ಲವನ್ನು ಕೆಡವಿಬಿಟ್ಟಿದ್ದಾನೆ. [QBR]
4. ನಿನ್ನ ದರ್ಶನಾಲಯದ ಮಧ್ಯದಲ್ಲಿ ನಿನ್ನ ವಿರೋಧಿಗಳು ಆರ್ಭಟಿಸುತ್ತಾರೆ; [QBR] ನಮ್ಮ ಆರಾಧನಾ ಚಿಹ್ನೆಗಳನ್ನು ತೆಗೆದು ತಮ್ಮ ಚಿಹ್ನೆಗಳನ್ನು ಇಟ್ಟಿದ್ದಾರೆ. [QBR]
5. ಮರಗಳ ಗುಂಪಿನಲ್ಲಿ ಕೊಡಲಿಗಳನ್ನು ಮೇಲೆತ್ತುವ ಜನರೋ ಎಂಬಂತಿದ್ದಾರೆ. [QBR]
6. ನೋಡು, ಅವರು ಈಗ ಕೈಕೊಡಲಿ ಮತ್ತು ಸುತ್ತಿಗೆಗಳಿಂದ, [QBR] ದೇವಾಲಯದ ಕೆತ್ತನೆಯ ಕೆಲಸವನ್ನೆಲ್ಲಾ ಹೊಡೆದುಹಾಕುತ್ತಿದ್ದಾರೆ. [QBR]
7. ಅವರು ನಿನ್ನ ಪವಿತ್ರಾಲಯಕ್ಕೆ ಬೆಂಕಿ ಹಚ್ಚಿ, [QBR] ನಿನ್ನ ನಾಮಕ್ಕೆ ಪ್ರತಿಷ್ಠಿತವಾದ ಮಂದಿರವನ್ನು ಹೊಲೆಮಾಡಿ, ನೆಲಸಮಗೊಳಿಸಿದ್ದಾರೆ. [QBR]
8. “ನಾವು ಈ ಜನವನ್ನೆಲ್ಲಾ ಸಂಹರಿಸಿಬಿಡೋಣ” ಅಂದುಕೊಂಡಿದ್ದಾರೆ; [QBR] ದೇಶದಲ್ಲಿರುವ ನಿನ್ನ ಎಲ್ಲಾ ಸಭಾಮಂದಿರಗಳನ್ನು ಸುಟ್ಟುಬಿಟ್ಟಿದ್ದಾರೆ. [QBR]
9. ನಮ್ಮ ಆರಾಧನಾ ಚಿಹ್ನೆಗಳು ಈಗ ಕಾಣುವುದಿಲ್ಲ. [QBR] ಮುಂಚೆ ಇದ್ದಂತೆ ನಮಗೆ ಪ್ರವಾದಿಗಳು ಯಾರೂ ಇಲ್ಲ; [QBR] ಇದು ಎಷ್ಟರವರೆಗೆ ಇರುವುದೆಂದು ಬಲ್ಲವರು ನಮ್ಮಲ್ಲಿ ಯಾರೂ ಇಲ್ಲ. [QBR]
10. ದೇವರೇ, ವಿರೋಧಿಗಳು ಇನ್ನೆಲ್ಲಿಯ ತನಕ ನಿಂದಿಸುತ್ತಿರಬೇಕು? [QBR] ವೈರಿಗಳು ನಿನ್ನ ನಾಮವನ್ನು ಸದಾಕಾಲವೂ ತಿರಸ್ಕರಿಸಬಹುದೋ? [QBR]
11. ಚಾಚಿದ ಬಲಗೈಯನ್ನು ಏಕೆ ಹಿಂದೆಗೆದಿದ್ದೀ? [QBR] ಅದನ್ನು ಎದೆಯ ಮೇಲಿನಿಂದ ತೆಗೆದು ಅವರನ್ನು ಸಂಹರಿಸಿಬಿಡು. [QBR]
12. ದೇವರೇ, ನೀನು ಮೊದಲಿನಿಂದಲೂ ನನ್ನ ಅರಸನೂ, [QBR] ಲೋಕಮಧ್ಯದಲ್ಲಿ ರಕ್ಷಣೆಗಳನ್ನು ನಡೆಸಿದಾತನೂ ಆಗಿದ್ದೀಯಲ್ಲವೇ? [QBR]
13. ಸ್ವಶಕ್ತಿಯಿಂದ ಸಮುದ್ರವನ್ನು ಭೇದಿಸಿದವನು ನೀನು; [QBR] ಜಲರಾಶಿಯ ಮೇಲೆ ತಿಮಿಂಗಿಲಗಳ ತಲೆಗಳನ್ನು ಜಜ್ಜಿಬಿಟ್ಟವನು ನೀನು. [QBR]
14. ಲಿವ್ಯಾತಾನನ [* ಲಿವ್ಯಾತಾನನ ಲಿವ್ಯಾತಾನ್ (104:26; ಯೆಶಾ 27:1) ಎಂಬುದು ಪೌರಾಣಿಕ ಘಟಸರ್ಪದ ಹೆಸರಾಗಿದೆ, ಇತರ ಸ್ಥಳಗಳಲ್ಲಿ ಬೇರೆ ಹೆಸರಿನಿಂದ ಕರೆಯಲ್ಪಟ್ಟಿದೆ. ಇದು ಅನೇಕ ತಲೆಗಳನ್ನು ಹೊಂದಿದೆಯೆಂದು ಭಾವಿಸಲಾಗಿದೆ. ಕೆಲವೊಮ್ಮೆ ನೀರಿನಲ್ಲಿರುವ ಘಟಸರ್ಪಗಳನ್ನು “ಕಡಲ ಮಹಾ ಹಾವುಗಳು” ಅಥವಾ “ಸಮುದ್ರದಲ್ಲಿ ವಾಸಿಸುವ ಮಹಾ ಪ್ರಾಣಿಗಳು” ಎಂದು ಅನುವಾದಿಸಲಾಗಿದೆ.] ಶಿರಚ್ಛೇದನೆಮಾಡಿ, [QBR] ಅಡವಿಯ ಮೃಗಸಮುದಾಯಕ್ಕೆ [† ಮೃಗಸಮುದಾಯಕ್ಕೆ ಅಥವಾ ಜನರಿಗೆ.] ಆಹಾರ ಕೊಟ್ಟವನು ನೀನು. [QBR]
15. ಬುಗ್ಗೆಹಳ್ಳಗಳನ್ನು ಉಕ್ಕಿಸಿದವನು ನೀನು; [QBR] ಮಹಾನದಿಗಳನ್ನು ಒಣಗಿಸಿಬಿಟ್ಟವನು ನೀನು. [QBR]
16. ಹಗಲಿರುಳುಗಳನ್ನು ನೇಮಿಸಿದವನು ನೀನು; [QBR] ಸೂರ್ಯ ಮತ್ತು ಜ್ಯೋತಿರ್ಮಂಡಲಗಳ ನಿರ್ಮಾಪಕನು ನೀನು. [QBR]
17. ಭೂಮಿಯ ಎಲ್ಲಾ ಮೇರೆಗಳನ್ನು ಸ್ಥಾಪಿಸಿದವನು ನೀನು; [QBR] ಬೇಸಿಗೆ ಮತ್ತು ಚಳಿಗಾಲಗಳನ್ನು ನೇಮಿಸಿದವನು ನೀನು. [QBR]
18. ಯೆಹೋವನೇ, ವೈರಿಗಳು ನಿನ್ನನ್ನು ನಿಂದಿಸಿದ್ದನ್ನು, [QBR] ದುರ್ಮತಿಗಳು ನಿನ್ನ ನಾಮವನ್ನು ತಿರಸ್ಕರಿಸಿದ್ದನ್ನು ಜ್ಞಾಪಿಸಿಕೋ. [QBR]
19. ನಿನ್ನ ಬೆಳವಕ್ಕಿಯ ಜೀವವನ್ನು ಕಾಡುಮೃಗಕ್ಕೆ ಕೊಡಬೇಡ; [QBR] ನಿನ್ನ ದೀನಮಂಡಲಿಯನ್ನು ಸದಾ ಮರೆಯಬೇಡ. [QBR]
20. ನಿನ್ನ ಒಡಂಬಡಿಕೆಯನ್ನು ಲಕ್ಷ್ಯಕ್ಕೆ ತಂದುಕೋ. [QBR] ದೇಶದ ಅಂಧಕಾರ ಸ್ಥಾನಗಳಲ್ಲಿ ಬಲತ್ಕಾರವು ತುಂಬಿ ವಾಸಿಸುತ್ತದಲ್ಲಾ. [QBR]
21. ಕುಗ್ಗಿದವರು ಆಶಾಭಂಗದಿಂದ ಹಿಂದಿರುಗದಿರಲಿ; [QBR] ದುಃಖಿತರೂ, ಬಡವರೂ ನಿನ್ನ ನಾಮವನ್ನು ಕೀರ್ತಿಸಲಿ. [QBR]
22. ದೇವರೇ, ಎದ್ದು ನಿನ್ನ ನ್ಯಾಯವನ್ನು ನಡೆಸುವವನಾಗು; [QBR] ದುರ್ಮತಿಯು ಯಾವಾಗಲೂ ನಿನ್ನನ್ನು ನಿಂದಿಸುತ್ತಿರುವುದನ್ನು ಜ್ಞಾಪಿಸಿಕೋ. [QBR]
23. ಮೇಲಣ ಲೋಕವನ್ನು ಎಡೆಬಿಡದೆ ಮುಟ್ಟುತ್ತಿರುವ, [QBR] ನಿನ್ನ ವೈರಿಗಳ ಗದ್ದಲವನ್ನೂ ನಿನ್ನ ವಿರೋಧಿಗಳ ದೊಂಬಿಯನ್ನೂ ಮರೆಯದಿರು. [PE]