3. {#3ಯೆಹೋವನೊಬ್ಬನೇ ರಕ್ಷಕನು }[PS]*ದಾವೀದನ ಕೀರ್ತನೆ. *[PE][QS]ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ, ನಿನ್ನ ಪ್ರೀತಿ, ಸತ್ಯತೆಗಳ ನಿಮಿತ್ತವಾಗಿ [QE][QS]ನಿನ್ನ ಹೆಸರನ್ನೇ ಘನಪಡಿಸು. [QE]
2. [QS]“ಅವರ ದೇವರು ಎಲ್ಲಿದ್ದಾನೆ?” ಎಂದು ಅನ್ಯರು ಏಕೆ ಹೇಳಬೇಕು? [QE]
3. [QS]ನಮ್ಮ ದೇವರು ಪರಲೋಕದಲ್ಲಿದ್ದಾನೆ; [QE][QS]ಆತನು ತನಗೆ ಬೇಕಾದುದನ್ನೆಲ್ಲಾ ಮಾಡುತ್ತಾನೆ. [QE]
4. [QS]ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ; [QE][QS]ಅವು ಮನುಷ್ಯರ ಕೈಕೆಲಸವಷ್ಟೇ. [QE]
5. [QS]ಅವು ಬಾಯಿದ್ದರೂ ಮಾತನಾಡುವುದಿಲ್ಲ; [QE][QS]ಕಣ್ಣಿದ್ದರೂ ನೋಡುವುದಿಲ್ಲ. [QE]
6. [QS]ಕಿವಿಯಿದ್ದರೂ ಕೇಳುವುದಿಲ್ಲ; [QE][QS]ಮೂಗಿದ್ದರೂ ಮೂಸುವುದಿಲ್ಲ. [QE]
7. [QS]ಕೈಯುಂಟು ಮುಟ್ಟುವುದಿಲ್ಲ; [QE][QS]ಕಾಲುಂಟು ನಡೆಯುವುದಿಲ್ಲ; [QE][QS]ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ. [QE]
8. [QS]ಅವುಗಳನ್ನು ಮಾಡುವವರೂ, [QE][QS]ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ. [QE]
9. [QS]ಇಸ್ರಾಯೇಲರೇ, ಯೆಹೋವನಲ್ಲಿ ಭರವಸವಿಡಿರಿ. [QE][QS]ಅವರ ಸಹಾಯಕನು, ಗುರಾಣಿಯು ಆತನೇ. [QE]
10. [QS]ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ. [QE][QS]ಅವರ ಸಹಾಯಕನು, ಗುರಾಣಿಯು ಆತನೇ. [QE]
11. [QS]ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ. [QE][QS]ಅವರ ಸಹಾಯಕನು, ಗುರಾಣಿಯು ಆತನೇ. [QE]
12. [QS]ಯೆಹೋವನು ನಮ್ಮನ್ನು ನೆನಪುಮಾಡಿಕೊಂಡಿದ್ದಾನೆ; [QE][QS]ಸಣ್ಣವರು ಮೊದಲುಗೊಂಡು ದೊಡ್ಡವರ ವರೆಗೆ ಎಲ್ಲರನ್ನೂ ಆಶೀರ್ವದಿಸುವನು. [QE]
13. [QS]ಇಸ್ರಾಯೇಲನ ಮನೆತನದವರನ್ನು ಆಶೀರ್ವದಿಸುವನು; [QE][QS]ಆರೋನನ ಮನೆತನದವರನ್ನು ಆಶೀರ್ವದಿಸುವನು. [QE][QS]ತನ್ನ ಭಕ್ತರನ್ನು ಆಶೀರ್ವದಿಸುವನು. [QE]
14. [QS]ಯೆಹೋವನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸಲಿ; [QE]
15. [QS]ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ. [QE][QS]ಆತನು ಭೂಪರಲೋಕಗಳನ್ನು ಉಂಟುಮಾಡಿದ್ದಾನೆ. [QE]
16. [QS]ಪರಲೋಕವು ಯೆಹೋವನದು; [QE][QS]ಭೂಲೋಕವನ್ನು ಮಾನವ ಸಂತಾನಕ್ಕೆ ಕೊಟ್ಟಿದ್ದಾನೆ. [QE]
17. [QS]ಸತ್ತವರು ಯೆಹೋವನನ್ನು ಸ್ತುತಿಸುವುದಿಲ್ಲ; [QE][QS]ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವುದಿಲ್ಲ. [QE]
18. [QS]ನಾವೋ ಇಂದಿನಿಂದ ಸದಾಕಾಲವೂ [QE][QS]ಯೆಹೋವನನ್ನು ಕೊಂಡಾಡುವೆವು. [QE][QS]ಯೆಹೋವನಿಗೆ ಸ್ತೋತ್ರ! [QE]