1. {#3ಪಂಚಮ ಭಾಗ (107-150) }{#1ವಿಮುಕ್ತರ ಕೊಂಡಾಟ } [QS]ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; [QE][QS]ಆತನು ಒಳ್ಳೆಯವನು. [QE][QS]ಆತನ ಕೃಪೆಯು ಶಾಶ್ವತವಾಗಿರುವುದು. [QE]
2. [QS]ಯೆಹೋವನ ವಿಮುಕ್ತರು ಅಂದರೆ ಆತನು ಶತ್ರುಗಳಿಂದ ಬಿಡಿಸಿ, [QE]
3. [QS]ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣಗಳಲ್ಲಿಯೂ, [QE][QS]ಸಮುದ್ರದ ಕಡೆಯಲ್ಲಿಯೂ ಇರುವ ದೇಶಗಳಿಂದ ಕೂಡಿಸಿದವರೆಲ್ಲರೂ ಸ್ತುತಿಮಾಡಲಿ. [QE]
4. [QS]ಅವರು ಅರಣ್ಯದಲ್ಲಿಯೂ, ಮರಳುಗಾಡಿನಲ್ಲಿಯೂ, [QE][QS]ದಾರಿತಪ್ಪಿ ಅಲೆಯುವವರಾಗಿ, [QE][QS]ಜನವಿರುವ ಊರನ್ನು ಕಾಣದೆ, [QE]
5. [QS]ಹಸಿವೆ, ನೀರಡಿಕೆಗಳಿಂದ ಬಲಗುಂದಿದವರಾಗಿದ್ದರು. [QE]
6. [QS]ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, [QE][QS]ಆತನು ಅವರನ್ನು ಕಷ್ಟದಿಂದ ಬಿಡಿಸಿದನು. [QE]
7. [QS]ಜನವಿರುವ ಊರನ್ನು ಸೇರುವಂತೆ, [QE][QS]ಅವರನ್ನು ಸರಿಯಾದ ದಾರಿಯಲ್ಲಿ ನಡೆಸಿದನು. [QE]
8. [QS]ಅವರು ಯೆಹೋವನ ಕೃಪೆಗೋಸ್ಕರವೂ, [QE][QS]ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, [QE][QS]ಆತನನ್ನು ಕೊಂಡಾಡಲಿ. [QE]
9. [QS]ಆತನು ಬಾಯಾರಿದವರ ಆಶೆಯನ್ನು ಪೂರೈಸಿ, [QE][QS]ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸುತ್ತಾನೆ. [QE]
10. [QS]ಕತ್ತಲಲ್ಲಿಯೂ, ಘೋರಾಂಧಕಾರದಲ್ಲಿಯೂ, [QE][QS]ಬೇಡಿಗಳಿಂದ ಬಂಧಿಸಲ್ಪಟ್ಟು, ನೋವಿನಿಂದ ಬಿದ್ದುಕೊಂಡಿದ್ದರು. [QE]
11. [QS]ಅವರು ದೇವರ ಕಟ್ಟಳೆಗಳಿಗೆ ವಿರುದ್ಧವಾಗಿ ನಿಂತು, [QE][QS]ಪರಾತ್ಪರನಾದ ದೇವರ ಸಂಕಲ್ಪವನ್ನು ನಿರಾಕರಿಸಿದ್ದರಿಂದ, [QE]
12. [QS]ಆತನು ಅವರನ್ನು ಕಷ್ಟಗಳಿಂದ ಕುಗ್ಗಿಸಿದನು; [QE][QS]ನಿರಾಶ್ರಯರಾಗಿ ಬಿದ್ದುಹೋದರು. [QE]
13. [QS]ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, [QE][QS]ಆತನು ಅವರನ್ನು ಕಷ್ಟದಿಂದ ತಪ್ಪಿಸಿದನು. [QE]
14. [QS]ಆತನು ಅವರ ಬಂಧನಗಳನ್ನು ತೆಗೆದುಹಾಕಿ, [QE][QS]ಕತ್ತಲೆಯಿಂದಲೂ, ಘೋರಾಂಧಕಾರದಿಂದಲೂ ಅವರನ್ನು ಹೊರತಂದನು. [QE]
15. [QS]ಅವರು ಯೆಹೋವನ ಕೃಪೆಗೋಸ್ಕರವೂ, [QE][QS]ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, [QE][QS]ಆತನನ್ನು ಕೊಂಡಾಡಲಿ. [QE]
16. [QS]ಆತನು ತಾಮ್ರದ ಕದಗಳನ್ನು ಒಡೆದು, [QE][QS]ಕಬ್ಬಿಣದ ಅಗುಳಿಗಳನ್ನು ಮುರಿದುಬಿಟ್ಟಿದ್ದಾನೆ. [QE]
17. [QS]ಮೂರ್ಖರು ಅಪರಾಧ, ದುರಾಚಾರಗಳ ದೆಸೆಯಿಂದ ಬಾಧೆಗೊಳಗಾದರು. [QE]
18. [QS]ಎಲ್ಲಾ ಆಹಾರಕ್ಕೂ ಅಸಹ್ಯಪಟ್ಟು ಮರಣದ್ವಾರಕ್ಕೆ ಸಮೀಪವಾದರು. [QE]
19. [QS]ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, [QE][QS]ಆತನು ಅವರನ್ನು ಕಷ್ಟದಿಂದ ತಪ್ಪಿಸಿದನು. [QE]
20. [QS]ಆತನು ದೂತನನ್ನೋ ಎಂಬಂತೆ ತನ್ನ ವಾಕ್ಯವನ್ನು ಕಳುಹಿಸಿ, [QE][QS]ಅವರನ್ನು ಗುಣಪಡಿಸಿದನು; [QE][QS]ಸಮಾಧಿಗೆ ಸೇರದಂತೆ ಮಾಡಿದನು. [QE]
21. [QS]ಅವರು ಯೆಹೋವನ ಕೃಪೆಗೋಸ್ಕರವೂ, [QE][QS]ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, [QE][QS]ಆತನನ್ನು ಕೊಂಡಾಡಲಿ. [QE]
22. [QS]ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸಿ, [QE][QS]ಉತ್ಸಾಹಧ್ವನಿಮಾಡುತ್ತಾ [QE][QS]ಆತನ ಮಹತ್ಕಾರ್ಯಗಳನ್ನು ವರ್ಣಿಸಲಿ. [QE]
23. [QS]ಹಡಗು ಹತ್ತಿ ಸಮುದ್ರ ಪ್ರಯಾಣ ಮಾಡುತ್ತಾ, [QE][QS]ಮಹಾಜಲರಾಶಿಯಲ್ಲಿ ತಮ್ಮ ಉದ್ಯೋಗವನ್ನು ನಡೆಸುವವರು, [QE]
24. [QS]ಯೆಹೋವನ ಮಹತ್ಕಾರ್ಯಗಳನ್ನೂ, [QE][QS]ಅಗಾಧಜಲದಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ. [QE]
25. [QS]ಆತನು ಅಪ್ಪಣೆಕೊಡಲು ಬಿರುಗಾಳಿಯುಂಟಾಗಿ, [QE][QS]ಅದರಲ್ಲಿ ತೆರೆಗಳನ್ನು ಎಬ್ಬಿಸಿತು. [QE]
26. [QS]ಜನರು[* ಜನರು ಅಥವಾ ನಾವಿಕರು. ] ಆಕಾಶಕ್ಕೆ ಏರುತ್ತಲೂ, [QE][QS]ಅಗಾಧಕ್ಕೆ ಇಳಿಯುತ್ತಲೂ ಕಂಗೆಟ್ಟು ಕರಗಿಹೋದರು. [QE]
27. [QS]ಅವರು ದಿಕ್ಕುತೋರದವರಾಗಿ ಸುತ್ತುತ್ತಾ, [QE][QS]ಕುಡುಕರಂತೆ ಹೊಯ್ದಾಡುತ್ತಿದ್ದರು. [QE]
28. [QS]ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, [QE][QS]ಆತನು ಅವರನ್ನು ಕಷ್ಟದಿಂದ ಹೊರತಂದನು. [QE]
29. [QS]ಆತನು ಬಿರುಗಾಳಿಯನ್ನು ಶಾಂತಪಡಿಸಿದನು; [QE][QS]ತೆರೆಗಳು ನಿಂತವು. [QE]
30. [QS]ಸಮುದ್ರವು ಶಾಂತವಾದುದರಿಂದ, [QE][QS]ಹಡಗಿನವರು ಸಂತೋಷಪಟ್ಟರು, [QE][QS]ಅವರು ಮುಟ್ಟಬೇಕಾದ ರೇವಿಗೆ ಆತನು ಅವರನ್ನು ಸೇರಿಸಿದನು. [QE]
31. [QS]ಅವರು ಯೆಹೋವನ ಕೃಪೆಗೋಸ್ಕರವೂ [QE][QS]ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ [QE][QS]ಆತನನ್ನು ಕೊಂಡಾಡಲಿ. [QE]
32. [QS]ನೆರೆದ ಸಭೆಯಲ್ಲಿ ಆತನನ್ನು ಕೀರ್ತಿಸಲಿ; [QE][QS]ಹಿರಿಯರ ಸಮೂಹದಲ್ಲಿ ಕೊಂಡಾಡಲಿ. [QE]
33. [QS]ಆತನು ನಿವಾಸಿಗಳ ದುಷ್ಟತನಕ್ಕಾಗಿ [QE][QS]ನದಿಗಳನ್ನು ಅರಣ್ಯವಾಗುವಂತೆಯೂ, [QE]
34. [QS]ನೀರಿನ ಬುಗ್ಗೆಗಳನ್ನು ಒಣನೆಲವಾಗುವಂತೆಯೂ, [QE][QS]ಫಲಭೂಮಿಯನ್ನು ಉಪ್ಪು ನೆಲವಾಗುವಂತೆಯೂ ಮಾಡಿದನು. [QE]
35. [QS]ಅರಣ್ಯವನ್ನು ಕೆರೆಯಾಗಿಯೂ, [QE][QS]ಒಣನೆಲವನ್ನು ಬುಗ್ಗೆಗಳಾಗಿಯೂ ಮಾಡಿ, [QE]
36. [QS]ಅಲ್ಲಿ ಹಸಿದವರನ್ನು ನೆಲೆಗೊಳಿಸಿದನು; [QE][QS]ಅವರು ನೆಲೆಯಾಗಿ ವಾಸಿಸಲು ಪಟ್ಟಣವನ್ನು ಕಟ್ಟಿಕೊಂಡು, [QE]
37. [QS]ಹೊಲಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಟ್ಟು, [QE][QS]ಆದಾಯವನ್ನು ಕೂಡಿಸಿಕೊಂಡರು. [QE]
38. [QS]ಆತನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚಿದರು. [QE][QS]ಅವರಿಗೆ ದನಕರುಗಳೇನೂ ಕಡಿಮೆ ಇರಲಿಲ್ಲ. [QE]
39. [QS]ಅವರು ಕೇಡು ತೊಂದರೆಗಳಿಂದಲೂ, [QE][QS]ಸಂಕಟದಿಂದಲೂ ಕುಗ್ಗಿಹೋಗಿ ಸ್ವಲ್ಪ ಜನರಾದರು. [QE]
40. [QS]ಪ್ರಭುಗಳಿಗೆ ಅಪಮಾನವನ್ನು ಉಂಟುಮಾಡಿ, [QE][QS]ಅವರನ್ನು ದಾರಿಯಿಲ್ಲದ ಅರಣ್ಯದಲ್ಲಿ ಅಲೆದಾಡಿಸುವವನು. [QE]
41. [QS]ಕಷ್ಟದಲ್ಲಿದ್ದ ದೀನರನ್ನು ಉನ್ನತಸ್ಥಿತಿಗೆ ಏರಿಸಿ, [QE][QS]ಅವರ ಕುಟುಂಬಗಳನ್ನು ಕುರಿಹಿಂಡಿನಂತೆ ಹೆಚ್ಚಿಸಿದನು. [QE]
42. [QS]ಯಥಾರ್ಥರು ಇದನ್ನು ನೋಡಿ ಹಿಗ್ಗುವರು; [QE][QS]ಕೆಡುಕುಬಾಯಿ ಮುಚ್ಚಿಹೋಗುವುದು. [QE]
43. [QS]ಜ್ಞಾನಿಗಳು ಈ ಸಂಗತಿಗಳನ್ನು ಗಮನಿಸಿ, [QE][QS]ಯೆಹೋವನ ಕೃಪಾಕಾರ್ಯಗಳನ್ನು ಗ್ರಹಿಸಿಕೊಳ್ಳಲಿ. [QE]