3. {#3ಭಕ್ತ ರಕ್ಷಕನಾದ ಯೆಹೋವನಿಗೆ ಉದಯಕೀರ್ತನೆ }[PS]*ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ರಂಧ್ರವಾದ್ಯದೊಡನೆ ಹಾಡತಕ್ಕ ದಾವೀದನ ಕೀರ್ತನೆ. *[PE][QS]ಯೆಹೋವನೇ ನನ್ನ ಮೊರೆಗೆ ಕಿವಿಗೊಡು; [QE][QS]ನನ್ನ ನರಳಾಟವನ್ನು ಲಕ್ಷ್ಯಕ್ಕೆ ತಂದುಕೋ. [QE]
2. [QS]ನನ್ನ ಅರಸನೇ, ನನ್ನ ದೇವರೇ, ನಿನ್ನನ್ನೇ ಪ್ರಾರ್ಥಿಸುವೆನು; [QE][QS]ನನ್ನ ಮೊರೆಯನ್ನು ಆಲಿಸು. [QE]
3. [QS]ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವುದು; [QE][QS]ಉದಯಕಾಲದಲ್ಲಿಯೇ ನನ್ನ [* ಅಥವಾ ಯಜ್ಞವನ್ನು. ]ಪ್ರಾರ್ಥನೆಯನ್ನು ನಿನಗೆ ಸಮರ್ಪಿಸಿ, [QE][QS]ನಿನ್ನಿಂದ ಸದುತ್ತರವನ್ನು ಎದುರುನೋಡುತ್ತಿರುವೆನು. [QE]
4. [QS]ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ; [QE][QS]ಕೆಟ್ಟದ್ದು ನಿನ್ನ ಬಳಿಯಲ್ಲಿ ತಂಗಲಾರದು. [QE]
5. [QS]ಸೊಕ್ಕಿನವರು ನಿನ್ನ ಸನ್ನಿಧಿಯಲ್ಲಿ ನಿಲ್ಲಲಾರರು; [QE][QS]ಅಧರ್ಮಿಗಳೆಲ್ಲರನ್ನು ನೀನು ಹಗೆಮಾಡುವಿ. [QE]
6. [QS]ಸುಳ್ಳು ಹೇಳುವವರನ್ನು ನಾಶಮಾಡುವಿ; [QE][QS]ಯೆಹೋವನೇ, ನರಹತ್ಯ ಮಾಡುವವರು ಮತ್ತು ಕಪಟಿಗಳು ನಿನಗೆ ಅಸಹ್ಯರಾಗಿದ್ದಾರೆ. [QE]
7. [QS]ನಾನಂತು ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ [QE][QS]ನಿನ್ನ ಮಂದಿರದೊಳಕ್ಕೆ ಪ್ರವೇಶಿಸುವೆನು; [QE][QS]ನಿನ್ನಲ್ಲಿಯೇ ಭಯಭಕ್ತಿಯುಳ್ಳವನಾಗಿ, [QE][QS]ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುವೆನು. [QE]
8. [QS]ಯೆಹೋವನೇ, ವಿರೋಧಿಗಳು ನನಗೆ ಕೇಡನ್ನೇ ಹಾರೈಸುತ್ತಿರುವುದರಿಂದ [QE][QS]ನಿನ್ನ ನೀತಿಗೆ ಸರಿಯಾಗಿ ನನ್ನನ್ನು ನಡೆಸು; [QE][QS]ನನ್ನ ಮುಂದೆ ನಿನ್ನ ಮಾರ್ಗವನ್ನು ಸರಾಗಮಾಡು. [QE]
9. [QS]ಅವರ ಬಾಯಲ್ಲಿ ಯಥಾರ್ಥತ್ವವಿಲ್ಲ; [QE][QS]ಅವರು ನಾಲಿಗೆಯಿಂದ ಸವಿಮಾತನಾಡಿದರೂ, [QE][QS]ಅವರ ಹೃದಯವು ನಾಶಕರವಾದ ಗುಂಡಿ, [QE][QS]ಅವರ ಗಂಟಲು ತೆರೆದಿರುವ ಸಮಾಧಿ. [QE]
10. [QS]ದೇವರೇ, ಅವರು ನಿನಗೆ ವಿರುದ್ಧವಾಗಿ ತಿರುಗಿಬಿದ್ದವರು; [QE][QS]ಆದುದರಿಂದ ಅವರನ್ನು ಅಪರಾಧಿಗಳೆಂದು ನಿರ್ಣಯಿಸು; [QE][QS]ಅವರು ತಮ್ಮ ಕುಯುಕ್ತಿಯಿಂದಲೇ ಮೋಸ ಹೋಗಲಿ; [QE][QS]ಅವರ ದ್ರೋಹವು ಅಪಾರವಾಗಿರುವುದರಿಂದ ಅವರನ್ನು ತಳ್ಳಿಬಿಡು. [QE]
11. [QS]ನಿನ್ನನ್ನು ಮೊರೆಹೊಕ್ಕವರೆಲ್ಲರು ನಿನ್ನಲ್ಲಿ ಸಂತೋಷಪಡುವರು; [QE][QS]ನೀನು ಕಾಪಾಡುವವನೆಂದು ಅವರು ಯಾವಾಗಲೂ ಆನಂದ ಧ್ವನಿಮಾಡುವರು. [QE][QS]ನಿನ್ನ ನಾಮವನ್ನು ಪ್ರೀತಿಸುವವರು ನಿನ್ನಲ್ಲಿ ಉಲ್ಲಾಸಗೊಳ್ಳುವರು. [QE]
12. [QS]ಯೆಹೋವನೇ, ನೀತಿವಂತನನ್ನು ಆಶೀರ್ವದಿಸುವವನು ನೀನೇ; [QE][QS]ನಿನ್ನ ದಯವು ದೊಡ್ಡ ಗುರಾಣಿಯಂತೆ ಅವನನ್ನು ಆವರಿಸಿಕೊಳ್ಳುವುದು. [QE]