1. ಯೆಹೋವನಲ್ಲಿ ಭರವಸೆ ಇಡುವವರು, [QBR] ಚೀಯೋನ್ ಪರ್ವತದ ಹಾಗೆ ಇದ್ದಾರೆ; [QBR] ಅದು ಕದಲುವುದಿಲ್ಲ, ಸದಾ ಸ್ಥಿರವಾಗಿರುತ್ತದೆ. [QBR]
2. ಪರ್ವತಗಳು ಯೆರೂಸಲೇಮಿನ ಸುತ್ತಲೂ ಹೇಗೋ ಹಾಗೆಯೇ, [QBR] ಯೆಹೋವನು ಈಗಿನಿಂದ ಸದಾಕಾಲವೂ ತನ್ನ ಜನರ ಸುತ್ತಲೂ ಇರುವನು. [QBR]
3. ದುಷ್ಟರ ದಂಡಾಧಿಕಾರವು ನೀತಿವಂತರ ಸ್ವತ್ತಿನಲ್ಲಿ ಉಳಿಯುವುದೇ ಇಲ್ಲ; [QBR] ಉಳಿದರೆ ನೀತಿವಂತರೂ ಅಕ್ರಮಕ್ಕೆ ಕೈ ಹಾಕಬಹುದು. [QBR]
4. ಯೆಹೋವನೇ, ಒಳ್ಳೆಯವರೂ, ಯಥಾರ್ಥಚಿತ್ತರೂ, [QBR] ಆಗಿರುವವರಿಗೆ ಉಪಕಾರಮಾಡು. [QBR]
5. ಯೆಹೋವನು ಡೊಂಕುದಾರಿ ಹಿಡಿದವರನ್ನು, [QBR] ಪಾತಕಿಗಳು ಹೋಗುವ ಸ್ಥಳಕ್ಕೆ ನಡೆಸುವನು. [QBR] ಇಸ್ರಾಯೇಲರಿಗೆ ಶುಭವುಂಟಾಗಲಿ. [PE]