1. ಯೆಹೋವನು ಮನೆಯನ್ನು ಕಟ್ಟದಿದ್ದರೆ,
ಅದನ್ನು ಕಟ್ಟುವವರು ಕಷ್ಟಪಡುವುದು ವ್ಯರ್ಥ; ಯೆಹೋವನು ಪಟ್ಟಣವನ್ನು ಕಾಯದಿದ್ದರೆ, ಕಾವಲುಗಾರರು ಅದನ್ನು ಕಾಯುವುದು ವ್ಯರ್ಥ. |
2. ಬೆಳಗಾಗುವುದಕ್ಕಿಂತ ಮುಂಚೆ ಏಳುವವರೇ,
ಹೊತ್ತು ಮೀರಿ ಮಲಗುವವರೇ, ನೀವು ಆಹಾರಕ್ಕಾಗಿ ಇಷ್ಟು ಕಷ್ಟಪಡುವುದು ವ್ಯರ್ಥ; * ಅಥವಾ ಆತನು ತನ್ನ ಪ್ರಿಯರಿಗೆ ನಿದ್ರೆಯನ್ನು ಅಥವಾ ಪ್ರತಿಫಲವನ್ನು ಕೊಡುತ್ತಾನೆ. ಆತನು ಅದನ್ನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಕೊಡುತ್ತಾನೆ. |
5. ಇವುಗಳಿಂದ ತನ್ನ ಬತ್ತಳಿಕೆಯನ್ನು ತುಂಬಿದವನು ಧನ್ಯನು.
ಊರ ಬಾಗಿಲಲ್ಲಿ ವೈರಿಗಳ ಸಂಗಡ ವ್ಯಾಜ್ಯವಾಡುವಾಗ ಅಂಥವರು ಅವಮಾನ ಹೊಂದುವುದಿಲ್ಲ. PE |