1. ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, [QBR] ಆತನು ಒಳ್ಳೆಯವನು. ಆತನ ಪ್ರೀತಿಯು ಶಾಶ್ವತವಾದದ್ದು. [QBR]
2. ದೇವಾಧಿದೇವನಿಗೆ ಕೃತಜ್ಞತಾಸ್ತುತಿ ಮಾಡಿರಿ, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
3. ಕರ್ತರ ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
4. ಮಹತ್ಕಾರ್ಯಗಳನ್ನು ನಡೆಸುವುದಕ್ಕೆ ಆತನೊಬ್ಬನೇ ಶಕ್ತನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
5. ಆತನು ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
6. ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
7. ಆತನು ಮಹಾ ಜ್ಯೋತಿರ್ಮಂಡಲಗಳನ್ನು ಸೃಷ್ಟಿಸಿದ್ದಾನೆ, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
8. ಸೂರ್ಯನು ಹಗಲನ್ನು ಆಳುತ್ತಾನೆ, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
9. ಚಂದ್ರ, ನಕ್ಷತ್ರಗಳು ರಾತ್ರಿಯನ್ನು ಆಳುತ್ತವೆ, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
10. ಆತನು ಐಗುಪ್ತ್ಯರ ಚೊಚ್ಚಲ ಮಕ್ಕಳನ್ನು ಸಂಹರಿಸಿದನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
11. ಇಸ್ರಾಯೇಲರನ್ನು ಅವರ ಮಧ್ಯದಿಂದ ಹೊರಗೆ ತಂದನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
12. ತನ್ನ ಭುಜಬಲ, ಶಿಕ್ಷಾಹಸ್ತ ಇವುಗಳಿಂದ ಅವರನ್ನು ಬಿಡಿಸಿದನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
13. ಆತನು ಕೆಂಪು ಸಮುದ್ರವನ್ನು ವಿಭಾಗಿಸಿದನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
14. ಇಸ್ರಾಯೇಲರನ್ನು ಅದರ ಮಧ್ಯದಲ್ಲಿಯೇ ನಡೆಸಿದನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
15. ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿಬಿಟ್ಟನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
16. ಆತನು ತನ್ನ ಪ್ರಜೆಯನ್ನು ಅರಣ್ಯದೊಳಗೆ ಕರೆತಂದನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
17. ದೊಡ್ಡ ಅರಸರನ್ನು ಹೊಡೆದನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
18. ಶ್ರೇಷ್ಠ ರಾಜರನ್ನು ಸಂಹರಿಸಿದನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
19. ಅಮೋರಿಯರ ಅರಸನಾದ ಸೀಹೋನನು ಅವರಲ್ಲೊಬ್ಬನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
20. ಬಾಷಾನಿನ ಅರಸನಾದ ಓಗನು ಇನ್ನೊಬ್ಬನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
21. ಅವರ ದೇಶವನ್ನು ಇಸ್ರಾಯೇಲರಿಗೆ ಸ್ವತ್ತಾಗಿ ಕೊಟ್ಟನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
22. ಆತನ ಸೇವಕರಾದ ಇಸ್ರಾಯೇಲರಿಗೆ ಅದು ಸ್ವಾಸ್ತ್ಯವಾಯಿತು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
23. ನಾವು ದೀನಾವಸ್ಥೆಯಲ್ಲಿ ಇದ್ದಾಗ ನಮ್ಮನ್ನು ನೆನಪುಮಾಡಿಕೊಂಡನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
24. ನಮ್ಮ ಶತ್ರುಗಳಿಂದ ನಮ್ಮನ್ನು ಬಿಡಿಸಿದನು, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
25. ಎಲ್ಲಾ ಜೀವಿಗಳಿಗೂ ಆಹಾರ ಕೊಡುವವನು ಆತನೇ, [QBR] ಆತನ ಪ್ರೀತಿಯು ಶಾಶ್ವತವಾದದ್ದು. [QBR]
26. ಪರಲೋಕದಲ್ಲಿರುವ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ, [QBR] ಆತನ ಪ್ರೀತಿಯು ಶಾಶ್ವತವಾದದ್ದು. [PE]