ಪವಿತ್ರ ಬೈಬಲ್

ಇಂಡಿಯನ್ ರಿವೈಸ್ಡ್ ವೆರ್ಸನ್ (ISV)
ಕೀರ್ತನೆಗಳು
1. ದುರ್ಮತಿಗಳು, “ದೇವರಿಲ್ಲ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ; [QBR] ಅವರು ಕೆಟ್ಟವರು; ಅಸಹ್ಯವಾದ ಅಕ್ರಮಗಳನ್ನು ನಡೆಸುತ್ತಾರೆ; [QBR] ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ. [QBR]
2. ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ ಎಂದು [QBR] ದೇವರು ಆಕಾಶದಿಂದ ಮನುಷ್ಯರನ್ನು ನೋಡಲಾಗಿ, [QBR]
3. ಒಳ್ಳೆಯದನ್ನು ನಡೆಸುವವರು ಒಬ್ಬರೂ ಇಲ್ಲ; [QBR] ಅವರೆಲ್ಲರೂ ದ್ರೋಹಿಗಳಾಗಿ ಕೆಟ್ಟುಹೋದವರೇ. [QBR]
4. ದುಷ್ಟತ್ವವನ್ನು ನಡೆಸುವವರು ಯಾರೆಂದು ತಿಳಿಯುವುದಿಲ್ಲವೋ? [QBR] [* ಅಥವಾ ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ;] ಅವರು ನನ್ನ ಜನರನ್ನು ಕೊಳ್ಳೆಹೊಡೆದು ಜೀವಿಸುತ್ತಾರೆ; [QBR] ದೇವರನ್ನು ಪ್ರಾರ್ಥಿಸುವುದಿಲ್ಲ. [QBR]
5. ಭಯಪಡುವುದಕ್ಕೆ ಕಾರಣವಿಲ್ಲದಿದ್ದರೂ, [QBR] ಅವರು ಪಕ್ಕನೆ ಭಯಭ್ರಾಂತರಾದರು; [QBR] [† ಅಥವಾ ನಿಮಗೆ ಮುತ್ತಿಗೆಹಾಕಿದವರನ್ನು.] ದುಷ್ಟರನ್ನು ದೇವರು ಸಂಹರಿಸಿ [QBR] ಅವರ ಎಲುಬುಗಳನ್ನು ಚದರಿಸಿಬಿಟ್ಟನಲ್ಲಾ. [QBR] [‡ ಅಥವಾ ದೇವರು ಅವರನ್ನು ಕೈಬಿಟ್ಟದ್ದರಿಂದ ನೀವು ಅವರನ್ನು ಅವಮಾನಪಡಿಸಿದ್ದೀರಿ.] ದೇವರು ಅವರನ್ನು ಕೈಬಿಟ್ಟದ್ದರಿಂದ ಅವರು ಅವಮಾನಕ್ಕೊಳಗಾಗುವರು. [QBR]
6. ಚೀಯೋನಿನಿಂದ ಇಸ್ರಾಯೇಲ್ಯರಿಗೆ ರಕ್ಷಣೆಯು ಬೇಗನೆ ಬರಲಿ. [QBR] ದೇವರು ತನ್ನ ಭಾಗ್ಯವನ್ನು ಜನರಿಗೆ ಹಿಂದಿರುಗಿಸುವಾಗ, [QBR] ಆತನ ಪ್ರಜೆಗಳಾಗಿರುವ ಯಾಕೋಬ ವಂಶದವರು ಉಲ್ಲಾಸಗೊಳ್ಳುವರು; [QBR] ಇಸ್ರಾಯೇಲರು ಹರ್ಷಿಸುವರು. [PE]

ಟಿಪ್ಪಣಿಗಳು

No Verse Added

ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 53 / 150
ಕೀರ್ತನೆಗಳು 53:10
1 ದುರ್ಮತಿಗಳು, “ದೇವರಿಲ್ಲ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ; ಅವರು ಕೆಟ್ಟವರು; ಅಸಹ್ಯವಾದ ಅಕ್ರಮಗಳನ್ನು ನಡೆಸುತ್ತಾರೆ; ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ. 2 ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ ಎಂದು ದೇವರು ಆಕಾಶದಿಂದ ಮನುಷ್ಯರನ್ನು ನೋಡಲಾಗಿ, 3 ಒಳ್ಳೆಯದನ್ನು ನಡೆಸುವವರು ಒಬ್ಬರೂ ಇಲ್ಲ; ಅವರೆಲ್ಲರೂ ದ್ರೋಹಿಗಳಾಗಿ ಕೆಟ್ಟುಹೋದವರೇ. 4 ದುಷ್ಟತ್ವವನ್ನು ನಡೆಸುವವರು ಯಾರೆಂದು ತಿಳಿಯುವುದಿಲ್ಲವೋ? * ಅಥವಾ ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ; ಅವರು ನನ್ನ ಜನರನ್ನು ಕೊಳ್ಳೆಹೊಡೆದು ಜೀವಿಸುತ್ತಾರೆ; ದೇವರನ್ನು ಪ್ರಾರ್ಥಿಸುವುದಿಲ್ಲ. 5 ಭಯಪಡುವುದಕ್ಕೆ ಕಾರಣವಿಲ್ಲದಿದ್ದರೂ, ಅವರು ಪಕ್ಕನೆ ಭಯಭ್ರಾಂತರಾದರು; ಅಥವಾ ನಿಮಗೆ ಮುತ್ತಿಗೆಹಾಕಿದವರನ್ನು. ದುಷ್ಟರನ್ನು ದೇವರು ಸಂಹರಿಸಿ ಅವರ ಎಲುಬುಗಳನ್ನು ಚದರಿಸಿಬಿಟ್ಟನಲ್ಲಾ. ಅಥವಾ ದೇವರು ಅವರನ್ನು ಕೈಬಿಟ್ಟದ್ದರಿಂದ ನೀವು ಅವರನ್ನು ಅವಮಾನಪಡಿಸಿದ್ದೀರಿ. ದೇವರು ಅವರನ್ನು ಕೈಬಿಟ್ಟದ್ದರಿಂದ ಅವರು ಅವಮಾನಕ್ಕೊಳಗಾಗುವರು. 6 ಚೀಯೋನಿನಿಂದ ಇಸ್ರಾಯೇಲ್ಯರಿಗೆ ರಕ್ಷಣೆಯು ಬೇಗನೆ ಬರಲಿ. ದೇವರು ತನ್ನ ಭಾಗ್ಯವನ್ನು ಜನರಿಗೆ ಹಿಂದಿರುಗಿಸುವಾಗ, ಆತನ ಪ್ರಜೆಗಳಾಗಿರುವ ಯಾಕೋಬ ವಂಶದವರು ಉಲ್ಲಾಸಗೊಳ್ಳುವರು; ಇಸ್ರಾಯೇಲರು ಹರ್ಷಿಸುವರು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 53 / 150
Common Bible Languages
West Indian Languages
×

Alert

×

kannada Letters Keypad References