3. {#3ಶತ್ರುಪೀಡಿತನ ಪ್ರಾರ್ಥನೆ }[PS]*ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು, ದಾವೀದನ ಕೀರ್ತನೆ. [BR]ಕೀರ್ತ 7; 35; 64; 141-143 *[PE][QS]ಯೆಹೋವನೇ, ಕೆಡುಕರಿಂದ ನನ್ನನ್ನು ಬಿಡಿಸು, [QE][QS]ಬಲಾತ್ಕಾರಿಗಳಿಂದ ತಪ್ಪಿಸಿ ಕಾಪಾಡು. [QE]
2. [QS]ಅವರು ಕೇಡು ಕಲ್ಪಿಸುತ್ತಾರೆ, [QE][QS]ಯಾವಾಗಲೂ ಜಗಳವೆಬ್ಬಿಸುತ್ತಾರೆ. [QE]
3. [QS]ತಮ್ಮ ನಾಲಿಗೆಯನ್ನು ಸರ್ಪದಂತೆ ಹದಮಾಡಿದ್ದಾರೆ, [QE][QS]ಅವರ ತುಟಿಗಳ ಹಿಂದೆ ಹಾವಿನ ವಿಷವಿದೆ. [QE][QSS]ಸೆಲಾ[QSE]
4. [QS]ಯೆಹೋವನೇ, ದುಷ್ಟರ ಕೈಗೆ ಸಿಕ್ಕದಂತೆ ನನ್ನನ್ನು ಕಾಪಾಡು, [QE][QS]ಬಲಾತ್ಕಾರಿಗಳಿಂದ ತಪ್ಪಿಸಿ ರಕ್ಷಿಸು. [QE][QS]ಅವರು ನನ್ನ ಕಾಲುಗಳನ್ನು ಎಡವಿಸಿಬಿಡಬೇಕೆಂದು ಯೋಚಿಸಿದ್ದಾರೆ. [QE]
5. [QS]ಗರ್ವಿಷ್ಠರು ನನಗೋಸ್ಕರ ಗುಪ್ತಸ್ಥಳದಲ್ಲಿ [QE][QS]ಉರುಲನ್ನೂ, ಪಾಶಗಳನ್ನೂ ಒಡ್ಡಿದ್ದಾರೆ, [QE][QS]ದಾರಿಯ ಮಗ್ಗುಲಲ್ಲಿ ಬಲೆಹಾಸಿದ್ದಾರೆ, [QE][QS]ನನಗಾಗಿ ಬಲೆಬೀಸಿಟ್ಟಿದ್ದಾರೆ. [QE][QSS]ಸೆಲಾ[QSE]
6. [QS]ನಾನು ಯೆಹೋವನಿಗೆ, “ನೀನೇ ನನ್ನ ದೇವರು, [QE][QS]ಯೆಹೋವನೇ, ನನ್ನ ವಿಜ್ಞಾಪನೆಗೆ ಕಿವಿಗೊಡು, [QE]
7. [QS]ಕರ್ತನೇ, ಯೆಹೋವನೇ, ನನ್ನ ಆಶ್ರಯದುರ್ಗವೇ, [QE][QS][* ಅಥವಾ ಯುದ್ಧಸಮಯದಲ್ಲಿ ನೀನು ನನ್ನನ್ನು ಕಾಪಾಡಿದ್ದೀ. ]ಯುದ್ಧ ಸಮಯದಲ್ಲಿ ನೀನೇ ನನ್ನ ಶಿರಸ್ತ್ರಾಣ, [QE]
8. [QS]ಯೆಹೋವನೇ, ದುಷ್ಟರು ತಮ್ಮನ್ನು ಹೆಚ್ಚಿಸಿಕೊಳ್ಳದಂತೆ, [QE][QS]ಅವರ ಆಶೆಗಳನ್ನು ನೆರವೇರಿಸಬೇಡ, [QE][QS]ಅವರ ಕುಯುಕ್ತಿಯನ್ನು ಸಾಗಗೊಡಿಸಬೇಡ” ಎಂದು ಹೇಳುತ್ತೇನೆ. [QE][QSS]ಸೆಲಾ [QSE]
9. [QS]ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು [QE][QS]ಅವರ ತಲೆಯ ಮೇಲೆಯೇ ಬರಲಿ, [QE]
10. [QS]ಅವರ ಮೇಲೆ ಕೆಂಡಗಳು ಸುರಿಯಲಿ, [QE][QS]ಅವರು ಅಗ್ನಿಕುಂಡದೊಳಕ್ಕೂ, [QE][QS]ಆಳವಾದ ತಗ್ಗಿನೊಳಕ್ಕೂ ದೊಬ್ಬಲ್ಪಟ್ಟು ತಿರುಗಿ ಏಳದಿರಲಿ. [QE]
11. [QS]ಚಾಡಿಗಾರನು ದೇಶದಲ್ಲಿ ಉಳಿಯನು, [QE][QS]ಕೇಡು ಬಲಾತ್ಕಾರಿಯನ್ನು ಹಿಂದಟ್ಟಿ ಕೆಡವಿಬಿಡುವುದು. [QE]
12. [QS]ಯೆಹೋವನು ದೀನರ ವ್ಯಾಜ್ಯವನ್ನು ನಡೆಸುವನೆಂತಲೂ, [QE][QS]ಬಡವರ ನ್ಯಾಯವನ್ನು ಸ್ಥಾಪಿಸುವನೆಂತಲೂ ಬಲ್ಲೆನು. [QE]
13. [QS]ನಿಶ್ಚಯವಾಗಿ ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು, [QE][QS]ಯಥಾರ್ಥರು ನಿನ್ನ ಸನ್ನಿಧಿಯಲ್ಲಿ ಬದುಕುವರು. [QE]