1. {#3ಸೃಷ್ಟಿಪಾಲಕನಾಗಿರುವ ಏಕದೇವರಿಗೆ ಸ್ತೋತ್ರ [BR]ಕೀರ್ತ 136 } [QS]ಯೆಹೋವನಿಗೆ ಸ್ತೋತ್ರ! [QE][QS]ಯೆಹೋವನ ನಾಮವನ್ನು ಸ್ತುತಿಸಿರಿ. [QE][QS]ಯೆಹೋವನ ಸೇವಕರೇ, [QE]
2. [QS]ಯೆಹೋವನ ಮಂದಿರದಲ್ಲಿಯೂ, [QE][QS]ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವವರೇ, [QE][QS]ಆತನನ್ನು ಕೀರ್ತಿಸಿರಿ. [QE]
3. [QS]ಯೆಹೋವನಿಗೆ ಸ್ತೋತ್ರ! [QE][QS]ಯೆಹೋವನು ಒಳ್ಳೆಯವನು. [QE][QS]ಆತನ ನಾಮವನ್ನು ಕೊಂಡಾಡಿರಿ; [QE][QS]ಆತನು ಕೃಪಾಪೂರ್ಣನು. [QE]
4. [QS]ಯೆಹೋವನು ಯಾಕೋಬನ ವಂಶದವರನ್ನು ತನಗಾಗಿಯೂ, [QE][QS]ಇಸ್ರಾಯೇಲರನ್ನು ಸ್ವಕೀಯ ಜನರನ್ನಾಗಿಯೂ ಆರಿಸಿಕೊಂಡನಲ್ಲಾ. [QE]
5. [QS]ಯೆಹೋವನು ದೊಡ್ಡವನೆಂದೂ, [QE][QS]ನಮ್ಮ ಕರ್ತನು ಎಲ್ಲಾ ದೇವರುಗಳಿಗಿಂತ ಹೆಚ್ಚಿನವನೆಂದೂ ತಿಳಿದಿದ್ದೇನೆ. [QE]
6. [QS]ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ, [QE][QS]ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ [QE][QS]ತನಗೆ ಬೇಕಾದದ್ದನ್ನು ಮಾಡುತ್ತಾನೆ. [QE]
7. [QS]ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ; [QE][QS]ಮಳೆಗೋಸ್ಕರ ಮಿಂಚನ್ನು ಹೊಳೆಯುವಂತೆ ಮಾಡುತ್ತಾನೆ; [QE][QS]ತನ್ನ ಉಗ್ರಾಣದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ. [QE]
8. [QS]ಆತನು ಐಗುಪ್ತದ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ, [QE][QS]ಚೊಚ್ಚಲುಗಳನ್ನೆಲ್ಲಾ ಸಂಹರಿಸಿದನು. [QE]
9. [QS]ಐಗುಪ್ತವೇ, ಆತನು ನಿನ್ನ ಮಧ್ಯದಲ್ಲಿ ಫರೋಹನಿಗೂ, [QE][QS]ಅವನ ಸೇವಕರಿಗೂ ವಿರುದ್ಧವಾಗಿ ಅದ್ಭುತಗಳನ್ನು, [QE][QS]ಮಹತ್ಕಾರ್ಯಗಳನ್ನು ನಡೆಸಿದನು. [QE]
10. [QS]ಆತನು ದೊಡ್ಡ ಜನಾಂಗಗಳನ್ನು ನಾಶಮಾಡಿಬಿಟ್ಟನು; [QE][QS]ಬಲಿಷ್ಠ ರಾಜರನ್ನು ಕೊಂದುಹಾಕಿದನು. [QE]
11. [QS]ಅವರಲ್ಲಿ ಅಮೋರಿಯರ ಅರಸನಾದ ಸೀಹೋನನೂ, [QE][QS]ಬಾಷಾನಿನ ಅರಸನಾದ ಓಗನೂ ಇದ್ದರು. [QE][QS]ಆತನು ಕಾನಾನ್ ದೇಶದ ಎಲ್ಲಾ ರಾಜ್ಯಗಳನ್ನು ನಿರ್ಮೂಲ ಮಾಡಿದನು. [QE]
12. [QS]ಅವರ ದೇಶವನ್ನು ಇಸ್ರಾಯೇಲರಿಗೆ ಕೊಟ್ಟನು; [QE][QS]ಆತನ ಪ್ರಜೆಗೆ ಅದು ಸ್ವಾಸ್ತ್ಯವಾಯಿತು. [QE]
13. [QS]ಯೆಹೋವನೇ, ನಿನ್ನ ನಾಮವು ಶಾಶ್ವತವಾದದ್ದು; [QE][QS]ಯೆಹೋವನೇ, ನೀನು ತಲತಲಾಂತರಕ್ಕೂ ಸ್ಮರಿಸಲು ಯೋಗ್ಯನಾಗಿರುತ್ತೀ. [QE]
14. [QS]ನಿಜವಾಗಿ ಯೆಹೋವನು ತನ್ನ ಪ್ರಜೆಯ ನ್ಯಾಯವನ್ನು ಸ್ಥಾಪಿಸುವನು, [QE][QS]ತನ್ನ ಸೇವಕರನ್ನು ಕನಿಕರಿಸುವನು. [QE]
15. [QS]ಅನ್ಯಜನಗಳ ವಿಗ್ರಹಗಳು ಬೆಳ್ಳಿ ಮತ್ತು ಬಂಗಾರದವುಗಳೇ; [QE][QS]ಅವು ಮನುಷ್ಯರ ಕೈಕೆಲಸವಷ್ಟೇ. [QE]
16. [QS]ಅವುಗಳಿಗೆ ಬಾಯಿದ್ದರೂ ಮಾತನಾಡುವುದಿಲ್ಲ, [QE][QS]ಕಣ್ಣಿದ್ದರೂ ನೋಡುವುದಿಲ್ಲ, [QE]
17. [QS]ಕಿವಿಯಿದ್ದರೂ ಕೇಳುವುದಿಲ್ಲ, [QE][QS]ಇದಲ್ಲದೆ ಅವುಗಳ ಬಾಯಲ್ಲಿ ಶ್ವಾಸವೇ ಇಲ್ಲ. [QE]
18. [QS]ಅವುಗಳನ್ನು ಮಾಡುವವರು, [QE][QS]ಅವುಗಳಲ್ಲಿ ಭರವಸವಿಡುವವರು ಅವುಗಳಂತೆಯೇ. [QE]
19. [QS]ಇಸ್ರಾಯೇಲನ ಮನೆತನದವರೇ, [QE][QS]ಯೆಹೋವನನ್ನು ಕೊಂಡಾಡಿರಿ; [QE][QS]ಆರೋನನ ಮನೆತನದವರೇ, [QE][QS]ಯೆಹೋವನನ್ನು ಕೊಂಡಾಡಿರಿ. [QE]
20. [QS]ಲೇವಿಯ ಮನೆತನದವರೇ, [QE][QS]ಯೆಹೋವನನ್ನು ಕೊಂಡಾಡಿರಿ; [QE][QS]ಯೆಹೋವನ ಭಕ್ತರೇ, [QE][QS]ಯೆಹೋವನನ್ನು ಕೊಂಡಾಡಿರಿ. [QE]
21. [QS]ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ದೇವರಿಗೆ, [QE][QS]ಕೀರ್ತಿ ಉಂಟಾಗಲಿ, [QE][QS]ಯೆಹೋವನಿಗೆ ಸ್ತೋತ್ರ! [QE]