3. {#3ಐಶ್ವರ್ಯ ವ್ಯರ್ಥ; ಮರಣ ನಿಶ್ಚಯ; ಸದ್ಭಕ್ತರಿಗೆ ನಿರೀಕ್ಷೆಯುಂಟು }[PS]*ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಕೀರ್ತನೆ. [BR]ಕೀರ್ತ 73 *[PE][QS]ಸಕಲ ದೇಶಗಳ ಜನರೇ, ಕೇಳಿರಿ; [QE][QS]ಭೂಲೋಕದ ನಿವಾಸಿಗಳೇ, ಕಿವಿಗೊಡಿರಿ. [QE]
2. [QS]ಜನರೇ, ಜನಾಧಿಪತಿಗಳೇ, ಬಡವರೇ ಮತ್ತು ಐಶ್ವರ್ಯವಂತರೇ, [QE][QS]ನೀವೆಲ್ಲರೂ ಒಂದಾಗಿ ಬಂದು ಆಲಿಸಿರಿ. [QE]
3. [QS]ನನ್ನ ಬಾಯಿ ಸುಜ್ಞಾನವನ್ನು ಬೋಧಿಸುವುದು; [QE][QS]ನನ್ನ ಹೃದಯದ ಧ್ಯಾನವು ವಿವೇಕದಿಂದ ಕೂಡಿದೆ. [QE]
4. [QS]ನಾನು ಆತನ ಸಾಮ್ಯಕ್ಕೆ ಕಿವಿಗೊಟ್ಟು, ಕಿನ್ನರಿಯನ್ನು ನುಡಿಸುತ್ತಾ, [QE][QS]ಅದರ ಗೂಡಾರ್ಥವನ್ನು ಪ್ರಕಟಿಸುವೆನು. [QE]
5. [QS]ಕೇಡಿನ ದಿನಗಳಲ್ಲಿ ಏಕೆ ಭಯಪಡಬೇಕು? [QE][QS]ಶತ್ರುಗಳು ಮೋಸದಿಂದ ಸುತ್ತಿಕೊಂಡಿರುವಾಗ ನಾನು ಏಕೆ ಹೆದರಬೇಕು? [QE]
6. [QS]ಅವರು ತಮ್ಮ ಐಶ್ವರ್ಯವನ್ನೇ ನಂಬಿದ್ದಾರೆ; [QE][QS]ತಾವು ಬಹಳ ಆಸ್ತಿವಂತರೆಂದು ಗರ್ವದಿಂದ ಉಬ್ಬಿದ್ದಾರೆ. [QE]
7. [QS]ಆದರೆ ಯಾರಾದರೂ ತನ್ನ ಸಹೋದರನು[* ತನ್ನ ಸಹೋದರನು ಅಥವಾ ತನ್ನನ್ನು ತಾನು. ] ಸಮಾಧಿಯಲ್ಲಿ ಸೇರದಂತೆ, [QE][QS]ದೇವರಿಗೆ ಈಡನ್ನು ಕೊಡಲಾರನು. [QE]
8. [QS]ಅವನ ಪ್ರಾಣವು ಶಾಶ್ವತವಾಗಿ ಉಳಿಯಲು, [QE][QS]ಅಪಾರ ಹಣವನ್ನು ಕೊಟ್ಟು ಬಿಡಿಸಲಾರನು. [QE]
9. [QS]ಮರಣವನ್ನು ತಪ್ಪಿಸಿಕೊಳ್ಳುವುದಕ್ಕೆ ಎಷ್ಟು ಹಣ ಕೊಟ್ಟರೂ, [QE][QS]ಸಾಲುವುದೇ ಇಲ್ಲ, ಅಂಥ ಪ್ರಯತ್ನ ನಿಷ್ಫಲವೆಂದು ತಿಳಿಯಬೇಕು. [QE]
10. [QS]ಸುಜ್ಞಾನಿಗಳು ಸಾಯುವುದನ್ನು ನೋಡುತ್ತೇವಲ್ಲಾ; [QE][QS]ಹಾಗೆಯೇ ಪಶುಗಳಂತಿರುವ ಜ್ಞಾನಹೀನರೂ ನಾಶವಾಗುತ್ತಾರೆ. [QE][QS]ಅವರು ನಂಬಿದ್ದ ಆಸ್ತಿಯು ಇತರರ ಪಾಲಾಗುತ್ತದೆ. [QE]
11. [QS]ಅವರ ಸಮಾಧಿಯೇ[† ಸಮಾಧಿಯೇ ಅಂದರೆ ಅವರ ಅಂತರಾಲೋಚನೆಗಳು. ] ಶಾಶ್ವತಮಂದಿರವು; [QE][QS]ತಮ್ಮ ನಿವಾಸಗಳು ತಲತಲಾಂತರಕ್ಕೂ ಇರುವುದೆಂದು ಯೋಚಿಸಿ, [QE][QS]ಭೂಮಿಗಳಿಗೆ ತಮ್ಮ ಹೆಸರುಗಳನ್ನು ಕೊಟ್ಟಿದ್ದಾರೆ. [QE]
12. [QS]ಆದರೂ ಮನುಷ್ಯನು ಎಷ್ಟು ಘನವಾದ ಪದವಿಯಲ್ಲಿದ್ದರೂ ಸ್ಥಿರವಲ್ಲ; [QE][QS]ನಾಶವಾಗುವ ಪಶುಗಳಂತೆಯೇ ಇಲ್ಲವಾಗುತ್ತಾನೆ. [QE]
13. [QS]ಮೂರ್ಖರಿಗೂ ಅವರ ಮಾತಿನಂತೆ [QE][QS]ನಡೆಯುವವರಿಗೂ ಇದೇ ಗತಿ. [QE][QSS]ಸೆಲಾ [QSE]
14. [QS]ಅವರು ಕುರಿಗಳಂತೆ ಪಾತಾಳದಲ್ಲಿ ಸೇರಿಸಲ್ಪಡುವರು; [QE][QS]ಮೃತ್ಯುವೇ ಅವರ ಪಾಲಕನು. [QE][QS][‡ ಅಥವಾ ಉದಯಕಾಲದಲ್ಲಿ ಯಥಾರ್ಥರು ಅವರ ಮೇಲೆ ದೊರೆತನ ನಡೆಸುವರು. ]ಅವರು ನೇರವಾಗಿ ಪಾತಾಳಕ್ಕೆ ಇಳಿದುಹೋಗುವರು, [QE][QS]ಅವರಿಗೆ ನಿವಾಸವಿಲ್ಲದ ಹಾಗೆ, [QE][QS]ಪಾತಾಳವು ಅವರ ರೂಪವನ್ನು ನಾಶಮಾಡುವುದು. [QE]
15. [QS]ಆದರೆ ದೇವರು ನನ್ನ ಪ್ರಾಣವನ್ನು ಮೃತ್ಯುಹಸ್ತದಿಂದ ತಪ್ಪಿಸಿ, [QE][QS]ನನ್ನನ್ನು ಸ್ವೀಕಾರಮಾಡುವನು. [QE][QSS]ಸೆಲಾ [QSE]
16. [QS]ಒಬ್ಬನ ಐಶ್ವರ್ಯವೂ, ಗೃಹವೈಭವವೂ[§ ಗೃಹವೈಭವವೂ ಅಥವಾ ಗೃಹಸಂಪತ್ತು. ] [QE][QS]ವೃದ್ಧಿಯಾದಾಗ ಕಳವಳಪಡಬೇಡ. [QE]
17. [QS]ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗುವುದಿಲ್ಲ; [QE][QS]ಅವನ ವೈಭವವು ಅವನೊಡನೆ ಹೋಗುವುದಿಲ್ಲ. [QE]
18. [QS]ಸಿರಿ ಬಂದಾಗ ನೆರೆಯವರ ಹೊಗಳಿಕೆ ತಪ್ಪದು ಎಂಬಂತೆ, [QE][QS]ಅವನು ಜೀವಮಾನದಲ್ಲಿ ಆತ್ಮಸ್ತುತಿಯಿಂದಲೂ, [QE][QS]ಜನರಸ್ತುತಿಯಿಂದಲೂ ಕೂಡಿದವನಾದರೂ, [QE]
19. [QS]ಪೂರ್ವಿಕರ ಬಳಿಗೆ ಸೇರಿ ಅವರಂತೆಯೇ, [QE][QS]ಎಂದಿಗೂ ಬೆಳಕನ್ನು ನೋಡುವುದಿಲ್ಲ. [QE]
20. [QS]ವಿವೇಕಹೀನ ಮನುಷ್ಯನು ಎಷ್ಟು ಘನವಾದ ಪದವಿಯಲ್ಲಿದ್ದರೂ, [QE][QS]ನಶಿಸಿ ಹೋಗುವ ಪಶುಗಳಿಗೆ ಸಮಾನವಾಗಿ ಇಲ್ಲವಾಗುತ್ತಾನೆ. [QE]