3. {#3ನಿರಂತರ ರಕ್ಷಣೆಗಾಗಿ ಪ್ರಾರ್ಥನೆ }[PS]*1 ಪ್ರಧಾನಗಾಯಕನ ಕೀರ್ತನಸಂಹಗ್ರದಿಂದ ಆರಿಸಿಕೊಂಡದ್ದು; ಕೋರಹೀಯರ ಪದ್ಯ. [BR]ಕೀರ್ತ 79 *[PE][QS]ದೇವರೇ, ಪೂರ್ವಕಾಲದಲ್ಲಿ ನಮ್ಮ ಪೂರ್ವಿಕರ ದಿನದಲ್ಲಿ, [QE][QS]ನೀನು ನಡೆಸಿದ ಮಹತ್ಕಾರ್ಯಗಳ ವಿಷಯವನ್ನು ಕೇಳಿದ್ದೇವೆ; [QE][QS]ಅವರೇ ನಮಗೆ ತಿಳಿಸಿದರು. [QE]
2. [QS]ನಿನ್ನ ಹಸ್ತವೇ ಈ ದೇಶದಲ್ಲಿದ್ದ ಜನಾಂಗಗಳನ್ನು ಹೊರಡಿಸಿ, [QE][QS]ನಮ್ಮ ಪೂರ್ವಿಕರನ್ನೇ ನೆಲೆಗೊಳಿಸಿದೆ; [QE][QS]ನೀನು ಆ ಅನ್ಯಜನಗಳನ್ನು ತೆಗೆದುಬಿಟ್ಟು ನಮ್ಮವರನ್ನು ಹಬ್ಬಿಸಿದಿ. [QE]
3. [QS]ನಮ್ಮ ಪೂರ್ವಿಕರಿಗೆ ಕತ್ತಿಯೇ ಈ ದೇಶವನ್ನು ಸ್ವಾಧೀನಮಾಡಿಕೊಡಲಿಲ್ಲ; [QE][QS]ನಿನ್ನ ಭುಜಬಲ, ಬಲಗೈ ಮತ್ತು ಪ್ರಸನ್ನತೆ ಅವರಿಗೆ ಜಯವನ್ನು ಉಂಟುಮಾಡಿದವು; [QE][QS]ನಿನ್ನ ಸಹಾಯ ಸದಾಕಾಲ ಅವರಿಗಿತ್ತಲ್ಲಾ. [QE]
4. [QS] [* ಅಥವಾ ನೀನೇ ನನ್ನ ಅರಸನು, ಓ ದೇವರೇ, ಯಾಕೋಬನಿಗೆ ಜಯವನ್ನು ಆಜ್ಞಾಪಿಸು. ]ದೇವರೇ, ನೀನೇ ನನ್ನ ಅರಸನು; [QE][QS]ಯಾಕೋಬನಿಗೆ ಜಯವನ್ನು ಆಜ್ಞಾಪಿಸಿದಾತನು. [QE]
5. [QS]ನಿನ್ನ ಸಹಾಯದಿಂದಲೇ ವೈರಿಗಳನ್ನು ಕೆಡವಿಬಿಡುವೆವು; [QE][QS]ನಿನ್ನ ನಾಮಧೇಯದ ಬಲದಿಂದ ಎದುರಾಳಿಗಳನ್ನು ತುಳಿದುಬಿಡುವೆವು. [QE]
6. [QS]ನಾನು ನನ್ನ ಬಿಲ್ಲಿನಲ್ಲಿ ಭರವಸವಿಡುವುದಿಲ್ಲ; [QE][QS]ಇಲ್ಲವೇ ನನ್ನ ಕತ್ತಿಯು ನನ್ನನ್ನು ರಕ್ಷಿಸಲಾರದು. [QE]
7. [QS]ಹಿಂಸಕರಿಂದ ಬಿಡಿಸಿದವನು ನೀನೇ; [QE][QS]ನಮ್ಮನ್ನು ದ್ವೇಷಿಸುವವರನ್ನು ನಾಚಿಕೆಪಡಿಸಿದಾತನು ನೀನೇ. [QE]
8. [QS]ದೇವರೇ, ನಿನ್ನಲ್ಲಿಯೇ ಯಾವಾಗಲೂ ಹಿಗ್ಗುತ್ತಿದ್ದೇವೆ; [QE][QS]ನಿನ್ನ ನಾಮವನ್ನೇ ಸದಾಕಾಲವೂ ಕೀರ್ತಿಸುವೆವು. [QE]
9. [QS]ಆದರೆ ಈಗ ನೀನು ನಮ್ಮನು ಕೈಬಿಟ್ಟಿದ್ದೀ, ಅವಮಾನಪಡಿಸಿದಿ; [QE][QS]ನಮ್ಮ ಸೈನ್ಯಗಳ ಸಂಗಡ ನೀನು ಹೋಗಲಿಲ್ಲ. [QE]
10. [QS]ನಾವು ಹಗೆಗಳಿಗೆ ಬೆನ್ನುಕೊಟ್ಟು ಓಡಿಹೋಗುವಂತೆ ಮಾಡಿದಿ; [QE][QS]ನಮ್ಮ ವೈರಿಗಳು ತಮಗೋಸ್ಕರ ಬೇಕಾದ ಹಾಗೆ ಕೊಳ್ಳೆಹೊಡೆಯುತ್ತಾರೆ. [QE]
11. [QS]ತಿನ್ನತಕ್ಕ ಕುರಿಗಳನ್ನೋ ಎಂಬಂತೆ ನಮ್ಮನ್ನು ವಂಚಕರಿಗೆ ಒಪ್ಪಿಸಿದಿ; [QE][QS]ಜನಾಂಗಗಳಲ್ಲಿ ನಮ್ಮನ್ನು ಚದರಿಸಿದ್ದೀ. [QE]
12. [QS]ನೀನು ಯಾವ ಲಾಭವನ್ನೂ ಹೊಂದದೆ ನಿಷ್ಪ್ರಯೋಜನವಾಗಿ, [QE][QS]ನಿನ್ನ ಪ್ರಜೆಯನ್ನು ಮಾರಿಬಿಟ್ಟಿದ್ದೀ. [QE]
13. [QS]ನಮ್ಮನ್ನು ನೆರೆಯವರ ನಿಂದೆಗೆ ಗುರಿಮಾಡಿದಿ; [QE][QS]ಸುತ್ತಣ ಜನಾಂಗಗಳವರ ಪರಿಹಾಸ್ಯಕ್ಕೂ, ಕುಚೋದ್ಯಕ್ಕೂ ಒಳಪಡಿಸಿದಿ. [QE]
14. [QS]ನಮ್ಮನ್ನು ಅನ್ಯದೇಶೀಯರ ಗಾದೆಗೆ ಆಸ್ಪದಮಾಡಿದಿ; [QE][QS]ಅವರು ನಮ್ಮನ್ನು ನೋಡಿ ತಲೆಯಾಡಿಸುತ್ತಾರೆ. [QE]
15. [QS]ದೂಷಕರ ನಿಂದಾವಚನಗಳಿಂದಲೂ, [QE][QS]ಮುಯ್ಯಿತೀರಿಸುವ ವೈರಿಗಳ ದೃಷ್ಟಿಯಿಂದಲೂ, [QE]
16. [QS]ನನಗೆ ಉಂಟಾಗಿರುವ ಅವಮಾನವು ಯಾವಾಗಲೂ ನನ್ನ ಮುಂದೆ ಇದೆ; [QE][QS]ನಾಚಿಕೆಯು ನನ್ನ ಮುಖವನ್ನು ಮುಚ್ಚಿದೆ. [QE]
17. [QS]ನಾವು ನಿನ್ನನ್ನು ಮರೆಯದೆಯೂ, [QE][QS]ನಿನ್ನ ನಿಬಂಧನೆಗಳನ್ನು ಮೀರದೆಯೂ ಇದ್ದರೂ; [QE][QS]ಇದೆಲ್ಲಾ ನಮ್ಮ ಮೇಲೆ ಬಂದಿದೆಯಲ್ಲಾ! [QE]
18. [QS]ನಮ್ಮ ಹೃದಯವು ಹಿಂದಿರುಗಲಿಲ್ಲ; [QE][QS]ನಮ್ಮ ಹೆಜ್ಜೆಗಳು ನಿನ್ನ ದಾರಿಯಿಂದ ತೊಲಗಲಿಲ್ಲ. [QE]
19. [QS]ಆದರೂ ನೀನು ನಮ್ಮನ್ನು ಅಪಜಯಪಡಿಸಿ ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? [QE][QS]ಮರಣದ ನೆರಳು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ? [QE]
20. [QS]ನಾವು ನಮ್ಮ ದೇವರ ಹೆಸರನ್ನು ಮರೆತು, [QE][QS]ಅನ್ಯದೇವತೆಗಳಿಗೆ ಕೈಯೆತ್ತಿದ್ದರೆ, [QE]
21. [QS]ಹೃದಯದ ರಹಸ್ಯಗಳನ್ನು ಬಲ್ಲವನಾದ ದೇವರು, [QE][QS]ವಿಚಾರಿಸುತ್ತಿರಲಿಲ್ಲವೋ? [QE]
22. [QS]ದೇವರೇ, ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; [QE][QS]ಜನರು ನಮ್ಮನ್ನು ಕೊಯ್ಗುರಿಗಳಂತೆ ಎಣಿಸಿದ್ದಾರೆ. [QE]
23. [QS]ಕರ್ತನೇ, ಏಕೆ ನಿದ್ರಿಸುತ್ತೀ? ಎಚ್ಚರವಾಗು; [QE][QS]ಏಳು, ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಡಬೇಡ. [QE]
24. [QS]ಏಕೆ ವಿಮುಖನಾಗಿದ್ದಿ? [QE][QS]ನಮಗಿರುವ ಬಾಧೆಗಳನ್ನೂ, ಹಿಂಸೆಗಳನ್ನೂ ಏಕೆ ಲಕ್ಷಿಸುವುದಿಲ್ಲ? [QE]
25. [QS]ನಮ್ಮ ಪ್ರಾಣವು ಧೂಳಿನವರೆಗೂ ಬಗ್ಗಿಹೋಗಿದೆ; [QE][QS]ನಮ್ಮ ಶರೀರವು ನೆಲಕ್ಕೆ ಅಂಟಿಕೊಂಡಿದೆ. [QE]
26. [QS]ಎದ್ದು ಬಂದು ಸಹಾಯಮಾಡು; [QE][QS]ನಿನ್ನ ಒಡಂಬಡಿಕೆಯ ನಂಬಿಗಸ್ತಿಕೆಗಾಗಿ ನಮ್ಮನ್ನು ವಿಮೋಚಿಸು. [QE]