1. {#3ಯೆಹೋವನ ಸ್ತುತಿ [BR]ಕೀರ್ತ 135 } [QS]ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, [QE][QS]ಆತನು ಒಳ್ಳೆಯವನು. ಆತನ ಪ್ರೀತಿಯು ಶಾಶ್ವತವಾದದ್ದು. [QE]
2. [QS]ದೇವಾಧಿದೇವನಿಗೆ ಕೃತಜ್ಞತಾಸ್ತುತಿ ಮಾಡಿರಿ, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
3. [QS]ಕರ್ತರ ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
4. [QS]ಮಹತ್ಕಾರ್ಯಗಳನ್ನು ನಡೆಸುವುದಕ್ಕೆ ಆತನೊಬ್ಬನೇ ಶಕ್ತನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
5. [QS]ಆತನು ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
6. [QS]ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
7. [QS]ಆತನು ಮಹಾ ಜ್ಯೋತಿರ್ಮಂಡಲಗಳನ್ನು ಸೃಷ್ಟಿಸಿದ್ದಾನೆ, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
8. [QS]ಸೂರ್ಯನು ಹಗಲನ್ನು ಆಳುತ್ತಾನೆ, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
9. [QS]ಚಂದ್ರ, ನಕ್ಷತ್ರಗಳು ರಾತ್ರಿಯನ್ನು ಆಳುತ್ತವೆ, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
10. [QS]ಆತನು ಐಗುಪ್ತ್ಯರ ಚೊಚ್ಚಲ ಮಕ್ಕಳನ್ನು ಸಂಹರಿಸಿದನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
11. [QS]ಇಸ್ರಾಯೇಲರನ್ನು ಅವರ ಮಧ್ಯದಿಂದ ಹೊರಗೆ ತಂದನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
12. [QS]ತನ್ನ ಭುಜಬಲ, ಶಿಕ್ಷಾಹಸ್ತ ಇವುಗಳಿಂದ ಅವರನ್ನು ಬಿಡಿಸಿದನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
13. [QS]ಆತನು ಕೆಂಪು ಸಮುದ್ರವನ್ನು ವಿಭಾಗಿಸಿದನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
14. [QS]ಇಸ್ರಾಯೇಲರನ್ನು ಅದರ ಮಧ್ಯದಲ್ಲಿಯೇ ನಡೆಸಿದನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
15. [QS]ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿಬಿಟ್ಟನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
16. [QS]ಆತನು ತನ್ನ ಪ್ರಜೆಯನ್ನು ಅರಣ್ಯದೊಳಗೆ ಕರೆತಂದನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
17. [QS]ದೊಡ್ಡ ಅರಸರನ್ನು ಹೊಡೆದನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
18. [QS]ಶ್ರೇಷ್ಠ ರಾಜರನ್ನು ಸಂಹರಿಸಿದನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
19. [QS]ಅಮೋರಿಯರ ಅರಸನಾದ ಸೀಹೋನನು ಅವರಲ್ಲೊಬ್ಬನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
20. [QS]ಬಾಷಾನಿನ ಅರಸನಾದ ಓಗನು ಇನ್ನೊಬ್ಬನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
21. [QS]ಅವರ ದೇಶವನ್ನು ಇಸ್ರಾಯೇಲರಿಗೆ ಸ್ವತ್ತಾಗಿ ಕೊಟ್ಟನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
22. [QS]ಆತನ ಸೇವಕರಾದ ಇಸ್ರಾಯೇಲರಿಗೆ ಅದು ಸ್ವಾಸ್ತ್ಯವಾಯಿತು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
23. [QS]ನಾವು ದೀನಾವಸ್ಥೆಯಲ್ಲಿ ಇದ್ದಾಗ ನಮ್ಮನ್ನು ನೆನಪುಮಾಡಿಕೊಂಡನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
24. [QS]ನಮ್ಮ ಶತ್ರುಗಳಿಂದ ನಮ್ಮನ್ನು ಬಿಡಿಸಿದನು, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
25. [QS]ಎಲ್ಲಾ ಜೀವಿಗಳಿಗೂ ಆಹಾರ ಕೊಡುವವನು ಆತನೇ, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]
26. [QS]ಪರಲೋಕದಲ್ಲಿರುವ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ, [QE][QS]ಆತನ ಪ್ರೀತಿಯು ಶಾಶ್ವತವಾದದ್ದು. [QE]